Bigg Boss ಮೋಕ್ಷಿತಾ ಪೈ ಸದ್ದಿಲ್ಲದೇ ಮದುವೆಯಾದ್ರಾ? ನಟನ ಪರಿಚಯಿಸುತ್ತಲೇ ಮೌನ ಮುರಿದ ನಟಿ...
ಬಿಗ್ಬಾಸ್ ಖ್ಯಾತಿಯ ಮೋಕ್ಷಿತಾ ಪೈ ಅವರ ಮದುವೆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದೇವಸ್ಥಾನದಲ್ಲಿ ಯುವಕನೊಂದಿಗೆ ಇರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ನಟಿ ಹೇಳಿದ್ದೇನು?

ಬಿಗ್ಬಾಸ್ ಖ್ಯಾತಿಯ ಮೋಕ್ಷಿತಾ ಪೈ
ಬಿಗ್ಬಾಸ್ ಖ್ಯಾತಿಯ ಮೋಕ್ಷಿತಾ ಪೈ (Mokshitha Pai) ಸಹಜವಾಗಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದ ಮೇಲೆ ಫೇಮಸ್ ಆಗಿದ್ದಾರೆ. ಬಿಗ್‌ಬಾಸ್‌ನಲ್ಲಿ ತಮ್ಮ ಮುಗ್ಧ ಮುಖದಿಂದ, ಅಷ್ಟೇ ಸಾಫ್ಟ್ ಆಗಿ ಇರುವಲ್ಲಿ ನಟಿ ಮೋಕ್ಷಿತಾ ಪೈ ಎಲ್ಲರ ಮನಸ್ಸನ್ನು ಗೆದ್ದವರು. 3ನೇ ರನ್ನರ್ ಅಪ್ ಅರ್ಥಾತ್ 4ನೇ ಸ್ಥಾನ ಪಡೆದಿದ್ದಾರೆ ನಟಿ. ಬಿಗ್‌ಬಾಸ್‌ಗೂ ಮುನ್ನ ಪಾರು ಸೀರಿಯಲ್‌ನ ನಟನೆಯಿಂದ ಮನೆ ಮಾತಾಗಿದ್ದವರು ಈಕೆ.
ಮದುವೆಯ ಸ್ಪಷ್ಟನೆ ಕೊಟ್ಟ ನಟಿ
ಇಂತಿಪ್ಪ ಮೋಕ್ಷಿತಾ ಪೈ (Mokshita Pai) ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಕೆಲವು ದಿನಗಳಲ್ಲಿ ಸಕತ್ ಸದ್ದು ಮಾಡುತ್ತಿದೆ. ಇದರಲ್ಲಿ ದೇವಸ್ಥಾನ ಒಂದರಲ್ಲಿ ನಟಿ ಹೂವಿನ ಹಾರ ಹಾಕಿಕೊಂಡು ಯುವಕನೊಬ್ಬನ ಜೊತೆ ಪ್ರದಕ್ಷಿಣೆ ಹಾಕುವುದನ್ನು ನೋಡಬಹುದಾಗಿದೆ. ಇದರ ವಿಡಿಯೋ ವೈರಲ್ ಆಗುತ್ತಲೇ ನಟಿ ಸದ್ದಿಲ್ಲದೇ ಮದುವೆಯಾದರು ಎನ್ನುವ ಸುದ್ದಿ ಸದ್ದು ಮಾಡುತ್ತಿದೆ.
ಹಾರ ಹಾಕಿಕೊಂಡ ಕಾರಣ..
