ಮಧುಮೇಹ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುವಂಥಾ ಆರೋಗ್ಯ ಸಮಸ್ಯೆ. ಮಕ್ಕಳು, ವಯಸ್ಕರು, ಮಹಿಳೆಯರು ಮತ್ತು ಪುರುಷರು ಯಾರಿಗೆ ಬೇಕಾದರೂ ಡಯಾಬಿಟಿಸ್ ಬರಬಹುದು. ಆದ್ರೆ ಮಹಿಳೆಯರಿಗೆ ಮಧುಮೇಹವಿದ್ರೆ ಮಕ್ಕಳಾಗಲ್ಲ ಅಂತಾರಲ್ಲ. ಇದು ನಿಜಾನ ?
ಮಧುಮೇಹ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ಇದು ಚಿಕ್ಕವರಿಂದ ಹಿಡಿದು ವೃದ್ಧರ ವರೆಗೂ ಎಲ್ಲರಲ್ಲೂ ಕಾಣಿಸಿಕೊಳ್ಳುತ್ತಿದೆ. ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಲು ಕಾರಣವಾಗುತ್ತದೆ. ಮಾತ್ರವಲ್ಲ ಅನೇಕ ಇತರ ಮಾರಣಾಂತಿಕ ವೈದ್ಯಕೀಯ ಸಮಸ್ಯೆಗಳಿಗೂ ಕಾರಣವಾಗಬಹುದು. ಮಹಿಳೆಯರಲ್ಲಿಯೂ ಇವು ಹೆಚ್ಚಾಗಿ ಕಂಡುಬರುತ್ತವೆ ಎಂದು ಸಮೀಕ್ಷೆಗಳು ಹೇಳುತ್ತವೆ. ಪ್ರಪಂಚದಾದ್ಯಂತ ಪ್ರತಿ ವರ್ಷ 2.1 ಮಿಲಿಯನ್ ಮಹಿಳೆಯರು ಈ ಕಾಯಿಲೆಯಿಂದ ಸಾಯುತ್ತಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಈ ರೀತಿ ಸಾಯುತ್ತಿರುವ ಪುರುಷರು ಬಹಳ ಕಡಿಮೆ ಎಂದು ಸಮೀಕ್ಷೆಗಳು ಬಹಿರಂಗಪಡಿಸುತ್ತವೆ. ಅದಕ್ಕಾಗಿಯೇ ಮಹಿಳೆಯರು ಮಧುಮೇಹವನ್ನು ತಡೆಗಟ್ಟಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಮಧುಮೇಹ ಇರುವ ಮಹಿಳೆಯರಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆ
ಮಧುಮೇಹವು ಹೆಚ್ಚಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಆದರೆ ಮಧುಮೇಹ ಇರುವ ಮಹಿಳೆಯರಿಗೆ ಮಕ್ಕಳಾಗುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ತಜ್ಞರು. ಅವರು ಗರ್ಭಿಣಿ (Preganant)ಯಾಗಿದ್ದರೆ, ಒಂದು ತಿಂಗಳೊಳಗೆ ಗರ್ಭಪಾತದ (Miscarriage) ಹೆಚ್ಚಿನ ಅವಕಾಶವಿದೆ. ಅಲ್ಲದೆ ಮಕ್ಕಳು ಅವಧಿಗೂ ಮುನ್ನ ಜನಿಸಬಹುದು. ಇದಲ್ಲದೆ, ಮಕ್ಕಳು (Children) ಉಸಿರಾಟದ ತೊಂದರೆಯಿಂದ ಬಳಲುವ ಸಾಧ್ಯತೆಗಳೂ ಇವೆ ಎಂದು ತಜ್ಞರು ಹೇಳುತ್ತಾರೆ. ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಗರ್ಭಿಣಿಯಾದ ನಂತರ ಮಧುಮೇಹಕ್ಕೆ ತುತ್ತಾಗುತ್ತಾರೆ. ಇದು ಹೆರಿಗೆಯ (Delivery) ನಂತರ ತಾನಾಗಿಯೇ ಕಡಿಮೆಯಾಗುತ್ತಾ ಹೋಗುತ್ತದೆ.
