ಪಾಕ್‌ನಲ್ಲಿ ಅಲ್ಪಸಂಖ್ಯಾತರ ಮೇಲೆ ಮತ್ತೆ ದೌರ್ಜನ್ಯ: ಕ್ರೈಸ್ತ ತಾಯಿ, ಮಗನ ಹತ್ಯೆ!

By Kannadaprabha NewsFirst Published Nov 12, 2020, 11:40 AM IST
Highlights

ನೆರೆಯ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ| ಕ್ರೈಸ್ತ ತಾಯಿ, ಮಗನ ಹತ್ಯೆ| ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮಹಮ್ಮದ್‌ ಹಸನ್‌ ಎಂಬಾತ ಕ್ರಿಶ್ಚಿಯನ್‌ ಧರ್ಮದ ಯಾಸ್ಮಿನ್‌ ಮತ್ತು ಆಕೆಯ ಮಗ ಉಸ್ಮಾನ್‌ ಮಸೀಹ್‌ನನ್ನು ಹತ್ಯೆ

ಗುಜ್ರವಾಲಾ(ನ.12): ನೆರೆಯ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಮುಂದುವರೆದಿದ್ದು, ಧರ್ಮನಿಂದನೆ ಆರೋಪದ ಮೇಲೆ ಹಾಡಹಗಲೇ ಕ್ರೈಸ್ತ ತಾಯಿ ಮತ್ತು ಮಗನನ್ನು ಇಸ್ಲಾಮಿಕ್‌ ಗುಂಪೊಂದು ಗುಂಡಿಟ್ಟು ಕೊಂದಿದೆ.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಮಹಮ್ಮದ್‌ ಹಸನ್‌ ಎಂಬಾತ ಕ್ರಿಶ್ಚಿಯನ್‌ ಧರ್ಮದ ಯಾಸ್ಮಿನ್‌ ಮತ್ತು ಆಕೆಯ ಮಗ ಉಸ್ಮಾನ್‌ ಮಸೀಹ್‌ನನ್ನು ಹತ್ಯೆ ಮಾಡಿದ್ದಾನೆ. ಪಾಕ್‌ನಲ್ಲಿ ಧಾರ್ಮಿಕ ಕಿರುಕುಳದ ಬಗ್ಗೆ ಭಾರತ ಜಾಗತಿಕವಾಗಿ ಗಮನಸೆಳೆಯುತ್ತಿದೆ. ಆದರೆ ಅಂತಾರಾಷ್ಟ್ರೀಯ ಒತ್ತಡ ಇದ್ದಾಗಿಯೂ ಪಾಕಿಸ್ತಾನ ಧಾರ್ಮಿಕ ದೌರ್ಜನ್ಯವನ್ನು ನಿಗ್ರಹಿಸುವಲ್ಲಿ ವಿಫಲವಾಗಿದೆ.

ಈ ಮಧ್ಯೆ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಅಪ್ರಾಪ್ತ ಕ್ರಿಶ್ಚಿಯನ್‌ ಹುಡುಗಿಯನ್ನು ವಿವಾಹವಾದ ಕರಾಚಿಯ ಮೌಲ್ವಿ ವಿರುದ್ಧ ಪಾಕಿಸ್ತಾನ ನ್ಯಾಯಾಲಯ ಜಾಮೀನು ರಹಿತ ಬಂಧನದ ವಾರೆಂಟ್‌ ಹೊರಡಿಸಿದೆ.

click me!