
ಮೆನೋಪಸ್ (Menopause). ಅನೇಕ ಮಹಿಳೆಯರು ಮುಚ್ಚಿಡುವ ವಿಷ್ಯ ಇದು. ಭಾರತದಲ್ಲಿ ಶೇಕಡಾ 66 ರಷ್ಟು ಮಹಿಳೆಯರು ಮೆನೋಪಾಸ್ ಸಮಸ್ಯೆ ಬಗ್ಗೆ ಕುಟುಂಬಸ್ಥರ ಜೊತೆ ಮಾತನಾಡೋದಿಲ್ಲ. ಪ್ರೆಗ್ನೆನ್ಸಿ, ಡಿಲೆವರಿವರೆಗೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡುವ ಮಹಿಳೆಯರು ನಂತ್ರ ತಮ್ಮ ಆರೋಗ್ಯ ನಿರ್ಲಕ್ಷ್ಯಿಸ್ತಾರೆ. ಮುಟ್ಟು ನಿಲ್ಲುವ ಟೈಂನಲ್ಲಿ ಪ್ರತಿಯೊಬ್ಬ ಮಹಿಳೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗೆ ಒಳಗಾಗ್ತಾಳೆ. ಮೆನೋಪಾಸ್ ಬಗ್ಗೆ ಅನೇಕ ಮಹಿಳೆಯರಿಗೆ ಸರಿಯಾದ ಜ್ಞಾನ ಇಲ್ದೆ ನಾನಾ ಮಾನಸಿಕ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ತಾರೆ. ಮೆನೋಪಾಸ್ ರೋವಲ್ಲ. ಅದೊಂದು ಸಹಜ ಕ್ರಿಯೆ.
ಮೆನೋಪಾಸ್ ಲಕ್ಷಣ, ಜೀವನದ ಹಂತವನ್ನು ಹೇಗೆ ಎದುರಿಸಿದ್ದೇನೆ ಎಂಬುದನ್ನು ಸುಧಾಮೂರ್ತಿ ಹೇಳಿದ್ದಾರೆ. ಮೆನೋಪಾಸ್ ಬಗ್ಗೆ ಜನರಿಗಿದ್ದ ತಪ್ಪು ಕಲ್ಪನೆ ಮುರಿಯುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಮೆನೋಪಾಸ್ ಬಂದಾಗ ಅದನ್ನು ರೋಗ ಎಂದು ಯೋಚಿಸಬಾರದು. ನಮ್ಮ ಚರ್ಮದಲ್ಲಿ ಸುಕ್ಕು ಬರುತ್ತದೆ. ಅದನ್ನು ಸ್ವೀಕರಿಸಬೇಕು ಎಂದು ಸುಧಾಮೂರ್ತಿ ಹೇಳಿದ್ದಾರೆ. ನಾನು ಕಾರಣವಿಲ್ಲದೆ ಕೋಪಗೊಂಡರೆ, ಅದು ಹಾರ್ಮೋನ್ ಬದಲಾವಣೆ ಎಂದುಕೊಂಡು ನಕ್ಕುಬಿಡಿ, ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಮೂರ್ತಿಗೆ ಸುಧಾಮೂರ್ತಿ ಹೇಳಿದ್ದರಂತೆ. ಸುಧಾಮೂರ್ತಿ ತಂದೆ ಗೈನಕಾಲಜಿಸ್ಟ್ ಆಗಿದ್ದರು. ಅವರು ಸುಧಾಮೂರ್ತಿಗೆ ಬಾಲ್ಯದಲ್ಲೇ ಮೆನ್ಸ್ಟ್ರುವೇಷನ್ ಮತ್ತು ಮೆನೋಪಾಸ್ ಬಗ್ಗೆ ತಿಳಿಸಿದ್ದರಂತೆ. ಯೌವನದಲ್ಲಿ ಹಾರ್ಮೋನ್ಗಳು ಹೆಚ್ಚಾಗಿರುತ್ತವೆ, ಅದರಿಂದ ಚರ್ಮ ಹೊಳೆಯುತ್ತದೆ. ಒಂದು ದಿನ ಹಾರ್ಮೋನ್ಗಳು ಕಡಿಮೆಯಾಗುತ್ತವೆ, ಅದೇ ಮೆನೋಪಾಸ್ ಎಂದಿದ್ದರಂತೆ ತಂದೆ.
ಊಟ ಮಾಡ್ವಾಗ ಆಹಾರದ ಮೇಲೆ ಉಪ್ಪು ಸಿಂಪಡಿಸ್ತೀರಾ?, ಈ ವಿಷ್ಯ ಗೊತ್ತಾದ್ರೆ ಮತ್ತೆಂದೂ ಆ ತಪ್ಪು ಮಾಡಲ್ಲ!
