ನವರಾತ್ರಿಯಲ್ಲಿ ಕನ್ಯಾಪೂಜೆ ವಿಶೇಷತೆ ಪಡೆದಿದೆ. ತಾಯಿ ದುರ್ಗೆ ಆಶೀರ್ವಾದಪಡೆಯಲು ಜನರು ಕನ್ಯಾ ಪೂಜೆ ಮಾಡ್ತಾರೆ. ಪೂಜೆಗೂ ಮುನ್ನ ನಿಯಮ ಸರಿಯಾಗಿ ತಿಳಿದ್ರೆ ಮಾತ್ರ ಪೂಜೆ ಫಲ ಸಿಗಲು ಸಾಧ್ಯ
ತಾಯಿ ದುರ್ಗೆ (Durga )ಯನ್ನು ಆರಾಧಿಸುವ ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದುರ್ಗೆ ಪೂಜೆ, ಹೋಮ – ಹವನಗಳಲ್ಲಿ ಭಕ್ತರು ಲೀನರಾಗಿದ್ದಾರೆ. ನವರಾತ್ರಿ 9 ದಿನಗಳ ಕಾಲ ದುರ್ಗೆಯ ಬೇರೆ ಬೇರೆ ಅವತಾರಗಳ ಪೂಜೆ ನಡೆಯುತ್ತದೆ. ನವರಾತ್ರಿ (Navratri)ಯಲ್ಲಿ ವ್ರತ, ಕನ್ಯಾ ಪೂಜೆ (Kanya Puja )ಗೆ ವಿಶೇಷ ಮಹತ್ವ ಇದೆ. ನವರಾತ್ರಿಯಲ್ಲಿ ಚಿಕ್ಕ ಮಕ್ಕಳ ಪೂಜೆ ಮಾಡಿ, ಅವರಿಗೆ ವಸ್ತುಗಳನ್ನು ಉಡುಗೊರೆಯಾಗಿ ನೀಡಿ, ಅವರ ಆಶೀರ್ವಾದ ಪಡೆಯಲಾಗುತ್ತದೆ. ನವರಾತ್ರಿ ಸಂದರ್ಭದಲ್ಲಿ ಮಾಡುವ ಕನ್ಯಾ ಪೂಜೆ ವೇಳೆ ಕೆಲ ತಪ್ಪುಗಳನ್ನು ಮಾಡಬಾರದು. ತಾಯಿ ದುರ್ಗೆಯ ಆಶೀರ್ವಾದ ಸಂಪೂರ್ಣ ನಿಮಗೆ ಸಿಗಬೇಕು ಎಂದಾದ್ರೆ ನೀವು ಕನ್ಯಾ ಪೂಜೆ ವೇಳೆ ಕೆಲ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಕನ್ಯಾ ಪೂಜೆ ಯಾವಾಗ ? :
ಈ ವರ್ಷದ ನವರಾತ್ರಿ ಸಡಗರ ಈಗಾಗಲೇ ಶುರುವಾಗಿದೆ. ಸೆಪ್ಟೆಂಬರ್ 22 ರಿಂದ ನವರಾತ್ರಿ ಶುರುವಾಗಿದ್ದು, ಅಕ್ಟೋಬರ್ 2ರವರೆಗೆ ನವರಾತ್ರಿ ಇರಲಿದೆ. ನವರಾತ್ರಿಯಲ್ಲಿ ಅಷ್ಟಮಿ ಹಾಗೂ ನವಮಿ ತಿಥಿಯಂದು ಕನ್ಯಾ ಪೂಜೆಯನ್ನು ಮಾಡಲಾಗುತ್ತದೆ. ಈ ಬಾರಿ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 ರಂದು ಅಷ್ಟಮಿ ಹಾಗೂ ನವಮಿ ಬಂದಿದೆ. ನೀವು ಈ ಎರಡು ದಿನಗಳಲ್ಲಿ ಒಂದು ದಿನ ಕನ್ಯೆಯರ ಪೂಜೆ ಮಾಡಬೇಕು. 10 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳ ಪೂಜೆ ವಿಶೇಷ. 9 ಕನ್ಯೆಯರು ಮತ್ತು ಒಬ್ಬ ಹುಡುಗನನ್ನು ಕರೆದು ಪೂಜೆ ಮಾಡಬೇಕು. ಋತುಮತಿಯಾಗದ 10 ವರ್ಷ ಮೇಲ್ಪಟ್ಟ ಹೆಣ್ಣು ಮಕ್ಕಳ ಪೂಜೆಯನ್ನು ಕೂಡ ನೀವು ಮಾಡಬಹುದು. ಕನ್ಯಾ ಪೂಜೆ ಮಾಡೋದ್ರಿಂದ ದುರ್ಗಾ ದೇವಿಯ ಆಶೀರ್ವಾದ ಲಭಿಸಲಿದ್ದು, ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗಲಿದೆ.
