Hijab Row: ಮುಸ್ಲಿಂ ಮಹಿಳೆಯರಿಗೆ ಹಿಜಾಬ್ ಬಂದಿದ್ದಾರೂ ಎಲ್ಲಿಂದ?

By Contributor Asianet  |  First Published Feb 11, 2022, 2:43 PM IST

ಹಿಜಾಬ್ ವಿವಾದ ಈಗ ಗೊಂದಲದ ಗೂಡಾಗಿದೆ. ನ್ಯಾಯಾಲಯಕ್ಕೂ ಹೋಗಿದೆ. ಮುಸ್ಲಿಂ ಮಹಿಳೆಯರು ತೊಡುವುದು ಹಿಜಾಬ್ ಒಂದೇ ಅಲ್ಲ, ಈ ಬಗ್ಗೆ ಹೆಚ್ಚಿನವರಿಗೆ ಅರಿವಿಲ್ಲ. 
 


ಇಸ್ಲಾಂ (Islam) ಧರ್ಮ ಹುಟ್ಟಿಕೊಂಡದ್ದು ಅರಬ್ (Arab) ಪ್ರಾಂತ್ಯದಲ್ಲಿ. ಅದು ಸುಮಾರು ಕ್ರಿಸ್ತಪೂರ್ವ ೫೭೦ರ ಕಾಲದಲ್ಲಿ. ಇಲ್ಲಿಂದ ಅದು ಸಹಾರಾ (Sahara) ಪ್ರಾಂತ್ಯ, ಅದರ ಸುತ್ತಮುತ್ತಲಿನ ಭಾಗಗಳಿಗೆ ಹರಡಿತು. ನಂತರ ಮಧ್ಯ ಏಷ್ಯಾ, ಉತ್ತರ ಆಫ್ರಿಕಗಳಿಗೆ ಕಾಲಿಟ್ಟಿತು. ಭಾರತ (India) ಮುಂತಾದ ಕಡೆಗೆ ಅದು ಬಂದುದು ಎಷ್ಟೋ ತಡವಾಗಿ. ಅಲ್ಲಿಯವರೆಗೂ ಈ ಧರ್ಮ (Religion) ಅರಬ್ ದೇಶಗಳಲ್ಲಿ ಪ್ರಮುಖವಾಗಿ ಇತ್ತು. ಇಲ್ಲೆಲ್ಲ ಹೆಚ್ಚಾಗಿ ಮರುಭೂಮಿ. ಹಗಲು ಮರಳುಗಾಳಿ ಜೋರಾಗಿ ಬೀಸುತ್ತಿತ್ತು. ರಾತ್ರಿ ಸಿಕ್ಕಾಪಟ್ಟೆ ಚಳಿ ಹಾಗೂ ಗಾಳಿ. ಮರಳುಗಾಳಿ ಮತ್ತು ಚಳಿಯಿಂದ ಪಾರಾಗಲು ಅರಬ್‌ ಬುಡಕಟ್ಟುಗಳು ಮೈತುಂಬಾ, ಮುಖವನ್ನೂ ಸಹ ಮುಚ್ಚುವಂತೆ ಬಟ್ಟೆ ತೊಟ್ಟುಕೊಳ್ಳುತ್ತಿದ್ದರು. ಮುಂದೆ ಈ ಅರಬ್ ಬುಡಕಟ್ಟುಗಳನ್ನೇ ಪ್ರವಾದಿ ಮುಹಮ್ಮದರು (Prophet) ಇಸ್ಲಾಂ ಹೆಸರಿನಲ್ಲಿ ಒಂದುಗೂಡಿಸಿದರು. ಮೈತುಂಬ ಬಟ್ಟೆತೊಡುವ ಪದ್ಧತಿಯನ್ನು ಮುಂದುವರಿಸಿದರು. ಅದೇ ಪದ್ಧತಿ ಈಗಲೂ ಮುಂದುವರಿದಿದೆ. ಅರಬ್ ಮುಸ್ಲಿಮರಲ್ಲಿ ಪುರುಷರು ಸಹ ತಲೆ ಮುಚ್ಚುವ ಮೈತುಂಬ ಹೊದ್ದುಕೊಂಡಂತಹ ಬಟ್ಟೆ ಧರಿಸುವುದನ್ನು ನೀವು ನೋಡಬಹುದು. ಇದೇ ಮಹಿಳೆಯರಿಗೂ ಅನ್ವಯವಾಯಿತು. 

