ವರ್ಷದ ಹಿಂದೆ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆದ 'ಸೀತಾರಾಮಂ' ಸಿನಿಮಾ ನಿಮಗೆ ನೆನಪಿದ್ಯಾ. ಇಲ್ಲಿ ರಾಜಕುಟುಂಬದ ಪ್ರಿನ್ಸೆಸ್ ಒಬ್ಬಳು ಸಾಮಾನ್ಯ ಯುವಕನೊಬ್ಬನನ್ನು ಪ್ರೀತಿಸಿ ಆತನಿಗಾಗಿ ಎಲ್ಲವನ್ನೂ ತೊರೆದು ಬರಿಗೈಲಿ ಹೊರಟು ಬರುತ್ತಾಳೆ. ಎಲ್ಲರ ಕಣ್ಣಂಚನ್ನೂ ಒದ್ದೆ ಮಾಡಿದ ಚಿತ್ರವಿದು. ಇಂಥಹದ್ದೇ ಘಟನೆಯೊಂದು ಜಪಾನ್‌ನಲ್ಲಿ ನಡೆದಿದೆ.
ವರ್ಷದ ಹಿಂದೆ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆದ ಸಿನಿಮಾ 'ಸೀತಾರಾಮಂ'. ಹಿಂದೂ ಹುಡುಗ, ಮುಸ್ಲಿಂ ಹುಡುಗಿಯನ್ನು ಇಷ್ಟಪಡುವ ನವಿರಾದ ಪ್ರೇಮಕಥೆ. ಚಿತ್ರದ ವಿಶೇಷತೆಯೆಂದರೆ ರಾಜಕುಮಾರಿಯಾಗಿರುವ ನೂರ್‌ಜಹಾನ್, ಸಾಮಾನ್ಯ ವ್ಯಕ್ತಿಯನ್ನು ಮನಸಾರೆ ಪ್ರೀತಿಸುತ್ತಾಳೆ. ಆತನಿಗಾಗಿ ತನ್ನ ಸಂಪತ್ತನ್ನೆಲ್ಲಾ ಬಿಟ್ಟು ಬರುತ್ತಾಳೆ. ಅಪರೂಪದ ಈ ಪ್ರೇಮಕಥೆ ಪ್ರೇಕ್ಷಕರನ್ನು ಭಾವುಕರಾಗುವಂತೆ ಮಾಡಿತ್ತು. ಆದರೆ ಇಂಥಹದ್ದೇ ಘಟನೆಯೊಂದು ಈ ಹಿಂದೆ ಜಪಾನ್‌ನಲ್ಲಿ ನಡೆದಿರೋದು ವರದಿಯಾಗಿದೆ. ಇಲ್ಲಿನ ರಾಜಕುಮಾರಿ ತಾನು ಪ್ರೀತಿಸಿದ ಹುಡುಗನನ್ನು ವರಿಸಲು ರಾಜಕುಟುಂಬವನ್ನೇ ತೊರೆದು ಬಂದಿದ್ದಾಳೆ. ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾಳೆ.
'ಸೀತಾರಾಮಂ' ಸಿನಿಮಾದ ಕಥೆಯಲ್ಲೇನಿದೆ?
ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಬಿಡುಗಡೆಯಾದ 'ಸೀತಾರಾಮಂ' ಚಿತ್ರದಲ್ಲಿ 1964ರಿಂದ 90ರ ದಶಕದ ಕಥೆಯಿದೆ. ಇಲ್ಲಿ ಅನಾಥನಾಗಿರುವ ಲೆಫ್ಪಿನೆಂಟ್ ರಾಮ್‌ನ್ನು ರಾಜಮನೆತನದ ರಾಣಿ ನೂರ್ ಜಹಾನ್ ಪ್ರೀತಿಸುತ್ತಾಳೆ. ಆದರೆ ರಾಮನಿಗೆ ಆಕೆ ರಾಜಕುಮಾರಿಯೆಂದು (Princess) ತಿಳಿದಿರುವುದಿಲ್ಲ. ಬದಲಿಗೆ ಆಕೆಯನ್ನು ಅರಮನೆಯ ಡ್ಯಾನ್ಸರ್ ಸೀತಾ ಮಹಾಲಕ್ಷ್ಮಿ ಎಂದಷ್ಟೇ ತಿಳಿದಿರುತ್ತಾನೆ. ತನ್ನ ಪ್ರೀತಿಯನ್ನು ತಿಳಿಸಿ ರಾಮ್, ಗಡಿ (Border) ಕಾಯಲು ತೆರಳುತ್ತಾನೆ. ಇತ್ತ ಅರಮನೆಯಲ್ಲಿ ರಾಜಕುಮಾರಿಗೆ ಮತ್ತೊಂದು ದೇಶದ ರಾಜಕುಮಾರನ ಜೊತೆ ಮದುವೆ (Marriage) ಮಾಡಲು ಸಿದ್ಧತೆ ನಡೆಯುತ್ತದೆ.
