ದೃಷ್ಟಿ ಬೊಟ್ಟು ಸೀರಿಯಲ್‌ನಲ್ಲಿ ದತ್ತನ ಪಾತ್ರಧಾರಿ ವಿಜಯ್ ಸೂರ್ಯ ಬಿಗ್ ಬಾಸ್‌ಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಟ್ವಿಸ್ಟ್. ದತ್ತನ ಕಾರು ಅಪಘಾತವಾಗಿದೆ ಎಂದು ಶರಾವತಿ ಹೇಳುತ್ತಿರುವುದರ ಹಿಂದಿನ ಮರ್ಮವೇನು? ದತ್ತನ ಜಾಗಕ್ಕೆ ಬರಲಿರುವ ಹೊಸ ನಟ ಯಾರು?
ಸದ್ಯ Bigg Boss Kannada Seaon 12 ಹವಾ ಜೋರಾಗಿದೆ. ಇದೇ ಸೆಪ್ಟೆಂಬರ್ 28ರಿಂದ ಷೋ ಆರಂಭವಾಗಲಿದ್ದು, ಈ ಷೋನಲ್ಲಿ ಕಾಣಿಸಿಕೊಳ್ಳುವ ಕೆಲವು ಸ್ಪರ್ಧಿಗಳ ಲಿಸ್ಟ್ ಇದಾಗಲೇ ಔಟ್ ಆಗಿದೆ. ಅದರಲ್ಲಿ ಒಂದು ಹೆಸರು ದೃಷ್ಟಿಬೊಟ್ಟು (Drishti Bottu) ಸೀರಿಯಲ್‌ನಲ್ಲಿ ದತ್ತಾಭಾಯಿ ರೋಲ್ ಮಾಡ್ತಿರೋ ನಟ ವಿಜಯ ಸೂರ್ಯ. ಇದಾಗಲೇ ವಿಜಯ ಸೂರ್ಯ (Vijay Suriya) ಅವರು ದೃಷ್ಟಿ ಬೊಟ್ಟು ಸೀರಿಯಲ್ನಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಸೀರಿಯಲ್‌ನಲ್ಲಿ ಇದಾಗಲೇ ಮಸಿ ಬಳೆದುಕೊಂಡಿದ್ದ ದೃಷ್ಟಿ ತನ್ನ ನಿಜ ರೂಪವನ್ನು ತೋರಿಸಿದ್ದಾಳೆ.
ಇವರಿಬ್ಬರ ನಡುವೆ ಬಣ್ಣದ ವಿಷಯವನ್ನೇ ಇಟ್ಟುಕೊಂಡು ಬೆಂಕಿ ಹಚ್ಚುವ ಪ್ಲ್ಯಾನ್ ಮಾಡಿದ್ದ ದತ್ತನ ಅತ್ತಿಗೆಗೆ ಸೋಲಾಗಿದೆ. ದತ್ತ ಮತ್ತು ದೃಷ್ಟಿ ನಡುವೆ ಲವ್ ಶುರುವಾಗುವ ಹೊತ್ತಿನಲ್ಲಿಯೇ ಬಿಗ್ಬಾಸ್ (Bigg Boss Kannada 12) ಶುರುವಾಗಲಿರುವ ಕಾರಣ, ವಿಜಯ ಸೂರ್ಯ ಅವರು ಸೀರಿಯಲ್ ಬಿಡುತ್ತಿದ್ದಾರೆ ಎಂದು ಕೆಲವರು, ಇನ್ನು ಕೆಲವರು ದೃಷ್ಟಿಬೊಟ್ಟು ಸೀರಿಯಲ್ಲೇ ಮುಕ್ತಾಯವಾಗಲಿದೆ ಎಂದೆಲ್ಲಾ ಸುದ್ದಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ.
ಇದನ್ನೂ ಓದಿ: Thanmaya Kashyap: ಕಂದನ ಜೊತೆ 'ದೃಷ್ಟಿಬೊಟ್ಟು' ವಿಲನ್ ಶರಾವತಿ! ಅಮ್ಮನನ್ನೇ ಮೀರಿಸೋ ಮಗ...
