
ನೀವು ಕೆಲಸದಿಂದ ನಿವೃತ್ತಿಯಾಗಿದ್ದೀರಿ, ನಿವೃತ್ತಿ ವೇಳೆ ಬಂದ ಪೆನ್ಸನ್ ಹಣದಲ್ಲಿ ಮುಂದಿನ ಜೀವನ ಕಳೆಯಲು ನಿರ್ಧರಿಸಿದ್ದೀರಿ, ಹಲವು ಯೋಜನೆಗಳ ಲೆಕ್ಕಾಚಾರ ಹಾಕಿ ಆರಾಮವಾಗಿದ್ದೀರಿ ಅಷ್ಟರಲ್ಲಿ ಅಷ್ಟೊಂದು ಹಣವಿದ್ದ ನಿಮ್ಮ ಖಾತೆಯೇ ಮಾಯವಾಗಿ ಬಿಟ್ಟಿದೆ. ಹೀಗಿರುವಾಗ ನಿಮ್ಮ ಸ್ಥಿತಿ ಹೇಗಿರಬಹುದು. ಒಮ್ಮೆ ಊಹಿಸಿಕೊಳ್ಳಿ, ಇದು ಬರೀ ಕಲ್ಪನೆಯಲ್ಲ, ಆಸ್ಟ್ರೇಲಿಯಾದಲ್ಲಿ ಗೂಗಲ್‌ನ ಎಡವಟ್ಟಿನಿಂದಾಗಿ ಇಂತಹ ಸ್ಥಿತಿಯೊಂದು ನಿರ್ಮಾಣವಾಗಿದ್ದು, ಪೆನ್ಸನ್‌ದಾರರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಭಾರತದಲ್ಲಿ ಪಿಎಫ್ ಇರುವಂತೆ ಆಸ್ಟ್ರೇಲಿಯಾದಲ್ಲಿರುವ ಯುನಿಸೂಪರ್ ಸಂಸ್ಥೆಯೂ ಪ್ರಮುಖ ಹಣಕಾಸು ನಿಧಿ ಸಂಸ್ಥೆಯಾಗಿದ್ದು, ಗೂಗಲ್ ಕ್ಲೌಡ್ ಜೊತೆಗಿನ ಅದರ ಪಾಲುದಾರಿಕೆ ಹೊಗೆ ಹಾಕಿದಂತಾಗಿದ್ದು, ಅನೇಕ ಪಿಂಚಣಿದಾರರ ಖಾತೆಗಳು ಡಿಲೀಟ್ ಆಗಿವೆ. ಪರಿಣಾಮ ಪೆನ್ಸನ್‌ದಾರರು ಸಂಕಷ್ಟಕ್ಕೀಡಾಗಿದ್ದಾರೆ.
ಕನ್‌ಫಿಗರೇಷನ್ ಮಾಡುವ ವೇಳೆ ಗೂಗಲ್ ಆಕಸ್ಮಿಕವಾಗಿ 125 ಶತಕೋಟಿ ಡಾಲರ್‌ನ ಪಿಂಚಣಿ ನಿಧಿ ಹೊಂದಿದ್ದ ಖಾತೆಗಳನ್ನು ಅಳಿಸಿ ಹಾಕಿತ್ತು. ಪರಿಣಾಮ ಒಂದು ವಾರಗಳವರೆಗೆ ಬಳಕೆದಾರರಿಗೆ ತಮ್ಮ ಖಾತೆಗೆ ಲಾಗಿನ್ ಆಗಲು ಸಾಧ್ಯವಾಗಿರಲಿಲ್ಲ, ಯೂನಿಸೂಪರ್ ಆಸ್ಟ್ರೇಲಿಯಾದ ಅತ್ಯುನ್ನತ ನಿಧಿಯಾಗಿದ್ದು ಭಾರತದಲ್ಲಿ ಪಿಎಫ್ ಇರುವಂತೆ ಅದು ಆ ದೇಶದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ನಿವೃತ್ತಿ ಉಳಿತಾಯ ಸೇವೆಗಳನ್ನು ನೀಡುತ್ತದೆ. ನೀವು ಆಸ್ಟ್ರೇಲಿಯಾದಲ್ಲಿ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಅಥವಾ ಸಂಶೋಧನಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರೆ, ನಿವೃತ್ತಿ ವೇಳೆಗೆ ಹಣ ಉಳಿಸುವುದಕ್ಕೆ ಯೂನಿಸೂಪರ್‌ನ ನಿವೃತ್ತಿ ಸೇವೆಗಳಿಗೆ ಸೇರಬಹುದಾಗಿದೆ.
