
ತೂಕ ಇಳಿಸಿಕೊಳ್ಳಲು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ? ತೂಕ ಕಡಿಮೆಯಾಗ್ತಿದ್ದಂತೆ ಸಂತೋಷಕ್ಕೆ ಪಾರವೇ ಇರೋದಿಲ್ಲ. ಇಷ್ಟು ದಿನ ಮಾಡಿದ ಡಯಟ್, ಕಸರತ್ತಿಗೆ ಸೂಕ್ತ ಫಲ ಸಿಕ್ಕಿದೆ ಎಂದು ಖುಷಿ ಪಡ್ತಾರೆ. ಆದ್ರೆ ಈ ಹುಡುಗಿಯೊಬ್ಬಳು ತೂಕ ಇಳಿತಿದ್ದಂತೆ ತನ್ನ ಅಂಡರ್ವೇರ್ ತೆಗೆದು ಎಸೆದಿದ್ದಾಳೆ. ಅದೂ ಡ್ರಕ್ ಕಾರ್ಯಕ್ರಮದಲ್ಲಿ. ಡ್ರೇಕ್ (Drake) ವಿಶ್ವದ ಅತಿದೊಡ್ಡ ಸಂಗೀತ ಕಲಾವಿದರಲ್ಲಿ ಒಬ್ಬರಾಗಿದ್ದು, ಜಾಗತಿಕವಾಗಿ ಲಕ್ಷಾಂತರ ಆಲ್ಬಮ್‌ಗಳನ್ನು ಮಾರುತ್ತಾರೆ.
ಒಳ ಉಡುಪು ತೆಗೆದು ಎಸೆದ ಮಹಿಳೆ ಯಾರು?: ಸ್ಟೆಫನಿ ವ್ಯಾಲೆಂಟೈನ್ (Stephanie Valentine) ಡ್ರಕ್ ಕಾರ್ಯಕ್ರಮದಲ್ಲಿ ತನ್ನ ಒಳ ಉಡುಪನ್ನು ತೆಗೆದು ಎಸೆದ ಮಹಿಳೆ. ಕಳೆದ ಒಂದೂವರೆ ವರ್ಷದಲ್ಲಿ ಆಕೆ 175 ಪೌಂಡ್ ಇಳಿದಿದ್ದಾಳೆ. ತೂಕ ಇಳಿಕೆಯಾಗ್ತಿದ್ದಂತೆ ಸ್ಟೆಫಿನಿ ವ್ಯಾಲೆಂಟೈನ್ ಎಂದಿಗಿಂತಲೂ ಹೆಚ್ಚು ಆತ್ಮವಿಶ್ವಾಸವನ್ನು ಅನುಭವಿಸುತ್ತಿದ್ದಾಳೆ.
ಸಹಜ ಸುಂದರಿ ಸಾಯಿ ಪಲ್ಲವಿ ಸನ್ಯಾಸಿ ಆಗ್ತಾರಾ? ಅಧ್ಯಾತ್ಮದ ಹಾದಿ ಹಿಡಿದ ಪ್ರೇಮಂ ನಟಿ!
ತೂಕ ಇಳಿಯುತ್ತಿದ್ದಂತೆ ಸಾಕಷ್ಟು ಖುಷಿಯಾಗಿರುವ ಸ್ಟೆಫಿನಿ ವ್ಯಾಲೆಂಟೈನ್, ಡ್ರಕ್ ಸಂಗೀತ ಕಚೇರಿ ಸೇರಿದಂತೆ ಎಂದಿಗೂ ಆನಂದಿಸಲು ಸಾಧ್ಯವಾಗದ ವಿಷಯಗಳನ್ನು ಇನ್ಮುಂದೆ ಎಂಜಾಯ್ ಮಾಡ್ತೇನೆ ಎಂದಿದ್ದಾಳೆ.
ಸ್ಟೆಫಿನಿ ವ್ಯಾಲೆಂಟೈನ್ ಯಾರು ? : ಟಿಕ್‌ಟಾಕ್‌ನಲ್ಲಿ ಪ್ರಸಿದ್ಧಿ ಪಡೆದವಳು ಸ್ಟೆಫಿನಿ ವ್ಯಾಲೆಂಟೈನ್. ಟಿಕ್ ಟಾಕ್ ನಲ್ಲಿ 1.8 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾಳೆ ಸ್ಟೆಫನಿ. ನ್ಯೂಯಾರ್ಕ್‌ನಲ್ಲಿ ನಡೆದ ಪ್ಯಾಶನ್‌ಫ್ರೂಟ್' ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಆಕೆ ಈ ಕೆಲಸ ಮಾಡಿದ್ದಾಳೆ. ಈ ವಿಡಿಯೋವನ್ನು ಟಿಕ್ ಟಾಕ್ ನಲ್ಲೂ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಏನಿದೆ? : ಸ್ಟೆಫಿನಿ ವ್ಯಾಲೆಂಟೈನ್ ಹಂಚಿಕೊಂಡ ವಿಡಿಯೋ 1.6 ಮಿಲಿಯನ್ ಗಿಂತಲೂ ಹೆಚ್ಚು ವ್ಯೂವ್ಸ್ ಪಡೆದಿದೆ. ಸ್ಟೆಫಿನಿ ವ್ಯಾಲೆಂಟೈನ್ ಈ ವಿಡಿಯೋದಲ್ಲಿ ತನ್ನ ಒಳ ಉಡುಪನ್ನು