ಲಕ್ಷ್ಮೀ ನಿವಾಸ ಸೀರಿಯಲ್‌ನ ಸಿದ್ದೇಗೌಡ ಮತ್ತು ಸೌಪರ್ಣಿಕಾ ಪಾತ್ರಧಾರಿಗಳು ರೊಮ್ಯಾಂಟಿಕ್ ಸ್ಟೆಪ್ ಹಾಕಿರುವ ವಿಡಿಯೋ ವೈರಲ್ ಆಗಿದೆ. ಪತ್ನಿ ಭಾವನಾಳನ್ನು ಬಿಟ್ಟು ವಿಲನ್ ಜೊತೆ ರೊಮಾನ್ಸಾ? ಇದೇನಿದು ಟ್ವಿಸ್ಟ್?
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್‌ನಲ್ಲಿ ಸದ್ಯ ಸೈಕೋ ಜಯಂತ್ಗೆ ಪತ್ನಿ ಜಾಹ್ನವಿ ಎಲ್ಲಿ ಇದ್ದಾಳೆ ಎಂದು ತಿಳಿಯುವ ಸಮಯ ಬಂದಾಗಿದ್ದರೆ, ಅದೇ ಇನ್ನೊಂದೆಡೆ ಸಿದ್ದೇಗೌಡ್ರ ಮನೆಯಲ್ಲಿ ಭಾವನಾಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಇವರಿಬ್ಬರ ನಡುವೆ ಪ್ರೀತಿ ಮೂಡುವ ಹೊತ್ತಿನಲ್ಲಿಯೇ ಭಾವನಾ, ಮನೆಯಲ್ಲಿ ಉಳಿದವರಿಂದ ಹೀನಾಯವಾದ ಸ್ಥಿತಿಯಲ್ಲಿದ್ದಾಳೆ. ಅತ್ತೆ, ನಾದಿನಿ ಸೇರಿದಂತೆ ಎಲ್ಲರೂ ಭಾವನಾಳನ್ನು ಟೀಕಿಸಿ, ಹಿಂಸೆ ಕೊಡುವವರೇ ಆಗಿದ್ದಾರೆ. ಆದರೆ ಏನೂ ಹೇಳದ ಸ್ಥಿತಿಯಲ್ಲಿ ಇದ್ದಾಳೆ ಭಾವನಾ. ಈಕೆಗೆ ಸದ್ಯ ಇರುವುದು ಪತಿ ಸಿದ್ದೇಗೌಡ್ರ ಪ್ರೀತಿ ಮಾತ್ರ. ಆದ್ರೆ ಇದೀಗ ಸಿದ್ದೇಗೌಡ್ರೇ ಉಲ್ಟಾ ಹೊಡೆದು ಬಿಟ್ರಾ? ಈಗ ವೈರಲ್ ಆಗಿರೋ ವಿಡಿಯೋದಲ್ಲಿ ಈ ಸೀರಿಯಲ್‌ನ ಸೌಪರ್ಣಿಕಾ ಜೊತೆ ಸಿದ್ದೇಗೌಡ್ರು ರೊಮಾನ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ: 'ಭಾಗ್ಯಲಕ್ಷ್ಮಿ' ನಾಯಕಿ- ವಿಲನ್ ಭರತನಾಟ್ಯ ಜುಗಲ್ಬಂದಿ: ಅಭಿಮಾನಿಗಳ ಹೃದಯ ಗೆದ್ದ ನಟಿಯರು
ಅಷ್ಟಕ್ಕೂ ಆಗಿದ್ದೇನು?
ಅಂದಹಾಗೆ ಇದೇನು ಲಕ್ಷ್ಮೀ ನಿವಾಸ ಸೀರಿಯಲ್ ಟ್ವಿಸ್ಟ್ ಅಲ್ಲ. ಇನ್ನು ಸಿದ್ದೇಗೌಡ್ರು ಪಾತ್ರಧಾರಿ ಧನಂಜಯ ಅವರು ಸೌಪರ್ಣಿಕಾ ಪಾತ್ರಧಾರಿ ಯಶಸ್ವಿನಿ ಕೆ. ಸ್ವಾಮಿ ಅವರು ನಿರ್ವಹಿಸುತ್ತಿದ್ದಾರೆ. ಇದೀಗ ಇವರಿಬ್ಬರೂ ಬಿಡುವಿನ ವೇಳೆಯಲ್ಲಿ ಸಕತ್ ರೊಮ್ಯಾಂಟಿಕ್ ಸ್ಟೆಪ್ ಹಾಕಿದ್ದಾರೆ. ಇದನ್ನು ಈ ನಟರು ತಮ್ಮ ಇನ್ಸ್ಟಾಗ್ರಾಮ್ ಪುಟಗಳಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಥಹರೇವಾರಿ ಕಮೆಂಟ್ಸ್ ಜೊತೆ ವೈರಲ್ ಆಗುತ್ತಿದೆ. ಇದರಲ್ಲಿ ಇವರಿಬ್ಬರ ಕೆಮೆಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚುಕೊಂಡಿದ್ದಾರೆ. ಸಿದ್ದೇಗೌಡ್ರು ಸೀರಿಯಲ್ ಪತ್ನಿ ಭಾವನಾ ಜೊತೆಯೂ ಹೀಗೆಯೇ ರೊಮಾನ್ಸ್ ಮಾಡುವಂತೆ ಸೀರಿಯಲ್ ಪ್ರೇಮಿಗಳು ಹೇಳುತ್ತಿದ್ದಾರೆ.
