ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ದೃಷ್ಟಿಬೊಟ್ಟು ಸೀರಿಯಲ್ ನಿಂದ ವಿಜಯ್ ಸೂರ್ಯ ಹೊರಕ್ಕೆ ಎನ್ನುವ ಸುದ್ದಿ ಇದೆ. ಫ್ಯಾನ್ಸ್, ವಿಜಯ್ ಸೂರ್ಯ ನಿರ್ಧಾರದ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.
ಸದ್ಯ ಎಲ್ಲರ ಕಣ್ಣು ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ರ ಮೇಲಿದೆ. ಬಿಗ್ ಬಾಸ್ ಗೆ ಯಾರು ಬರ್ತಾರೆ, ಯಾವ ಸೀರಿಯಲ್ ಮುಗಿಯುತ್ತೆ ಎನ್ನುವ ಚರ್ಚೆ ಜೋರಾಗಿದೆ. ಈ ಮಧ್ಯೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ದೃಷ್ಟಿಬೊಟ್ಟು ಸೀರಿಯಲ್ ನಾಯಕ ವಿಜಯ್ ಸೂರ್ಯ (Vijay Surya), ಸೀರಿಯಲ್ ಬಿಟ್ಟಿದ್ದಾರೆ ಎನ್ನುವ ಸುದ್ದಿ ಇದೆ. ದೃಷ್ಟಿಬೊಟ್ಟು ಸೀರಿಯಲ್ ನಲ್ಲಿ ದತ್ತಾ ಭಾಯ್ ಆಗಿ ಕಾಣಿಸಿಕೊಳ್ತಿರುವ ವಿಜಯ್ ಸೂರ್ಯ, ಬಿಗ್ ಬಾಸ್ ಗೆ ಬರ್ತಾರಾ ಎಂಬ ಕುತೂಹಲ ಮನೆ ಮಾಡಿದೆ.
ದೃಷ್ಟಿಬೊಟ್ಟು (Drishti bottu) ಸೀರಿಯಲ್ ಬಿಟ್ರಾ ವಿಜಯ್ ಸೂರ್ಯ? : ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ಸಂಜೆ 6 ಗಂಟೆಗೆ ಪ್ರಸಾರ ಆಗ್ತಿರುವ ಸೀರಿಯಲ್ ದೃಷ್ಟಿಬೊಟ್ಟು. ಇದ್ರಲ್ಲಿ ದತ್ತ ಭಾಯ್ ಪಾತ್ರಕ್ಕೆ ವಿಜಯ್ ಸೂರ್ಯ ಜೀವ ತುಂಬಿದ್ದಾರೆ. ಆರಂಭದಲ್ಲಿ ರೌಡಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಸೂರ್ಯ ಈಗ ಲವ್ವರ್ ಬಾಯ್ ಆಗಿದ್ದಾರೆ. ದೃಷ್ಟಿಯನ್ನು ಮದುವೆ ಆದ್ಮೇಲೆ ಬದಲಾಗುವ ದತ್ತ, ಈಗ ದೃಷ್ಟಿ ಪ್ರೀತಿಯಲ್ಲಿ ಮುಳುಗಿದ್ದಾನೆ. ದೃಷ್ಟಿಗಾಗಿ ರೌಡಿಸಂ ಬಿಡಲೂ ದತ್ತ ಸಿದ್ಧನಾಗಿದ್ದಾನೆ. ಅನೇಕ ವೀಕ್ಷಕರು ವಿಜಯ್ ಸೂರ್ಯಗಾಗಿಯೇ ಈ ಸೀರಿಯಲ್ ನೋಡ್ತಿದ್ದಾರೆ ಅನ್ನೋದು ಸುಳ್ಳಲ್ಲ. ಅಗ್ನಿಸಾಕ್ಷಿ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿರುವ ವಿಜಯ್ ಸೂರ್ಯ, ಪ್ರೀತಿ ಮಾತು, ಆಕ್ಟಿಂಗ್, ಆಕ್ಷನ್, ರೊಮ್ಯಾನ್ಸ್ ಹುಡುಗಿಯರ ಹೃದಯಕ್ಕೆ ಕಚಗುಳಿ ಇಡುತ್ತೆ.