ದತ್ತನ ಕಾರು ಅಪ್ಪಚ್ಚಿ
ಇದೀಗ ದತ್ತಾಬಾಯಿಯನ್ನು ಮುಗಿಸಿರುವುದಾಗಿ ಶರಾವತಿ ಹೇಳುತ್ತಿದ್ದಾಳೆ. ದೃಷ್ಟಿ ಎದುರೇ ಈ ವಿಷಯವನ್ನು ಹೇಳಿದರೂ, ಆಕೆ ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಮನೆಯಲ್ಲಿ ಎಲ್ಲರೂ ಶಾಕ್ಗೆ ಒಳಗಾಗಿದ್ದಾರೆ. ಆದರೆ ಶರಾವತಿ ಮಾತ್ರ ಖುಷಿಯಿಂದ ಇದ್ದಾಳೆ. ದೃಷ್ಟಿ ಇದನ್ನು ಒಪ್ಪದಾದಾಗ ಶರಾವತಿ, ದತ್ತಾ ಸತ್ತಿದ್ದಾನೆ ನಂಬು. ಆತನ ಕಾರು ಅಪ್ಪಚ್ಚಿಯಾಗಿದೆ ಎನ್ನುತ್ತಾಳೆ. ಅಲ್ಲಿಗೆ ದತ್ತನ ರೋಲ್ ಚೇಂಜ್ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಹಳೆಯ ದತ್ತ ವಿಜಯ ಸೂರ್ಯನನ್ನು ಸಾಯಿಸುವುದಿಲ್ಲ, ಬದಲಿಗೆ ಅವರನ್ನೇ ಕೋಮಾದಲ್ಲಿ ಇರಿಸುವಂತೆ ಮಾಡಿ ಬಿಗ್ಬಾಸ್ನಿಂದ ಬಂದ ಮೇಲೆ ಸೀರಿಯಲ್ ಮುಂದುವರೆಸಬಹುದು, ಇಲ್ಲದೇ ಅದಕ್ಕಿಂತಲೂ ಹೆಚ್ಚಾಗಿ ಸೀರಿಯಲ್ಗೆ ಬೇರೆಯ ರೀತಿ ಟ್ವಿಸ್ಟ್ ಕೊಟ್ಟು ಪ್ಲಾಸ್ಟಿಕ್ ಸರ್ಜರಿ ಮಾಡಿಸುವುದು ಎಲ್ಲಾ ನಿಚ್ಚಳವಾಗಿದೆ.
ಇದನ್ನೂ ಓದಿ:ಭಾವನಾಳ ಬಿಟ್ಟು ವಿಲನ್ ಜೊತೆ ಸಿದ್ದೇಗೌಡ್ರ ರೊಮಾನ್ಸ್! ಛೇ... ಇದೇನಿದು Lakshmi Nivasa ಟ್ವಿಸ್ಟ್?
ಮುಂದಿನ ನಟ ಯಾರು?
ಈ ಹಿಂದೆ ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ನಾಯಕನ ರೋಲ್ ಮಾಡುತ್ತಿದ್ದ ಅನಿರುದ್ಧ್ ಅವರು ಬಿಟ್ಟುಹೋದಾಗ ಪ್ಲಾಸ್ಟಿಕ್ ಸರ್ಜರಿ ಮಾಡಿದಂತೆ ಮಾಡುವ ಮೂಲಕ ಹೊಸ ನಾಯಕನನ್ನು ಪರಿಚಯಿಸಲಾಗಿತ್ತು. ಇಲ್ಲಿಯೂ ಅದೇ ರೀತಿ ಆದರೂ ಅಚ್ಚರಿಯಿಲ್ಲ. ಆದರೆ ಇದನ್ನು ವೀಕ್ಷಕರು ಹೇಗೆ ಅರಗಿಸಿಕೊಳ್ಳುತ್ತಾರೆ ಎನ್ನವುದೇ ಈಗಿರುವ ಪ್ರಶ್ನೆ. ಪ್ಲಾಸ್ಟಿಕ್ ಸರ್ಜರಿ ಮಾಡಲಿ, ಅಥವಾ ದತ್ತಾ ರೋಲ್ ಅನ್ನು ಚೇಂಜ್ ಮಾಡಲಿ ಒಟ್ಟಿನಲ್ಲಿ ವೀಕ್ಷಕರಿಗೆ ಒಂದಷ್ಟು ದಿನ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎನ್ನುವುದು ಕಮೆಂಟ್ ನೋಡಿದರೆ ತಿಳಿಯುತ್ತದೆ. ಒಂದು ವೇಳೆ ಹೀಗೆ ಮಾಡಿದ್ರೆ ದತ್ತನ ಜಾಗದಲ್ಲಿ ಯಾವ ನಟ ಬರುತ್ತಾರೆ ಎನ್ನುವ ಕುತೂಹಲ ಎಲ್ಲರಿಗೂ ಇದೆ.ಇದಾಗಲೇ ಕೆಲವರು ತಮ್ಮ ನೆಚ್ಚಿನ ನಟನ ಹೆಸರನ್ನು ಹೇಳುತ್ತಿದ್ದಾರೆ. ಇವರ ಜಾಗಕ್ಕೆ ಲಕ್ಷ್ಮಿ ಬಾರಮ್ಮ ಚಂದನ್ ಇಲ್ಲ ನಟ ಅಗಸ್ತ್ಯ ಬರಲಿ ಎಂದು ಕೆಲವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ದತ್ತನ ಜಾಗದಲ್ಲಿ ಯಾವ ನಟ ಬರುತ್ತಾರೆ ಎನ್ನುವುದು ಈಗಿರುವ ಪ್ರಶ್ನೆ.