ಹಿಜಾಬ್ (Hijab) ಅಥವಾ ಬುರ್ಖಾ (Burkha) ಧಾರಣೆ ಕುರಿತು ಕುರಾನ್ ಏನೂ ಹೇಳುವುದಿಲ್ಲ. ಆದರೆ ನಂತರ ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಅಂತಿಮ ಎಂದು ಪರಿಗಣಿಸಲ್ಪಡುವ ಹದೀಸ್‌ಗಳು ಮಹಿಳೆಯರಿಗೆ ಸಂಪೂರ್ಣ ಮೈ ಮುಚ್ಚುವ ಬಟ್ಟೆಯನ್ನು ಶಿಫಾರಸು ಮಾಡುತ್ತವೆ. ಪರಪುರುಷರು ಮಹಿಳೆಯರನ್ನು ನೋಡಿ ಕಾಮೋದ್ರೇಕ ಹೊಂದಬಾರದು ಎಂಬುದು ಇದರ ಉದ್ದೇಶ ಎಂಬುದು ಧರ್ಮಗುರುಗಳು ನೀಡುವ ವ್ಯಾಖ್ಯಾನ.  ಮುಸ್ಲಿಂ ಮಹಿಳೆಯರು ತೊಡುವ ಬಟ್ಟೆಗಳಲ್ಲಿ ನಾನಾ ವಿಧಗಳಿವೆ, ಇವರಲ್ಲಿ ಇರುವುದು ಹಿಜಾಬ್ ಅಥವಾ ಬುರ್ಖಾ ಒಂದೇ ಅಲ್ಲ. ಹಿಜಾಬ್, ಬುರ್ಖಾಗಳಲ್ಲಿಯೂ ನಾನಾ ವಿಧಗಳಿವೆ. 

ಒಂದು ವಾರ ಹಿಜಾಬ್ ತೆಗೆದಿಟ್ಟು ಬಂದರೆ ಲೋಕ ಮುಳಗೋಲ್ಲ: ರಘುಪತಿ ಭಟ್

Tap to resize

Latest Videos

ಹಿಜಾಬ್: (Hijab): ಹಿಜಾಬ್ ಎಂದರೆ ತಲೆಯನ್ನು ಸುತ್ತುವ ಶಾಲು. ಇದು ತಲೆಕೂದಲನ್ನು ಹಾಗೂ ಕುತ್ತಿಗೆಯನ್ನು ಮರೆ ಮಾಡುತ್ತದೆ. ಸಂಪ್ರದಾಯವಾದಿ ಮುಸ್ಲಿಂ ದೇಶಗಳಲ್ಲದೆ ಟರ್ಕಿಯಂಥ ಆಧುನಿಕ ಮುಸ್ಲಿಂ ದೇಶಗಳಲ್ಲೂ, ಅಮೆರಿಕದಂಥ ಆಧುನಿ ದೇಶಗಳಲ್ಲೂ ಬಹಳ ಮಂದಿ ಇದನ್ನು ಉಪಯೋಗಿಸುತ್ತಾರೆ.

ನಿಖಾಬ್: (Niqab): ಇದು ಪೂರ್ತಿಯಾಗಿ ಮುಖವನ್ನು ಮುಚ್ಚುವ ವಸ್ತ್ರ. ಕಣ್ಣುಗಳು ಮತ್ತು ಹಣೆ ಭಾಗ ಮಾತ್ರ ಓಪನ್ ಆಗಿರುತ್ತದೆ. ಗಲ್ಫ್ ದೇಶಗಳು ಹೆಚ್ಚಾಗಿ ಇದನ್ನು ಬಳಸುತ್ತವೆ. ಕೆಲವು ಮುಸ್ಲಿಂ ದೇಶಗಳಲ್ಲಿ ಇದು ಕಡ್ಡಾಯ.

ಚಾದರ್: (Chador): ಇದು ಮೈಯನ್ನು ಮುಚ್ಚಿವ ಸಡಿಲವಾದ, ಬ್ಲಾಂಕೆಟ್‌ನಂಥ ದಿರಿಸು, ಇದು ತಲೆಯನ್ನು ಹಾಗೂ ಕುತ್ತಿಗೆಯಿಂದ ಕೆಳಭಾಗವನ್ನು ಮುಚ್ಚುತ್ತದೆ. ಆದರೆ ಮುಖ ಪೂರ್ತಿ ಓಪನ್ ಆಗಿರುತ್ತದೆ. ಇರಾನ್‌ನಲ್ಲಿ ಇದರ ಬಳಕೆ ಹೆಚ್ಚು.

ಬುರ್ಖಾ: (Burqa): ಇದು ಮುಖವೂ ಸೇರಿದಂತೆ ಇಡೀ ಮೈಯನ್ನು ಆವರಿಸುವ ಬಟ್ಟೆ. ಇದರಲ್ಲಿ ಹೊರಗಿನಿಂದ ನೋಡುವವರಿಗೆ ಧರಿಸಿದವರ ಕಣ್ಣುಗಳು ಕೂಡ ಕಾಣುವುದಿಲ್ಲ. ಕಣ್ಣಿನ ಭಾಗದಲ್ಲಿ ಪಾರದರ್ಶಕವಾದ ಬಟ್ಟೆಯಿದ್ದು, ಧರಿಸಿದವರು ಅದರ ಮೂಲಕ ನೋಡಬೇಕಾಗುತ್ತದೆ. ಪಾಕಿಸ್ತಾನ, ಅಫಘಾನಿಸ್ತಾನಗಳಲ್ಲಿ ಇದರ ಬಳಕೆ ಹೆಚ್ಚು ಹಾಗೂ ಕಡ್ಡಾಯ. 

