ಚೀನಾ, ಅಮೆರಿಕ ಸಂಶೋಧನೆಯಿಂದ ಕೊರೋನಾ ಸೋರಿಕೆ!| ಅಮೆರಿಕ ಹಣದಲ್ಲಿ ವುಹಾನ್ ಲ್ಯಾಬ್‌ನಲ್ಲಿ ಚೀನಾ ನಡೆಸುತ್ತಿದ್ದ ಬಾವಲಿ ಸಂಶೋಧನೆ ವೇಳೆ ಅವಾಂತರ| ಈ ಲ್ಯಾಬ್‌ನಿಂದಲೇ ವೈರಸ್ ಮಾರುಕಟ್ಟೆಗೆ ಲೀಕ್: ವರದಿ| 2011ರಿಂದಲೇ ಬಾವಲಿಗಳ ಜೀನ್‌ನಿಂದ ವುಹಾನ್‌ನಲ್ಲಿ ವೈರಸ್ ಸಂಶೋಧನೆ
ಲಂಡನ್: ಚೀನಾದ ವುಹಾನ್‌ನಲ್ಲಿ ಪ್ರಾಣಿಗಳ ಮಾಂಸ ಮಾರುವ ವೆಟ್ ಮಾರ್ಕೆಟ್‌ನಿಂದ ಕೊರೋನಾ ವೈರಸ್ ಮೊಟ್ಟಮೊದಲಿಗೆ ಮನುಷ್ಯರಿಗೆ ತಗಲಿತು ಎಂಬ ವರದಿಯನ್ನು ಅಲ್ಲಗಳೆಯುವ ಇನ್ನೊಂದು ಬೆಚ್ಚಿಬೀಳಿಸುವ ವರದಿ ಇದೀಗ ಬಂದಿದೆ. ಈ ವರದಿಯ ಪ್ರಕಾರ, ವುಹಾನ್‌ನ ಪ್ರಸಿದ್ಧ ವೈರಾಲಜಿ ಸಂಸ್ಥೆಯಲ್ಲಿ 2011ರಿಂದಲೇ ಬಾವಲಿಗಳ ಜೀನ್‌ನಿಂದ ಕೊರೋನಾ ವೈರಸ್ ತೆಗೆದು ಸಂಶೋಧನೆ ನಡೆಸಲಾಗುತ್ತಿತ್ತು. ಇಲ್ಲಿಂದ ವೆಟ್ ಮಾರ್ಕೆಟ್‌ಗೆ ಕೊರೋನಾ ಸೋಂಕು ‘ರವಾನೆಯಾಗಿದೆ.’ ಅಚ್ಚರಿಯೆಂದರೆ, ಈ ಸಂಶೋಧನೆಗೆ ಅಮೆರಿಕ ಹಣ ನೀಡುತ್ತಿತ್ತು!
ಬ್ರಿಟನ್ ಪ್ರಧಾನಿ ಬೋರಿಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್!
ಬ್ರಿಟನ್ನಿನ ‘ದಿ ಡೇಲಿ ಮೇಲ್’ನಲ್ಲಿ ಈ ಕುರಿತ ವರದಿ ಪ್ರಕಟವಾಗಿದೆ. ವುಹಾನ್ ಪ್ರಯೋಗಾಲಯದ ತಜ್ಞರು 1000 ಕಿ.ಮೀ. ದೂರವಿರುವ ಯುನಾನ್‌ನ ಗುಹೆಯಿಂದ ಬಾವಲಿಗಳನ್ನು ಹಿಡಿದುಕೊಂಡು ಹೋಗಿ ಅವುಗಳ ಸ್ವಾಬ್ ಸಂಗ್ರಹಿಸಿ ಸಾರ್ಸ್ ರೀತಿಯ ಹೊಸ ವೈರಾಣುವನ್ನು ಶೋಧಿಸುತ್ತಿದ್ದರು. ಆಗ ಕೋವಿಡ್-19 ವೈರಸ್ ಪತ್ತೆಯಾಗಿದೆ. ಈ ವೈರಸ್ಸನ್ನು ಹಂದಿಗಳಿಗೆ ಇಂಜೆಕ್ಟ್ ಮಾಡಿ ಅವುಗಳಿಗೆ ಯಾವ ರೀತಿಯ ಸೋಂಕು ತಗಲುತ್ತದೆ ಎಂದು ಪರೀಕ್ಷಿಸಲಾಗಿದೆ. ನಂತರ ಪ್ರಯೋಗಕ್ಕೆ ಬಳಸಲಾದ ಬಾವಲಿ ಹಾಗೂ ಹಂದಿಗಳನ್ನು 10 ಕಿ.ಮೀ. ದೂರದಲ್ಲಿರುವ ವೆಟ್ ಮಾರ್ಕೆಟ್‌ಗೆ ಮಾರಾಟ ಮಾಡಲಾಗಿದೆ. ಇದರಿಂದಾಗಿ ವೈರಸ್ ಹರಡಿದೆ ಎಂದು ವರದಿ ಹೇಳಿದೆ.