ಈಗ ಕೇಳೋಕೆ ಮುಂಚೆ ಎಲ್ಲಾ ಸಿಗುತ್ತೆ ಆದ್ರೆ ಆಗ ಫೋನ್‌ಗಾಗಿ 5 ವರ್ಷ ಕಾದಿದ್ರಂತೆ ಸುಂದರ್ ಪಿಚೈ
ಗೂಗಲ್ ಕ್ಲೌಡ್‌ನಲ್ಲಾದ ಒಂದು ರೀತಿಯ ಮಿಸ್ ಕನ್‌ಫಿಗರೇಷನ್‌ನಿಂದ ಈ ಅನಾಹುತ ಉಂಟಾಗಿದೆ. ಇದಾದ ನಂತರ ಯುನಿಸೂಪರ್ ಸಿಇಒ ಪೀಟರ್ ಚುನ್ ಮತ್ತು ಗೂಗಲ್ ಕ್ಲೌಡ್ ಗ್ಲೋಬಲ್ ಸಿಇಒ ಥಾಮಸ್ ಕುರಿಯನ್ ಅವರು ಜಂಟಿಯಾಗಿ ಈ ಅಚಾತುರ್ಯದ ಬಗ್ಗೆ ಗ್ರಾಹಕರ ಕ್ಷಮೆ ಕೇಳಿದ್ದಾರೆ. ಇದೊಂದು ಅತ್ಯಂತ ಹತಾಶದಾಯಕ ಹಾಗೂ ಬೇಸರದ ಘಟನೆಯಾಗಿದ್ದು, ಇದು ಸೈಬರ್ ದಾಳಿಯಿಂದ ನಡೆದಿದ್ದಲ್ಲ ಎಂದು ಯೂನಿಸೂಪರ್‌ನ ಪಿಂಚಣಿದಾರರಿಗೆ ಕ್ಷಮೆ ಕೇಳಿದ್ದಾರೆ. ಗೂಗಲ್ ಕ್ಲೌಡ್‌ನಲ್ಲಿನ ದೋಷದಿಂದಾಗಿ ಹೀಗಾಗಿದ್ದು, ಇದರಿಂದ ಯಾವುದೇ ವೈಯಕ್ತಿಕ ಡೇಟ್ಆಗೆ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮುಂದೆ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
2023 ರಲ್ಲಿ ಯೂನಿಸೂಪರ್ ತನ್ನ ಕಾರ್ಯಾಚರಣೆಗಳ ಗಮನಾರ್ಹ ಭಾಗವನ್ನು ಗೂಗಲ್ ಕ್ಲೌಡ್ ಪ್ಲಾಟ್‌ಫಾರ್ಮ್‌ಗೆ ವರ್ಗಾಯಿಸಿತು. ಅದಕ್ಕೂ ಮೊದಲು, ಅದರ ಕೆಲಸವು ಅಜುರೆ ಎಂಬ ಮತ್ತೊಂದು ಕ್ಲೌಡ್ ಪ್ಲಾಟ್‌ಫಾರ್ಮ್ ಮತ್ತು ಅದರ ಎರಡು ಡೇಟಾ ಕೇಂದ್ರಗಳಲ್ಲಿತ್ತು. ಆದರೆ ಗೂಗಲ್ ಎಡವಟ್ಟಿನಿಂದಾಗಿ 6,20,000 ಯೂನಿ ಸೂಪರ್ ಸದಸ್ಯರು ಆಘಾತಕ್ಕೀಡಾಗಿದ್ದರು. ಸರ್ವೀಸ್ ಡೌನ್ ಎಂಬ ಸಂದೇಶದ ಜೊತೆ ವೆಬ್‌ಸೈಟ್‌ಗೆ ಲಾಗಿನ ಆಗಲು ಸಾಧ್ಯವಾಗದೇ ಇದ್ದಿದ್ದರಿಂದ ನಾವು ಕಷ್ಟಪಟ್ಟು ದುಡಿದ ದುಡ್ಡು ಏನಾಯ್ತು ಎಂದು ಚಿಂತೆಗೀಡಾಗಿದ್ದರು. ಆದರೆ ಎಲ್ಲವನ್ನೂ ಮತ್ತೆ ಗೂಗಲ್ ರೀಸ್ಟೋರ್ ಮಾಡಿದ್ದು, ಅವರನ್ನು ನಿರಾಳರಾಗುವಂತೆ ಮಾಡಿದೆ.
ಗೂಗಲ್ ವ್ಯಾಲೆಟ್ ಭಾರತಕ್ಕೂ ಪ್ರವೇಶ: ಏನೆಲ್ಲಾ ದಾಖಲೆಗಳನ್ನು ಸಂಗ್ರಹಿಸಿಡಬಹುದು?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