ನಮ್ಮ ದೇಹದ ಪ್ರತಿಯೊಂದು ಅಂಗದ ಆರೈಕೆ ಮುಖ್ಯ. ಕೈ ಬೆರಳುಗಳು, ಉಗುರುಗಳ ಜೊತೆ ಉಗುರಿನ ಸುತ್ತಲಿರುವ ಚರ್ಮದ ಬಗ್ಗೆಯೂ ಕಾಳಜಿ ವಹಿಸಬೇಕು. ಚರ್ಮಕ್ಕೆ ಗಾಯವಾದ್ರೆ, ನೋವಾದ್ರೆ ಅದ್ರ ಪರಿಣಾಮ ಉಗುರಿನ ಮೇಲಾಗುತ್ತದೆ. ಸೋಂಕಿನ ಅಪಾಯ ಕಾಡುತ್ತದೆ.
ಚಳಿಗಾಲ ಶುರುವಾಗ್ತಿದ್ದಂತೆ ಮೈ – ಕೈ ಬಿರುಕು ಬಿಡಲು ಶುರುವಾಗುತ್ತದೆ. ಅನೇಕರ ಮುಖದ ಮೇಲೆ ಬಿಳಿ ಹೊಟ್ಟು ಕಾಣಿಸಿಕೊಳ್ಳುತ್ತದೆ. ಮತ್ತೆ ಕೆಲವರ ಪಾದಗಳು ಬಿರುಕು ಬಿಟ್ಟು ರಕ್ತ ಬರುವುದಿದೆ. ಇಷ್ಟೇ ಅಲ್ಲ ಕೈ ಬೆರಳು, ಉಗುರಿನ ಸುತ್ತ ಮುತ್ತ ಕೂಡ ಚರ್ಮ ಏಳುತ್ತದೆ. ಇದು ನಿಮ್ಮ ಕೈ ಸೌಂದರ್ಯ ಹಾಳು ಮಾಡುವ ಜೊತೆಗೆ ಕೆಲ ಸೋಂಕಿಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ಒಣ ಚರ್ಮ ಹೊಂದಿರುವ ಜನರಿಗೆ ಉಗುರಿನ ಸುತ್ತಮುತ್ತ ಒಡೆಯುವುದು ಹೆಚ್ಚು. ಈ ಉಗುರಿನ ಸುತ್ತ ಚರ್ಮ ಏಳುವುದನ್ನು ತಡೆಯಲು ಅನೇಕರು ಬಾಡಿಲೋಷನ್ ಬಳಕೆ ಮಾಡ್ತಾರೆ. ಆದ್ರೆ ಇದ್ರಿಂದ ಸಮಸ್ಯೆ ಹೋಗೋದಿಲ್ಲ. ನಾವಿಂದು ಸರಳ ಮನೆ ಮದ್ದುಗಳನ್ನು ನಿಮಗೆ ಹೇಳ್ತೇವೆ. ಇದನ್ನು ಬಳಸುವ ಮೂಲಕ ನೀವು ಉಗುರು ಹಾಗೂ ಕೈ ಬೆರಳಿನ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
ನೇಲ್ ಕ್ಯೂಟಿಕಲ್ (Nail Cuticle) ಅಂದ್ರೇನು? : ಉಗುರಿನ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಕ್ಯೂಟಿಕಲ್ ಎಂದು ಕರೆಯಲಾಗುತ್ತದೆ. ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ನಡೆಸಿದ ಅಧ್ಯಯನದ ಪ್ರಕಾರ, ನಿಮ್ಮ ಉಗುರುಗಳ ಹೊರಪೊರೆ ಹಾನಿಗೊಳಗಾಗಿದ್ದರೆ, ಗಾಯ (Injury) ವಾಗಿದ್ದರೆ ಅಥವಾ ಸಿಪ್ಪೆ ಸುಲಿದಿದ್ದರೆ ಅದು ನಿಮ್ಮ ಉಗುರುಗಳ ಆರೋಗ್ಯ (Health) ದ ಮೇಲೂ ಪರಿಣಾಮ ಬೀರುತ್ತದೆ. ಈ ಹೊರಪೊರೆಗಳು ( ಕ್ಯೂಟಿಕಲ್) ಉಗುರುಗಳನ್ನು ರಕ್ಷಿಸುತ್ತವೆ. ಉಗುರಿನ ಒಳಗೆ ಯಾವುದೇ ರೀತಿಯ ಕೊಳಕು ಮತ್ತು ಸೋಂಕಿ ಹೋಗದಂತೆ ರಕ್ಷಿಸುತ್ತದೆ. ಈ ಕ್ಯೂಟಿಕಲ್ ಗಾಯಗೊಂಡಿದ್ರೆ ಉಗುರುಗಳಲ್ಲಿ ವಿವಿಧ ರೀತಿಯ ಸೋಂಕುಗಳು ಕಾಣಿಸಿಕೊಳ್ಳುತ್ತವೆ. ಇದ್ರಿಂದ ನೋವು ಕಾಣಿಸಿಕೊಳ್ಳುತ್ತದೆ. ಇದು ಉಗುರುಗಳ ಸೌಂದರ್ಯ (Beauty) ವನ್ನು ಕೂಡ ಹಾಳು ಮಾಡುತ್ತದೆ.
undefined
ನೇಲ್ ಕ್ಯೂಟಿಕಲ್ ಆರೈಕೆ ಹೀಗಿರಲಿ ? : ಉಗುರನ್ನು ರಕ್ಷಣೆ ಮಾಡುವ ಹೊರ ಪದರವನ್ನು ಆರೈಕೆ ಮಾಡುವುದು ಬಹಳ ಮುಖ್ಯ. ಅದಕ್ಕೆ ನೀವು ಮನೆಯಲ್ಲಿರುವ ಕೆಲ ವಸ್ತುಗಳನ್ನು ಬಳಕೆ ಮಾಡಬಹುದು.