ಅಂದು ದೇವಸ್ಥಾನಕ್ಕೆ ಹೋದಾಗ ಅರ್ಚಕರು ಹಾರ ಹಾಕಿದರು ಅಷ್ಟೇ ಆಗಿದ್ದು ಎಂದಿರೋ ನಟಿ ಮೋಕ್ಷಿತಾ, ಈ ಸಮಯ ನನ್ನ ಕರಿಯರ್ ಕಟ್ಟಿಕೊಳ್ಳುವ ಸಮಯ. ಈ ವೇಳೆ ನಾನು ಮದುವೆಯ ಬಗ್ಗೆ ಯೋಚನೆ ಮಾಡುವುದಿಲ್ಲ. ಒಂದು ವೇಳೆ ಮದುವೆಯಾಗುವುದು ನಿಜವಾದರೆ ನಿಮಗೆಲ್ಲಾ ಹೇಳಿಯೇ ಮದುವೆಯಾಗುತ್ತೇನೆ ಎಂದಿದ್ದಾರೆ.
ಪಾರು ಸೀರಿಯಲ್ ಮೂಲಕ ಫೇಮಸ್
ಇನ್ನು ಮೋಕ್ಷಿತಾ ಪೈ ಕುರಿತು ಹೇಳುವುದಾದರೆ, ಇವರು ಪಾರು ಸೀರಿಯಲ್ ಮೂಲಕ ಫೇಮಸ್ ಆದವರು. ಐದು ವರ್ಷಗಳಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿ ಪಾರು (Paaru) ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಅರಸನ ಕೋಟೆಯ ಮನೆ ಕೆಲಸದಾಳುವಾಗಿರುವ ಪಾರು ಅದೇ ಮನೆಗೆ ಸೊಸೆಯಾಗಿ ಬಂದ ನಂತರ ನಡೆದಿರುವ ಘಟನೆಗಳ ಸುತ್ತಲೂ ಈ ಧಾರಾವಾಹಿಯ ಕಥೆ ಹೆಣೆಯಲ್ಪಟ್ಟಿದೆ. ಈ ಧಾರಾವಾಹಿಯಲ್ಲಿ ಪಾರುವಿನದ್ದು ತ್ಯಾಗಮಯ ಪಾತ್ರ. ಅದು ಎಷ್ಟರಮಟ್ಟಿಗೆ ಎಂದರೆ ಮೈದುನನ ಪತ್ನಿಗಾಗಿ ತನ್ನ ಮಗುವನ್ನೇ ತ್ಯಾಗ ಮಾಡಿದ್ದಾಳೆ. ಮೈದುನನ ಪತ್ನಿ ಜನನಿ ತನ್ನ ಮಗುವನ್ನು ಕಳೆದುಕೊಂಡಾಗ ಅದು ಆಕೆಗೆ ಗೊತ್ತಾಗಬಾರದು ಎಂದು ಪಾರು ತನ್ನ ಮಗುವನ್ನೇ ಆಕೆಗೆ ಕೊಟ್ಟಿದ್ದಾಳೆ. ಇದು ಜನನಿಗೆ ತಿಳಿದಿರಲಿಲ್ಲ. ಕೊನೆಗೂ ಅಂತ್ಯದಲ್ಲಿ ಎಲ್ಲವೂ ತಿಳಿದು ಸೀರಿಯಲ್ ಸುಖಾಂತ್ಯವಾಗಿದೆ. ಇಂಥ ತ್ಯಾಗಮಯ ಪಾತ್ರ ಮಾಡಿದವರು ಮೋಕ್ಷಿತಾ.
