ಕೆನಡಾದಲ್ಲಿ ತನ್ನ ಆಡಿ ಕಾರಲ್ಲಿ ಶವವಾಗಿ ಪತ್ತೆಯಾದ ಭಾರತೀಯ ವಿದ್ಯಾರ್ಥಿ

By Anusha KbFirst Published Apr 14, 2024, 4:05 PM IST
Highlights

ಕೆನಡಾಗೆ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದ 24 ವರ್ಷದ ಭಾರತೀಯ ವಿದ್ಯಾರ್ಥಿಯೋರ್ವ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ಮೂಡಿದೆ. ತನ್ನ ಆಡಿ ಕಾರಿನಲ್ಲಿ ಗುಂಡಿಕ್ಕಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. 

ನವದೆಹಲಿ:  ಕೆನಡಾಗೆ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದ 24 ವರ್ಷದ ಭಾರತೀಯ ವಿದ್ಯಾರ್ಥಿಯೋರ್ವ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ಮೂಡಿದೆ. ತನ್ನ ಆಡಿ ಕಾರಿನಲ್ಲಿ ಗುಂಡಿಕ್ಕಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆಯಾಗಿದೆ. ಕೆನಡಾದ ಸೌತ್ ವ್ಯಾಂಕೋವರ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ಯುವಕನನ್ನು 24 ವರ್ಷದ ಚಿರಾಗ್ ಅಂಟಿಲ್ ಎಂದು ಗುರುತಿಸಲಾಗಿದೆ. ಗುಂಡಿನ ಸದ್ದು ಕೇಳಿದ ನೆರೆಮನೆಯವರು ಪೊಲೀಸರಿಗೆ ವಿಷಯ ಮುಟ್ಟಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ. 

ಏಪ್ರಿಲ್ 12 ರಂದು ರಾತ್ರಿ 11 ಗಂಡೆ ಸುಮಾರಿಗೆ ಈಸ್ಟ್ ಅವೆನ್ಯೂ ಹಾಗೂ ಮೈನ್ ಸ್ಟ್ರೀಟ್‌ನಲ್ಲಿ ಗುಂಡಿನ ಸದ್ದು ಕೇಳಿ ಬಂತು ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಹೋದ ಪೊಲೀಸರಿಗೆ ಚಿರಾಗ್ ಕಾರೊಳಗೆಯೇ ಗುಂಡಿಕ್ಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

'ಭಾರತ, ಮೋದಿಯನ್ನು ಬೆಂಬಲಿಸಿದ್ದಕ್ಕಾಗಿ ನನ್ನ ವಿರುದ್ಧ ಅಪಪ್ರಚಾರ' ಲಂಡನ್‌ನಲ್ಲಿ ಓದುವ ಭಾರತೀಯ ವಿದ್ಯಾರ್ಥಿ ದೂರು

ಚಿರಾಗ್ ಸೋದರ ರೋನಿತ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ನನ್ನ ಸೋದರನಿಗೆ ಯಾರ ಜೊತೆಯೂ ದ್ವೇಷವಿಲ್ಲ, ಯಾವಾಗಲೂ ಆತ ಖುಷಿ ಖುಷಿಯಿಂದಲೇ ಇರ್ತಿದ್ದ,  ಯಾವಾಗಲೂ ಹಗಲು ರಾತ್ರಿ ಎರಡು ಸಮಯದಲ್ಲೂ ನನಗೆ ಕರೆ ಮಾಡ್ತಿದ್ದ, ಘಟನೆ ನಡೆದ ದಿನವೂ ಮುಂಜಾನೆ ಆತ ನನಗೆ ಕರೆ ಮಾಡಿದ್ದಾನೆ. ನಂತರ ತನ್ನ ಆಡಿ ಕಾರಿನೊಂದಿಗೆ ಆತ  ಎಲ್ಲೋ ಹೊರಟು ಹೋದ ವೇಳೆ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ವಿದ್ಯಾರ್ಥಿ ಘಟಕದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಮುಖ್ಯಸ್ಥ ವರುಣ್ ಚೌಧರಿ ಅವರು  ಬಗ್ಗೆ ಟ್ವಿಟ್‌ನಲ್ಲಿ ಪೋಸ್ಟ್‌ ಮಾಡಿದ್ದು, ವಿದ್ಯಾರ್ಥಿಯ ಶವವನ್ನು ಭಾರತಕ್ಕೆ ತರಲು ನೆರವಾಗುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. 