ನಟ ಧನಂಜಯ್ ಕುರಿತು
ಇನ್ನು ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸಿದ್ದೇಗೌಡ್ರು ಪಾತ್ರ ಮಾಡ್ತಿರೋ ನಟ ಧನಂಜಯ್ ಕುರಿತು ಹೇಳುವುದಾದರೆ, ಇವರು ಡಿಜೆ ಎಂದೇ ಫೇಮಸ್ಸು. ಇವರು ಇದಾಗಲೇ ಕೆಲವು ಸಿನಿಮಾಗಳಲ್ಲಿ ಪೋಷಕರಾಗಿ ನಟಿಸಿದ್ದಾರೆ. ‘ಜಿಲ್ ಜಿಲ್’, ‘ವಾಸಂತಿ ನಲಿದಾಗ’ ಸೇರಿದಂತೆ ಐದಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಕೊನೆಗೆ, ಈರಣ್ಣಯ್ಯ ಎನ್ ಮಧುಗಿರಿ ನಿರ್ದೇಶನದ ‘ಕನಕ ಪುಷ್ಪ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದಾರೆ. ರಂಗಭೂಮಿ ಹಿನ್ನೆಯವರಾಗಿರುವ ಇವರು, 80ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ನೆಚ್ಚಿನ ನಾಯಕ ಚಿರಂಜೀವಿ ಅವರನ್ನು ನೋಡಿ, ಸಿನಿಮಾ ನಾಯಕನಾಗಬೇಕೆಂಬ ಆಸೆ ಚಿಗುರೊಡೆದಿತ್ತು. ಅವರೇ ನನ್ನ ರೋಲ್ ಮಾಡೆಲ್ ಎಂದು ಹಿಂದೊಮ್ಮೆ ಧನಂಜಯ್ ಹೇಳಿದ್ದರು. 350ಕ್ಕೂ ಹೆಚ್ಚು ಸಿನಿಮಾಗಳಿಗೆ ಡಬ್ಬಿಂಗ್ ಕಲಾವಿದನಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಟಿ ಯಶಸ್ವಿನಿ ಕುರಿತು...
ನೆಗೆಟಿವ್ ರೋಲ್ ಸೌಪರ್ಣಿಕಾ ರೂಪದಲ್ಲಿ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಕಾಣಿಸಿಕೊಳ್ತಿರೋ ನಟಿ ಯಶಸ್ವಿನಿ ಕೆ. ಸ್ವಾಮಿ (Yashaswini K. Swamy) ಕುರಿತು ಹೇಳುವುದಾದರೆ, ಗ್ಲಾಮರಸ್ ಗೊಂಬೆಯಾಗಿದ್ದು, ನೈಜ ಜೀವನದಲ್ಲೂ ಸ್ಟೈಲ್ ಐಕಾನ್ ಆಗಿದ್ದಾರೆ. ಅವರು ಈ ಹಿಂದೆ "ಮಂಗಳಗೌರಿ" ಸೀರಿಯಲ್‌ನಲ್ಲಿ ಸ್ನೇಹಾ ಪಾತ್ರದಲ್ಲೂ ನಟಿಸಿದ್ದರು ಮತ್ತು ತೆಲುಗು ಧಾರಾವಾಹಿಗಳು ಹಾಗೂ ಫಾರ್ಚುನರ್ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ.
ಇದನ್ನೂ ಓದಿ: ಮದ್ವೆಯಾಗಿ 9 ವರ್ಷವಾದ್ರೂ Bhagyalakshmi ತಾಂಡವ್ಗೆ ಮಕ್ಕಳೇಕೆ ಇಲ್ಲ? ಕೊನೆಗೂ ಕಾರಣ ಕೊಟ್ಟ ಸ್ಟಾರ್ ದಂಪತಿ
