Weird Love Story : ದೆವ್ವವನ್ನು ಮದುವೆಯಾಗ್ತಾಳಂತೆ ಈಕೆ, ವಿವಾಹದ ದಿನಾಂಕ ವಿಷಯಕ್ಕೆ ಜಗಳವಾಗ್ತಿದೆಯಂತೆ!

By Suvarna News  |  First Published Feb 14, 2022, 2:39 PM IST

ಪಾಪ, ಮದುವೆಯಾಗೋಕೆ ನಮ್ಮಲ್ಲಿ ಹೆಣ್ಮಕ್ಕಳಿಲ್ಲ ಅಂತಾ ಗಂಡು ಹೈಕಳು ಗೊಣಗ್ತಿರುವಾಗ, ಮನುಷ್ಯರನ್ನ ಬಿಟ್ಟು ದೆವ್ವದ ಜೊತೆ ಲವ್ ಶುರು ಮಾಡಿದಾಳೆ ಈ ಹುಡುಗಿ. ಕಾಣದಿರೋ ಭೂತದ ಜೊತೆ ಮದುವೆ ಕೂಡ ಆಗ್ತಾಳಂತೆ.
 


ದೇವರು (God) ಮತ್ತು ದೆವ್ವ (Devil)ದ ಬಗ್ಗೆ ಸದಾ ಚರ್ಚೆಗಳು ನಡೆಯುತ್ತಿರುತ್ತವೆ. ದೇವರಿದ್ಮೇಲೆ ದೆವ್ವವೂ ಇದೆ ಎನ್ನುವವರು ಅನೇಕರಿದ್ದಾರೆ. ಆದ್ರೆ ಭೂತದ ಹೆಸರು ಕೇಳಿದ್ರೆ ಬಿಚ್ಚಿ ಬೀಳುವ ಜನರಿದ್ದಾರೆ. ಕೆಲವರು ನಾವು ದೆವ್ವ ನೋಡಿದ್ದೇವೆ ಎಂಬ ವಾದ ಕೂಡ ಮಾಡ್ತಾರೆ. ಆದ್ರೆ ಅದನ್ನು ತೋರಿಸಲು ಅವರ ಬಳಿ ಸಾಕ್ಷ್ಯವಿಲ್ಲ. ಅದೇನೇ ಇರಲಿ. ಇತ್ತೀಚಿನ ದಿನಗಳಲ್ಲಿ ಮನುಷ್ಯರಿಗಿಂತ ಬೇರೆ ಪ್ರಾಣಿ (Animal)ಗಳು ಮತ್ತು ಗೊಂಬೆ (Doll)ಗಳನ್ನು ಮದುವೆ (Marriage)ಯಾಗುವ ಅನೇಕ ಜನರನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಮಹಿಳೆ ದೆವ್ವದ ಜೊತೆ ಮದುವೆಯಾಗಲು ನಿರ್ಧರಿಸಿದ್ದಾಳೆ. ಹೌದು ಇದು ನಿಜ. ಭೂತದ ಜೊತೆ ಮದುವೆಗೆ ಸಿದ್ಧವಾಗಿರುವ ಮಹಿಳೆ ಅನೇಕ ಕುತೂಹಲಕಾರಿ ವಿಷ್ಯಗಳನ್ನು ಜನರ ಮುಂದಿಟ್ಟಿದ್ದಾಳೆ. 

ಪ್ರೀತಿಯ ಭೂತ : ಇಂಗ್ಲೆಂಡ್‌ನ ಆಕ್ಸ್ ಫರ್ಡ್‌ಶೈರ್‌ನಲ್ಲಿ ವಾಸಿಸುವ ಬ್ರೋಕಾರ್ಡ್ ಎಂಬ ಮಹಿಳೆ ಭೂತವೊಂದನ್ನು ಪ್ರೀತಿಸುತ್ತಾಳಂತೆ. ಆಕೆ ಪ್ರೀತಿಸುತ್ತಿರುವ ಭೂತದ ಹೆಸರು ಎಡ್ವರ್ಡೊ. ಎಡ್ವರ್ಡೊ ಭೂತದ ಜೊತೆ ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದೇನೆಂದು ಬ್ರೋಕಾರ್ಡ್ ಹೇಳಿದ್ದಾಳೆ.  

