ಹಸಿರು ಸಸ್ಯಗಳು ಮಿದುಳಿಗೆ ಶಾಂತಿಯನ್ನು ನೀಡುತ್ತವೆ. ಮನೆಯೊಳಗೆ ಬೆಳೆದುಕೊಳ್ಳುವಂತಹ ಸಸ್ಯಗಳಿಂದಲೂ ಈ ಸುಖ, ನೆಮ್ಮದಿ ಲಭ್ಯವಾಗುತ್ತದೆ. ಬಹಳಷ್ಟು ಸಸ್ಯಗಳು ಹೆಚ್ಚು ಆಮ್ಲಜನಕವನ್ನೂ ಹೊರಸೂಸುತ್ತವೆ. ಹೀಗಾಗಿ, ಸಾಧ್ಯವಾದಷ್ಟು ಹಸಿರು ಸಸ್ಯಗಳು ಮನೆಯನ್ನು ಕಂಗೊಳಿಸುವಂತೆ ಮಾಡಿ.
ಕಣ್ಣು ಹಾಯಿಸಿದಾಗ ಹಸಿರು (Green) ಕಂಡರೆ ಮನಸ್ಸು ಅದೆಷ್ಟೋ ಹಗುರ(Relax)ವೆನಿಸುತ್ತದೆ. ವೈಜ್ಞಾನಿಕವಾಗಿಯೂ ಇದು ಸಾಬೀತಾಗಿರುವ ಸತ್ಯ. ಹಸಿರು ವಾತಾವರಣ ಮಿದುಳಿಗೆ ತಂಪನ್ನೀಯುತ್ತದೆ, ಶಾಂತಿ (Peace) ನೀಡುತ್ತದೆ. ಆದರೆ, ನಗರವಾಸಿಗಳು ಹಸಿರಿಗಾಗಿ ಎಲ್ಲಿ ಹೋಗಬೇಕು? ಎಲ್ಲಿಯೂ ಹೋಗಬೇಕಾಗಿಲ್ಲ. ಬದಲಿಗೆ, ಮೈಮನಸ್ಸುಗಳು ಕೂಲಾಗಿರಲೆಂದು ಮನೆಯೊಳಗೇ ಹಸಿರು ಸಸ್ಯಗಳನ್ನು ಬೆಳೆಸಿಕೊಂಡು ಹಾಯಾಗಿರಬಹುದು.
ಒಳಾಂಗಣ ಸಸ್ಯ(Indoor Plants)ಗಳನ್ನು ಬೆಳೆಸುವುದು ಕೇವಲ ಮೇಲ್ವರ್ಗದವರ ಹವ್ಯಾಸ ಎನ್ನುವ ಭ್ರಮೆ ಅದೆಷ್ಟೋ ಜನರಲ್ಲಿದೆ. ಹಾಗೆಲ್ಲ ಅಂದುಕೊಳ್ಳಬೇಕಾಗಿಲ್ಲ. ಇರುವ ಜಾಗದಲ್ಲೇ ನೀಟಾಗಿ ವ್ಯವಸ್ಥೆ ಮಾಡಿಕೊಂಡರೆ ಮಧ್ಯಮವರ್ಗದವರು ಸಹ ಮನೆಯೊಳಗೆ ಹಸಿರು ಸಸ್ಯಗಳನ್ನು ಬೆಳೆಸಿ ನಲಿಯಬಹುದು. ಅದಕ್ಕಾಗಿ ಕೆಲವು ಮಾರ್ಗಗಳನ್ನು ಅನುಸರಿಸಬಹುದು.
• ಪ್ಲಾಂಟ್ ಶೆಲ್ಫ್ (Plant Shelf)ಗಳಿಗೆ ಮೊರೆ ಹೋಗಿ
ನಾವು ಸಾಮಾನ್ಯವಾಗಿ ಮನೆಯ ಗೋಡೆಗಳಿಗೆ ಟಿವಿ ಅಥವಾ ಪುಸ್ತಕಗಳನ್ನು ಇಡಲು ರ್ಯಾಕ್ ಗಳನ್ನು ಅಳವಡಿಸುತ್ತೇವೆ. ಹಾಗೆಯೇ ಸಸ್ಯಗಳನ್ನು ಇಡಲೆಂದು ಶೆಲ್ಫ್ ಕೂಡ ಸಿಗುತ್ತದೆ. ನಿಮ್ಮ ಮನೆಯ ಅಳತೆ (Space), ವಿನ್ಯಾಸ (Design), ಪೇಂಟ್ ಬಣ್ಣಗಳಿಗೆ ಹೋಲಿಕೆಯಾಗುವಂತಹ ಶೆಲ್ಫ್ ಗಳನ್ನು ಖರೀದಿ ಮಾಡಿ, ಒಳಾಂಗಣ ಸಸ್ಯಗಳನ್ನು ಬೆಳೆಸಿಕೊಳ್ಳಬಹುದು. ಅಲ್ಲಲ್ಲಿ ಅವುಗಳನ್ನು ಇರಿಸಿಕೊಳ್ಳುವುದರಿಂದ ಮನೆಯ ನೋಟ ಹಸಿರಾಗಿ ಕಂಗೊಳಿಸುತ್ತದೆ. ಅಷ್ಟೇ ಅಲ್ಲ, ಮನೆಯೊಳಗೆ ಹೆಚ್ಚಿನ ಆಮ್ಲಜನಕ (Oxygen) ಸಿಗುವಂತಾಗುತ್ತದೆ.