ಹಿಡಿದು ಇವು ನನ್ನ ಹಳೆಯ ಪ್ಯಾಂಟಿ. ಇಂದು ರಾತ್ರಿ ಅವನ್ನು ಡ್ರೇಕ್‌ಗೆ ಎಸೆಯುತ್ತಿದ್ದೇನೆ ಎಂದಿದ್ದಾಳೆ.. ಇಷ್ಟೇ ಅಲ್ಲದೆ ಸ್ಟೆಪಿನಿ ವಿಡಿಯೋದ ಮುಂದುವರೆದ ಭಾಗದಲ್ಲಿ ಆಕೆ ಒಳ ಉಡುಪಿಗೆ ಇಸ್ತ್ರಿ ಹಾಕೋದನ್ನು ನೀವು ನೋಡ್ಬಹುದು. ಡ್ರೇಕ್, ಬಿಗ್ ಬ್ಯೂಟಿಫುಲ್ ವುಮೆನ್ ಹಾಗೂ ಆಕೆ ಅಡರ್ವೇರ್ ಇಷ್ಟಡ್ತಾನೆ ಎಂದು ಸ್ಟೆಫಿನಿ ಹೇಳ್ತಾಳೆ. ಸರಿ ಇಲ್ಲಿದೆ ಅಂತಿಮ ಪ್ಯಾಂಟಿ. ಈಗ ನಾನು ನ್ಯೂಯಾರ್ಕ್‌ಗೆ ಹೋಗುತ್ತಿದ್ದೇನೆ, ಎಂದು ಅವಳು ಹೇಳುತ್ತಾಳೆ. ವಿಡಿಯೋ ಮುಂದುವರೆದ ಭಾಗದಲ್ಲಿ ಆಕೆಯನ್ನು ಕಾರ್ಯಕಮದಲ್ಲಿ ನೋಡ್ಬಹುದು. ತಾನು ಹೇಳಿದಂತೆ ಅಲ್ಲಿ ಡ್ರಕ್ ಮೇಲೆ ಪ್ಯಾಂಟಿ ಎಸೆಯುತ್ತಾಳೆ ಸ್ಟೆಫಿನ್. ಸ್ಟೆಫಿನ್ ಎಸೆದ ಪ್ಯಾಂಟಿಯನ್ನು ಡ್ರೇಕ್ ಕ್ಯಾಚ್ ಹಿಡಿಯುತ್ತಾರೆ. ಅಷ್ಟೊಂದು ಗದ್ದಲದಲ್ಲೂ ಆಕೆ ಪ್ಯಾಂಟಿ ಕ್ಯಾಚ್ ಮಾಡಿದ ಡ್ರಕ್ ನೋಡಿ ಅಭಿಮಾನಿಗಳು ದಂಗಾಗ್ತಾರೆ.
DISHA Bharat: ಭಾರತದ ಏಕತೆಯಲ್ಲಿ ಮಹಿಳೆಯರ ಪಾತ್ರ ಗುರುತರವಾದದ್ದು -ಶುಭ್ರಸ್ತ
ಖುಷಿಯಾದ ಸ್ಟೆಫಿನಿ ಹೇಳಿದ್ದೇನು? : ಸ್ಟೆಫಿನಿ 175 ಪೌಂಡ್ ತೂಕ ಕಳೆದುಕೊಂಡಿದ್ದಾಳಂತೆ. ಈ ವರ್ಷ ನಾನು ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳಬಹುದು. ಮೊದಲು ನನಗೆ ಖುರ್ಚಿ ಫಿಟ್ ಆಗ್ತಿರಲಿಲ್ಲ. ಹಾಗಾಗಿ ನಾನು ರಾತ್ರಿಯಿಡೀ ನಿಂತು ನೋಡ್ಬೇಕಿತ್ತು. ಇದ್ರಿಂದ ನನ್ನ ಮೊಣಕಾಲುಗಳು, ನನ್ನ ಇಡೀ ಕಾಲುಗಳು ಒಂದು ವಾರದವರೆಗೆ ನೋಯುತ್ತಿರುತ್ತಿದ್ದವು. ಅದರಿಂದಾಗಿ ನಾನು ಸಂಗೀತ ಕಚೇರಿಗಳನ್ನು ದ್ವೇಷಿಸುತ್ತಿದ್ದೆ ಎಂದು ಸ್ಟೆಫಿನಿ ಹೇಳಿದ್ದಾಳೆ.
ಈ ವರ್ಷ ಖುರ್ಚಿ ಮಾತ್ರವಲ್ಲ ನೆಲದ ಮೇಲೂ ಆಕೆ ಕುಳಿತುಕೊಳ್ಳಲು ಫಿಟ್ ಆಗಿದ್ದಾಳಂತೆ. ಡ್ರೇಕ್ ಕಾರ್ಯಕ್ರಮಕ್ಕೆ ಹೋದಾಗ ಪ್ಯಾಂಟಿ, ಬ್ರಾ ತೆಗೆದು ನಾನು ವೇದಿಕೆ ಮೇಲೆ ಎಸೆಯಬಲ್ಲೆ. ನಿಮಗೆ ಇದು ಅಸಹ್ಯವೆನ್ನಿಸಬಹುದು. ಆದ್ರೆ ನನಗೆ ಅದ್ರ ಮಹತ್ವ ತಿಳಿದಿದೆ. ನಾನೀಗ ಮುಖ್ತವಾಗಿದ್ದೇನೆ, ನನಗೆ ತುಂಬಾ ಆತ್ಮವಿಶ್ವಾದ ಬಂದಿದೆ ಎನ್ನುತ್ತಾಳೆ ಸ್ಟೆಫಿನಿ. ಆಕೆ ಟಿಕ್ ಟಾಕ್ ವಿಡಿಯೋವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.