ಟಾಪ್‌ಲೆಸ್ ಕಾರ್ ವಾಶ್ ಅಂತ ಬೋರ್ಡ್ ಹಿಡಿದ ಯುವತಿ: ಓಕೆ ಎಂದು ಬೆಸ್ತು ಬಿದ್ದ ಕಾರು ಚಾಲಕರು: ಆಗಿದ್ದೇನು?

Published : Feb 24, 2026, 09:46 PM ISTUpdated : Feb 24, 2026, 10:24 PM IST
woman holds topless car wash board on road

ಸಾರಾಂಶ

ಇಲ್ಲೊಂದು ಕಡೆ ಯುವತಿಯೊಬ್ಬಳು ಟಾಪ್‌ಲೆಸ್ ಆಗಿ ಕಾರು ವಾಶ್ ಮಾಡೋದಾಗಿ ಬೋರ್ಡ್ ಹಿಡಿದು ರಸ್ತೆ ಬದಿ ನಿಂತಿದ್ದಾಳೆ. ಇದಕ್ಕೆ ಕಾರು ಚಾಲಕರು ಒಪ್ಪಿದ್ದಾರೆ. ಆದರೆ ನಂತರ ಟಾಪ್‌ಲೆಸ್ ಆಗಿ ಬಂದವರನ್ನು ನೋಡಿ ಬೆಸ್ತು ಬೀಳುವ ಸರದಿ ಕಾರು ಚಾಲಕರದ್ದಾಗಿತ್ತು. ಹಾಗಿದ್ರೆ ಆಗಿದ್ದೇನು ಮುಂದೆ ಓದಿ...

ಕಾರು ಚಾಲಕರ ಸುಲಭವಾಗಿ ಯಾಮಾರಿಸಿದ ಯುವತಿ:

ಹುಡುಗಿಯೊಬ್ಬಳು ಟಾಪ್‌ಲೆಸ್ ಆಗಿ ಕಾರು ವಾಶ್ ಮಾಡ್ತಿನಿ ಅಂತ ಬೋರ್ಡ್ ಹಿಡಿದ್ರೆ ಯಾರು ತಾನೇ ಬೇಡ ಅಂತಾರೆ ಹೇಳಿ. ಉಚಿತವಾಗಿ ಸಿಗೋ ಬಿಟ್ಟಿ ಮನೋರಂಜನೆ ಎಲ್ಲರಿಗೂ ಬೇಕು. ಹಾಗೆಯೇ ಇಲ್ಲೊಂದು ಕಡೆ ಯುವತಿಯೊಬ್ಬಳು ಟಾಪ್‌ಲೆಸ್ ಆಗಿ ಕಾರು ವಾಶ್ ಮಾಡೋದಾಗಿ ಬೋರ್ಡ್ ಹಿಡಿದು ರಸ್ತೆ ಬದಿ ನಿಂತಿದ್ದಾಳೆ. ಹುಡುಗಿಯನ್ನು ನೋಡಿದ ಕಾರು ಚಾಲಕರು ಹುಡುಗಿಯರೇ ಟಾಪ್‌ಲೆಸ್ ಆಗ್ತಿವಿ ಅಂದ್ರೆ ನಮ್ದೇನು ಗಂಟು ಹೋಗೋದಿದೆ. ನೋಡೇ ಬಿಡೋಣ ಎಂದು ಕಾರು ವಾಶ್ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ನಂತರ ಟಾಪ್‌ಲೆಸ್ ಆಗಿ ಬಂದವರನ್ನು ನೋಡಿ ಬೆಸ್ತು ಬೀಳುವ ಸರದಿ ಕಾರು ಚಾಲಕರದ್ದಾಗಿತ್ತು. ಹಾಗಿದ್ರೆ ಆಗಿದ್ದೇನು ಮುಂದೆ ಓದಿ...

ಸೋಶಿಯಲ್ ಮೀಡಿಯಾದಲ್ಲಿ ತಮಾಷೆಯ ವೀಡಿಯೋಗಳು ಆಗಾಗ ವೈರಲ್ ಆಗ್ತಿರ್ತವೆ. ಅನೇಕರು ಯಾರಿಗೂ ನೋವುಂಟು ಮಾಡದ ತಮಾಷೆ ಮಾಡುವ ಮೂಲಕ ಎಲ್ಲರನ್ನು ನಕ್ಕು ನಗಿಸುತ್ತಾರೆ. ಹಾಗೆಯೇ ಸೋಶಿಯಲ್ ಮೀಡಿಯಾದಲ್ಲಿ ಹಳೆಯದೊಂದು ವೀಡಿಯೋ ಮತ್ತೆ ವೈರಲ್ ಆಗಿದೆ. ಹುಡುಗಿಯೊಬ್ಬಳು ರಸ್ತೆ ಬದಿ ಟಾಪ್‌ಲೆಸ್ ಆಗಿ ಕಾರು ವಾಶ್ ಮಾಡೋದಾಗಿ ಹೇಳಿ ಬೋರ್ಡ್ ಹಿಡಿದು ನಿಂತಿದ್ದಾಳೆ. ಆಕೆಯ ಬೋರ್ಡ್ ನೋಡಿದ ಆ ರಸ್ತೆಯಲ್ಲಿ ಬಂದ ಕಾರು ಚಾಲಕರು ಓಕೆ ಎಂದು ಹೇಳಿದ್ದಾರೆ. ಹುಡುಗರು ಆ ಚಂದದ ಹುಡುಗಿಯೇ ಟಾಪ್‌ಲೆಸ್ ಆಗಿ ಬಂದು ತಮ್ಮ ಕಾರನ್ನು ವಾಶ್ ಮಾಡುತ್ತಾಳೆ ಎಂದು ಭಾವಿಸಿದ್ದರು. ಆದರೆ ಆಗಿದ್ದೇ ಬೇರೆ ನೋಡಿ...

