World's Lightest Person: 17 ವರ್ಷದ ಈಕೆ ಹುಟ್ಟಿದ ಮಗುವಿನಷ್ಟು ಹಗುರ

Published : Apr 15, 2026, 12:47 PM IST
World lightest person

ಸಾರಾಂಶ

World lightest person : ವಿಶ್ವದ ಅತ್ಯಂತ ಹಗುರ ಹಾಗೂ ಕುಳ್ಳ ವ್ಯಕ್ತಿ ಯಾರು? ಅವರ ಕೆಜಿ ಎಷ್ಟು, ಎತ್ತರ ಎಷ್ಟು? ಅಷ್ಟಕ್ಕೂ ಅವರು ಹೀಗಾಗಲು ಕಾರಣ ಏನು? ಗಿನ್ನೀಸ್‌ ಸೇರಿದ ವ್ಯಕ್ತಿ ಬಗ್ಗೆ ಮಾಹಿತಿ ಇಲ್ಲಿದೆ.  

ವಿಶ್ವದಾದ್ಯಂತ ಅತಿ ಹೆಚ್ಚು ತೂಕ (weight) ಹೊಂದಿರುವ ಅನೇಕರು ಸುದ್ದಿಯಲ್ಲಿರ್ತಾರೆ. ಅವರ ತೂಕ ಸಾಕಷ್ಟು ಚರ್ಚೆಗೆ ಬರುತ್ತೆ. ದೇಹ ಭಾರವಾಗಿರುವ ಜನರು ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ವಿಶ್ವದಲ್ಲಿ ಅತಿ ಕಡಿಮೆ ತೂಕದ ವ್ಯಕ್ತಿಗಳೂ ಇದ್ದಾರೆ. ಒಬ್ಬರ ತೂಕ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದೆ. ನವಜಾತ ಶಿಶು ಅಥವಾ ಬೆಕ್ಕಿಗಿಂತ ಕಡಿಮೆ ತೂಕ ಹೊಂದಿರುವ ವ್ಯಕ್ತಿ ಯಾರು, ಅವರ ತೂಕವೆಷ್ಟು ಎಂಬ ವಿವರ ಇಲ್ಲಿದೆ.

17ನೇ ವಯಸ್ಸಿನಲ್ಲಿ 2.13 ಕಿಲೋ ತೂಕ !

ಭೂಮಿಯ ಮೇಲಿನ ಅತ್ಯಂತ ಕಡಿಮೆ ತೂಕದ ವ್ಯಕ್ತಿ ಹೆಸರು ಲೂಸಿಯಾ (Lucia). ಗಿನ್ನಿಸ್ ವಿಶ್ವ ದಾಖಲೆ (Guinness World Record) ಪ್ರಕಾರ, ಅವರು ಮೆಕ್ಸಿಕೋ ಮೂಲದವರು. ಜನವರಿ 2, 1863 ರಂದು ಮೆಕ್ಸಿಕೋದ ಸ್ಯಾನ್ ಕಾರ್ಲೋಸ್ನಲ್ಲಿ ಲೂಸಿಯಾ ಜನಿಸಿದ್ದರು. ಲೂಸಿಯಾ ಹುಟ್ಟುವಾಗ ಇದ್ದ ತೂಕ ಕೇವಲ 1.1 ಕಿಲೋಗ್ರಾಂ. 17 ವರ್ಷ ತುಂಬುವ ಹೊತ್ತಿಗೆ ಅವರು 67 ಸೆಂಟಿಮೀಟರ್ ಎತ್ತರ ಮತ್ತು 2.13 ಕಿಲೋಗಳಷ್ಟು ತೂಕ ಹೊಂದಿದ್ದರು. 20 ವರ್ಷ ತುಂಬುವ ಹೊತ್ತಿಗೆ ಆಹಾರ ಮತ್ತು ಆರೈಕೆಯಿಂದಾಗಿ ಅವರ ತೂಕ ಸುಮಾರು 5.9 ಕೆಜಿಗೆ ಏರಿತ್ತು. ಆದರೆ ಅದು ಕೂಡ ಸರಾಸರಿ ಮಗುವಿಗಿಂತ ಗಮನಾರ್ಹವಾಗಿ ಕಡಿಮೆಯಾಗಿತ್ತು. ಲೂಸಿಯಾ ಅವರನ್ನು ಆರಾಮವಾಗಿ ಒಂದೇ ಕೈನಲ್ಲಿ ಎತ್ತಬಹುದಿತ್ತು.

