ಮಸಿ ಹೋಯ್ತು, ರಿಯಲ್ ಬಣ್ಣ ಬಂತು! Drishti Bottu ದೃಷ್ಟಿಯ ಕ್ಯೂಟ್ ವಿಡಿಯೋ ಶೂಟ್
ಇಷ್ಟು ವರ್ಷ ಮಸಿ ಬಳಿದುಕೊಂಡಿದ್ದ ದೃಷ್ಟಿಬೊಟ್ಟು ದೃಷ್ಟಿ ಇದೀಗ ಪತಿಯ ಎದುರು ತನ್ನ ರಿಯಲ್ ಬಣ್ಣ ತೋರಿಸಿದ್ದಾಳೆ. ಇದರ ಬೆನ್ನಲ್ಲೇ ಕ್ಯೂಟ್ ವಿಡಿಯೋಶೂಟ್ ಮಾಡಿಸಿಕೊಂಡಿದ್ದಾರೆ ನಟಿ. ಇಲ್ಲಿದೆ ನೋಡಿ ವಿಡಿಯೋ...

ಮಸಿ ಬಣ್ಣದಿಂದ ರಿಯಲ್ ಬಣ್ಣದವರೆಗೆ...
ಸದ್ಯ ದೃಷ್ಟಿಬೊಟ್ಟು (Drishti Bottu ) ನಾಯಕಿ ದೃಷ್ಟಿಯ ರಿಯಲ್ ಬಣ್ಣ ಬಯಲಾಗಿದೆ. ಇಷ್ಟು ವರ್ಷಗಳವರೆಗೆ ಕಪ್ಪು ಮಸಿ ಬಳೆದುಕೊಂಡಿದ್ದ ದೃಷ್ಟಿ ಕೊನೆಗೂ ಗಂಡನ ಬಳಿ ತನ್ನ ರಿಯಲ್ ಬಣ್ಣವನ್ನು ತೋರಿಸಿದ್ದಾಳೆ. ತನ್ನ ಮಗಳಿಗೆ ಕೆಟ್ಟವರ ದೃಷ್ಟಿ ಬೀಳುತ್ತದೆ ಎನ್ನುವ ಕಾರಣಕ್ಕೆ ದೃಷ್ಟಿಯ ಅಮ್ಮ ಆಕೆಗೆ ಚಿಕ್ಕಂದಿನಿಂದಲೂ ಮೈಯೆಲ್ಲಾ ಮಸಿಬಳೆಯುತ್ತಿದ್ದಳು. ಕೊನೆಗೆ ಅದನ್ನೇ ರೂಢಿ ಮಾಡಿಕೊಂಡಿದ್ದಳು ದೃಷ್ಟಿ. ಕೃಷ್ಣ ಸುಂದರಿಯನ್ನೇ ಮದುವೆಯಾಗುವ ಹಂಬಲ ದತ್ತಾಬಾಯಿಗೆ ಇದ್ದುದರಿಂದ ರೋಚಕ ತಿರುವಿನಲ್ಲಿ ದೃಷ್ಟಿ ಆತನ ಪತ್ನಿಯಾದಳು.
ಭಯದಲ್ಲಿದ್ದಾಳೆ ದೃಷ್ಟಿ
ತನ್ನ ರಿಯಲ್ ಬಣ್ಣ ತಿಳಿದರೆ ದತ್ತ ಏನು ಮಾಡಿಯಾನು ಎನ್ನುವ ಭಯದಲ್ಲಿ ಇದ್ದವಳು ದೃಷ್ಟಿ. ಇದೊಂದು ರೀತಿಯಲ್ಲಿ ಅಸಹಜ ಎನ್ನಿಸಿದರೂ, ಪ್ರತಿದಿನ ಮಸಿ ಬಳೆದುಕೊಳ್ತಿದ್ದರೂ ಒಮ್ಮೆಯೂ ಪತಿಗಾಗಲೀ, ಮನೆಯವರಿಗಾಗಲೀ ಗೊತ್ತೇ ಆಗ್ಲಿಲ್ವಾ ಎಂದು ವೀಕ್ಷಕರು ಅಚ್ಚರಿಪಟ್ಟುಕೊಂಡಿದ್ದರೂ ಸೀರಿಯಲ್ ಎಂದ್ರೆ ಏನು ಬೇಕಾದರೂ ಸಾಧ್ಯ ಎನ್ನುವ ಹಾಗೆ ಇಷ್ಟು ವರ್ಷ ನಡೆದು ಬಂದಿತ್ತು.
