ಬಾಲ್ಯದಲ್ಲಿ ರಾಮಾಯಣ, ಮಹಾಭಾರತ ಕೇಳಿದ್ದೇನೆ, ಭಾರತಕ್ಕಿದೆ ವಿಶೇಷ ಸ್ಥಾನ: ಒಬಾಮಾ

By Kannadaprabha NewsFirst Published Nov 18, 2020, 9:40 AM IST
Highlights

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ‘ಎ ಪ್ರಾಮಿಸ್ಡ್‌ ಲ್ಯಾಂಡ್‌’ ಎಂಬ ಎರಡು ಸಂಪುಟಗಳ ಪುಸ್ತಕವನ್ನು ಬರೆದಿದ್ದಾರೆ. 

ಬೆಂಗಳೂರು (ನ. 18): ನಾನು ಭಾರತಕ್ಕೆ ಮೊದಲ ಬಾರಿ ಭೇಟಿ ನೀಡಿದ್ದು 2010ರಲ್ಲಿ. ಅಮೆರಿಕ ಅಧ್ಯಕ್ಷೀಯ ಪ್ರವಾಸ ಅದಾಗಿತ್ತು. ಅದಕ್ಕೂ ಮುನ್ನ ಒಮ್ಮೆಯೂ ಭಾರತ ನೋಡಿದವನಲ್ಲ. ಆದರೂ ನನ್ನ ಕಲ್ಪನಾ ಲೋಕದಲ್ಲಿ ಭಾರತದ ಬಗ್ಗೆ ವಿಶೇಷ ಸ್ಥಾನ ಯಾವತ್ತಿಗೂ ಇತ್ತು. ಅದಕ್ಕೆ ಭಾರತದ ಗಾತ್ರವೂ ಕಾರಣವಿರಬಹುದು. ವಿಶ್ವ ಜನಸಂಖ್ಯೆಯಲ್ಲಿ ಭಾರತ ಆರನೇ ಒಂದು ಭಾಗದಷ್ಟಿದೆ. ಅಂದಾಜು 2000 ವಿಭಿನ್ನ ಜನಾಂಗಗಳು ಇವೆ. 700ಕ್ಕೂ ಹೆಚ್ಚು ಭಾಷೆಯನ್ನು ಅಲ್ಲಿ ಮಾತನಾಡಲಾಗುತ್ತದೆ.

ಭಾರತಕ್ಕೆ ನನ್ನ ಮನದಲ್ಲಿ ಉತ್ತಮ ಸ್ಥಾನ ಸಿಗುವುದಕ್ಕೆ ಮುಖ್ಯ ಕಾರಣ ಇಂಡೋನೇಷ್ಯಾದಲ್ಲಿ ಕಳೆದ ನನ್ನ ಬಾಲ್ಯವೂ ಇರಬಹುದು. ಅಲ್ಲಿ ಆಗ ನಾನು ಹಿಂದೂ ಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತವನ್ನು ಕೇಳಿದ್ದೇನೆ.

ರಾಹುಲ್ ಭವಿಷ್ಯಕ್ಕಾಗಿ ಸಿಂಗ್‌ಗೆ ಪಟ್ಟ ಕಟ್ಟಿದ್ದ ಸೋನಿಯಾ!

ಪೂರ್ವ ಭಾಗದ ಧರ್ಮಗಳ ಬಗ್ಗೆ ನನಗಿದ್ದ ಆಸಕ್ತಿಯಿಂದಲೂ ಭಾರತದ ಬಗ್ಗೆ ಒಲವು ಮೂಡಿರಬಹುದು. ಅಥವಾ ಕಾಲೇಜಿನಲ್ಲಿದ್ದಾಗ ನನ್ನ ಜತೆ ಒಡನಾಟ ಹೊಂದಿದ್ದ ಪಾಕಿಸ್ತಾನ ಹಾಗೂ ಭಾರತದ ಕಾಲೇಜು ಮಿತ್ರರಿಂದಲೂ ಆಗಿರಬಹುದು. ಅವರೆಲ್ಲಾ ನನಗೆ ದಾಲ್‌ ಹಾಗೂ ಕೀಮಾ ಮಾಡುವುದನ್ನು ಕಲಿಸಿಕೊಟ್ಟಿದ್ದರು. ಬಾಲಿವುಡ್‌ ಸಿನಿಮಾಗಳನ್ನು ತೋರಿಸಿದ್ದರು.

