ಕೋಲ್ಕತ್ತಾ ಲೋಕಲ್ ಟ್ರೈನಲ್ಲಿ ಮಹಿಳೆಯರ ರಸ್ಲಿಂಗ್: ಬಿಡಿಸಲು ಬಂದ ಅಂಪೈರ್‌ಗೂ ಏಟು

Published : Jul 12, 2023, 02:44 PM ISTUpdated : Jul 12, 2023, 02:46 PM IST
ಕೋಲ್ಕತ್ತಾ ಲೋಕಲ್ ಟ್ರೈನಲ್ಲಿ ಮಹಿಳೆಯರ ರಸ್ಲಿಂಗ್: ಬಿಡಿಸಲು ಬಂದ ಅಂಪೈರ್‌ಗೂ ಏಟು

ಸಾರಾಂಶ

ಕೋಲ್ಕತ್ತಾದ ಲೋಕಲ್ ರೈಲಿನಲ್ಲಿ ಮಹಿಳೆಯರಿಬ್ಬರು ಕಿತ್ತಾಡಿಕೊಂಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಕೋಲ್ಕತ್ತಾ: ಕೋಲ್ಕತ್ತಾದ ಲೋಕಲ್ ರೈಲಿನಲ್ಲಿ ಮಹಿಳೆಯರಿಬ್ಬರು ಕಿತ್ತಾಡಿಕೊಂಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆರಂಭದಲ್ಲಿ ಮಹಿಳೆಯರಿಬ್ಬರು ಜಗಳ ಮಾಡಿಕೊಂಡಿದ್ದು, ಅದು, ನಿಮಿಷದಲ್ಲೇ  ರಸ್ಲಿಂಗ್ ಟೀಮ್ ರೀತಿ ಮಹಿಳೆಯರ ಫೈಟಿಂಗ್ ಗ್ರೂಪ್ ಆಗಿ ಬದಲಾಗಿದೆ.  ಇವರ ಜಗಳ ಬಿಡಿಸಲು ಮುಂದಾದವರಿಗೂ ಏಟು ಬಿದ್ದಿದ್ದು ಈ ವೀಡಿಯೋ ಸಾಕಷ್ಟು ವೈರಲ್ ಆಗಿದೆ. 

ಮಹಿಳೆಯರು ಜಗಳ ಮಾಡುವಾಗ ಯಾರು ಮಧ್ಯ ಪ್ರವೇಶಿಸಬಾರದಂತೆ ಹೀಗಿರುವಾಗ ಇಬ್ಬರ ನಡುವಿನ ಜಗಳದಲ್ಲಿ ಮತ್ತೆ ಕೆಲವು ಮಹಿಳೆಯರು ಸೇರಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಅದು ಮಹಿಳೆಯರ ಗ್ರೂಪ್ ಫೈಟ್ ಆಗಿ ಬದಲಾಗಿದೆ.  ಮಹಿಳೆಯರು ಕಿತ್ತಾಡುತ್ತಿರುವ ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಆಯುಷಿ ಎಂಬುವವರು ಪೋಸ್ಟ್ ಮಾಡಿದ್ದು, ಕೋಲ್ಕತ್ತಾ ಲೋಕಲ್ ಎಂದು ಬರೆದುಕೊಂಡಿದ್ದಾರೆ. 30 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ನೀರಿನ ಬಾಟಲ್ ಹಾಗೂ ಚಪ್ಪಲಿಯಿಂದಲೂ ಪರಸ್ಪರ ಹೊಡೆದುಕೊಳ್ಳುವುದನ್ನು ಕಾಣಬಹುದಾಗಿದೆ. 

ಮೆಟ್ರೋದಲ್ಲಿ ಜಡೆಜಗಳ; ಚಪ್ಪಲಿ, ವಾಟರ್ ಬಾಟಲ್‌ನಲ್ಲಿ ಹೊಡೆದಾಡಿಕೊಂಡ ರೌಡಿ ಬೇಬೀಸ್!

ಸಾಮಾನ್ಯವಾಗಿ ಸಾರ್ವಜನಿಕ ಸಾರಿಗೆಯಲ್ಲಿ ಸೀಟಿಗಾಗಿ ಪ್ರತಿನಿತ್ಯ ಕಾದಾಟಗಳು ಆಗುತ್ತಲೇ ಇರುತ್ತವೆ. ಅದೇ ರೀತಿ ಇಲ್ಲಿ ಕೋಲ್ಕತ್ತಾದ ಲೋಕಲ್ ಟ್ರೈನ್‌ನ ಮಹಿಳೆಯರು ಹೊಡೆದಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ಮಹಿಳೆಯರು ಕಿರುಚಾಡುವುದರ ಜೊತೆಗೆ ಹೊಡೆದಾಡುವುದನ್ನು ಕೂಡ ಕಾಣಬಹುದು. ಆದರೆ ಈ ಹೊಡೆದಾಟಕ್ಕೆ ಕಾರಣವೇನೆಂದು ತಿಳಿದು ಬಂದಿಲ್ಲ, 

ಆದರೆ ವೀಡಿಯೋದ ಕೊನೆಯಲ್ಲಿ ಈ ರೈಲಿನಲ್ಲಿ ತನ್ನೊಂದಿಗಿದ್ದ ಬಾಲಕನಿಗೂ ಮಹಿಳೆ ಬೈಯುವುದ ಜೊತೆ ಕೈಯಲ್ಲಿ ಥಳಿಸುವುದನ್ನು ಕಾಣಬಹುದಾಗಿದೆ.  ಈ ವೀಡಿಯೋ ನೋಡಿದ ಅನೇಕರು ಹಲವು ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದು ಮುಂಬೈ ಲೋಕಲ್ ರೈಲಿನ ಪ್ರೊ ವರ್ಷನ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ರೈಲಿನೊಳಗೆ ಉಚಿತ ಮನೋರಂಜನೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು  ರೈಲೊಳಗೆ ರಸ್ಲಿಂಗ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಟ್ಟೆಗಳು ಹತ್ತು ವರ್ಷ ಆದ್ರು ಹಾಳಾಗಲ್ಲ.. ಒಣಗಿಸುವಾಗ, ಐರನ್ ಮಾಡುವಾಗ ಇದು ನೆನಪಿರಲಿ
ಎಲ್ಲಾ ಗೃಹಿಣಿಯರು ಅಡುಗೆ ಮಾಡುವಾಗ ಗೊತ್ತಿಲ್ದೆ ಮಾಡುವ 8 ಸಾಮಾನ್ಯ ತಪ್ಪುಗಳಿವು