ದೃಷ್ಟಿಬೊಟ್ಟುವಿನಲ್ಲಿ ತಿರುವು
ಇದೀಗ, ದೃಷ್ಟಿ ಕೊನೆಗೂ ರಿಯಲ್ ಬಣ್ಣವನ್ನು ರಿವೀಲ್ ಮಾಡಿದ್ದಾಳೆ. ದತ್ತಾ ಇದನ್ನು ಹೇಗೆ ಸ್ವೀಕರಿಸುತ್ತಾನೆ ಎನ್ನುವುದು ಈಗಿರುವ ಪ್ರಶ್ನೆ ಅಷ್ಟೇ. ಆದರೆ ದೃಷ್ಟಿಯಾಗಿ ನಟಿಸುತ್ತಿರುವ ನಟಿ ಹೆಸರು ಅರ್ಪಿತಾ ಮೋಹಿತೆ. ಈಕೆ ಕಿರುತೆರೆಗೆ ಹೊಸ ಎಂಟ್ರಿ. ಇನ್ನು ದತ್ತಾ ಭಾಯಿ ಪಾತ್ರದಲ್ಲಿ ಕಾಣಿಸಿಕೊಳ್ತಿರೋದು ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್ ಸೂರ್ಯ. ಇಲ್ಲಿ ಇವರದ್ದು ರಗಡ್ ಅವತಾರ. ಚಾಕಲೇಟ್ ಬಾಯ್ ಎಂದೇ ಫೇಮಸ್ ಆಗಿರೋ ನಟ, ಈ ಸೀರಿಯಲ್‌ನಲ್ಲಿ ರೌಡಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ.
ಅರ್ಪಿತಾ ಓದಿದ್ದೇನು?
ಅಂದಹಾಗೆ, ಬೆಂಗಳೂರಿನ ಅರ್ಪಿತಾ ಮೋಹಿತೆ (Arpitha Mohithe) ಬಿಕಾಂ ಮುಗಿಸಿದ್ದಾರೆ. ನನಗೆ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿದ್ದವು. ಈಗ ದೃಷ್ಟಿಬೊಟ್ಟುಗೆ ಆಯ್ಕೆ ಆಗಿದ್ದೇನೆ ಎಂದು ಈ ಹಿಂದೆ ಹೇಳಿದ್ದರು.
ಇಂಟರೆಸ್ಟಿಂಗ್ ವಿಷ್ಯ
ಇಷ್ಟೇ ಅಲ್ಲದೇ, ಇನ್ನೊಂದು ಇಂಟರೆಸ್ಟಿಂಗ್ ವಿಷಯವನ್ನೂ ಅವರು ಹೇಳಿದ್ದರು. ಅದೇನೆಂದರೆ, ತಾವು ಹೀಗೆಯೇ ಎಂದು ಅಭಿಮಾನಿಗಳ ಮನಸ್ಸಿನಲ್ಲಿ ತಳವೂರಬೇಕು. ನನ್ನ ಅಸಲಿ ಬಣ್ಣ ಏನು ಎನ್ನುವುದು ಗೊತ್ತಾಗಬಾರದು ಎನ್ನುವ ಕಾರಣಕ್ಕೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನೂ ನಟಿ ಡಿಲೀಟ್ ಮಾಡಿದ್ದರು.
ಬಣ್ಣ ರಿವೀಲ್ ಮಾಡಿದ ನಟಿ
ಆದರೆ, ಇದೀಗ ನಿಜವಾದ ಬಣ್ಣ ರಿವೀಲ್ ಮಾಡಿದ್ದಾರೆ. ಅದರ ಬೆನ್ನಲ್ಲೇ ಕ್ಯೂಟ್ ವಿಡಿಯೋಶೂಟ್ ಮಾಡಿಸಿದ್ದಾರೆ. ಇದರಲ್ಲಿ ಅವರು ಸುಂದರವಾಗಿ ಕಾಣಿಸುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಥಹರೇವಾರಿ ಕಮೆಂಟ್ಸ್ ಬರುತ್ತಿವೆ.
ನಿಜ ಬಣ್ಣ ಬಯಲು
ನಿಜ ಜೀವನದಲ್ಲಿ ಹಾಲು ಬಿಳುಪಿನ ನಟಿ ಅರ್ಪಿತಾ ಈ ಸೀರಿಯಲ್‌ನಲ್ಲಿ ಮುಖ ಮಾತ್ರವಲ್ಲದೇ ಮೈ-ಕೈಯೆಲ್ಲಾ ಕಪ್ಪಾಗಿ ಕಾಣಿಸಲು ಎರಡು ಗಂಟೆ ಮೇಕಪ್ ಮಾಡಿಕೊಳ್ಳುತ್ತಿರುವುದಾಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು. ಮುಖಕ್ಕೆ ಮ್ಯಾಚ್ ಆಗುವಂಥ ಕಪ್ಪು ಬಣ್ಣ ಕೈ-ಕಾಲುಗಳಿಗೂ ಹಚ್ಚಬೇಕು. ಇದರಿಂದ ಎರಡು ಗಂಟೆ ಬೇಕಾಗುತ್ತದೆ ಎಂದು ಹೇಳಿದ್ದರು.