Shah Rukh Khan Children Net Worth: ಶಾರುಖ್ ಖಾನ್ ಮಕ್ಕಳಾದ ಆರ್ಯನ್ ಖಾನ್ ಹಾಗೂ ಸುಹಾನಾ ಖಾನ್ ಇಬ್ಬರಲ್ಲಿ ಯಾರ ಬಳಿ ಹೆಚ್ಚು ಆಸ್ತಿ ಇದೆ? ಯಾರು ಯಾವ ಕೆಲ್ಸ ಮಾಡ್ತಿದ್ದಾರೆ? ಫುಲ್ ಡಿಟೇಲ್ ಇಲ್ಲಿದೆ.
ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ (Bollywood Badshah Shah Rukh Khan) ವಯಸ್ಸು ಹೆಚ್ಚಾದಷ್ಟು ಯಂಗ್ ಆಗ್ತಿದ್ದಾರೆ. ಬಾಲಿವುಡ್ ಗೆ ಸಾಕಷ್ಟು ಹಿಟ್ ಸಿನಿಮಾ ನೀಡಿರುವ ಶಾರುಖ್ ಖಾನ್, ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದ ಮೂಲಕವೂ ಆಗಾಗ ಚರ್ಚೆಗೆ ಬರ್ತಾರೆ. ಗೌರಿ ಜೊತೆ ಸುಖ ಸಂಸಾರ ನಡೆಸ್ತಿರುವ ಶಾರುಖ್ ಖಾನ್ ಮೂವರು ಮಕ್ಕಳ ತಂದೆ. ಸ್ಟಾರ್ ಕಿಡ್ಸ್ ಕಿರೀಟ ಹೊತ್ತುಕೊಂಡೇ ಭೂಮಿಗೆ ಬಂದ ಆರ್ಯನ್ ಖಾನ್ (Aryan Khan) ಹಾಗೂ ಸುಹಾನಾ ಖಾನ್ (Suhana Khan) ಫೀಲ್ಡಿಗಿಳಿದಾಗಿದೆ. ಇನ್ನು ಶಾರುಖ್ ಖಾನ್ ಕೊನೆ ಮಗ ಅಬ್ರಾಮ್ ಓದ್ತಿದ್ದು, ಆಗಾಗ ಶಾರುಖ್ ಜೊತೆ ಕಾಣಿಸಿಕೊಳ್ತಾ ಫ್ಯಾನ್ಸ್ ಮನಸ್ಸಿಗೆ ಕಚಗುಳಿ ಇಡ್ತಾನೆ.
ಗಳಿಕೆ ವಿಷ್ಯದಲ್ಲಿ ಶಾರುಖ್ಇಬ್ಬರು ಮಕ್ಕಳಲ್ಲಿ ಯಾರು ಮುಂದಿದ್ದಾರೆ? : ಶಾರುಖ್ ಮೊದಲ ಮಗ ಆರ್ಯನ್ ಖಾನ್ ನವೆಂಬರ್ 13, 1997 ರಂದು ಜನಿಸಿದ್ರು. ಆರ್ಯನ್ ಖಾನ್ ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಸ್ಟಡಿ ಮುಗಿಸಿದ್ದಾರೆ. ಆ ನಂತ್ರ 2016 ರಲ್ಲಿ ಇಂಗ್ಲೆಂಡ್ನ ಸೆವೆನೋಕ್ಸ್ನಲ್ಲಿರುವ ಸೆವೆನೋಕ್ಸ್ ಸ್ಕೂಲ್ ನಲ್ಲಿ, ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ನಂದಾ ಜೊತೆ ಹೆಚ್ಚಿನ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಅಷ್ಟೇ ಅಲ್ಲ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಿನಿಮೀಯ ಕಲಾ ಸ್ಕೂಲ್ ನಲ್ಲಿ ಸಿನಿಮೀಯ ಕಲೆ ಮತ್ತು ದೂರದರ್ಶನ ನಿರ್ಮಾಣದಲ್ಲಿ ಪದವಿ ಪಡೆದ ಆರ್ಯನ್ನಿರ್ದೇಶನದ ಮೇಲೆ ಗಮನ ಹರಿಸಿದ್ದಾರೆ. ಆರ್ಯನ್ ಖಾನ್ ನಿರ್ದೇಶನದ ಚೊಚ್ಚಲ ವೆಬ್ ಸರಣಿ 'ಬ್ಯಾಡ್ಸ್ ಆಫ್ ಬಾಲಿವುಡ್' ನ ಮೊದಲ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ನವೆಂಬರ್ 2025 ರಲ್ಲಿ, ಆರ್ಯನ್ ಖಾನ್ ನಿರ್ದೇಶನದ ವೆಬ್ ಸರಣಿ ರಿಲೀಸ್ ಆಗಲಿದೆ.