ಗಾಂಧೀಜಿ ಜಾತಿ ವ್ಯವಸ್ಥೆಗೆ ಪರಿಹಾರ ನೀಡಲಿಲ್ಲ

ಭಾರತದ ಬಗೆಗಿನ ನನ್ನ ಸೆಳೆತಕ್ಕೆ ಮುಖ್ಯ ಕಾರಣ ಮಹಾತ್ಮ ಗಾಂಧಿ. ಬ್ರಿಟಿಷರ ವಿರುದ್ಧ ಅವರು ನಡೆಸಿದ ಯಶಸ್ವಿ ಅಹಿಂಸಾ ಚಳವಳಿ ತುಳಿತಕ್ಕೊಳಗಾದವರಿಗೆ ದಾರಿ ದೀಪ. ಆದರೆ ಗಾಂಧಿ ಅವರು ಜಾತಿ ವ್ಯವಸ್ಥೆಯನ್ನು ಯಶಸ್ವಿಯಾಗಿ ನಿವಾರಿಸಲಿಲ್ಲ. ಧರ್ಮದ ಆಧಾರದ ವೇಳೆ ದೇಶ ವಿಭಜನೆಯನ್ನೂ ತಡೆಯಲಿಲ್ಲ ಎಂದು ಬರಾಕ್‌ ಒಬಾಮಾ ಬೇಸರ ವ್ಯಕ್ತಪಡಿಸಿದ್ದಾರೆ.

ಒಂಟಿಯಾಗಿ ಸಿಕ್ಕಾಗ ಸಿಂಗ್‌ ಹೇಳಿದ್ದೇನು ಗೊತ್ತಾ?

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರ ಬಗ್ಗೆ ತಮ್ಮ ಪುಸ್ತಕದಲ್ಲಿ ಬರಾಕ್‌ ಒಬಾಮಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಭಾರತದ ಆರ್ಥಿಕ ರೂಪಾಂತರದ ಮುಖ್ಯ ರೂವಾರಿ ಡಾ. ಸಿಂಗ್‌. ಈ ಪ್ರಗತಿಯ ಸಂಕೇತ ಇದ್ದಂತೆ ಅವರು. ಜನರ ಜೀವನಮಟ್ಟಸುಧಾರಣೆ ಮಾಡಿದ್ದರಿಂದ ಮಾತ್ರವೇ ಅಲ್ಲದೆ, ಭ್ರಷ್ಟಅಲ್ಲ ಎಂಬ ಕಾರಣದಿಂದ ಜನರ ವಿಶ್ವಾಸ ಗೆದ್ದಿದ್ದಾರೆ ಎಂದು ಹೊಗಳಿದ್ದಾರೆ. ಇದೇ ವೇಳೆ ಏಕಾಂತದಲ್ಲಿ ಮನಮೋಹನ ಸಿಂಗ್‌ ಅವರ ಜತೆ ತಾವು ನಡೆಸಿದ ಸಂಭಾಷಣೆಯನ್ನೂ ಒಬಾಮಾ ಬಹಿರಂಗಪಡಿಸಿದ್ದಾರೆ.

'ಪ್ರಧಾನಿಯಾಗಿ ಸಿಂಗ್‌ರನ್ನು ಸೋನಿಯಾ ಆಯ್ಕೆ ಮಾಡಿದ್ಯಾಕೆ' ಒಬಾಮಾ ಸತ್ಯ!

‘ಅನಿಶ್ಚಿತತೆಯ ಸಮಯದಲ್ಲಿ ಧಾರ್ಮಿಕ ಹಾಗೂ ಜನಾಂಗೀಯ ಸೌಹಾರ್ದತೆಗೆ ಕರೆ ನೀಡುವುದು ಅಮಲೇರಿಸಿದಂತೆ. ಅಂತಹ ಸನ್ನಿವೇಶವನ್ನು ಭಾರತವೇ ಆಗಲಿ, ಇನ್ನಿತರೆಡೆಯೇ ಆಗಲಿ ದುರ್ಬಳಕೆ ಮಾಡಿಕೊಳ್ಳುವುದು ರಾಜಕಾರಣಿಗಳಾದವರಿಗೆ ಕಷ್ಟವೇನಲ್ಲ’ ಎಂದು ಸಿಂಗ್‌ ಹೇಳಿದ್ದರು. ನಾನೂ ತಲೆಯಾಡಿಸಿದ್ದೆ ಎಂದು ‘ಎ ಪ್ರಾಮಿಸ್ಡ್‌ ಲ್ಯಾಂಡ್‌’ನಲ್ಲಿ ಒಬಾಮಾ ಬರೆದಿದ್ದಾರೆ.