ತೆಂಗಿನ ಎಣ್ಣೆ : ಹಿಂದಿನ ಕಾಲದಿಂದಲೂ ಔಷಧಿ ರೂಪದಲ್ಲಿ ತೆಂಗಿನ ಎಣ್ಣೆ ಬಳಕೆಯಾಗ್ತಿದೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫರ್ಮೇಷನ್ ನಡೆಸಿದ ಸಂಶೋಧನೆಯ ಪ್ರಕಾರ, ತೆಂಗಿನ ಎಣ್ಣೆ ಉರಿಯೂತದ ವಿರೋಧಿಯಾಗಿದೆ. ಚಳಿಗಾಲದಲ್ಲಿ ಚರ್ಮದ ಆರೈಕೆಗೆ ನೀವು ತೆಂಗಿನ ಎಣ್ಣೆಯನ್ನು ಅವಶ್ಯಕವಾಗಿ ಬಳಕೆ ಮಾಡಬೇಕು. ಚಳಿಗಾಲದಲ್ಲಿ ಅನೇಕರಿಗೆ ಕೈಗಳ ಬೆರಳುಗಳಲ್ಲಿ ಊತದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಚರ್ಮ ಬಿರುಕುಬಿಡುತ್ತದೆ. ಇದು ಕ್ಯೂಟಿಕಲ್ ಮೇಲೆ ಪರಿಣಾಮ ಬೀರುತ್ತದೆ. ನಿಮಗೂ ಈ ಸಮಸ್ಯೆಯಾಗ್ತಿದೆ ಎಂದಾದ್ರೆ ನೀವು ಕೊಬ್ಬರಿ ಎಣ್ಣೆಯನ್ನು ಉಗುರುಗಳಿಗೆ ಹಚ್ಚಬೇಕು. ಪ್ರತಿ ದಿನ ಕೊಬ್ಬರಿ ಎಣ್ಣೆ ಹಚ್ಚುವುದ್ರಿಂದ ಸಮಸ್ಯೆ ಕಡಿಮೆಯಾಗುತ್ತದೆ.
ನಿಮ್ ಫೇಸ್‌ಕ್ರೀಮ್‌ನಲ್ಲಿ ಸ್ಟಿರಾಯ್ಡ್ ಅಂಶವಿದ್ಯಾ ? ಚರ್ಮದ ಸಮಸ್ಯೆ ಕಾಡುತ್ತೆ..ಎಚ್ಚರ !
ಓಟ್ಸ್ ಪೇಸ್ಟ್ : ಅನೇಕ ಬಾರಿ ಡೆಡ್ ಸ್ಕಿನ್ ಕಾರಣಕ್ಕೆ ನೇಲ್ ಕ್ಯೂಟಿಕಲ್ ಸಮಸ್ಯೆ ಕಾಡುತ್ತದೆ. ಇದಕ್ಕೆ ನೀವು ಓಟ್ಸ್ ಬಳಸಬಹುದು. ಹಾನಿಗೊಳಗಾದ ಚರ್ಮವನ್ನು ಸರಿಪಡಿಸುವ ಸಾಮರ್ಥ್ಯವನ್ನು ಓಟ್ಸ್ ಹೊಂದಿದೆ. ಓಟ್ಸ್ ಅನ್ನು ನೆನೆಸಿ ಪೇಸ್ಟ್ ತಯಾರಿಸಿ ನಂತರ ಅದನ್ನು ಉಗುರುಗಳ ಮೇಲೆ ಹಚ್ಚಿ. ಹೀಗೆ ಮಾಡುವುದರಿಂದ ತ್ವಚೆ ಕಾಂತಿಯುತವಾಗುತ್ತದೆ ಮತ್ತು ಮೃದುವಾಗುತ್ತದೆ.
ಅಲೋವೇರಾ ಜೆಲ್ ಬಳಸಿ ನೋಡಿ : ಅಲೋವೆರಾ ಜೆಲ್ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಚರ್ಮದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ನೇರವಾಗಿ ಉಗುರುಗಳ ಮೇಲೆ ಅನ್ವಯಿಸಬಹುದು. ಇದು ಉಗುರುಗಳಿಗೆ ಹೊಳಪು ನೀಡುತ್ತದೆ.
ಹುಬ್ಬು ಕೂದಲು ಉದುರುತ್ತಾ ? ಈ ಮನೆಮದ್ದು ಟ್ರೈ ಮಾಡಿ
ಹಾಲಿನಲ್ಲಿದೆ ಸೌಂದರ್ಯದ ಗುಟ್ಟು : ಹಾಲಿನಲ್ಲಿರುವ ಕೊಬ್ಬು ಚರ್ಮವನ್ನು ತೇವಗೊಳಿಸುತ್ತದೆ. ಚರ್ಮ ಶುಷ್ಕವಾಗಿದ್ದರೆ, ಉಗುರುಗಳ ಸುತ್ತ ಚರ್ಮ ಸಿಪ್ಪೆಸುಲಿಯುತ್ತಿದ್ದರೆ ಉಗುರುಗಳನ್ನು ಹಸಿ ಹಾಲಿನ ಬಟ್ಟಲಿನಲ್ಲಿ 10 ನಿಮಿಷಗಳ ಕಾಲ ಅದ್ದಿ. ಹೀಗೆ ಮಾಡಿದ್ರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.