Rashmika Mandanna troll : ರಶ್ಮಿಕಾ ಮಂದಣ್ಣ ಮತ್ತೆ ಟ್ರೋಲರ್ ಬಾಯಿಗೆ ಆಹಾರವಾಗಿದ್ದಾರೆ. ಹಿರಿಯ ನಟಿ ಸುಮಲತಾಗೆ ರಶ್ಮಿಕಾ ಗೌರವ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.
ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಸೈಮಾ (SIIMA) ಅವಾರ್ಡ್ ಮುಡಿಗೇರಿಸಿಕೊಂಡ ಸಂಭ್ರಮದಲ್ಲಿದ್ದಾರೆ. ಫ್ಯಾನ್ಸ್ ಜೊತೆ ಕ್ಲೋಸಾಗಿರುವ ರಶ್ಮಿಕಾ ಮಂದಣ್ಣ ಸ್ಯಾಂಡಲ್ವುಡ್ ವಿಷ್ಯಕ್ಕೆ ಬಂದಾಗ ಟ್ರೋಲರ್ ಬಾಯಿಗೆ ಆಹಾರ ಆಗ್ತಾರೆ. ಸೈಮಾ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಮಾಡಿದ ಕೆಲ್ಸ ಈಗ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ರಶ್ಮಿಕಾ ಮಂದಣ್ಣ, ಸ್ಯಾಂಡಲ್ ವುಡ್ ಹಿರಿಯ ಕಲಾವಿದರಿಗೆ ಗೌರವ ನೀಡೋದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.
ಸುಮಲತಾ (Sumalatha)ರನ್ನು ಇಗ್ನೋರ್ ಮಾಡಿದ್ರಾ ರಶ್ಮಿಕಾ ಮಂದಣ್ಣ ? : ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2025ರಲ್ಲಿ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2, ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಚಿತ್ರದ ಅಭಿನಯಕ್ಕಾಗಿ ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ. ಕಾರ್ಯಕ್ರಮಕ್ಕೆ ಸೀರೆಯುಟ್ಟ ಬಂದಿದ್ದ ರಶ್ಮಿಕಾ ಮಂದಣ್ಣ, ಅವಾರ್ಡ್ ಕೈನಲ್ಲಿ ಹಿಡಿದು ಸ್ಟೇಜ್ ಕೆಳಗೆ ಬಂದಿದ್ದಾರೆ. ಅಲ್ಲೇ ಕುಳಿತಿದ್ದ ಸಹ ನಟ ಅಲ್ಲು ಅರ್ಜುನ್ ಎದ್ದು ನಿಂತು ಶೇಕ್ ಹ್ಯಾಂಡ್ ಮಾಡ್ತಾರೆ. ಅಲ್ಲು ಅರ್ಜುನ್ ಜೊತೆ ಮಾತನಾಡುವ ರಶ್ಮಿಕಾ, ತಮ್ಮ ಚೇರ್ ಗೆ ವಾಪಸ್ ಆಗ್ತಾರೆ. ಅಲ್ಲು ಅರ್ಜುನ್ ಪಕ್ಕದಲ್ಲಿಯೇ ಕನ್ನಡದ ಹಿರಿಯ ನಟಿ ಸುಮಲತಾ ಕುಳಿತಿರೋದನ್ನು ವಿಡಿಯೋದಲ್ಲಿ ನೋಡ್ಬಹುದು. ರಶ್ಮಿಕಾ ಮಂದಣ್ಣ, ಸುಮಲತಾಗೆ ನಮಸ್ಕಾರ ಮಾಡೋದಿರಲಿ ಹಾಯ್ ಕೂಡ ಹೇಳೋದಿಲ್ಲ. ನನಗೆ ಪರಿಚಯ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ. ರಶ್ಮಿಕಾ ವಾಪಸ್ ಹೋಗ್ತಿದ್ದಂತೆ ಅಲ್ಲು ಅರ್ಜುನ್ ಹಾಗೂ ಸುಮಲತಾ ಮಾತನಾಡೋದನ್ನು ವಿಡಿಯೋದಲ್ಲಿ ಕಾಣ್ಬಹುದು.
ಈಗಷ್ಟೇ ಶುರುವಾಗಿತ್ತು ರೊಮ್ಯಾನ್ಸ್, ವಿಜಯ್ ಸೂರ್ಯ ದೃಷ್ಟಿಬೊಟ್ಟು ಬಿಟ್ರಾ?
