Sushant Singh Rajput death CBI Closure Report : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಜವಾಗ್ಲೂ ಆತ್ಮಹತ್ಯೆ ಮಾಡ್ಕೊಂಡ್ರಾ? ಆರು ದಿನದ ಮೊದಲು ಆಗಿದ್ದೇನು? ಎಲ್ಲ ಪ್ರಶ್ನೆಗೆ ಸಿಬಿಐ ಕ್ಲೋಸರ್ ವರದಿಯಲ್ಲಿ ಉತ್ತರ ನೀಡಿದೆ. 

ಬಾಲಿವುಡ್ ಪ್ರಸಿದ್ಧ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವನ್ನಪ್ಪಿ ಐದುವರೆ ವರ್ಷ ಕಳೆದಿದೆ. ಈಗ್ಲೂ ಅವರ ಸಾವು ನಿಗೂಢವಾಗೇ ಇದೆ. ಕೇಂದ್ರ ತನಿಖಾ ದಳ ಈ ವರ್ಷದ ಮಾರ್ಚ್ನಲ್ಲಿ ತನ್ನ ಕ್ಲೋಸರ್ ವರದಿ ಸಲ್ಲಿಸಿದೆ. ಈಗ ಆ ವರದಿಯಲ್ಲಿ ಏನಿದೆ ಎಂಬುದು ಬಹಿರಂಗಗೊಂಡಿದೆ. ಸಿಬಿಐ ನಟಿ ರಿಯಾ ಚಕ್ರವರ್ತಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದು, ಕ್ಲೋಸರ್ ರಿಪೋರ್ಟ್ ನ ಮುಂದಿನ ವಿಚಾರಣೆ ಡಿಸೆಂಬರ್ 20, 2025 ರಂದು ಪಾಟ್ನಾ ನ್ಯಾಯಾಲಯದಲ್ಲಿ ನಡೆಯಲಿದೆ.

ಸಿಬಿಐ ಕ್ಲೋಸರ್ ವರದಿ (CBI Closure Report ) ಯಲ್ಲಿ ಏನಿದೆ? : 

ಪವಿತ್ರ ರಿಶ್ತಾ,ಝಲಕ್ ದಿಖ್ಲಾಜಾ, ಕೈ ಪೋ ಚೆ, ಕೇದಾರನಾಥ್ ಸೇರಿದಂತೆ ಟಿವಿ ಹಾಗೂ ಸಿನಿಮಾ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದ ಸುಶಾಂತ್ ಸಿಂಗ್ ರಜಪೋತ್ ಜೂನ್ 14, 2020 ರಂದು ನಿಧನರಾದರು. ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಫ್ಲಾಟ್ನ ಬೆಡ್ ರೂಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಸುಶಾಂತ್ ಸಾವಿನ ನಿಗೂಢತೆ ದೇಶದ ಅತ್ಯಂತ ವಿವಾದಾತ್ಮಕ ಪ್ರಕರಣಗಳಲ್ಲಿ ಒಂದಾಗಿದೆ. ಈ ವರ್ಷದ ಮಾರ್ಚ್ನಲ್ಲಿ ಸಿಬಿಐ ಎರಡು ಪ್ರಕರಣ ಮುಕ್ತಾಯ ವರದಿಗಳನ್ನು ಸಲ್ಲಿಸಿದೆ. ಸುಶಾಂತ್ ಸಿಂಗ್ ತಂದೆ ಕೆಕೆ ಸಿಂಗ್, ನಟಿ ರಿಯಾ ಚಕ್ರವರ್ತಿ ಮತ್ತು ಕುಟುಂಬದ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿಯರ ವಿರುದ್ಧ ಮುಂಬೈನಲ್ಲಿ ರಿಯಾ ಚಕ್ರವರ್ತಿ ಪ್ರಕರಣ ದಾಖಲಿಸಿದ್ದರು. ಎರಡೂ ಪ್ರಕರಣದ ವಿಚಾರಣೆ ನಡೆಸಿ ಸಿಬಿಐ ವರದಿ ನೀಡಿದೆ. ಸಿಬಿಐ ಕ್ಲೋಸರ್ ವರದಿಯಲ್ಲಿ ಐದು ಮುಖ್ಯ ವಿಷ್ಯಗಳನ್ನು ಹೇಳಿದೆ. 

