ಮಗಳಿಗೆ ಚಂದ ಮಾಮನ ತೋರಿಸ್ತಿರೋ ಪ್ರಿಯಾಂಕಾ- ಸೋ ಕ್ಯೂಟ್​ ಎಂದ ಫ್ಯಾನ್ಸ್

Published : Aug 03, 2023, 11:50 AM IST
ಮಗಳಿಗೆ ಚಂದ ಮಾಮನ ತೋರಿಸ್ತಿರೋ ಪ್ರಿಯಾಂಕಾ- ಸೋ ಕ್ಯೂಟ್​ ಎಂದ ಫ್ಯಾನ್ಸ್

ಸಾರಾಂಶ

ಲಂಡನ್​ನಲ್ಲಿರೋ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳಿಗೆ ಚಂದ್ರನ ದರ್ಶನ ಮಾಡಿಸ್ತಿರೋ ಫೋಟೋ ವೈರಲ್​ ಆಗಿದ್ದು, ಮೆಚ್ಚುಗೆಗಳ ಮಹಾಪೂರ ಹರಿದು ಬಂದಿದೆ.   

ಚಿಕ್ಕ ಮಕ್ಕಳಿಗೂ ಚಂದಿರನಿಗೂ ಅದೇನೋ ಅವಿನಾಭಾವ ಸಂಬಂಧ. ಎಷ್ಟೇ ಹಠ ಮಾಡುವ ಪುಟಾಣಿಗಳಿಗೂ ಚಂದ್ರನ ದರ್ಶನ ಅದರಲ್ಲಿಯೂ ಹುಣ್ಣಿಗೆ ಚಂದ್ರನ ದರ್ಶನ ಮಾಡಿಸಿದರೆ ಸ್ವಲ್ಪ ವೇಳೆಯಾದರೂ ಹಠ, ಅಳು ನಿಲ್ಲಿಸಿ ನಗುವುದು ಉಂಟು. ಅನಾದಿ ಕಾಲದಿಂದಲೂ ಅಮ್ಮಂದಿರು ಮಕ್ಕಳಿಗೆ ಊಟ ಮಾಡಿಸುವಾಗ ಚಂದ್ರನನ್ನು ತೋರಿಸುವುದು ಉಂಟು. ಚಂದ್ರನ ದರ್ಶನ ಮಾಡುತ್ತಾ ಮಕ್ಕಳು ತಮ್ಮನ್ನು ತಾವೇ ಮರೆತು ಊಟದ ತುತ್ತನ್ನು ಬಾಯಿಗೆ ಇಡುತ್ತಾರೆ. ಈ ಭಾಗ್ಯ ಬಹುತೇಕ ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಹುಟ್ಟಿ ಬೆಳೆಯುವ ಮಕ್ಕಳಿಗೆ ಇಲ್ಲ ಎನ್ನಿ. ಕತ್ತೆತ್ತಿ ನೋಡಿದರೆ ಗಗನಚುಂಬಿ ಕಟ್ಟಡಗಳೇ ಕಾಣುವ ನಗರ ಪ್ರದೇಶಗಳಲ್ಲಿ ಆಕಾಶವೇ ಕಾಣದ ಸ್ಥಿತಿ ಇದೆ, ಇನ್ನೆಲ್ಲಿಯ ಚಂದಿರ? ಆದರೆ ಹಳ್ಳಿಗಳಲ್ಲಿ,  ಕೆಲವು ಪಟ್ಟಣಗಳಲ್ಲಿ ಹಾಗೂ ಕೆಲವೇ ಕೆಲವು ಅದೃಷ್ಟವಂತರಿಗೆ ಚಂದ್ರನ ದರ್ಶನ ಆಗುವುದು ಉಂಟು.  ಇಂಥ ಸಂದರ್ಭಗಳೆಲ್ಲಿ ಬಹುತೇಕ ಎಲ್ಲ ಅಮ್ಮಂದಿರೂ ಒಂದಿಲ್ಲೊಂದು ವೇಳೆ ಪುಟಾಣಿ ಕಂದಮ್ಮಗಳಿಗೆ ಚಂದ್ರನ ದರ್ಶನ ಮಾಡಿಸುವುದು ಉಂಟು. 

ಅಮ್ಮ ಎಂದಿಗೂ ಅಮ್ಮನೇ. ಆಕೆ ತುತ್ತು ಅನ್ನಕ್ಕೆ ಪರದಾಡುತ್ತಿರುವ ಅಮ್ಮನೇ ಇರಬಹುದು ಇಲ್ಲವೇ ಸಕಲ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಿರುವ ಶ್ರೀಮಂತ ಅಮ್ಮನೇ ಇರಬಹುದು. ತಮ್ಮ ಮಕ್ಕಳ ವಿಷಯಕ್ಕೆ ಬಂದಾಗ ಆಕೆ ಕೇವಲ ಅಮ್ಮ ಅಷ್ಟೇ. ಇಷ್ಟೆಲ್ಲಾ ಹೇಳಲು ಕಾರಣವೇನೆಂದರೆ, ಈಗ ವೈರಲ್​ ಆಗಿರುವ ಒಂದು ಫೋಟೋ. ಈ ಫೋಟೋದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮಗಳು ಮಾಲ್ತಿ ಮೇರಿಯನ್ನು ಕಂಕುಳಲ್ಲಿ ಇಟ್ಟುಕೊಂಡು ಪೂರ್ಣ ಚಂದ್ರನ ದರ್ಶನ ಮಾಡಿಸ್ತಿದ್ದಾರೆ. ಒಂದು ಚಿತ್ರದಲ್ಲಿ ಪುಟಾಣಿ, ಆಗಸದ ಕಡೆಗೆ ಬೆರಳು ಮಾಡಿ ತೋರಿಸುತ್ತಿದ್ದರೆ, ಇನ್ನೊಂದರಲ್ಲಿ ಚಂದ್ರನ ನೋಡುತ್ತಿದ್ದಾಳೆ. ಈ ಫೋಟೋ ಕ್ಲಿಕ್ಕಿಸಿರುವುದು ಲಂಡನ್​ನಲ್ಲಿ. ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಲಂಡನ್​ನಲ್ಲಿದ್ದು, ಅಲ್ಲಿ ಮಗಳಿಗೆ ಪೂರ್ಣ ಚಂದ್ರನ (Super Moon) ತೋರಿಸ್ತಿರೋ ದೃಶ್ಯ ವೈರಲ್​ ಆಗಿದೆ. 