ಏನೇ ಇರಲಿ, ಭಾರತದ್ದು ಯಶೋಗಾಥೆ

ಪದೇ ಪದೇ ಸರ್ಕಾರಗಳ ಬದಲಾವಣೆ, ರಾಜಕೀಯ ದ್ವೇಷ, ಪ್ರತ್ಯೇಕತಾವಾದಿಗಳ ಶಸ್ತ್ರಸಜ್ಜಿತ ಹೋರಾಟ, ಭ್ರಷ್ಟಾಚಾರ ಏನೇ ಇರಲಿ, ಆಧುನಿಕ ಭಾರತದ್ದು ಹಲವು ವಿಧದಲ್ಲಿ ಯಶೋಗಾಥೆ ಎಂದು ಬರಾಕ್‌ ಒಬಾಮಾ ಬಣ್ಣಿಸಿದ್ದಾರೆ. 1990ರಲ್ಲಿ ಮಾರುಕಟ್ಟೆಆಧರಿತ ಆರ್ಥಿಕತೆಯತ್ತ ಭಾರತ ಹೊರಳಿಕೊಂಡ ನಂತರ ಅಸಾಧಾರಣ ಉದ್ಯಮ ಪ್ರತಿಭೆಗಳು ಸೃಷ್ಟಿಯಾಗಿವೆ. ಪ್ರಗತಿ ದರ ಹೆಚ್ಚಳವಾಗಿದೆ. ತಂತ್ರಜ್ಞಾನ ಕ್ಷೇತ್ರ ಬೆಳೆದಿದೆ. ಮಧ್ಯಮವರ್ಗ ವಿಸ್ತರಣೆಯಾಗಿದೆ.

ಆದಾಗ್ಯೂ ಭಾರತದಲ್ಲಿ ಕೊಳಗೇರಿಗಳಲ್ಲಿ ಕೋಟ್ಯಂತರ ಜನ ಇಂದಿಗೂ ವಾಸಿಸುತ್ತಿದ್ದಾರೆ. ಬಡನತವಿದೆ. ಇದೆಲ್ಲದರ ನಡುವೆ ಉದ್ಯಮಪತಿಗಳು ರಾಜರು ಹಾಗೂ ಮೊಘಲರ ರೀತಿ ಜೀವನ ದೂಡುತ್ತಿದ್ದಾರೆ ಎಂದು ಪುಸ್ತಕದಲ್ಲಿ ಬರೆದಿದ್ದಾರೆ.

ಅಣ್ವಸ್ತ್ರ ಇದೆ ಅಂತ ಭಾರತೀಯರಿಗೆ ಹೆಮ್ಮೆ, ಆದರೆ ಅಪಾಯ ಗೊತ್ತಿಲ್ಲ

ವಾಷಿಂಗ್ಟನ್‌: ಭಾರತದಲ್ಲಿ ಪಾಕಿಸ್ತಾನ ಜತೆಗಿನ ವೈರತ್ವವೇ ರಾಷ್ಟ್ರೀಯ ಐಕ್ಯತೆಗೆ ಕ್ಷಿಪ್ರ ದಾರಿ. ಪಾಕಿಸ್ತಾನದ ಶಕ್ತಿ ಸಾಮರ್ಥ್ಯಕ್ಕೆ ತಕ್ಕುದಾದ ರೀತಿಯಲ್ಲಿ ಭಾರತವೂ ಅಣ್ವಸ್ತ್ರ ಹೊಂದಿದೆ ಎಂದು ಭಾರತೀಯರು ಹೆಮ್ಮೆ ಪಡುತ್ತಾರೆ. ಆದರೆ ಎರಡೂ ದೇಶಗಳ ಒಂದೇ ಒಂದು ತಪ್ಪು ನಿರ್ಧಾರ ಕೂಡ ಪ್ರಾದೇಶಿಕ ಸರ್ವನಾಶಕ್ಕೆ ಕಾರಣವಾಗಬಹುದು ಎಂಬುದು ಅವರಿಗೆ ತಿಳಿದಿಲ್ಲ ಎಂದು ಬರಾಕ್‌ ಒಬಾಮಾ ಪುಸ್ತಕದಲ್ಲಿ ಬರೆದಿದ್ದಾರೆ.

ಲಾಡೆನ್‌ ಹತ್ಯೆ ಆಪರೇಷನ್‌ಗೆ ಬೈಡೆನ್‌ ವಿರೋಧವಿತ್ತು!