ಇನ್ನೊಂದು ಮೂಲದ ಪ್ರಕಾರ, ಪ್ರಯೋಗಾಲಯದ ತಜ್ಞರಿಗೆ ಮೊದಲು ಕೊರೋನಾ ವೈರಸ್ ತಗಲಿದೆ. ಆತನಿಂದ ಹೊರಗೆ ಸೋಂಕು ಹರಡಿದೆ. ಇದಕ್ಕೆ ಪುಷ್ಟಿನೀಡುವಂತೆ, ವುಹಾನ್‌ನಲ್ಲಿ ಮೊದಲು ಪತ್ತೆಯಾದ 41 ಕೊರೋನಾ ಸೋಂಕಿತರಲ್ಲಿ ವೆಟ್ ಮಾರ್ಕೆಟ್‌ನ ಜೊತೆಗೆ ಯಾವುದೇ ರೀತಿಯ ಸಂಪರ್ಕವಿಲ್ಲದ 13 ಜನರೂ ಇದ್ದರು. ಇವರಿಗೆ ಪ್ರಯೋಗಾಲಯದಿಂದಲೇ ಸೋಂಕು ತಗಲಿರಬಹುದು ಎನ್ನಲಾಗಿದೆ.
undefined
ಅಚ್ಚರಿಯ ಸಂಗತಿಯೆಂದರೆ, ಚೀನಾ ಉದ್ದೇಶಪೂರ್ವಕವಾಗಿ ಕೊರೋನಾ ಸೋಂಕು ಹರಡಿದೆ ಅಥವಾ ಕೊರೋನಾ ಸೋಂಕಿನ ಕುರಿತ ಅಂಕಿ-ಅಂಶಗಳನ್ನು ಬಚ್ಚಿಡುತ್ತಿದೆ ಎಂದು ಆರೋಪ ಮಾಡಿರುವ ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಈ ಪ್ರಯೋಗಕ್ಕೆ 25 ಕೋಟಿ ರು.ನಷ್ಟುಆರ್ಥಿಕ ನೆರವು ನೀಡಿತ್ತು ಎಂದು ಹೇಳಲಾಗಿದೆ.
ವಿಶ್ವದ 35 ದೇಶಗಳಿಗೆ ಈಗ ಮೋದಿ ಜೀವದಾನಿ!
ಪ್ರಯೋಗದ ಫಲಿತಾಂಶವನ್ನು 2017ರ ನವೆಂಬರ್‌ನಲ್ಲಿ ‘ಸಾರ್ಸ್ ಸಂಬಂಧಿ ಕೊರೋನಾ ವೈರಸ್‌ನ ಮೂಲ ಪತ್ತೆ’ ಎಂಬ ಪ್ರಬಂಧದಲ್ಲಿ ಪ್ರಕಟಿಸಲಾಗಿದೆ. 2018ರಲ್ಲಿ ‘ಬಾವಲಿಗಳಿಂದ ಹರಡುವ ಕೊರೋನಾ ವೈರಸ್‌ನಿಂದ ಹಂದಿಗಳಲ್ಲಿ ಭೇದಿ’ ಎಂಬ ಇನ್ನೊಂದು ಪ್ರಬಂಧವನ್ನೂ ಮಂಡಿಸಲಾಗಿದೆ. 2016ರಲ್ಲಿ ಚೀನಾದ ಹಂದಿ ಫಾಮ್‌ರ್‍ಗಳಲ್ಲಿ ಕೊರೋನಾ ವೈರಸ್ ಹರಡಿದ ನಂತರ ಈ ಪ್ರಯೋಗ ನಡೆಸಲಾಗಿದೆ ಎಂದು ಆ ಪ್ರಬಂಧದಲ್ಲಿ ಹೇಳಲಾಗಿದೆ.
ಕುತೂಹಲಕರ ಸಂಗತಿಯೆಂದರೆ, ಕಳೆದ ವಾರ ವುಹಾನ್‌ನ ಪ್ರಸಿದ್ಧ ವೈದ್ಯರೊಬ್ಬರು ವೆಟ್ ಮಾರ್ಕೆಟ್‌ನಿಂದ ಕೊರೋನಾ ವೈರಸ್ ಹರಡಿತು ಎಂಬ ವಾದವನ್ನು ಅಲ್ಲಗಳೆದಿದ್ದರು. ಅಲ್ಲದೆ, ಶನಿವಾರವಷ್ಟೇ ಚೀನಾದ ಪ್ರಯೋಗಾಲಯಗಳಿಗೆ ಅಮೆರಿಕ ಹಣ ನೀಡುವುದರ ವಿರುದ್ಧ ಅಮೆರಿಕದ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದರು.
ವಂಶವಾಹಿ ಪ್ರಯೋಗ
- ವುಹಾನ್‌ನಿಂದ ಸಾವಿರ ಕಿ.ಮೀ. ದೂರದ ಯುನಾನ್ ಗುಹೆಯಲ್ಲಿ ಬಾವಲಿ ಸೆರೆ
- ಅದರ ಸ್ವಾಬ್ ಸಂಗ್ರಹಿಸಿ ಸಾರ್ಸ್ ರೀತಿಯ ವೈರಾಣುವಿಗಾಗಿ ಶೋಧ ಕಾರ್ಯ
- ಆ ವೇಳೆ ಕೊರೋನಾ ವೈರಸ್ ಪತ್ತೆ. ಹಂದಿಗಳ ಮೇಲೆ ಆ ವೈರಾಣು ಪ್ರಯೋಗ
- ಬಾವಲಿ, ಹಂದಿ ಎರಡೂ 10 ಕಿ.ಮೀ. ದೂರದ ವೆಟ್ ಮಾರುಕಟ್ಟೆಗೆ ಬಿಡುಗಡೆ