ಆರ್ಯನ್ ನಿರ್ದೇಶನಕ್ಕೆ ಇಳಿಯೋ ಮುನ್ನವೇ ಬ್ಯುಸಿನೆಸ್ ಮೂಲಕ ಹಣ ಸಂಪಾದನೆ ಶುರು ಮಾಡಿದ್ದರು. ಆರ್ಯನ್ D'YAVOL ಎಂಬ ಬಟ್ಟೆ ಬ್ರಾಂಡ್ ಹೊಂದಿದ್ದು, ಇದು ಸಾಕಷ್ಟು ಪ್ರಸಿದ್ಧಿ ಪಡೆದಿದೆ. ವರದಿ ಪ್ರಕಾರ ಆರ್ಯನ್ ನಿವ್ವಳ ಮೌಲ್ಯ 80 ಕೋಟಿ ರೂಪಾಯಿ.
ಆಸ್ತಿ ಗಳಿಕೆ ವಿಷ್ಯದಲ್ಲಿ ಶಾರುಖ್ ಖಾನ್ ಎರಡನೇ ಮಗಳು ಸುಹಾನಾ ಖಾನ್ ಹಿಂದೆ ಬಿದ್ದಿಲ್ಲ. ಸುಹಾನಾ ಖಾನ್ ಮಾಡಿದ್ದು ಒಂದೇ ಒಂದು ಸಿನಿಮಾ. ಆದ್ರೆ ಸುಹಾನಾ ಬ್ರ್ಯಾಂಡ್ ಐಕಾನ್. ಅನೇಕ ಜಾಹೀರಾತಿನಲ್ಲಿ ಸುಹಾನಾ ಕಾಣಿಸಿಕೊಂಡಿದ್ದಾರೆ. ಅವರು ಸೋಶಿಯಲ್ ಮೀಡಿಯಾ ಮೂಲಕ ಅನೇಕ ಉತ್ಪನ್ನಗಳ ಪ್ರಚಾರ ಮಾಡ್ತಾರೆ. ಸುಹಾನಾ ಖಾನ್ 2023 ರ 'ದಿ ಆರ್ಚೀಸ್' ಚಿತ್ರದೊಂದಿಗೆ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರ OTT ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ. ಆರ್ಯನ್ ಖಾನ್ ರಂತೆ ಸುಹಾನಾ ಖಾನ್ ಕೂಡ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದಾರೆ. ಅಲಿಬಾಗ್ನಲ್ಲಿ 12.91 ಕೋಟಿ ರೂಪಾಯಿ ಮೌಲ್ಯದ ಫಾರ್ಮ್ ಹೌಸ್ ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸುಹಾನಾ ಖಾನ್ ಅವರ ಒಟ್ಟು ನಿವ್ವಳ ಮೌಲ್ಯ 20 ಕೋಟಿ ರೂಪಾಯಿ. ಅಂಕಿಅಂಶಗಳನ್ನು ನೋಡಿದ್ರೆ ಶಾರುಖ್ ಖಾನ್ ಮಗ ಆರ್ಯನ್ ಖಾನ್, ಸುಹಾನಾ ಖಾನ್ ಗಿಂತ ಶ್ರೀಮಂತರು. ಆರ್ಯನ್ ಸುಹಾನಾ ಗಿಂತ 4 ಪಟ್ಟು ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ.
ಇನ್ನು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಿವ್ವಳ ಮೌಲ್ಯ ಸುಮಾರು 7400 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಸಿನಿಮಾ ಜೊತೆ ಶಾರುಕ್ ಖಾನ್ ನಿರ್ಮಾಣ ಸಂಸ್ಥೆ, ಐಪಿಎಲ್ ಟೀಂ, ವಿಎಫ್ಎಕ್ಸ್ ಟೀ ಮತ್ತು ಸ್ಟೇಜ್ ಶೋ ಹಾಗೂ ಜಾಹೀರಾತಿನ ಮೂಲಕ ಹಣ ಸಂಪಾದನೆ ಮಾಡ್ತಿದ್ದಾರೆ.