ರಶ್ಮಿಕಾ ಮಂದಣ್ಣ ತರಾಟೆಗೆ ತೆಗೆದುಕೊಂಡ ಫ್ಯಾನ್ಸ್ : ವಿಡಿಯೋ ವೈರಲ್ ಆಗ್ತಿದ್ದಂತೆ ಫ್ಯಾನ್ಸ್ ಕೋಪಗೊಂಡಿದ್ದಾರೆ. ಸ್ಯಾಂಡಲ್ ವುಡ್ ಹಿರಿಯ ನಟಿ ಪರಿಚಯ ರಶ್ಮಿಕಾಗೆ ಇಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಸ್ಯಾಂಡಲ್ವುಡ್ ನಿಂದಲೇ ಬಂದವ್ರೂ ಆದ್ರೆ ಸ್ಯಾಂಡಲ್ ವುಡ್ ಕಲಾವಿದರನ್ನು ಮಾತನಾಡಿಸೋದಿಲ್ಲ ಅಂತ ಕಮೆಂಟ್ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಸಂಸ್ಕಾರದ ಬಗ್ಗೆಯೂ ಅನೇಕರು ಕಮೆಂಟ್ ಮಾಡಿದ್ದಾರೆ. ಹಿರಿಯ ನಟಿಗೆ ಅದೂ ಕನ್ನಡದ ನಟಿಗೆ ಗೌರವ ನೀಡಿಲ್ಲ, ಇದು ರಶ್ಮಿಕಾ ಸಂಸ್ಕಾರವನ್ನು ತೋರಿಸುತ್ತೆ ಎನ್ನುವ ಕಮೆಂಟ್ ಬಂದಿದೆ.
ರಶ್ಮಿಕಾ ಮಂದಣ್ಣ ಕಾಂಟ್ರವರ್ಸಿ : ರಶ್ಮಿಕಾ ಮಂದಣ್ಣ ಹಾಗೂ ಕಾಂಟ್ರವರ್ಸಿಗೆ ಅವಿನಾಭಾವ ಸಂಬಂಧ ಇದೆ. ರಶ್ಮಿಕಾ ಮಂದಣ್ಣ, ಆಗಾಗ ಸುದ್ದಿಗೆ ಬರ್ತಿರುತ್ತಾರೆ. ವಿಶೇಷವಾಗಿ ಕನ್ನಡ ಹಾಗೂ ಸ್ಯಾಂಡಲ್ವುಡ್ ವಿಚಾರಕ್ಕೆ ರಶ್ಮಿಕಾ ಟ್ರೋಲ್ ಆಗ್ತಿರುತ್ತಾರೆ. ಈ ಹಿಂದೆ ಕೊಡಗಿನಿಂದ ಬಂದ ನಟಿ ನಾನೊಬ್ಬಳೆ ಎನ್ನುವ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ರು. ಅವ್ರ ಈ ಹೇಳಿಕೆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅನೇಕ ಕೊಡಗು ನಟಿಯರು, ನಾವೆಲ್ಲ ಕೊಡಗಿನಿಂದ ಬಂದವರು ಅಂತ ರಶ್ಮಿಕಾ ಹೇಳಿಕೆಯನ್ನು ಖಂಡಿಸಿದ್ದರು.
ಮತ್ತೆ ವಿವಾದಕ್ಕೆ ಗುರಿಯಾದ ರಾಮ್ ಗೋಪಾಲ್ ವರ್ಮಾ; ಟ್ವೀಟ್ ಮಾಡಿ ಮಂಗಳಾರತಿ ಎತ್ತಿಸಿಕೊಂಡಿದ್ದೇಕೆ?
ರಶ್ಮಿಕಾ ಮಂದಣ್ಣ ಸಿನಿಮಾ : ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡಿದ ರಶ್ಮಿಕಾ ಮಂದಣ್ಣ, ಕನ್ನಡದಲ್ಲಿ ಮಾಡಿದ್ದು ಬೆರಳೆಣಿಕೆ ಚಿತ್ರಗಳನ್ನು ಮಾತ್ರ. ತಮಿಳು, ತೆಲುಗು ಚಿತ್ರದಲ್ಲಿ ಮಿಂಚುತ್ತಿರುವ ರಶ್ಮಿಕಾ, ಆಂಧ್ರಪ್ರದೇಶದ ಬಹುಬೇಡಿಕೆಯ ನಟಿ. ಬಾಲಿವುಡ್ ಗೂ ಎಂಟ್ರಿ ನೀಡಿ ನ್ಯಾಷನಲ್ ಕ್ರಶ್ ಎನ್ನಿಸಿಕೊಂಡಿರುವ ರಶ್ಮಿಕಾ ಕೈನಲ್ಲಿ ಈಗ ನಾಲ್ಕೈದು ಸಿನಿಮಾ ಇದೆ. ಪುಷ್ಪಾ ಮತ್ತು ಪುಷ್ಪಾ 2 ಯಶಸ್ಸಿನ ನಂತ್ರ ಪುಷ್ಪಾ 3 ಸಿನಿಮಾಕ್ಕೆ ರಶ್ಮಿಕಾ ಸಜ್ಜಾಗ್ತಿದ್ದಾರೆ. ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಳ್ತಿರುವ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಇನ್ನೊಂದು ಸಿನಿಮಾ ಮಾಡಲು ಸಿದ್ಧವಾಗಿದ್ದಾರೆ.