Tap to resize

Latest Videos

undefined

Aerobics ಗರ್ಭಿಣಿಯರ ಹೈಪೋಥೈರಾಯ್ಜಿಸಮ್‌ಗೆ ಆಗುತ್ತೆ ಮದ್ದು

ವಿಕ್ಟೋರಿಯನ್ ಯುಗದ ಸೈನಿಕ ಭೂತದ ಮೇಲೆ ಪ್ರೀತಿ : 38 ವರ್ಷದ ಬ್ರೋಕಾರ್ಡ್ ಮದುವೆಯಾಗಲಿರುವ ಪ್ರೇತ ವಿಕ್ಟೋರಿಯನ್ ಸೈನಿಕ. ಮಹಿಳೆ ಬ್ರೋಕಾರ್ಡ್ ಗಾಯಕಿ. ಅವಳು ಎಡ್ವರ್ಡೊನ ಪ್ರೇತವನ್ನು ಆಳವಾಗಿ ಪ್ರೀತಿಸುತ್ತಿದ್ದಾಳಂತೆ. ಎಡ್ವರ್ಡೊ ಅಂದರೆ ದೆವ್ವ ಕೂಡ ಈಕೆಯನ್ನು  ಪ್ರೀತಿಸುತ್ತಾನಂತೆ.  

ಮದುವೆಯ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ : ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದೇವೆ ಎಂದು ಮಹಿಳೆ ಹೇಳಿದ್ದಾಳೆ. ಆದ್ರೆ ಮದುವೆಯ ದಿನಾಂಕವನ್ನೂ ಇನ್ನೂ ಫಿಕ್ಸ್ ಮಾಡಿಲ್ಲವಂತೆ . ಮಹಿಳೆಗೆ ಬೇಸಿಗೆ ಇಷ್ಟವಂತೆ. ಆದರೆ ಅವಳ ಪ್ರೇಮಿಗೆ ಚಳಿಗಾಲ ಇಷ್ಟವಂತೆ. ಮಹಿಳೆ ಬೇಸಿಗೆಯಲ್ಲಿ ನಾನು ಮದುವೆಯಾಗಲು ಬಯಸುತ್ತಿದ್ದೇನೆ ಎಂದಿದ್ದಾಳೆ. ಎಡ್ವರ್ಡೋ ದೆವ್ವಕ್ಕೆ ಬೇಸಿಗೆ ಇಷ್ಟವಿಲ್ಲ. ಆತನನ್ನು ಒಪ್ಪಿಸಬೇಕೆಂದು ಮಹಿಳೆ ಹೇಳಿದ್ದಾಳೆ.

ವಿಚಿತ್ರವಾಗಿದೆ ಅವರು ಮಾತನಾಡುವ ವಿಧಾನ : ದೆವ್ವದ ಜೊತೆ ಹೇಗೆ ಮಾತನಾಡ್ತಾಳೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುವುದು ಸಹಜ. ಇದಕ್ಕೂ ಮಹಿಳೆ ಉತ್ತರ ನೀಡಿದ್ದಾಳೆ. ಈ ದೆವ್ವ ಮತ್ತು ಆಕೆ ಪರಸ್ಪರ ಮಾತನಾಡಿಕೊಳ್ಳುವ ರೀತಿ ತುಂಬಾ ವಿಚಿತ್ರವಾಗಿದೆ. ಎಡ್ವರ್ಡೊ ರಹಸ್ಯ ಮಾರ್ಗಗಳನ್ನು ಬಳಸಿಕೊಂಡು ಮಹಿಳೆಗೆ ಸಂದೇಶವನ್ನು ಕಳುಹಿಸುತ್ತಾನೆ.  ಸ್ನಾನ ಮಾಡುವಾಗ ಬಿಸಿನೀರಿನ ಹಬೆಯಲ್ಲಿ ಎಡ್ವರ್ಡೊ ಸಂದೇಶ ಬರೆಯುತ್ತಾನಂತೆ. ಅದಕ್ಕೆ ಮಹಿಳೆ ಅಲ್ಲಿಯೇ ಉತ್ತರ ನೀಡುತ್ತಾಳಂತೆ. ಇದಲ್ಲದೆ ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಬೀಳಿಸುವ ಮೂಲಕ ತನ್ನ ಉಪಸ್ಥಿತಿಯನ್ನು ಆತ ತೋರಿಸುತ್ತಾನಂತೆ. ನಂತ್ರ ಪಾತ್ರೆಗಳ ಶಬ್ಧದ ಮೂಲಕವೇ ಇಬ್ಬರ ಮಾತುಕತೆ ನಡೆಯುತ್ತದೆಯಂತೆ.  