ಹಿಜಾಬ್ ಹಿಂದೆ ಆರು ಹೆಣ್ಣು ಮಕ್ಕಳ ಕೈವಾಡ

ನಿಮಗೆ ಗೊತ್ತೇ?: ಕೆಲವು ಮುಸ್ಲಿಂ ದೇಶಗಳೇ ಬುರ್ಖಾ ಧರಿಸುವುದನ್ನು ಬ್ಯಾನ್ ಮಾಡಿವೆ! ಅವೆಂದರೆ ಟರ್ಕಿ, ಟ್ಯುನೀಸಿಯಾ, ತಜಿಕಿಸ್ತಾನ ಮತ್ತಿತರ. ಇಲ್ಲಿ ಹಿಜಾಬ್ ಬಳಸಬಹುದು. ಆದರೆ ಸರಕಾರಿ ಶಾಲೆಗಳು (Government Schools), ಆಸ್ಪತ್ರೆಗಳು (Hospitals), ಶಿಕ್ಷಣ ಸಂಸ್ಥೆಗಳಿಗೆ ಹಿಜಾಬ್ ಧರಿಸಿಕೊಂಡು ಹೋಗುವಂತಿಲ್ಲ. ಬುರ್ಖಾ ಸಂಪೂರ್ಣ ಬಂದ್.

ಯುರೋಪ್ (Euorpe) ದೇಶಗಳಲ್ಲಿ ಬ್ಯಾನ್‌: ಯುರೋಪ್‌ನ ಹಲವು ದೇಶಗಳಲ್ಲಿ ಬುರ್ಖಾ, ಹಿಜಾಬ್ ಎಲ್ಲವನ್ನೂ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನ್ ಮಾಡಲಾಗಿದೆ. ಮೊತ್ತ ಮೊದಲಾಗಿ ಫ್ರಾನ್ಸ್‌ನಲ್ಲಿ (France) ಇದನ್ನು ಬ್ಯಾನ್ ಮಾಡಲಾಯಿತು. ದೇಶದ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಬ್ಯಾನ್ ಮಾಡಲೇಬೇಕು ಎಂದು ಅಧ್ಯಕ್ಷ ನಿಕೊಲಸ್ ಸರ್ಕೋಜಿ ಹಠ ಹಿಡಿದರು. ಮುಂದೆ ಬೆಲ್ಜಿಯಂ, ಚೀನಾ, ಜಪಾನ್, ಜರ್ಮನಿ, ನೆದರ್‌ಲ್ಯಾಂಡ್ಸ್, ಸೇರಿದಂತೆ ಹಲವಾರು ದೇಶಗಳು ಬುರ್ಖಾವನ್ನು ನಿಷೇಧಿಸಿದವು. ಹಿಜಾಬ್ ಅನ್ನೂ ಕೂಡ ಇಲ್ಲಿನ ಆಸ್ಪತ್ರೆ, ಶಾಲೆ, ಸರಕಾರಿ ಕಚೇರಿ ಮುಂತಾದ ಕಡೆ ಧರಿಸಿಕೊಂಡು ಹೋದರೆ ದಂಡ ವಿಧಿಸಲಾಗುತ್ತದೆ. ದಂಡ ಸಾವಿರಾರು ರೂಪಾಯಿಗಳಷ್ಟಿರುತ್ತದೆ. ಫ್ರಾನ್ಸ್‌ನಲ್ಲಿ ಇಸ್ಲಾಮಿಕ್ ಮತಾಂಧ ಉಗ್ರಗಾಮಿಗಳ ದಾಳಿ ಹೆಚ್ಚತೊಡಗಿದ ಬಳಿಕ, ಇಂಥ ಕ್ರಮಗಳೂ ಹೆಚ್ಚಾದವು. ಇದು ಮಹಿಳೆಯರ (Women rights) ಹಕ್ಕುಗಳ ಮೇಲೆ, ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಮಾಡಿದ ದಾಳಿ ಎಂದು ತುಂಬಾ ಮಂದಿ ಚಳವಳಿಗಾರರು ವಾದಿಸುತ್ತಾರೆ. ಆದರೆ ಮಹಿಳೆಯರಿಗೆ ಇಸ್ಲಾಂನಲ್ಲಿ ಮುಕ್ತ ಬಟ್ಟೆ ಧರಿಸುವಿಕೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ ಎಂದು ಆಧುನಿಕ ಸ್ತ್ರೀವಾದಿಗಳು ವಾದಿಸುತ್ತಾರೆ. 

click me!