ಲೂಸಿಯಾ ಅತಿ ಕಡಿಮೆ ತೂಕ ಹೊಂದಿದ್ದರೂ ಅವರ ಚುರುಕುತನ ಮತ್ತು ತಿಳುವಳಿಕೆ ಎಲ್ಲರ ಗಮನ ಸೆಳೆದಿತ್ತು. ವೈದ್ಯರ ಪ್ರಕಾರ ಲೂಸಿಯಾ, ಲಿಲ್ಲಿಪುಟಿಯನ್ ಸಿಂಡ್ರೋಮ್ ನೊಂದಿಗೆ ಜನಿಸಿದರು. ಲೂಸಿಯಾ ತುಂಬಾ ವರ್ಷ ಬದುಕಲಿಲ್ಲ. ಅವರು 26 ನೇ ವಯಸ್ಸಿನಲ್ಲಿ ನಿಧನರಾದ್ರು.

ವೃದ್ಧಾಪ್ಯದಲ್ಲಿ ಮಕ್ಕಳ ಆಸರೆ ಬೇಕೆ? ಅಮೆರಿಕನ್ ಇನ್‌ಫ್ಲುಯೆನ್ಸರ್ ವಿಡಿಯೋ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆ!

ಜಗತ್ತಿನ ಮನ್ನಣೆ ಪಡೆದಿದ್ದ ಲೂಸಿಯಾ

ಲೂಸಿಯಾ ತನ್ನ ತೂಕ ಹಾಗೂ ಎತ್ತರದಿಂದಾಗಿ ಅಮೆರಿಕ ಮತ್ತು ಯುರೋಪಿನಲ್ಲಿ ಮನ್ನಣೆ ಗಳಿಸಿದ್ದರು. 1876 ರಲ್ಲಿ, ಅವರು ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದರು. ಸರ್ಕಸ್ ಮತ್ತು ಸೈಡ್ಶೋಗಳಲ್ಲಿ ಭಾಗಿಯಾಗಿದ್ರು. ಅವರಿಗೆ ಮೆಕ್ಸಿಕನ್ ಲಿಲ್ಲಿಪುಟಿಯನ್ ಎಂಬ ಅಡ್ಡಹೆಸರಿತ್ತು. ಲೂಸಿಯಾ ಬಹು ಭಾಷೆಗಳನ್ನು ಓದಬಲ್ಲ ಮತ್ತು ಮಾತನಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ಅವರ ಪ್ರದರ್ಶನಗಳು ಹೆಚ್ಚಿನ ಜನಸಂದಣಿಯನ್ನು ಆಕರ್ಷಿಸಿತ್ತು.

ರಾರಾ ಲಿಫ್ಟ್ ಕೊಡು ಬಾರಾ... ಬಿಳಿಸೀರೆಯಲ್ಲಿ ಲಿಫ್ಟ್‌ ಕೇಳೋ ಚೆಲುವೆ: ವಾಹನ ನಿಲ್ಲಿಸಿದರೆ ಕತೆ ಮುಗಿದಂತೆ

ಅತಿ ಚಳಿಯಿಂದ ಸಾವು

ಲೂಸಿಯಾ ತಮ್ಮನ್ನು ಕಾಡ್ತಿದ್ದ ಕಾಯಿಲೆಯಿಂದ ಸಾವನ್ನಪ್ಪಿಲ್ಲ. ಅವರು 1889 ರಲ್ಲಿರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಹಿಮಪಾತಕ್ಕೆ ಸಿಲುಕಿ ನಿಧನರಾದ್ರು. 26ನೇ ವಯಸ್ಸಿನಲ್ಲಿ ನಿಧನರಾದ ಲೂಸಿಯಾ ಈಗ್ಲೂ ಪ್ರಸಿದ್ಧಿ ಪಡೆದಿದ್ದಾರೆ. ಇಂದಿಗೂ ಲೂಸಿಯಾ ಜರಾಟೆ ಅವರ ಹೆಸರನ್ನು ವೈದ್ಯಕೀಯ ವಿಜ್ಞಾನ ಮತ್ತು ಇತಿಹಾಸದಲ್ಲಿ ಅತ್ಯಂತ ಕಡಿಮೆ ತೂಕ ವ್ಯಕ್ತಿ ಎಂದು ದಾಖಲಿಸಲಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಣ್ಣ ಸೊಂಟಕ್ಕೆ ಗೋಲ್ಡ್ ಪ್ಲೇಟೆಡ್ ಹಿಪ್ ಚೈನ್, ಈ 7 ಡಿಸೈನ್‌ಗಳಲ್ಲಿ ನೀವೂ ಮಿಂಚಿ!
ಕಾಲೇಜು ಹುಡುಗಿಯರ ಅಂದ ಹೆಚ್ಚಿಸುವ ಯೆಲ್ಲೋ ಗೋಲ್ಡ್ ಫ್ಯಾನ್ಸಿ ಓಲೆಗಳು!