ಹಿಂದೂ- ಮುಸ್ಲಿಂ ಪ್ರೇಮ್ ಕಹಾನಿ: ಪ್ರಿಯಕರನ ಬಿಟ್ಟು ಸ್ನೇಹಿತೆ ಪತಿಯನ್ನೇ ಮದ್ವೆಯಾದ ಮಲೈಕಾ ಅರೋರಾ ತಂಗಿ!
ಆದರೆ ಈ ಸಂದರ್ಭದಲ್ಲಿ ರಾಜಕುಮಾರಿ, ನನಗೆ ಈ ಮದುವೆ ಒಪ್ಪಿಗೆಯಿಲ್ಲವೆಂದು ತಾನು ಸಾಮಾನ್ಯ ವ್ಯಕ್ತಿಯೊಬ್ಬನನ್ನು ಪ್ರೀತಿ (Love)ಸುತ್ತಿರುವುದಾಗಿ ತಿಳಿಸುತ್ತಾಳೆ. ಆಗ ಆಕೆಯ ಸಹೋದರರು ಆ ರೀತಿ ಮಾಡಿದ್ದೇ ಆದಲ್ಲಿ ಆಕೆ ರಾಜಕುಮಾರಿ ಎಂಬ ಪಟ್ಟವನ್ನು ಕಳೆದುಕೊಳ್ಳಬೇಕಾಗುತ್ತದೆ, ಜನಸಾಮಾನ್ಯಳಂತೆ ಜೀವನ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ. ನನಗೆ ಅರಮನೆಗಿಂತ ಪ್ರೀತಿಯೇ ದೊಡ್ಡದು ಎಂದು ರಾಜಕುಮಾರಿ ಎಲ್ಲಾ ಸಂಪತ್ತನ್ನು ತೊರೆದು ರಾಮ್‌ಗಾಗಿ ಬರುತ್ತಾಳೆ. ಇಬ್ಬರ ಪ್ರೀತಿ ಸುಖಾಂತ್ಯವಾಗುವುದಿಲ್ಲ ಎಂಬುದು ಬೇರೆ ಕಥೆ. ಆದರೆ ಇಲ್ಲಿ, ರಾಜಕುಮಾರಿಯೊಬ್ಬಳು ತನ್ನ ಪ್ರೀತಿಗಾಗಿ ಹೇಗೆ ಎಲ್ಲವನ್ನೂ ತೊರೆದು ಬರುತ್ತಾಳೆ ಎಂಬುದನ್ನು ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ.
ಪ್ರೀತಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ನೂರ್ ಅಥವಾ ಸೀತಾ ಮಹಾಲಕ್ಷ್ಮಿಯ ಪಾತ್ರವನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ರಾಮನಿಗಾಗಿ ಆಕೆಯ ಪ್ರೀತಿ, ತ್ಯಾಗ ಎಲ್ಲವೂ ಕಣ್ತುಂಬಿಕೊಳ್ಳುವಂತೆ ಮಾಡುತ್ತದೆ. ಇದು ರೀಲ್‌ನಲ್ಲಿ ಸೀತಾರಾಮಂ ಕಥೆಯಾಯಿತು. ಆದರೆ ನಿಜವಾಗಿಯೂ ಇಂಥಹದ್ದೇ ಘಟನೆಯೊಂದು ಜಪಾನ್‌ನಲ್ಲಿ ನಡೆದಿದೆ.
ತಂದೆಯ ಸ್ನೇಹಿತನ ಮಗಳನ್ನೇ ವರಿಸಿದ್ದ ಗೌತಮ್ ಗಂಭೀರ್, ಮದುವೆಗೆ ಈ ಕಂಡೀಷನ್ ಹಾಕಿದ್ರಂತೆ!
