ನಾನು ಮಾಡಿದ ತಪ್ಪನ್ನ ಮಾಡಬೇಡಿ? ಮನೆಯೊಳಗೆ ಸಿಕ್ಕ 27 ವರ್ಷದ ಹಳೆಯ ಪತ್ರದಲ್ಲಿತ್ತು ಎಚ್ಚರಿಕೆ ಸಂದೇಶ?

Published : May 16, 2024, 06:50 PM IST
ನಾನು ಮಾಡಿದ ತಪ್ಪನ್ನ ಮಾಡಬೇಡಿ? ಮನೆಯೊಳಗೆ ಸಿಕ್ಕ 27 ವರ್ಷದ ಹಳೆಯ ಪತ್ರದಲ್ಲಿತ್ತು ಎಚ್ಚರಿಕೆ ಸಂದೇಶ?

ಸಾರಾಂಶ

ತುಂಬಾ ಹಳೆಯ ಅಂದರೆ ಪಾಳು ಬಿದ್ದಿರೋ ಮನೆಯೊಳಗೆ ಹೋಗಲು ಜನರು ಹೆದರುತ್ತಾರೆ. ಇಂತಹ ಮನೆಯನ್ನು ಖರೀದಿಸಿದ ಮಹಿಳೆಗೆ ಅಲ್ಲಿ ಸಿಕ್ಕಿದ್ದೇನು?

ಹಳೆಯ ಮನೆಗಳ ಪುನರ್‌ ನವೀಕರಣಕ್ಕೆ ಮುಂದಾದ್ರೆ ಅಲ್ಲಿಯ ಹಳೆಯ ವಸ್ತುಗಳು ತುಂಬಾ ವಿಶೇಷವಾಗಿರುತ್ತವೆ. ಒಮ್ಮೊಮ್ಮೆ ಬೆಲೆ ಬಾಳುವ ವಸ್ತುಗಳು ಸಿಗಲಬಹುದು. ಇದೀಗ ಇಂತಹುವುದೇ ಒಂದು ಘಟನೆ ನಡೆದಿದ್ದು, ತಮಗಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಮಹಿಳೆಯ ಈ ಪೋಸ್ಟ ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿಯದ್ದು ಎಂಬುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

ವಾಲ್‌ಪೇಪರ್ ಹಿಂದೆ ಸಿಕ್ತು ಪತ್ರ

ಮಹಿಳೆಯೊಬ್ಬರು ಹಳೆಯ ಮನೆಯೊಂದನ್ನು ಖರೀದಿಸಿದ್ದರು. ಮನೆ ತುಂಬಾ ಹಳೆಯದ್ದಾಗಿದ್ದರಿಂದ ಮಹಿಳೆ ನವೀಕರಣಕ್ಕೆ ಮುಂದಾಗಿದ್ದರು. ಮೊದಲು ಮನೆಯ ಸ್ವಚ್ಛತೆ ಕಾರ್ಯ ಆರಂಭಿಸಿದ್ದರು. ಈ ವೇಳೆ ಮಹಿಳೆ ಗೋಡೆಯ ಮೇಲಿದ್ದ ವಾಲ್‌ಪೇಪರ್ ತೆಗೆದಿದ್ದಾರೆ. ವಾಲ್‌ಪೇಪರ್ ಹಿಂದೆ ಅಡಗಿಸಲಾಗಿದ್ದ ಪತ್ರವೊಂದು ದೊರಕಿದೆ.

ಮೊದಲು ಪತ್ರ ನೋಡುತ್ತಿದ್ದಂತೆ ಮಹಿಳೆ ಒಂದು ಕ್ಷಣ ಆತಂಕಕ್ಕೊಳಗಾಗಿದ್ದರು. ಪತ್ರ ತೆರೆದು ನೋಡಲು ಸಹ ಒಮ್ಮೆ ಭಯಗೊಂಡಿದ್ದರಂತೆ. ಪತ್ರದ ಮೇಲೆ 21 ಡಿಸೆಂಬರ್ 1997 ಎಂದು ದಿನಾಂಕ ನಮೂದು ಆಗಿತ್ತು. ಕೊನೆಗೆ ಜಾನ್ ಎಂಬ ಹೆಸರಿನಲ್ಲಿ ಸಹಿ ಮಾಡಲಾಗಿತ್ತು.