ದೆವ್ವದಿಂದ ಹೀಗೆ ಬಂದಿತ್ತು ಪ್ರೇಮ ನಿವೇದನೆ : ಕಳೆದ ವರ್ಷ ಮಹಿಳೆಗೆ ದೆವ್ವ ಪ್ರೇಮ ನಿವೇದನೆ ಮಾಡಿತ್ತಂತೆ. ಮಹಿಳೆಯ ದಿಂಬಿನ ಬಳಿ ಉಂಗುರವನ್ನು ಇರಿಸುವ ಮೂಲಕ ದೆವ್ವ ಪ್ರೀತಿಯನ್ನು ಪ್ರಸ್ತಾಪಿಸಿತ್ತು ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ತನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದೀಯಾ ಎಂದು ಉಗಿಯಲ್ಲಿ ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಿತ್ತಂತೆ. ಅದಕ್ಕೆ ಯಸ್ ಎನ್ನುವ ಮೂಲಕ ಮಹಿಳೆ ಪ್ರೀತಿಗೆ ಒಪ್ಪಿಗೆ ನೀಡಿದಳಂತೆ

Sex Life : ಮಹಿಳೆಯರ ಹಸ್ತಮೈಥುನ ಕುರಿತ ಸೀಕ್ರೆಟ್ಸ್ ಇಲ್ಲಿವೆ

ಈ ದೆವ್ವಗಳಿಗೂ ಹೋಗಲಿದೆ ಮದುವೆಗೆ ಆಹ್ವಾನ :  ಇಬ್ಬರೂ ಅದ್ಧೂರಿಯಾಗಿ ಮದುವೆಯಾಗಲು ನಿರ್ಧರಿಸಿದ್ದಾರೆ. ವಿಶೇಷವೆಂದ್ರೆ ಇವರಿಬ್ಬರ ಮದುವೆಗೆ ಮನುಷ್ಯರು ಮಾತ್ರವಲ್ಲ ದೆವ್ವಗಳಿಗೂ ಆಹ್ವಾನ ಹೋಗಲಿದೆ. ಮದುವೆಗೆ ದಿವಂಗತ ನಟಿ ಮರ್ಲಿನ್ ಮನ್ರೋ ಮತ್ತು ಪ್ರಪಂಚದ ಪ್ರಸಿದ್ಧ ನಾಟಕಕಾರ ವಿಲಿಯಂ ಷೇಕ್ಸ್‌ಪಿಯರ್ ದೆವ್ವವನ್ನು ಆಹ್ವಾನಿಸಲು ಬಯಸುತ್ತಿದ್ದೇನೆಂದು ಮಹಿಳೆ ಹೇಳಿದ್ದಾಳೆ. ದೆವ್ವದ ಮದುವೆ ನೋಡುವ ಧೈರ್ಯ ನಿಮಗಿದ್ದರೆ ನೀವೂ ಒಮ್ಮೆ ಹೋಗಿ ಬನ್ನಿ. 

click me!