ಮೆನೋಪಾಸ್ ಬಂದ ಸಂದರ್ಭದಲ್ಲಿಯೇ ಸುಧಾಮೂರ್ತಿ ಅವರ ಇಬ್ಬರು ಮಕ್ಕಳು ಓದಲು ವಿದೇಶಕ್ಕೆ ಹೋಗಿದ್ದರು. ಅವರನ್ನು ನೆನಪು ಮಾಡ್ಕೊಂಡು ಒಂದು ದಿನ ಸುಧಾಮೂರ್ತಿ ಅತ್ತರು. ನಂತ್ರ ಅವರು ಓದಲು ಹೋದ್ರೆ ನಾನ್ಯಾಕೆ ಅಳಬೇಕು ಅಂತ ಆಲೋಚನೆ ಮಾಡಿದ್ರು. ಒಂದು ಕ್ಷಣ ಮೌನವಾಗಿ, ದೀರ್ಘ ಉಸಿರು ತೆಗೆದುಕೊಂಡು ಇದು ಮೆನೋಪಾಸ್ ಲಕ್ಷಣ ಎಂಬುದನ್ನು ಅರಿತ್ರು. ಮೆನೋಪಾಸ್ ನಿಂದ ಹೊರಗೆ ಬರಲು ಅವರು ಹೆಚ್ಚು ಕೆಲಸ ಮಾಡಲು ನಿರ್ಧರಿಸಿದ್ರು. ಗಮನ ಬೇರೆಡೆ ಹರಿಸಲು ಮುಂದಾದ್ರು. ವಾಕಿಂಗ್, ಓದು, ಪ್ರವಾಸ ಅಂತ ಬ್ಯುಸಿಯಾಗಿದ್ದು ಮೆನೋಪಾಸ್ ಎದುರಿಸಲು ಸಹಾಯವಾಯ್ತು ಎನ್ನುತ್ತಾರೆ ಸುಧಾಮೂರ್ತಿ.
ಮೆನೋಪಾಸ್ ಒಂದು ಸಹಜ ಪ್ರಕ್ರಿಯೆ. ಇದನ್ನು ಮಹಿಳೆಯರು ನಿರ್ಲಕ್ಷ್ಯ ಮಾಡ್ತಾರೆ ಅನ್ನೋದು ಕಿರಣ್ ರಾವ್ ಅಭಿಪ್ರಾಯ. ಮೆನೋಪಾಸ್ ಟೈಂನಲ್ಲಿ ನಿದ್ರೆ ಸಮಸ್ಯೆ ಕಾಡುತ್ತೆ. ಅದನ್ನು ನಾನು ಅನುಭವಿಸಿದ್ದೇನೆ. ಅದು ತುಂಬಾ ಕೆಟ್ಟ ಅನುಭವ ಎನ್ನುವ ಕಿರಣ್ ರಾವ್, ಐದಾರು ವರ್ಷ ಮಹಿಳೆಯರು ಅನೇಕ ಸಮಸ್ಯೆ ಎದುರಿಸ್ತಾರೆ, ಈ ಟೈಂನಲ್ಲಿ ಮಹಿಳೆಯರಿಗೆ ತೂಕ ಹೆಚ್ಚಾಗುತ್ತೆ. ದೈಹಿಕವಾಗಿ ಆಯಾಸಗೊಳ್ತಾರೆ. ಡಿಪ್ರೆಶನ್ ಗೆ ಒಳಗಾಗ್ತಾರೆ. ಸುತ್ತಮುತ್ತ ಇರೋರು ಅನೇಕ ರೆಮಡಿ ಹೇಳ್ತಾರೆ, ಆದ್ರೆ ಅದನ್ನು ಅನುಭವಿಸಿದ ಮಹಿಳೆ ಸಾಕಷ್ಟು ಸವಾಲು ಎದುರಿಸ್ತಿರ್ತಾಳೆ ಎಂದು ಕಿರಣ್ ರಾವ್ ಹೇಳ್ತಾರೆ.
ಪ್ರತಿದಿನ ಬೆಳಗ್ಗೆ ಮೆಂತೆ ನೀರು ಸೇವಿಸಿ… ಗ್ರೇಡ್ -1 ಫ್ಯಾಟಿ ಲಿವರ್ ಸಮಸ್ಯೆಗೆ ಗುಡ್ ಬೈ ಹೇಳಿ
ಭಯ ಏಕೆ ಎಂದ ಜೆನಿಲಿಯಾ ಡಿಸೋಜಾ
ನಟಿ ಜೆನಿಲಿಯಾ ಡಿಸೋಜಾ ಕೂಡ ಮೆನೋಪಾಸ್ ಬಗ್ಗೆ ಮಾತನಾಡಿದ್ದಾರೆ. ಮೆನೋಪಾಸ್ ಬಗ್ಗೆ ಮಹಿಳೆಯರು ನಾಚಿಕೆಪಟ್ಟುಕೊಳ್ತಾರೆ. 35 ವರ್ಷಕ್ಕೆ ಮೆನೋಪಾಸ್ ಶುರುವಾಯ್ತಾ ಅಂತ ಪ್ರಶ್ನೆ ಮಾಡ್ತಾರೆ. ಮೆನೋಪಾಸ್ ಬರ್ತಿದ್ದಂತೆ ವಯಸ್ಸಾಗುತ್ತೆ ಎನ್ನುವ ಭಯ ಅವರನ್ನು ಕಾಡುತ್ತೆ. ಹಾಗಾಗಿ ಅದನ್ನು ಯಾರಿಗೂ ಹೇಳೋದಿಲ್ಲ. ನನ್ನ ಪ್ರಕಾರ, ಮೆನೋಪಾಸ್ 35 ವರ್ಷ ವಯಸ್ಸಿಗೆ ಬಂದ್ರೆ ಅದ್ರಲ್ಲಿ ಟೆನ್ಷನ್ ಆಗ್ಬೇಕಾಗಿಲ್ಲ. ವಯಸ್ಸಾದಂತೆ ಕಂಡ್ರೂ ಟೆನ್ಷನ್ ಮಾಡ್ಕೊಳ್ಬೇಕಾಗಿಲ್ಲ. ಮೆನೋಪಾಸ್ ಟೈಂನಲ್ಲಿ ವಯಸ್ಸಾದಂತೆ ಕಂಡ್ರೆ ನಾನು ಅದನ್ನು ಸ್ವೀಕರಿಸ್ತೇನೆ. ಖುಷಿಪಡ್ತೇನೆ ಎನ್ನುತ್ತಾರೆ ಜೆನಿಲಿಯಾ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.