ಶೀಘ್ರದಲ್ಲೇ ಅಪಾಯಕಾರಿ ವಿಷ ಯೋಗ, ಈ ರಾಶಿಗೆ ಅಕ್ಟೋಬರ್‌ನಲ್ಲಿ ಆಪತ್ತು, ಕಷ್ಟ
ಕನ್ಯಾ ಪೂಜೆಯಲ್ಲಿ ಈ ತಪ್ಪು ಮಾಡಬೇಡಿ :
• ಕನ್ಯಾ ಪೂಜೆಯ ಸಮಯದಲ್ಲಿ ಹುಡುಗಿಯರಿಗೆ ಕಪ್ಪು ಬಣ್ಣದ ಯಾವುದೇ ವಸ್ತುಗಳನ್ನು ಉಡುಗೊರೆಯಾಗಿ ನೀಡಬೇಡಿ. ಕಪ್ಪು ಬಣ್ಣವನ್ನು ಅಶುಭ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ. ಕಪ್ಪು ದುಃಖದ ಸಂಕೇತವಾಗಿದೆ.
• ಕನ್ಯಾ ಪೂಜೆಯ ದಿನ ನೀವು ಚರ್ಮ, ಉಕ್ಕು ಅಥವಾ ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುಗಳನ್ನು ಕನ್ಯೆಯರಿಗೆ ನೀಡಬೇಡಿ. ಈ ವಸ್ತುಗಳು ಶನಿ, ರಾಹು ಮತ್ತು ಕೇತುವಿನ ಪ್ರಭಾವಕ್ಕೆ ಒಳಗಾಗಿವೆ.
• ಕನ್ಯಾ ಪೂಜೆಗೆ ಬಂದ ಹುಡುಗಿಯರನ್ನು ಪೂಜೆ ಮಾಡಿ ಅವರಿಗೆ ಭೋಜನ ನೀಡಬೇಕು. ಚಿಕ್ಕ ಮಕ್ಕಳ ಹೊಟ್ಟೆ ತುಂಬಿದ್ದರೆ ಅವರಿಗೆ ಒತ್ತಾಯ ಮಾಡಬೇಡಿ. ಅವರನ್ನು ದೇವಿ ರೂಪ ಎಂದು ನಂಬಲಾಗುತ್ತದೆ. ಅವರಿಗೆ ಬಲವಂತ ಮಾಡದೆ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಿ.
• ಕನ್ಯಾ ಪೂಜೆ ಮಾಡುವ ಸ್ಥಳ ಶುದ್ಧವಾಗಿರುವಂತೆ ನೋಡಿಕೊಳ್ಳಿ. ಕನ್ಯಾ ಪೂಜೆ ನಂತ್ರ ಪೂಜೆ ಮಾಡಿದ ಸ್ಥಳವನ್ನು ತಕ್ಷಣ ಸ್ವಚ್ಛಗೊಳಿಸಬೇಡಿ.
• ಕನ್ಯೆ ಪೂಜೆ ದಿನ ನೀವು ಮಾಡುವ ಅಡುಗೆ ಬಗ್ಗೆಯೂ ಗಮನ ನೀಡಬೇಕು. ಸಾತ್ವಿಕ ಆಹಾರವನ್ನು ಬಡಿಸಬೇಕು. ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಬಾರದು. ಭೋಜನಕ್ಕೆ ಹಲ್ವಾ, ಪೂರಿ, ಕಡಲೆ ಮತ್ತು ತರಕಾರಿಗಳನ್ನು ಹಾಕಬೇಕು. ಹುಡುಗಿಯರು ಮತ್ತು ಹುಡುಗರಿಗೆ ಗೌರವದಿಂದ ತಿನ್ನಿಸಿ.
Chanakya Niti: ಪತ್ನಿಯಿಂದ ಸ್ವರ್ಗ ಪಡೆಯುವ ದಾರಿ ಇದು ಅನ್ನುತ್ತೆ ಚಾಣಕ್ಯ ನೀತಿ!
• ಮಕ್ಕಳು ಚಿಕ್ಕವರಾಗಿರುವ ಕಾರಣ ತುಂಟಾಟ ಸಾಮಾನ್ಯ. ನೀವು ಅವರನ್ನು ಎಂದಿಗೂ ಗದರಿಸಬೇಡಿ. ಅವರನ್ನು ಶಾಂತವಾಗಿ ನೋಡಿಕೊಳ್ಳಬೇಕು. ನೀವು ಅವರ ಮೇಲೆ ಕೋಪಗೊಂಡು ಅವರಿಗೆ ಬೈದ್ರೆ, ಅವರು ನೊಂದುಕೊಂಡು ಅತ್ತರೆ ಮನೆಗೆ ಒಳ್ಳೆಯದಾಗುವುದಿಲ್ಲ. ನೀವು ಮಾಡಿದ ಪೂಜೆ ಫಲ ನಿಮಗೆ ಸಿಗುವುದಿಲ್ಲ.