ಪ್ರೀತಿಗಾಗಿ ರಾಜಕುಮಾರಿ ಪಟ್ಟ ತೊರೆದ ಮಾಕೊ
ನಂಬೋಕೆ ಅಚ್ಚರಿಯೆನಿಸಿದರೂ ಇದು ನಿಜ. ಜಪಾನ್‌ನ ರಾಜಕುಮಾರಿ ಮಾಕೊ ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಲು ರಾಜಕುಮಾರಿ ಪಟ್ಟವನ್ನು ತೊರೆದು ಬಂದಳು. ಜಪಾನಿನ ರಾಜಕುಮಾರಿಯಾಗಿದ್ದ ಮಾಕೊ 2017ರಲ್ಲಿ ತಾನು ತನ್ನ ಮಾಜಿ ಸಹಪಾಠಿ ಕೀ ಕೊಮುರೊ ಅವರನ್ನು ಪ್ರೀತಿಸುತ್ತಿರುವುದಾಗಿ ಘೋಷಿಸಿದಳು. ಇಬ್ಬರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಾಗಿದ್ದಾಗ ಐದು ವರ್ಷಗಳ ಹಿಂದೆ ಭೇಟಿಯಾಗಿದ್ದು, ಶೀಘ್ರದಲ್ಲೇ ಮದುವೆಯಾಗುವುದಾಗಿ ಹೇಳಿಕೊಂಡರು. ಆ ಸಂದರ್ಭದಲ್ಲಿ ರಾಜಕುಮಾರಿಯ ಈ ನಿರ್ಧಾರ (Decision)ದಿಂದ ಜಪಾನ್‌ನ ಪ್ರಜೆಗಳು ದುಃಖಿತರಾಗಿದ್ದರು.
ರಾಜಪರಂಪರೆಯ ರಾಜಕುಮಾರಿ ಸಾಮಾನ್ಯನ್ನು ಮದುವೆಯಾಗುವುದರಿಂದ ಆಕೆ ಸಹ ಸಾಮಾನ್ಯ ಪ್ರಜೆಯಾಗುತ್ತಾಳೆ, ಏಕೆಂದರೆ ಮಹಿಳಾ ಸಾಮ್ರಾಜ್ಯಶಾಹಿ ಕುಟುಂಬದ ಸದಸ್ಯರು ಸಾಮಾನ್ಯರನ್ನು ಮದುವೆಯಾದ ನಂತರ ತಮ್ಮ ರಾಜ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಹೀಗಿದ್ದೂ ಪ್ರೀತಿಗಾಗಿ ರಾಜಕುಮಾರಿ ಮಾಕೊ ತನ್ನ ರಾಜ್ಯಭಾರವನ್ನ ತೊರೆದರು. ಆ ನಂತರದ ವರ್ಷಗಳಲ್ಲಿ ದಂಪತಿ (Couple) ಮದುವೆಯಾದವರು ಮತ್ತು ಇಬ್ಬರೂ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ.
ಒಂದು ಕಾಲದಲ್ಲಿ ಭವ್ಯವಾಗಿ ಬಾಳಿ ಬದುಕಿದ್ದ, ಐಷಾರಾಮಿ ಕಾರುಗಳಲ್ಲಿ ಓಡಾಡುತ್ತಿದ್ದ ರಾಜಕುಮಾರಿ ಈಗ ಇಲ್ಲಿನ ಬೀದಿಗಳಲ್ಲಿ ಕಾಲ್ನಡಿಗೆಯಲ್ಲಿ ಬಂದು ತರಕಾರಿ, ಹಣ್ಣು ಕೊಳ್ಳಲು ಬರುವುದನ್ನು ಇಲ್ಲಿನ ಜನರು ನೋಡುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ರಾಜಕುಮಾರಿಯ ಸಾಮಾನ್ಯ ಜೀವನದ ಚಿತ್ರಣ ವೈರಲ್ ಆಗಿದ್ದು, ನೆಟ್ಟಿಗರು ಈಕೆಯೇ ರಿಯಲ್ ಕ್ವೀನ್ ಎಂದು ಕೊಂಡಾಡುತ್ತಿದ್ದಾರೆ.