ತಮ್ಮನಿಗಾಗಿ ಜೀವನ ಮೀಸಲು
ಅಸಲಿ ಜೀವನದಲ್ಲಿಯೂ ಮೋಕ್ಷಿತಾ ಅವರನ್ನು ನೋವಿನ ಕಥೆಯೇ. ತಮ್ಮ ಮುಗ್ಧ ನಗು ಹಾಗೂ ಅಷ್ಟೇ ಮುಗ್ಧ ಪಾತ್ರಗಳಿಂದ ಧಾರಾವಾಹಿಗೆ ಜೀವ ತುಂಬುತ್ತಿರುವ ಈ ನಟಿಯ ಬಾಳಿನಲ್ಲಿ ಮಾತ್ರ ಅತ್ಯಂತ ನೋವು ತುಂಬಿದೆ. ತೆರೆಯ ಮೇಲೆ ತಮ್ಮ ನಗುವಿನ ಮೂಲಕ ರಂಜಿಸುವ ಪಾರು ಅಲಿಯಾಸ್ ಮೋಕ್ಷಿತಾ ಪೈ ಅವರ ಜೀವನದಲ್ಲಿಯೂ ನೋವು ತುಂಬಿದೆ. ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆತ ಮಾನಸಿಕ ಅಸ್ವಸ್ಥ. ಆತನ ಆರೈಕೆ ಮಾಡುವ ಜವಾಬ್ದಾರಿ ಮೋಕ್ಷಿತಾ ಅವರ ಮೇಲಿದೆ. ಒಮ್ಮೆ ರಿಯಾಲಿಟಿ ಷೋ (Reality Show) ಒಂದಕ್ಕೆ ತಮ್ಮ ತಮ್ಮನನ್ನು ಕರೆದುಕೊಂಡು ಬಂದಿದ್ದ ಪಾರು ಅವರು, ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು. ಆಗಾಗ್ಗೆ ತಮ್ಮನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ತಮ್ಮನಿಗೆ ನಟಿಯೇ ಅಮ್ಮ
ಮೋಕ್ಷಿತಾ ಪೈ ಅವರಿಗೆ ಚಿಕ್ಕ ತಮ್ಮನೊಬ್ಬನಿದ್ದಾನೆ. ಸದ್ಯ ಈ ತಮ್ಮನಿಗೆ ಮೋಕ್ಷಿತಾ ಅವರೇ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಆತ ಮಾನಸಿಕ ಅಸ್ವಸ್ಥ. ಆತನ ಆರೈಕೆ ಮಾಡುವ ಜವಾಬ್ದಾರಿ ಮೋಕ್ಷಿತಾ ಅವರ ಮೇಲಿದೆ. ಒಮ್ಮೆ ರಿಯಾಲಿಟಿ ಷೋ (Reality Show) ಒಂದಕ್ಕೆ ತಮ್ಮ ತಮ್ಮನನ್ನು ಕರೆದುಕೊಂಡು ಬಂದಿದ್ದ ಪಾರು ಅವರು, ತನ್ನ ತಮ್ಮನನ್ನು ನಾನೇ ತಂದೆ ಹಾಗೂ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದೇನೆ. ಅವನಿಗೂ ನಾನೆಂದರೆ ತುಂಬಾ ಇಷ್ಟ ಎಂದು ಭಾವುಕರಾಗಿದ್ದರು. ಆಗಾಗ್ಗೆ ತಮ್ಮನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ತಮ್ಮನ ಆರೈಕೆಯಲ್ಲಿ ನಟಿ
ಅಂದಹಾಗೆ, ಕೆಲ ತಿಂಗಳ ಹಿಂದೆ ನಟಿ, ದಿನಪೂರ್ತಿ ತಾವು ಹೇಗೆ ಕಳೆಯುವುದು ಎಂದು ಹೇಳಿದ್ದರು. ಅದರಲ್ಲಿ, ಬಹುತೇಕ ಪಾಲು ತಮ್ಮ ತಮ್ಮನಿಗೇ ಮೀಸಲು. ಆತನ ಪ್ರತಿಯೊಂದು ಆಗುಹೋಗುಗಳನ್ನು ಮೋಕ್ಷಿತಾ ಅವರೇ ನೋಡಿಕೊಳ್ಳುತ್ತಾರೆ. ಓರ್ವ ನಟಿಗೆ ಇದು ಸುಲಭದ ಮಾತಲ್ಲ. ದಿನಪೂರ್ತಿ ಶೂಟಿಂಗ್ ಇರುವ ಸಮಯದಲ್ಲಿ ಇಂಥ ಮಕ್ಕಳಿಗೆ ಗಮನ ಕೊಡುವುದು ಬಹಳ ಕಷ್ಟ ಆದರೂ ಅದನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ ಮೋಕ್ಷಿತಾ. ನಮ್ಮ KFI ಚಾನೆಲ್ಗೆ ನಟಿ ಏನು ಹೇಳಿದ್ದಾರೆ ನೋಡಿ…