ಹಾವನ್ನು ನೂಡಲ್ಸ್‌ನಂತೆ ಎಳೆದು ನುಂಗಿದ ಗೂಬೆ! ವೈರಲ್ ವಿಡಿಯೋ ನೋಡಿ ನೆಟಿಜನ್ಸ್ ಶಾಕ್

By Reshma Rao  |  First Published May 20, 2024, 5:51 PM IST

ಇದೊಂದು ಅಪರೂಪದ ವಿಡಿಯೋ. ಹಾವನ್ನು ಗೂಬೆಯೊಂದು ನೂಡಲ್ಸ್‌ನಂತೆ ಎಳೆದು ನುಂಗುವ ವಿಡಿಯೋ ನೆಟ್ಟಿಗರನ್ನು ದಂಗು ಬಡಿಸಿದೆ. 


ಅಬ್ಬರೆ! ಈ ವಿಡಿಯೋ ನೋಡಿದರೆ ಮೈ ಝುಮ್ಮೆನ್ನಿಸುತ್ತದೆ. @reidasserpentesoficial ಎಂಬ ಬಳಕೆದಾರರು ಹಂಚಿಕೊಂಡ ಆಘಾತಕಾರಿ Instagram ವೀಡಿಯೊದಲ್ಲಿ,  ಗೂಬೆಯು ಒಂದೇ ಗುಟುಕಿನಲ್ಲಿ ಹಾವನ್ನು ನುಂಗುವ ಮೂಲಕ ವೀಕ್ಷಕರನ್ನು ಬೆರಗುಗೊಳಿಸಿದೆ. 

ಹಾವಿನ ಮೇಲೆ ಪ್ರಾಬಲ್ಯ ಸಾಧಿಸುವ ಈ ಗೂಬೆಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬೆಕ್ಕಸಬೆರಗಾಗಿದ್ದಾರೆ. ಈ ದೃಶ್ಯಾವಳಿಯು ಗೂಬೆಯು ಸಂಪೂರ್ಣ ಹಾವನ್ನು ಒಂದೇ ಗುಟುಕಿನಲ್ಲಿ ಸಲೀಸಾಗಿ ಕಬಳಿಸುವುದನ್ನು ಸೆರೆ ಹಿಡಿದಿದೆ. 


 

Tap to resize

Latest Videos

undefined

ಕೆಲವೇ ತಿಂಗಳುಗಳ ಹಿಂದೆ ಅಪ್‌ಲೋಡ್ ಮಾಡಿದ ನಂತರ, ವೀಡಿಯೊ 163,000 ಲೈಕ್‌ಗಳನ್ನು ಗಳಿಸಿದೆ, ವೇದಿಕೆಯಾದ್ಯಂತ ಬಳಕೆದಾರರಿಂದ ಪ್ರತಿಕ್ರಿಯೆಗಳ ಕೋಲಾಹಲವನ್ನೇ ಸೃಷ್ಟಿಸಿದೆ.

ಗೂಬೆಯು ಹಾವನ್ನು ಫಟಾಫಟ್ ತಿನ್ನುವಾಗ ಅದರ ಮುಖ ಹೆಚ್ಚು ಭಯಂಕರವಾಗಿತ್ತು. 

ಒಬ್ಬ ವೀಕ್ಷಕನು 'ತುಂಬಾ ಭಯಾನಕವಾಗಿ ಕಾಣುತ್ತಿದೆ' ಎಂದು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು, 'ನಾವು ಇದನ್ನು ಕ್ಯಾಮೆರಾದಲ್ಲಿ ಅಪರೂಪದ ಕ್ರಿಯೆಯಾಗಿ ನೋಡುತ್ತಿರಬಹುದು, ಆದರೆ ಇದು ಕೇವಲ ಪ್ರಕೃತಿಯ ವಿನ್ಯಾಸವಾಗಿದೆ. ಗೌರವಿಸಬೇಕು!' ಎಂದಿದ್ದಾರೆ.

ಇನ್ನೊಬ್ಬರು, ತಾವು ಇಂಟರ್ನೆಟ್‌ನಲ್ಲಿ ನೋಡಿದ ಅತಿ ಮೈ ಝುಮ್ಮೆನ್ನೆಸುವ ವಿಡಿಯೋ ಇದಾಗಿದೆ ಎಂದಿದ್ದಾರೆ. 

 

click me!