Food for Diabetics: ಶುಗರ್ ಇದೆ ಅಂತ ಹೊಟ್ಟೆಗೆ ಕಮ್ಮಿ ಮಾಡ್ಕೋಬೇಡಿ, ಈ ಫುಡ್ ತಿನ್ನಬಹುದು ನೋಡಿ
ಉತ್ತಮ ಆಹಾರಸೇವನೆ, ವ್ಯಾಯಾಮ ಪರಿಹಾರ
ಮಧುಮೇಹವು ಕಳಪೆ ರಕ್ತ ಪರಿಚಲನೆಗೆ ಕಾರಣವಾಗುತ್ತದೆ. ಇದರಿಂದ ನರಗಳ ಶಕ್ತಿ ಕಡಿಮೆಯಾಗುತ್ತದೆ. ಹಾರ್ಮೋನುಗಳು ಏರಿಳಿತಗೊಳ್ಳುತ್ತವೆ. ಇವೆಲ್ಲವೂ ಲೈಂಗಿಕ ಬಯಕೆಯನ್ನು ಕಡಿಮೆ ಮಾಡುತ್ತದೆ. ಲೈಂಗಿಕ ಕ್ರಿಯೆಯ ಸಾಮರ್ಥ್ಯವೂ ಕಡಿಮೆಯಾಗುತ್ತದೆ. ವಿಶೇಷವಾಗಿ ಯೋನಿ ಒಣಗುತ್ತದೆ. ಕಿರಿಕಿರಿಯುಂಟು ಮಾಡುತ್ತದೆ. ಲೈಂಗಿಕತೆಯನ್ನು ಹೊಂದುವಾಗ ನೋವುಂಟು ಮಾಡುತ್ತದೆ. ಅಂಥವರು ಆದಷ್ಟು ಬೇಗ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ (Treatment0 ಪಡೆದುಕೊಳ್ಳಬೇಕು. ದಿನವೂ ಒಳ್ಳೆಯ ಆಹಾರ ಸೇವಿಸಿ, ಸಣ್ಣಪುಟ್ಟ ವ್ಯಾಯಾಮಗಳನ್ನು ಮಾಡಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ಲೈಂಗಿಕ ಜೀವನವೂ (Sexual life) ಉತ್ತಮವಾಗಿರುತ್ತದೆ.
ಮಧುಮೇಹ ಹೊಂದಿರುವ ಮಹಿಳೆಯರು ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದರೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಇದರಿಂದ ಮೂತ್ರ ಸರಿಯಾಗಿ ಹೊರಹೋಗುವುದಿಲ್ಲ. ಇದರಿಂದ ಅಲ್ಲಿ ಬ್ಯಾಕ್ಟೀರಿಯಾಗಳು ಶೇಖರಣೆಯಾಗುತ್ತವೆ. ಇದು ಯೋನಿ ಯೀಸ್ಟ್ ಸೋಂಕಿನ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದ್ದರಿಂದ, ನೀವು ಮಧುಮೇಹ ಹೊಂದಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು.
Type 3 Diabetes ಕಾಡೋದು ಯಾವಾಗ? ಲಕ್ಷಣಗಳು ಏನಿರುತ್ತೆ?
ಮಧುಮೇಹದಿಂದ ಮಹಿಳೆಯರಿಗೆ ಹೃದ್ರೋಗ ಬರುವ ಸಾಧ್ಯತೆ
ಮಧುಮೇಹವು ಕಣ್ಣಿನ ಸಮಸ್ಯೆಗಳನ್ನು ಉಂಟುಮಾಡಬಹುದು. ಮೂತ್ರಪಿಂಡ ರೋಗ. ಖಿನ್ನತೆಯೂ (Anxiety) ಬರಬಹುದು. ಈ ಎಲ್ಲಾ ಸಮಸ್ಯೆಗಳು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತವೆ ಎಂದು ವೈದ್ಯರು ಹೇಳುತ್ತಾರೆ. ಮಧುಮೇಹದಿಂದ ಮಹಿಳೆಯರಿಗೆ ಹೃದ್ರೋಗ ಬರುವ ಸಾಧ್ಯತೆ ಶೇಕಡ 47ರಷ್ಟಿದೆ ಎನ್ನುತ್ತಾರೆ ತಜ್ಞರು.
ಮದುವೆಗೂ ಮುನ್ನವೇ ಮಧುಮೇಹದ ಸಮಸ್ಯೆ ಬಾಧಿಸಿದರೆ.. ಮದುವೆಯ ನಂತರ ಫಾಲೋಪಿಯನ್ ಟ್ಯೂಬ್ ಗಳಲ್ಲಿ ಇನ್ ಫೆಕ್ಷನ್ ಆಗಿ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ಇದು ಅಡೆತಡೆಗಳು ಮತ್ತು ಅನಿಯಮಿತ ಮುಟ್ಟನ್ನು ಉಂಟುಮಾಡುತ್ತದೆ. ಇದು ಗರ್ಭಧಾರಣೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪುರುಷರಲ್ಲಿ, ವೀರ್ಯ (Sperm) ಕೋಶಗಳ ಉತ್ಪಾದನೆಯು ಬಹಳ ಕಡಿಮೆಯಾಗುತ್ತದೆ. ಅಲ್ಲದೆ ಈ ಜೀವಕೋಶಗಳು ದುರ್ಬಲವಾಗಿರುತ್ತವೆ. ಇದರಿಂದ ಮಕ್ಕಳಾಗುವ ಸಾಧ್ಯತೆ ತೀರಾ ಕಡಿಮೆಯಾಗಿರುತ್ತದೆ. ಮದುವೆಗೆ ಮುಂಚೆ ಮಧುಮೇಹ ಇದ್ದರೆ, ಮದುವೆಯ (Marriage) ನಂತರ ನಿಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ನರಗಳಲ್ಲಿ ರಕ್ತದ ಹರಿವು ಕಡಿಮೆಯಾಗುತ್ತದೆ. ಇದರಿಂದ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆ ಮತ್ತು ಅಕಾಲಿಕ ಸ್ಖಲನದಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಹೇಳುತ್ತಾರೆ.