5 ವರ್ಷ ಅಪ್ಪ-ಅಮ್ಮ ನೋಡಲು ಬರ್ಲೇ ಇಲ್ಲ: ಬಾಲ್ಯದ ಕಹಿ ನೆನಪು ಹೇಳಿದ ಪ್ರಿಯಾಂಕಾ

ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬಂದಿವೆ. ಹಲವರು ಸೂಪರ್​ ಮೂನ್​ ಅಲ್ಲ, ಸೂಪರ್​ ಮಾಮ್​ ಎಂದಿದ್ದಾರೆ. ಕಮೆಂಟ್​ ಬಾಕ್ಸ್​ ಹಾರ್ಟ್​ ಇಮೋಜಿಗಳಿಂದ ತುಂಬಿ ಹೋಗಿದೆ. ಇನ್ನು ಕೆಲವರು ಟ್ರೋಲ್​ ಕೂಡ ಮಾಡಿದ್ದು, ಪ್ರಿಯಾಂಕಾರಿಗೆ ಮಗುವನ್ನು ಸರಿಯಾಗಿ ಎತ್ತಿಕೊಳ್ಳಲು ಬರುವುದಿಲ್ಲ ಎಂದಿದ್ದರೆ, ಇನ್ನು ಕೆಲವರು ಆಕೆಯ ಮೈ ಬಣ್ಣಕ್ಕೂ ಟೀಕಿಸಿದ್ದಾರೆ. ಮತ್ತೆ ಕೆಲವರು ಈ ಮಗುವೇನು ಈಕೆ ಹೆತ್ತಿದ್ದಲ್ಲ ಎಂದೂ ಹೇಳಿದ್ದಾರೆ. ಟೀಕೆಗಳು ಏನೇ ಇದ್ದರೂ ಈ ಅಮ್ಮ-ಮಗುವಿನ ಜೋಡಿಗೆ ಶುಭಾಶಯಗಳ ಸುರಿಮಳೆಯೇ ಆಗಿದೆ. ಅಮ್ಮ ಎಂದಿಗೂ ಅಮ್ಮನೇ, ಆಕೆ ಸೆಲೆಬ್ರಿಟಿಯಾದರೂ ಅಮ್ಮನೇ ಎಂದು ಹಲವರು ಹೇಳುತ್ತಿದ್ದಾರೆ. 

ಅಂದಹಾಗೆ, ಸದ್ಯ ಬಾಲಿವುಡ್​ಗೆ ಬೈ ಬೈ ಹೇಳಿರುವ ಪ್ರಿಯಾಂಕಾ ಹಾಲಿವುಡ್​ನಲ್ಲಿ ಭವಿಷ್ಯ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ. ಸಿಟಾಡೆಲ್​ ವೆಬ್​ ಸೀರಿಸ್​ನ ಮೇಲೆ ನಟಿ ಭಾರಿ ಹೋಪ್ಸ್​ ಇಟ್ಟುಕೊಂಡಿದ್ದರು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಜನರ ಮೆಚ್ಚುಗೆ ಗಳಿಸಲು ವಿಫಲವಾಗಿದೆ. ನಿಕ್​ ಜೋನಸ್​ ಅವರನ್ನು ಮದುವೆಯಾಗಿರೋ, ಪ್ರಿಯಾಂಕಾ ಚೋಪ್ರಾ, ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ (Malti Marie)  ಮಗಳನ್ನು ಪಡೆದಿದ್ದಾರೆ.   ತಮಿಳು ಸಿನಿಮಾ ತಮಿಳನ್ (2002)ರ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ, 2000ದಲ್ಲಿ ವಿಶ್ವಸುಂದರಿ ಕಿರೀಟ ಮುಡಿಗೇರಿಸಿಕೊಂಡ ಬಳಿಕ ಸಿನಿಮಾ ಅವಕಾಶವನ್ನು ಪಡೆದರು. ಬಾಲಿವುಡ್​ನಲ್ಲಿ ಹೀರೋ: ಲವ್ ಸ್ಟೋರಿ ಆಫ್ ಎ ಸ್ಪೈ ಎಂಬ ಸಿನಿಮಾದ (2003) ಮೂಲಕ ಸಿನಿಮಾ ಜರ್ನಿಯನ್ನು ಶುರು ಮಾಡಿದರು. ಸದ್ಯ ಹಾಲಿವುಡ್​ನಲ್ಲಿ ಬಿಜಿಯಾಗಿದ್ದು, ಮಗಳ ಜೊತೆ ಎಂಜಾಯ್​ ಮಾಡುತ್ತಿದ್ದಾರೆ. 

ಅಮೆಜಾನ್​ಗೆ ಬಿಗ್​ಶಾಕ್​ ನೀಡಿದ ಪ್ರಿಯಾಂಕಾ ಚೋಪ್ರಾ! ಸಮಂತಾಗೂ ಶುರುವಾಯ್ತು ಸಂಕಟ
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?