ಕೆನಡಾದ ವ್ಯಾಂಕೋವರ್‌ನಲ್ಲಿ ಹತ್ಯೆಯಾದ ಭಾರತೀಯ ವಿದ್ಯಾರ್ಥಿ ಚಿರಾಗ್ ಆಂಟಿಲ್ ಅವರ ಪ್ರಕರಣದ ಬಗ್ಗೆ ತುರ್ತು ಗಮನ ಹರಿಸಬೇಕಿದೆ. ಈ ಪ್ರಕರಣದ ತನಿಖೆಯ ಪ್ರಗತಿಯನ್ನು ಹತ್ತಿರದಿಂದ ಮೇಲ್ವಿಚಾರಣೆ ಮಾಡಲು ಮತ್ತು ತ್ವರಿತವಾಗಿ ನ್ಯಾಯ ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಾವು ವಿದೇಶಾಂಗ ಸಚಿವಾಲಯವನ್ನು ಒತ್ತಾಯಿಸುತ್ತೇವೆ ಎಂದು ಚೌಧರಿ  ಟ್ವಿಟ್ ಮಾಡಿದ್ದು, ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದಾರೆ.  ಹೆಚ್ಚುವರಿಯಾಗಿ ಇಂತಹ ಕಷ್ಟದ ಸಮಯದಲ್ಲಿ ಸಂತ್ರಸ್ತನ ಕುಟುಂಬಕ್ಕೆ ನೆರವಾಗುವಂತೆ ನಾವು ಮನವಿ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. 

ಅಮೆರಿಕದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗಳ ಸರಣಿ ಹತ್ಯೆ: ಒಂದೂವರೆ ತಿಂಗಳಲ್ಲಿ ಐವರು ಬಲಿ

ಚಿರಾಗ್‌ ಅವರ ಶವವನ್ನು ಭಾರತಕ್ಕೆ ತರುವುದಕ್ಕಾಗಿ ಕ್ರೌಡ್ ಫಂಡಿಂಗ್ ಪ್ಲಾಟ್‌ಫಾರ್ಮ್ ಗೋ ಫಂಡ್ ಮೀ ಮೂಲಕ ಕುಟುಂಬವೂ ಹಣ ಸಂಗ್ರಹ ಮಾಡುತ್ತಿದೆ ಎಂದು ಲೋಕಲ್ ಮೀಡಿಯಾವೊಂದು ವರದಿ ಮಾಡಿದೆ. ಹರ್ಯಾಣ ಮೂಲದ ಚಿರಾಗ್ ಅಂಟಿಲ್ ಅವರ ಸೋದರ ರೋಮಿತ್ ಅಂಟಿಲ್ ಅವರು ತನ್ ಸೋದರ ಕರುಣೆಯ ಸ್ವಭಾವದ ವ್ಯಕ್ತಿಯಾಗಿದ್ದ, ನಮ್ಮಿಬ್ಬರ ಮಧ್ಯೆ ಉತ್ತಮ ಬಾಂಧವ್ಯವಿತ್ತು. ಘಟನೆ ನಡೆಯುವುದಕ್ಕೆ ಸ್ವಲ್ಪ ಸಮಯದ ಮೊದಲು ನಾನು ಆತನ ಜೊತೆ ಮಾತನಾಡಿದ್ದಾನೆ. ಈ ವೇಳೆ ಆತ ಖುಷಿಯಾಗಿಯೇ ಇದ್ದ, ಯಾರ ಸುದ್ದಿಗೂ ಹೋಗುತ್ತಿರಲಿಲ್ಲ, ಯಾರೊಂದಿಗೂ ಆತ ಕಿತ್ತಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.  ಕೆನಡಾ ವೆಸ್ಟ್‌ನಲ್ಲಿ ಎಂಬಿಎ ಮುಗಿಸಿದ್ದ ಚಿರಾಗ್, 2022ರ ಸೆಪ್ಟೆಂಬರ್‌ಲ್ಲಿ ವ್ಯಾಂಕೋವರ್‌ಗೆ ಆಗಮಿಸಿದ್ದರು, ಇತ್ತೀಚೆಗಷ್ಟೇ ಅವರಿಗೆ ಕೆಲಸ ಮಾಡುವ ಪರವಾನಿಗಿ ದೊರಕಿತ್ತು. 

click me!