Google Search 2024: ಪಾಕಿಸ್ತಾನಿಯರು ಗೂಗಲ್ ಸರ್ಚ್ ಮಾಡಿದ್ದೇನು? ಕೇಳಿದ್ರೆ ಭಾರತೀಯರಿಗೆ ಹೆಮ್ಮೆ ಆಗುತ್ತೆ

By Mahmad Rafik  |  First Published Dec 16, 2024, 3:43 PM IST

Google's Year in Search: 2024ರಲ್ಲಿ ಪಾಕಿಸ್ತಾನಿಯರು ಗೂಗಲ್ ಸರ್ಚ್ ಮಾಡಿದ್ದೇನು? ಕೇಳಿದ್ರೆ ಭಾರತೀಯರಿಗೆ ಹೆಮ್ಮೆ ಆಗುತ್ತದೆ. ಆದ್ರೆ ಭಾರತೀಯರು ಪಾಕಿಸ್ತಾನದ ಯಾವ ವಿಷಯದ ಬಗ್ಗೆಯೂ ಗೂಗಲ್‌ ನಲ್ಲಿ ಹುಡುಕಾಟ ನಡೆಸಿಲ್ಲ.


ನವದೆಹಲಿ: ಪ್ರತಿ ವರ್ಷದ ಅಂತ್ಯದಲ್ಲಿ  ಗೂಗಲ್ ತನ್ನ ಪ್ಲಾಟ್‌ಫಾರಂನಲ್ಲಿ ನಡೆದ  ಮಹತ್ವದ  ವಿಷಯಗಳನ್ನು ಹಂಚಿಕೊಳ್ಳುತ್ತದೆ. ಡಿಸೆಂಬರ್  15ರಿಂದಲೇ ಗೂಗಲ್ ಡೇಟಾ  ಹೊರ ಬರಲು ಆರಂಭಿಸಿದೆ. ಜಗತ್ತಿನ ಅತಿದೊಡ್ಡ ಮತ್ತು ಜನಪ್ರಿಯ ಸರ್ಚ್ ಇಂಜಿನ್  ಆಗಿರುವ ಗೂಗಲ್ 2024ರ ಕೆಲವು ಪ್ರಮುಖ ಹುಡುಕಾಟಗಳನ್ನು ಬಹಿರಂಗಪಡಿಸಿದೆ.  ಈ ವರದಿಯಲ್ಲಿ ಯಾವ  ದೇಶ  ಏನು ಹುಡುಕಾಟ ನಡೆಸಿದೆ  ಎಂಬುವುದು  ಗೊತ್ತಾಗುತ್ತದೆ.

ಗೂಗಲ್ ಸೇರಿದಂತೆ ಎಲ್ಲಾ ಸೋಶಿಯಲ್  ಮೀಡಿಯಾ ಪ್ಲಾಟ್‌ಫಾರಂನಲ್ಲಿ Google's Year in Search ಟಾಪಿಕ್ ಟ್ರೆಂಡ್‌ನಲ್ಲಿದೆ. 2024ರಲ್ಲಿ  ಯಾವ ವಿಷಯ ಬಗ್ಗೆ ಹೆಚ್ಚು ಹುಡುಕಾಟ ನಡೆಸಿದ್ದಾರೆ  ಎಂಬುದರ ಬಗ್ಗೆ ತಿಳಿದುಕೊಳ್ಳಲು ಜನರು ಉತ್ಸುಕರಾಗಿದ್ದಾರೆ. ಪ್ರಮುಖ ರಾಜಕೀಯ ವಿಷಯಗಳು, ಜ್ವಲಂತ ಸಮಸ್ಯೆಗಳು, ಸಿನಿಮಾ, ಕಲಾವಿದರ ವೈಯಕ್ತಿಕ ವಿಷಯ, ಟಿವಿ ಕಾರ್ಯಕ್ರಮ, ಕ್ರೀಡೆಗಳ ಬಗ್ಗೆ ಸಾಮಾನ್ಯ ಜನರಲ್ಲಿ ಕುತೂಹಲ ಹೆಚ್ಚಾಗಿರುತ್ತದೆ. ಗೂಗಲ್ ಪಾಕಿಸ್ತಾನದ 'ಇಯರ್ ಇನ್ ಸರ್ಚ್ 2024'  ಬಿಡುಗಡೆಯಾದಾಗ ಆಘಾತಕಾರಿ ವಿಷಯಗಳು ಹೊರಗೆ ಬಂದಿವೆ.