"ಮಗನೇ, ಇಷ್ಟು ಇಂಜೆಕ್ಷನ್ ತೆಗೆದುಕೊಳ್ಳಬೇಡ' ಎಂದ ಟ್ವಿಂಕಲ್ ಖನ್ನಾಗೆ ಕರಣ್ ಜೋಹರ್ ಹೇಳಿದ್ದೇನು?

• ಸಾವಿಗೆ ಆರು ದಿನ ಮೊದಲೇ ಫ್ಲಾಟ್ ಬಿಟ್ಟಿದ್ದ ರಿಯಾ : ಸುಶಾಂತ್ ಸಿಂಗ್ ಜೂನ್ 14 ರಂದು ಸಾವನ್ನಪ್ಪಿದ್ದಾರೆ. ರಿಯಾ ಮತ್ತು ಶೋವಿಕ್ ಜೂನ್ 8 ರಂದೇ ಸುಶಾಂತ್ ಬಾಂದ್ರಾ ಫ್ಲಾಟ್ ತೊರೆದ್ದರು ಎಂದು ವರದಿಯಲ್ಲಿದೆ. ಆ ನಂತ್ರ ಅವರ್ಯಾರೂ ಮನೆಗೆ ವಾಪಸ್ ಆಗ್ಲಿಲ್ಲ. ಸುಶಾಂತ್, ಸಾವಿಗೆ ಮುನ್ನ ರಿಯಾ ಅಥವಾ ಅವರ ಯಾವುದೇ ಕುಟುಂಬ ಸದಸ್ಯರೊಂದಿಗೆ ಯಾವುದೇ ರೀತಿಯಲ್ಲಿ ಮಾತುಕತೆ ನಡೆಸಲಿಲ್ಲ. ಜೂನ್ 10 ರಂದು ಮಧ್ಯಾಹ್ನ 2. 41 ರ ಸಮಯದಲ್ಲಿ ವಾಟ್ಸಾಪ್ನಲ್ಲಿ ಶೋವಿಕ್ ಜೊತೆ ಸುಶಾಂತ್ ಮಾತನಾಡಿದ್ದರು ಎಂದು ವರದಿ ಹೇಳಿದೆ.

 • ಇನ್ನು ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಜೂನ್ 12 ರವರೆಗೆ ಸುಶಾಂತ್ ಜೊತೆಗಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲದಿದ್ದರೂ ಅವರ ಸಹೋದರಿ ಮೀತು ಸಿಂಗ್ ಜೂನ್ 8 ರಿಂದ ಜೂನ್ 12 ರವರೆಗೆ ಅವರ ಫ್ಲಾಟ್ನಲ್ಲಿ ಇದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ. ರಿಯಾ ಚಕ್ರವರ್ತಿ ಮತ್ತು ಶೋವಿಕ್ ಚಕ್ರವರ್ತಿ ಜೊತೆಗೆ, ಸುಶಾಂತ್ ಮ್ಯಾನೇಜರ್ ಶ್ರುತಿ ಮೋದಿ ಕೂಡ ಆ ವರ್ಷದ ಫೆಬ್ರವರಿಯಲ್ಲಿ ಅವರ ಕಾಲು ಮುರಿದ ನಂತರ ಅವರ ಮನೆಗೆ ಭೇಟಿ ನೀಡಿರಲಿಲ್ಲ. 

• ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ಕುಟುಂಬ ಕಳ್ಳತನದ ಆರೋಪ ಹೊರಿಸಿತ್ತು. ಆದ್ರೆ ಜೂನ್ 8 ರಂದು ಸಹೋದರನ ಜೊತೆ ಫ್ಲಾಟ್ ಬಿಟ್ಟ ರಿಯಾ, ಲ್ಯಾಪ್ ಟಾಪ್ ಮತ್ತು ಸುಶಾಂತ್ ಗಿಫ್ಟ್ ಆಗಿ ನೀಡಿದ್ದ ಆಪಲ್ ವಾಚ್ ಮಾತ್ರ ತೆಗೆದುಕೊಂಡಿದ್ದರು. ಬೇರೆ ಯಾವುದೇ ವಸ್ತುವನ್ನು ಅವರು ತೆಗೆದುಕೊಂಡಿಲ್ಲ ಎಂದು ವರದಿ ಹೇಳಿದೆ. 

ಡ್ಯೂಡ್ ಚಿತ್ರಕ್ಕೆ ನಟಿ ಮಮಿತಾ ಪಡೆದ ಸಂಬಳ ಇಷ್ಟೇನಾ? ಹಾಗಿದ್ರೆ 15 ಕೋಟಿ ಸುದ್ದಿ ಸುಳ್ಳಾ?

• ಸಿಬಿಐ ಪ್ರಕಾರ, ರಿಯಾ ಮತ್ತು ಸುಶಾಂತ್ ಏಪ್ರಿಲ್ 2019 ರಿಂದ ಜೂನ್ 2020 ರವರೆಗೆ ಲಿವ್-ಇನ್ ರಿಲೇಶನ್ಶಿಪ್ ನಲ್ಲಿದ್ದರು. ಈ ಸಂದರ್ಭದಲ್ಲಿ ಸುಶಾಂತ್, ರಿಯಾಗೆ ಹಣ ಖರ್ಚು ಮಾಡಿದ್ದರು. ಇದ್ರ ವಿರುದ್ಧ ಕುಟುಂಬ ಆರೋಪ ಮಾಡಿತ್ತು. ಸುಶಾಂತ್, ತಮ್ಮ ಫ್ಲಾಟ್ಮೇಟ್ ಸಿದ್ಧಾರ್ಥ್ ಪಿಥಾನಿಗೆ ರಿಯಾ ನಮ್ಮ ಫ್ಯಾಮಿಲಿಯ ಒಂದು ಭಾಗ ಎಂದಿದ್ದರಂತೆ. ರಿಯಾ ಅವರನ್ನು ಅವರ ಕುಟುಂಬದ ಭಾಗವೆಂದು ಪರಿಗಣಿಸಿ, ಅವರ ಮೇಲೆ ಮಾಡಿದ ವೆಚ್ಚಗಳು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 420 ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಬಿಐ ವರದಿಯಲ್ಲಿ ಹೇಳಿದೆ. ರಿಯಾ ಯಾವುದೇ ಆಸ್ತಿ ವಂಚಿಸಿಲ್ಲ ಎಂದಿದೆ. 

• ಸಿಬಿಐ ರಿಯಾ ಚಕ್ರವರ್ತಿಗೆ ಕ್ಲೀನ್ ಚಿಟ್ ನೀಡಿದ್ದು, ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವಂತೆ ರಿಯಾ ಬೆದರಿಕೆ ನೀಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ ಎಂದಿದೆ. ರಿಯಾ ಚಕ್ರವರ್ತಿ ಅಥವಾ ಯಾವುದೇ ಇತರ ಆರೋಪಿಗಳು ಡಿಜಿಟಲ್ ಡೇಟಾ ಸೇರಿದಂತೆ ಸುಶಾಂತ್ಗೆ ಯಾವುದೇ ಬೆದರಿಕೆ ಹಾಕಿರುವ ಪುರಾವೆಗಳು ಕಂಡುಬಂದಿಲ್ಲ.