- ಪಾಕ್‌ ಸೇನೆಯ ಕೆಲವು ಶಕ್ತಿಗಳಿಗೆ ಖೈದಾ ನಂಟಿತ್ತು: ಒಬಾಮಾ

ವಾಷಿಂಗ್ಟನ್‌: ಪಾಕಿಸ್ತಾನ ಸೇನೆಯಲ್ಲಿನ ಕೆಲವು ಶಕ್ತಿಗಳಿಗೆ ಅದರಲ್ಲೂ ವಿಶೇಷವಾಗಿ ಗುಪ್ತಚರ ಅಧಿಕಾರಿಗಳಿಗೆ ತಾಲಿಬಾನ್‌ ಹಾಗೂ ಅಲ್‌ಖೈದಾ ಜತೆ ನಂಟಿತ್ತು. ಆದ ಕಾರಣ ಕುಖ್ಯಾತ ಉಗ್ರ ಒಸಾಮಾ ಬಿನ್‌ ಲಾಡೆನ್‌ ಹತ್ಯೆ ಕಾರ್ಯಾಚರಣೆಗೆ ಪಾಕಿಸ್ತಾನವನ್ನು ಬಳಸಿಕೊಳ್ಳಲಿಲ್ಲ. ಅಬೋಟಾಬಾದ್‌ನಲ್ಲಿ ಲಾಡೆನ್‌ ಇರುವುದು ಖಚಿತವಾಗುತ್ತಿದ್ದಂತೆ ಆತನ ಮೇಲೆ ದಾಳಿ ನಡೆಸುವ 2 ಆಯ್ಕೆಗಳು ನಮ್ಮ ಮುಂದೆ ಇದ್ದವು. ಮೊದಲನೆಯದಾಗಿ ವಾಯು ದಾಳಿ ನಡೆಸುವುದು. ಎರಡನೆಯದು ಕಮಾಂಡೋ ಪಡೆಗಳನ್ನು ನುಗ್ಗಿಸಿ, ಪಾಕಿಸ್ತಾನ ಪ್ರತಿಕ್ರಿಯೆ ತೋರಿಸುವಷ್ಟರಲ್ಲಿ ಜಾಗ ಖಾಲಿ ಮಾಡುವುದಾಗಿತ್ತು. ಗುಪ್ತಚರ ದಳಕ್ಕೆ ಲಾಡೆನ್‌ ಇರುವುದು ಖಚಿತ ಎನ್ನಿಸುವವರೆಗೂ ದಾಳಿ ಮಾಡಬಾರದು. ವೈಫಲ್ಯವಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೈಡೆನ್‌ ಹೇಳಿದ್ದರು ಎಂದು ಒಬಾಮಾ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಡಾ. ಸಿಂಗ್‌ ಬಗ್ಗೆ ಮೆಚ್ಚುಗೆ ಆದ್ರೆ ಮೋದಿ ಹೆಸರೇ ಇಲ್ಲ : ಒಬಾಮಾ ಆತ್ಮಕತೆಗೆ ತರೂರ್ ಕಂಟೆಂಟ್!

ಶುಭಾಶಯ ಹೇಳಿದ್ದ ಜರ್ದಾರಿ:

ಪಾಕಿಸ್ತಾನಕ್ಕೆ ತಿಳಿಸದೆ, ಆ ದೇಶದ ಸಾರ್ವಭೌಮತೆಗೆ ಧಕ್ಕೆಯಾಗುವ ರೀತಿಯಲ್ಲಿ ಒಬಾಮಾ ಹತ್ಯೆ ಕಾರ್ಯಾಚರಣೆ ನಡೆಸಿದ ಬಗ್ಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರಿಗೆ ತಿಳಿಸುವುದು ಅತ್ಯಂತ ಕಷ್ಟದ ಕೆಲಸವಾಗಿತ್ತು. ನಾನು ಫೋನ್‌ ಮಾಡಿದಾಗ ಅವರು ಶುಭಾಶಯ ಹೇಳಿದರು. ಬೆಂಬಲ ನೀಡಿದರು. ಒಳ್ಳೆಯ ಸುದ್ದಿ ನೀಡಿದಿರಿ ಎಂದರು. ತಮ್ಮ ಪತ್ನಿ, ಮಾಜಿ ಪ್ರಧಾನಿ ಬೇನಜಿರ್‌ ಭುಟ್ಟೋ ಅವರನ್ನು ಅಲ್‌ಖೈದಾ ನಂಟಿನ ಉಗ್ರರೇ ಕೊಂದಿದ್ದರು ಎಂಬುದನ್ನು ಸ್ಮರಿಸಿದ್ದರು ಎಂದು ಒಬಾಮಾ ಬರೆದುಕೊಂಡಿದ್ದಾರೆ.

click me!