ನೊಬೆಲ್‌ ಶಾಂತಿ ಪುರಸ್ಕೃತೆ ಮಲಾಲಾಗೆ ತಾಲಿಬಾನ್‌ ಮತ್ತೆ ಹತ್ಯೆ ಬೆದರಿಕೆ!

By Suvarna NewsFirst Published Feb 18, 2021, 7:57 AM IST
Highlights

ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಹಾಗೂ ವಿಶ್ವದ ಅತೀ ಕಿರಿಯ ನೊಬೆಲ್‌ ಪುರಸ್ಕೃತೆ| ಮಲಾಲಾಗೆ ತಾಲಿಬಾನ್‌ ಮತ್ತೆ ಹತ್ಯೆ ಬೆದರಿಕೆ

ಇಸ್ಲಾಮಾಬಾದ್‌(ಫೆ.18): ಪಾಕಿಸ್ತಾನದ ಹೆಣ್ಣು ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಹಾಗೂ ವಿಶ್ವದ ಅತೀ ಕಿರಿಯ ನೊಬೆಲ್‌ ಪುರಸ್ಕೃತೆ ಖ್ಯಾತಿ ಹೊಂದಿದ ಮಲಾಲಾ ಯೂಸಫ್‌ಝೈ ಅವರಿಗೆ 9 ವರ್ಷದ ಹಿಂದೆಯೇ ಗುಂಡಿಟ್ಟು ಹತ್ಯೆಗೆ ಯತ್ನಿಸಿದ್ದ ತಾಲಿಬಾನ್‌ ಉಗ್ರ ಇದೀಗ ಮತ್ತೆ ಹತ್ಯೆ ಮಾಡುವ ಬೆದರಿಕೆ ಹಾಕಿದ್ದಾನೆ.

ಪಾಕ್ ಮಹಿಳೆಯರಿಗೆ ಮಲಾಲ ಯೂಸಫ್ ಸ್ಕಾಲರ್‌ಶಿಪ್ ಕಾಯ್ದೆ ಪಾಸ್ ಮಾಡಿದ ಅಮೆರಿಕ!

ಈ ಸಂಬಂಧ ಬುಧವಾರ ಟ್ವೀಟ್‌ ಮಾಡಿರುವ ತಾಲಿಬಾನ್‌ ಭಯೋತ್ಪಾದಕ ಎಹಸನುಲ್ಲಾ ಎಹಸಾನ್‌, ‘ಈ ಸಲ ಈ ಹಿಂದಿನಂತೆ ಯಾವುದೇ ತಪ್ಪು ಮಾಡಲ್ಲ. ಮಲಾಲಾರನ್ನು ಕೊಲೆ ಮಾಡಿಯೇ ತೀರುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾನೆ. ಇದರ ಬೆನ್ನಲ್ಲೇ, ಎಹಸನುಲ್ಲಾ ಟ್ವೀಟರ್‌ ಖಾತೆಯನ್ನು ಪರಿಪೂರ್ಣವಾಗಿ ಅಮಾನತು ಮಾಡಲಾಗಿದೆ.

2017ರಲ್ಲಿ ಬಂಧನವಾಗಿದ್ದ ಎಹಸಾನ್‌ 2020ರ ಜನವರಿಯಲ್ಲಿ ತಪ್ಪಿಸಿಕೊಂಡಿದ್ದರ ಬಗ್ಗೆ ಉತ್ತರಿಸುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಹಾಗೂ ಸೇನೆಗೆ ಟ್ವೀಟರ್‌ ಮೂಲಕ ಮಲಾಲಾ ಪ್ರಶ್ನಿಸಿದ್ದಾರೆ.

click me!