Tap to resize

Latest Videos

ಪಾಕಿಸ್ತಾನಿಗಳು ವರ್ಷವಿಡೀ ಗೂಗಲ್‌ನಲ್ಲಿ ಹುಡುಕಿದ್ದನ್ನು ಏನು ಗೊತ್ತಾ? 2024 ರಲ್ಲಿ ಪಾಕಿಸ್ತಾನದ ಜನರು Googleನಲ್ಲಿ ಹೆಚ್ಚು ಏನು ಹುಡುಕಿರಬಹುದು ಎಂದು ತಿಳಿದರೆ ನಿಮಗೆಲ್ಲಾ ಅಚ್ಚರಿಯಾಗುತ್ತದೆ.  2024ರಲ್ಲಿ ಭಾರತೀಯರು ಭಾರತದ ಬಗ್ಗೆ ಹೆಚ್ಚು ಹುಡುಕಾಟ ನಡೆಸಿಲ್ಲ, ಆದರೆ ಪಾಕಿಸ್ತಾನಿಯರು  ವರ್ಷವಿಡೀ ಭಾರತದ  ಬಗ್ಗೆ ತಿಳಿದುಕೊಳ್ಳಲು ಗೂಗಲ್ ಸಹಾಯ ಪಡೆದುಕೊಂಡಿದ್ದಾರೆ.

ಗೂಗಲ್ ಪಾಕಿಸ್ತಾನಿಯರ ಹುಡುಕಾಟವನ್ನು ಕ್ರಿಕೆಟ್, ಸಿನಿಮಾ, ಧಾರಾವಾಹಿ,  ಏನು ಮಾಡಬೇಕು?, ಏನು ಮಾಡಬಾರದು?, ಅಡುಗೆ, ತಂತ್ರಜ್ಞಾನ ಮತ್ತು ಸಾರ್ವಜನಿಕ ಸಮಸ್ಯೆಗಳು ಎಂದು ವಿಂಗಡಿಸಿದೆ. ಗೂಗಲ್‌ ಪಟ್ಟಿಯಲ್ಲಿ ಯಾವ  ದೇಶದ ಹೆಚ್ಚು ಜನರು ಏನು ಸರ್ಚ್ ಮಾಡಿದ್ದಾರೆ ಎಂಬುದನ್ನು ವಿವರಿಸಲಾಗಿದೆ. ಪಾಕಿಸ್ತಾನಿಯರು How to ಎಂಬ ಸೆಕ್ಷನ್‌ನಲ್ಲಿ  ಮತದಾನ ಕೇಂದ್ರಗಳ ಬಗ್ಗೆ ಹೆಚ್ಚೆಚ್ಚು ಸರ್ಚ್ ಮಾಡಿದ್ದಾರೆ. ಇದನ್ನು ಹೊರತುಪಡಿಸಿದ್ರೆ ಭಾರತ, ಭಾರತೀಯರ ಹೆಸರು, ಭಾರತೀಯರ  ಕೆಲಸಗಳ ಬಗ್ಗೆ ಅತ್ಯಧಿಕವಾಗಿ ಸರ್ಚ್  ಮಾಡಿದ್ದಾರೆ. ಹಗಲು-ರಾತ್ರಿ  ಭಾರತದ ಬಗ್ಗೆ ತಿಳಿದುಕೊಳ್ಳಲು ಪಾಕಿಸ್ತಾನಿಯರು ಪ್ರಯತ್ನ ನಡೆಸಿರೋದು ತಿಳಿದು ಬಂದಿದೆ.

undefined

ಪಾಕಿಸ್ತಾನದ ಜನರು ಇರಾನ್  ಫೋಟೋಗ್ರಾಫರ್ ಅಬ್ಬಾಸ್  ಅತ್ತಾರ್ ಬಗ್ಗೆ  ಹೆಚ್ಚು ಸರ್ಚ್ ಮಾಡಿದ್ದಾರೆ. 1970ರಲ್ಲಿ  ಅಬ್ಬಾಸ್ ಅತ್ತಾರ್ ತಮ್ಮ ಛಾಯಾಗ್ರಹಣದಿಂದಲೇ ಹೆಚ್ಚು ಸುದ್ದಿಯಲ್ಲಿದ್ದರು. ನಂತರದ ಸ್ಥಾನದಲ್ಲಿ ಅದ್ನಾನ್, ಅರ್ಷದ್ ನದೀಮ್, ಸನಾ ಜಾವೇದ್ ಹೆಸರುಗಳನ್ನು ಸರ್ಚ್  ಮಾಡಲಾಗಿದೆ.