ನಿಮಗೆ ಗೊತ್ತೇ? ಅರೇಕಾ ಪಾಮ್ (Areca Palm),ಪೀಸ್ ಲಿಲಿ, ಸ್ನೇಕ್ ಪ್ಲಾಂಟ್, ಆರ್ಕಿಡ್, ಸ್ಪೈಡರ್, ಕ್ರಿಸ್ ಮಸ್ ಕ್ಯಾಕ್ಟಸ್ ಸೇರಿದಂತೆ ಹಲವು ಸಸ್ಯಗಳು ಹೆಚ್ಚು ಆಮ್ಲಜನಕವನ್ನೂ ಸೂಸುತ್ತವೆ. ವಾಯುಮಾಲಿನ್ಯ(Air Pollution)ದಿಂದ ಬೇಸತ್ತಿರುವವರು ಈ ಸಸ್ಯಗಳನ್ನು ಮನೆಯೊಳಗೆ ಬೆಳೆಸಿಕೊಂಡು ನೆಮ್ಮದಿಯಿಂದಿರಬಹುದು. ಸೋಫಾ (Sofa) ಪಕ್ಕದಲ್ಲಿ, ಡೈನಿಂಗ್ ಹಾಲ್ ಅಕ್ಕಪಕ್ಕದಲ್ಲಿ ಸಸ್ಯಗಳನ್ನು ಇಡುವಂತಹ ಸ್ಟ್ಯಾಂಡ್ (Stand) ಗಳೂ ಲಭ್ಯವಾಗುತ್ತವೆ. ಅವುಗಳನ್ನೂ ನಿರ್ಯೋಚನೆಯಿಂದ ಬಳಕೆ ಮಾಡಬಹುದು.
Celebrity Life : ಮಾಂಸ ತ್ಯಜಿಸಿದ ವಿರುಷ್ಕಾ ಜೋಡಿ! ಮಹತ್ವದ ನಿರ್ಧಾರಕ್ಕೆ ಕಾರಣ ಇಲ್ಲಿದೆ
• ಬಳ್ಳಿಗಳು (Creepers) ಮನೆಗೆ ಸೂಕ್ತ
ಬಳ್ಳಿಗಳಿಗೆ ಹಬ್ಬಲು ಜಾಸ್ತಿ ಜಾಗ ಬೇಕಾಗುವುದಿಲ್ಲ. ಅತಿ ಚಿಕ್ಕ ಸ್ಥಳದಲ್ಲೇ ಅವು ಬೆಳೆಯಬಲ್ಲವು. ಅಲ್ಲದೆ, ಬಳ್ಳಿಗಳು ಮನೆಗೊಂದು ಅಂದನೆಯ ಲುಕ್ ಅನ್ನು ನೀಡಬಲ್ಲವು. ಕಿಚನ್ ಗಾರ್ಡನ್, ಬಾಲ್ಕನಿ ಅಥವಾ ರೂಮಿನ ಕಿಟಕಿಯ ಬಳಿಯಲ್ಲೂ ಅವುಗಳನ್ನು ಬೆಳೆಸಿಕೊಳ್ಳಬಹುದು. ಗಾಳಿ, ಬೆಳಕು ಬೀಳುವ ಕಡೆ ಅವುಗಳನ್ನಿಟ್ಟರೆ ಚೆನ್ನಾಗಿ ಬೆಳೆಯುತ್ತವೆ.