ಇದನ್ನೂ ಓದಿ: ಕೇವಲ 2 ವರ್ಷದ ಅನುಭವಕ್ಕೆ ತಿಂಗಳಿಗೆ 13 ಲಕ್ಷ ವೇತನದ ವರ್ಕ್ ಫ್ರಮ್ ಹೋಮ್ ಕೆಲಸ ಗಿಟ್ಟಿಸಿದ ಉದ್ಯೋಗಿ

ಹುಡುಗಿ ಬೋರ್ಡ್‌ನಲ್ಲಿ ಎಲ್ಲೂ ತಾನೇ ಟಾಪ್ಲೆಸ್‌ ಆಗಿ ಕಾರು ವಾಶ್ ಮಾಡ್ತಿನಿ ಎಂದು ಬರೆದಿರಲಿಲ್ಲ, ಕಾರಿನ ಚಾಲಕರು ಆಕೆಯ ಬೋರ್ಡ್‌ ನೋಡಿದ ಕೂಡಲೇ ಆಕೆಯೇ ಟಾಪ್‌ಲೆಸ್ ಆಗಿ ಕಾರು ವಾಶ್ ಮಾಡುತ್ತಾಳೆ ಎಂದು ಊಹಿಸಿದ್ದರು. ಆದರೆ ಆಗಿದ್ದೇ ಬೇರೆ. ಡ್ರೈವರ್‌ಗಳು ಈ ಡೀಲ್‌ಗೆ ಒಪ್ಪುತ್ತಿದ್ದಂತೆ ಇಬ್ಬರು ಕೇವಲ ಚಡ್ಡಿ ಧಿರಿಸಿದ ಇಬ್ಬರು ವಯಸ್ಸಾದ ಅಜ್ಜಂದಿರು ಬ್ರಶ್ ಬಕೆಟ್ ಹಿಡಿದು ಕಾರಿನ ಬಳಿ ಬಂದು ಕಾರನ್ನು ವಾಶ್ ಮಾಡುತ್ತಾರೆ. ಈ ದೃಶ್ಯ ನೋಡಿ ಒಂದು ಕ್ಷಣ ಕಾರಿನಲ್ಲಿದ್ದವರು ಬೆಸ್ತು ಬೀಳುತ್ತಾರೆ. ಹುಡುಗಿ ಬಹಳ ಸ್ಮಾರ್ಟ್ ಆಗಿ ಜನರನ್ನು ಫೂಲ್ ಮಾಡುತ್ತಿದ್ದು, ಜನರು ಕೂಡ ಈ ಇಬ್ಬರು ವಯಸ್ಸಾದ ವೃದ್ಧರು ಟಾಪ್‌ಲೆಸ್ ಆಗಿ ಕಾರು ವಾಶ್ ಮಾಡೋದು ನೋಡಿ ಬಿದ್ದು ಬಿದ್ದು ನಕ್ಕಿದ್ದಾರೆ.. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ವೀಡಿಯೋ ನೋಡಿದವರು ಹಲವು ಕಾಮೆಂಟ್ ಮಾಡಿದ್ದಾರೆ.

ವೀಡಿಯೋ ನೋಡಿದ ಪ್ರತಿಯೊಬ್ಬರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು, ತಮಾಷೆ ಎಂದರೆ ಹೀಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಅನೇಕರು ಕಾರಿನಲ್ಲಿದ್ದವರು ಬೇಸ್ತು ಬಿದ್ದರೂ ಬೇಸರಿಸದೇ ನಕ್ಕಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೊಂದು ಉತ್ತಮ ಹಾಸ್ಯ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋ ನೀವು ಬಹುಶಃ ಈಗಾಗಲೇ ನೋಡಿರಬಹುದು. ಈ ವೀಡಿಯೋ ನೋಡಿ ನಿಮಗೇನನಿಸಿತು ಕಾಮೆಂಟ್ ಮಾಡಿ..

 

 

ಇದನ್ನೂ ಓದಿ: ಹೆಣ್ಣು ಮಾಯೆ ಹುಷಾರು: ಗರ್ಲ್‌ಫ್ರೆಂಡ್ ನೀಡಿದ ಸುಳಿವಿನಿಂದಲೇ ಮೆಕ್ಸಿಕೋದ ಡ್ರಗ್ ಲಾರ್ಡ್ ಹತ್ಯೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೆಯೊಳಗಿನ ಗಿಡಗಳು ಬಾಡಿ ಹೋಗುತ್ತಿವೆಯೇ?, ಹಾಗಿದ್ರೆ ಈ 6 ತಪ್ಪು ತಿದ್ಕೊಳ್ಳಿ
Nayanthara Caravan: ಭಾರೀ ಕಂಡೀಷನ್ಸ್ ಹಾಕ್ತಾರಾ ನಯನತಾರಾ? ಕ್ಯಾರವಾನ್‌ ಒಳಗೆ ಏನೆಲ್ಲಾ ಇರಬೇಕಂತೆ ಗೊತ್ತಾ?