ಇದನ್ನೂ ಓದಿ: ಬಿಎಸ್‌ಎನ್‌ಎಲ್‌ಗೆ ಗುನ್ನಾ ಕೊಟ್ಟ ಜಿಯೋ; 10 ರೂಪಾಯಿಗೂ ಕಡಿಮೆ ಬೆಲೆಯಲ್ಲಿ 2 ಬಿಗ್ ಆಫರ್ ಕೊಟ್ಟ ಅಂಬಾನಿ

ಇದೇ ರೀತಿ ಭಾರತದ  ಉದ್ಯಮಿಗಳು ಮತ್ತು ಪ್ರಮುಖ ನಾಯಕರ ಕುರಿತು ಹುಡುಕಾಟ  ಮಾಡಲಾಗಿದೆ. ಭಾರತದ ಓಟಿಟಿ ಪ್ಲಾಟ್‌ಫಾರಂಗಳಾದ ಸೋನಿ, ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್  ನಲ್ಲಿ ಯಾವ ಸಿನಿಮಾ ರಿಲೀಸ್ ಆಗಿದೆ ಎಂಬುದನ್ನು ತಿಳಿಯಲು ಉತ್ಸುಕರಾಗಿದ್ದಾರೆ. ಹಾಗೆಯೇ   T20 ವಿಶ್ವಕಪ್ ಸರಣಿಗೆ ಭಾರತದ ಕ್ರಿಕೆಟ್ ತಂಡದ  ಮಾಹಿತಿಯನ್ನು ಗೂಗಲ್ ಮೂಲಕ ತಿಳಿದುಕೊಂಡಿದ್ದಾರೆ.

ಇತರೆ ವಿಷಯಗಳು 
ಭಾರತ ವರ್ಸಸ್ ಪಾಕಿಸ್ತಾನ, ಭಾರತ ವರ್ಸಸ್ ಆಸ್ಟ್ರೇಲಿಯಾ, ಭಾರತ ವರ್ಸಸ್ ಇಂಗ್ಲೆಂಡ್ ಮತ್ತು  ಭಾರತ  ವರ್ಸಸ್  ಸೌಥ್ ಆಫ್ರಿಕಾ ಪಂದ್ಯಗಳ ಬಗ್ಗೆ ಹೆಚ್ಚು ಹುಡುಕಾಟ ನಡೆಸಲಾಗಿದೆ. ರಿಲಯನ್ಸ್ ಇಂಡಸ್ಟ್ರಿ ಮುಖ್ಯಸ್ಥ ಮುಕೇಶ್ ಅಂಬಾನಿ, ಬಾಲಿವುಡ್‌ ಸಿನಿಮಾಗಳಾ ಅನಿಮಲ್, ಸ್ಟ್ರೀ 2, ಭೂಲ್ ಭುಲೈಯಾ 3 ಮತ್ತು ಡಂಕಿ  ಬಗ್ಗೆಯೂ  ಗೂಗಲ್ ಮಾಡಲಾಗಿದೆ.: ಹೀರಾಮಂಡಿ, 12th ಫೇಲ್, ಮಿರ್ಜಾಪುರ ಸೀಸನ್ 3 ಮತ್ತು ಬಿಗ್ ಬಾಸ್ 17 ವಿಷಯಗಳು ಸರ್ಚ್ ಪಟ್ಟಿಯಲ್ಲಿವೆ.

ಇದನ್ನೂ ಓದಿ: 2025ರ ಕ್ಯಾಲೆಂಡರ್ ಬಹಿಷ್ಕರಿಸಿದ ಸರ್ಕಾರಿ ನೌಕರರು? ಯಾಕೆ ಈ ಬೇಸರ?

click me!