Lakshmi Nivasaದಿಂದ ಹೊರಬಂದ ವಿಶ್ವನ ಜೊತೆ 'ಪುಟ್ಟಕ್ಕನ ಮಕ್ಕಳು' ಹಳೆ ಸ್ನೇಹಾ ಜೊತೆ
ಆರಂಭದಲ್ಲಿ ಸಾಕಷ್ಟು ಟ್ವಿಸ್ಟ್, ಟರ್ನ್ ಹೊಂದಿದ್ದ ದೃಷ್ಟಿಬೊಟ್ಟು ಸೀರಿಯಲ್ ನಲ್ಲಿ ಈಗ ಎಲ್ಲವೂ ಸಾಮಾನ್ಯವಾಗಿದೆ. ಅಕ್ಕನ ಸತ್ಯ ತಿಳಿಯೋದು ಮಾತ್ರ ಬಾಕಿ ಇದೆ. ಸದ್ಯ ಸೀರಿಯಲ್ ಓಡ್ತಿರೋದು ದತ್ತ ಹಾಗೂ ದೃಷ್ಟಿ ರೋಮ್ಯಾಂಟಿಕ್ ಸೀನ್ ನಿಂದ ಅಂದ್ರೆ ತಪ್ಪೇನಿಲ್ಲ. ಈ ಮಧ್ಯೆ ವಿಜಯ್ ಸೂರ್ಯ, ದೃಷ್ಟಿಬೊಟ್ಟು ಸೀರಿಯಲ್ ನಿಂದ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಈ ಬಗ್ಗೆ ಕಲರ್ಸ್ ವಾಹಿನಿಯಾಗ್ಲಿ, ವಿಜಯ್ ಸೂರ್ಯ ಆಗ್ಲಿ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ವಿಜಯ್ ಸೂರ್ಯ ಫ್ಯಾನ್ಸ್ ರಿಯಾಕ್ಷನ್ ಏನು? : ವಿಜಯ್ ಸೂರ್ಯ, ದೃಷ್ಟಿಬೊಟ್ಟು ಸೀರಿಯಲ್ ನಿಂದ ಹೊರಗೆ ಬಂದಿದ್ದಾರೆ ಎನ್ನುವ ಸುದ್ದಿ ಕೇಳಿ ಫ್ಯಾನ್ಸ್, ಗೆಸ್ ಶುರು ಮಾಡಿದ್ದಾರೆ. ಬಿಗ್ ಬಾಸ್ 12 ಇನ್ನೇನು ಶುರುವಾಗ್ತಿದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಯಾಗಿ ವಿಜಯ್ ಸೂರ್ಯ ಬಿಗ್ ಬಾಸ್ ಮನೆ ಸೇರ್ತಾರೆ ಅಂತ ಫ್ಯಾನ್ಸ್ ಗೆಸ್ ಮಾಡ್ತಿದ್ದಾರೆ. ಮತ್ತೊಂದಿಷ್ಟು ಮಂದಿ, ಬಿಗ್ ಬಾಸ್ ಶೋ ಶುರು ಆಗ್ತಿದ್ದಂತೆ ಎರಡು ಸೀರಿಯಲ್ ಬಂದ್ ಆಗುತ್ತೆ. ಕಡಿಮೆ ಟಿಆರ್ ಪಿ ಇರುವ ದೃಷ್ಟಿಬೊಟ್ಟು ಈ ಪಟ್ಟಿಯಲ್ಲಿದ್ರೂ ಆಶ್ಚರ್ಯ ಇಲ್ಲ. ಸೀರಿಯಲ್ ಮುಗಿಯೋ ಕಾರಣಕ್ಕೆ ವಿಜಯ್ ಸೂರ್ಯ, ಸೀರಿಯಲ್ ನಿಂದ ಹೊರ ಬಿದ್ದಿದ್ದಾರೆ ಅಂತ ಊಹಿಸ್ತಿದ್ದಾರೆ. ಒಂದ್ವೇಳೆ ವಿಜಯ್ ಸೂರ್ಯ ಸೀರಿಯಲ್ ಬಿಟ್ರೆ, ಸೀರಿಯಲ್ ಮುಗಿಸಿಬಿಡಿ, ಹೀರೋ ಬದಲಾವಣೆ ಬೇಡ ಎನ್ನುವ ಸಲಹೆ ಕೂಡ ಬಂದಿದೆ.
15 ಸೆಂಟಿಮೀಟರ್ ಜಾಜಿ ಮಲ್ಲಿಗೆಯಿಂದ ನಟಿ ನವ್ಯಾಗೆ 1.14 ಲಕ್ಷ ರೂ ದಂಡ
ವಿಜಯ್ ಸೂರ್ಯ ವೃತ್ತಿ ಜೀವನ : ವಿಜಯ್ ಸೂರ್ಯ, ಅಗ್ನಿಸಾಕ್ಷಿ ಸೀರಿಯಲ್ ಗಿಂತ ಮುನ್ನ ಸೀರಿಯಲ್ ಹಾಗೂ ಸಿನಿಮಾ ಮಾಡಿದ್ರೂ ಕಲರ್ಸ್ ಕನ್ನಡದ ಅಗ್ನಿಸಾಕ್ಷಿ ಅವರಿಗೆ ಬ್ರೇಕ್ ನೀಡಿತ್ತು. ಅದಾದ್ಮೇಲೆ ಕೆಲ ಸಿನಿಮಾಗಳಲ್ಲಿ ನಟಿಸಿರುವ ವಿಜಯ್ ಸೂರ್ಯ, ಈಗ ದೃಷ್ಟಿಬೊಟ್ಟು ಸೀರಿಯಲ್ ನಲ್ಲಿ ಕಾಣಿಸಿಕೊಳ್ತಿದ್ದಾರೆ.