ಈ ಡಚ್ ದೇಶದ ಮಕ್ಕಳು ಯಾವಾಗಲೂ ನಗ್ ನಗ್ತಾ ಖುಷಿಯಾಗಿರ್ತಾರಿಲ್ಲಿ ಹೇಗೆ? ಪೋಷಕರು ಏನ್ ಮಾಡ್ತಾರೆ?

ಆ ಪತ್ರದಲ್ಲಿ ಏನಿತ್ತು?

ನಾನು ಈ ಮನೆಯ ಗೋಡೆಗೆ ವಾಲ್‌ ಪೇಪರ್ ಅಳವಡಿಸಲು 17 ಡಾಲರ್ ನೀಡಿ ಆರು ರೋಲ್ ಖರೀದಿ ಮಾಡಿದ್ದೆ. ವಾಲ್‌ ಪೇಪರ್ ಅಳವಡಿಸಬೇಕಾದ್ರೆ ರೋಲ್ ಕಡಿಮೆ ಆಯ್ತು. ಇದರಿಂದ ನನ್ನ ಮೇಲೆಯೇ ನನಗೆ ಕೋಪ ಬಂತು. ಈ ಮನೆಗೆ ಎಂಟು ರೋಲ್ ಬೇಕಾಗುತ್ತದೆ. ಹಾಗಾಗಿ ನಾನು ಮಾಡಿದ ತಪ್ಪನ್ನು ಮಾಡಬೇಡಿ ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಮದ್ವೆಯಾದ 12ನೇ ದಿನಕ್ಕೆ ಬಯಾಯ್ತು ವಧುವಿನ ಕರಾಳ ರಹಸ್ಯ; ವರನಿಗೆ ನೆಲದಡಿಯ ಭೂಮಿಯೇ ಕುಸಿದಂತಾಯ್ತು!

ಪತ್ರ ಓದಿದ ಮೇಲೆ ಒಂದು ಕ್ಷಣ ಮಹಿಳೆ ನಕ್ಕಿದ್ದಾರೆ. ನಂತರ ಮಹಿಳೆಯನ್ನು ಪತ್ರದ ಜೊತೆಗೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಕಮೆಂಟ್ ಮಾಡಿರುವ ನೆಟ್ಟಿಗರು ಇದು ನಮಗೆ ಒಳ್ಳೆಯ ಮಾಹಿತಿ ಅಲ್ಲವಾ ಎಂದು ಬರೆದಿದ್ದಾರೆ. ಆ ಪತ್ರ ಬರೆದು ಮಾಹಿತಿ ನೀಡಿದವರಿಗೆ ನೀವು ಧನ್ಯವಾದ ಹೇಳಬೇಕು ಎಂದು ಕಮೆಂಟ್ ಮಾಡಿದ್ದಾರೆ.

ಹಳೆ ಮನೆ ಖರೀದಿಸಿ ಕೋಟ್ಯಧಿಪತಿಯಾಗಿದ್ದ ಯುವಕ

ವಿದೇಶದಲ್ಲಿ ಪೀಠೋಪಕರಣ ಸಹಿತ ಇರೋ ಹಳೆ ಮನೆಯೊಂದನ್ನು ಖರೀದಿಸಿ ಯುವಕನೋರ್ವ ಕೋಟ್ಯಧಿಪತಿಯಾಗಿದ್ದನು. ಈ ಮನೆಯಲ್ಲಿ ಆ ಯುವಕನಿಗೆ ಬೆಲೆ ಬಾಳುವ ಬಟ್ಟೆ (ಸೂಟ್‌) ಗಳು ಸಿಕ್ಕಿದ್ದವು. ಇದರ ಜೊತೆಗೆ ಪುರಾತನ ಕಾಲದ ಕೆಲ ವಸ್ತುಗಳು ಸಹ ಆತನಿಗೆ ಸಿಕ್ಕಿದ್ದವು. ಈ ಎಲ್ಲಾ ವಸ್ತುಗಳನ್ನು ಮಾರಾಟ ಮಾಡಿದ ಯುವಕ ಕೋಟ್ಯಧಿಪತಿಯಾಗಿದ್ದನು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತೀಯರ ಎಚ್‌-1ಬಿ ವೀಸಾ ಸಂದರ್ಶನ ದಿಢೀರ್‌ ರದ್ದು : ಕಿಡಿ
ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!