ಚಾಮರಾಜನಗರ ಆಡಳಿತ ಈಗ ಸಂಪೂರ್ಣ ‘ಮಹಿಳಾ ವಿಶೇಷ’

By Kannadaprabha NewsFirst Published Jul 12, 2023, 11:29 AM IST
Highlights

ಚಾಮರಾಜನಗರ ಜಿಲ್ಲಾಡಳಿತದಲ್ಲಿ ಈಗ ಮಹಿಳಾ ಅಧಿಕಾರಿಗಳದೇ ದರ್ಬಾರ್‌. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್‌ ಸಿಇಒ, ಬಿಆರ್‌ಟಿ ಮುಖ್ಯಸ್ಥೆ, ಜಿಲ್ಲಾ ನ್ಯಾಯಾಧೀಶೆ ಎಲ್ಲರೂ ಮಹಿಳೆಯರೇ ಆಗಿದ್ದಾರೆ.

ಚಾಮರಾಜನಗರ ಜಿಲ್ಲಾಡಳಿತದಲ್ಲಿ ಈಗ ಮಹಿಳಾ ಅಧಿಕಾರಿಗಳದೇ ದರ್ಬಾರ್‌. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್‌ ಸಿಇಒ, ಬಿಆರ್‌ಟಿ ಮುಖ್ಯಸ್ಥೆ, ಜಿಲ್ಲಾ ನ್ಯಾಯಾಧೀಶೆ ಎಲ್ಲರೂ ಮಹಿಳೆಯರೇ ಆಗಿದ್ದಾರೆ.

ಚಾಮರಾಜನಗರದ ನೂತನ ಜಿಲ್ಲಾಧಿಕಾರಿಯಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಆಯುಕ್ತರಾಗಿದ್ದ ಶಿಲ್ಪಾ ನಾಗ್‌ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಎಸ್‌.ರಮೇಶ್‌ ಅವರ ವರ್ಗಾವಣೆ ಬಳಿಕ ಕಳೆದೊಂದು ವಾರದಿಂದ ಜಿಲ್ಲಾ ಪಂಚಾಯತ್‌ ಸಿಇಒ ಪೂವಿತಾ ಅವರೇ ಪ್ರಭಾರ ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ನೂತನ ಡಿಸಿಯನ್ನಾಗಿ ಶಿಲ್ಪಾ ನಾಗ್‌ ಅವರನ್ನು ನೇಮಕ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Latest Videos

ಬಿಎಂಟಿಸಿಯಲ್ಲಿ ಮಹಿಳಾ ಅಧಿಕಾರಿಗಳದ್ದೇ ದರ್ಬಾರ್! ಪುರುಷ ಕಾರ್ಮಿಕರ ಸಮಸ್ಯೆ ಆಲಿಸೋರೇ ಇಲ್ವಾ?

ಉಳಿದಂತೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಪದ್ಮಿನಿ ಸಾಹೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಪೂವಿತಾ ಅವರು ಜಿಲ್ಲಾ ಪಂಚಾಯತ್‌ ಸಿಇಒ ಆಗಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಗೀತಾ ಹುಡೇದ, ಬಿಳಿಗಿರಿ ರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಡಿಸಿಎಫ್‌ ಆಗಿ ದೀಪ್‌ ಜೆ. ಕಂಟ್ರಾಕ್ಟರ್‌, ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿಯಾಗಿ ಸರಸ್ವತಿ, ಚಾಮರಾಜನಗರದ ಡಿವೈಎಸ್ಪಿಯಾಗಿ ಪ್ರಿಯದರ್ಶಿನಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾರ್ಯಾಂಗ ಮಾತ್ರವಲ್ಲ, ಜಿಲ್ಲೆಯ ನ್ಯಾಯಾಂಗ ಕ್ಷೇತ್ರದ ಉನ್ನತ ಹುದ್ದೆಯಲ್ಲೂ ಮಹಿಳಾ ಅಧಿಕಾರಿಗಳಿದ್ದು, ಭಾರತಿ ಅವರು ಜಿಲ್ಲಾ ಸತ್ರ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಐಟಿಬಿಪಿಯ ಯುದ್ಧ ಪಡೆಗೆ ಮೊದಲ ಮಹಿಳಾ ಅಧಿಕಾರಿ!

click me!