• ಹೂವಿನ ಬದಲು ಎಲೆಗಳುಳ್ಳ ಗಿಡ (Leafy)
ಮನೆಯೊಳಗೆ ಗಿಡದಿಂದ ಕಿತ್ತ ಹೂವುಗಳನ್ನು ಅಂದಕ್ಕಾಗಿ ಇರಿಸುವುದರ ಬದಲು ಎಲೆಗಳಿಂದ ಕೂಡಿದ ಗಿಡಗಳನ್ನೇ ಇಟ್ಟುಕೊಳ್ಳುವುದು ಅತ್ಯಂತ ಸೂಕ್ತ. ಆಗಾಗ ಅವುಗಳನ್ನು ಟ್ರಿಮ್ ಮಾಡಬೇಕು. ಹಳೆಯ ಎಲೆಗಳನ್ನು ತೆಗೆದುಹಾಕುತ್ತಿರಬೇಕು, ಎಲೆಗಳ ಮೇಲೆ ಧೂಳು ಕೂರಲು ಬಿಡಬಾರದು.
Long Distance Relationship: ದೂರವಿದ್ದೇ ಹತ್ತಿರ ಎನಿಸುವಂತೆ ಪ್ರೇಮಿಗಳ ದಿನ ಆಚರಿಸಿ
• ಕಳ್ಳಿಯಂತಹ ಸಸ್ಯಗಳು (Succulents)
ಕಳ್ಳಿಯಂತಹ ವಿವಿಧ ರಸಭರಿತ ಸಸ್ಯಗಳಿಂದ ಮನೆಗೆ ಅದ್ಭುತವಾದ ಗಾರ್ಜಿಯಸ್ ಲುಕ್ ಬರುತ್ತದೆ. ಬಳ್ಳಿಗಳು ಬೇಡವೆನಿಸಿದರೆ, ವಿವಿಧ ರೀತಿಯ ಕಳ್ಳಿಯಂತಹ ಒಳಾಂಗಣ ಸಸ್ಯಗಳ ಆಯ್ಕೆ ಅತ್ಯಂತ ಸೂಕ್ತ. ಅವುಗಳನ್ನು ಸೆರಾಮಿಕ್ ಪಾಟ್ (Ceramic Pot)ಗಳಲ್ಲಿ ಇಟ್ಟರೆ ಇನ್ನೂ ಚೆಂದ. ಇವುಗಳಲ್ಲಿ ಬಹಳಷ್ಟು ನಮೂನೆಯ ಸಸ್ಯಗಳು ದೊರೆಯುತ್ತದೆ. ಮನತಣಿಸುವಂತಹ ಬಣ್ಣದ ಹೂವುಗಳನ್ನು ಬಿಡುವ ಸಸ್ಯಗಳೂ ಇವೆ.
• ಮನೆಯಲ್ಲೇ ಇರಲಿ ಔಷಧೀಯ (Medicinal) ಸಸ್ಯ
ಕೆಲವು ಔಷಧೀಯ ಸಸ್ಯಗಳಿಗಾಗಿ ಹೊರಗೆ ಹೋಗಬೇಕಾದ ಅಗತ್ಯವಿಲ್ಲದಂತೆ ಮಾಡಿಕೊಳ್ಳಿ. ಬಾಲ್ಕನಿಯಲ್ಲೇ ಇಂತಹ ಹಲವು ಸಸ್ಯಗಳನ್ನು ಬೆಳೆಸಿಕೊಳ್ಳಬಹುದು. ಸಾಂಬಾರು ಅಥವಾ ದೊಡ್ಡಪತ್ರೆ ಸೊಪ್ಪು, ತುಳಸಿ, ಮಜ್ಜಿಗೆ ಹುಲ್ಲು, ಒಂದೆಲಗ ಹೀಗೆ ಸ್ಥಳೀಯವಾದ ಸಾಕಷ್ಟು ಸಸ್ಯಗಳನ್ನು ಮಾಡಿಕೊಳ್ಳಬಹುದು. ಇದೊಂದು ಅತ್ಯಂತ ಕ್ರಿಯಾಶೀಲವಾದ ಗಾರ್ಡನಿಂಗ್. ಮನೆಯಲ್ಲೇ ಅತ್ಯಂತ ಸರಳವಾಗಿ ವಿವಿಧ ಸೊಪ್ಪುಗಳನ್ನು ಬೆಳೆದುಕೊಳ್ಳುವವರೂ ಇದ್ದಾರೆ. ದಿನದ ಸ್ವಲ್ಪ ಹೊತ್ತು ಬಾಲ್ಕನಿಗೆ ಬಿಸಿಲು ಬಂದರೂ ಈ ಸಸ್ಯಗಳಿಗೆ ಸಾಕಾಗುತ್ತದೆ.