ಮದುವೆಯೆಂಬುದು ಜೀವನದಲ್ಲಿ ಅತ್ಯಂತ ಖುಷಿಯ ದಿನ. ಹೀಗಾಗಿಯೇ ಈ ಶುಭಸಂದರ್ಭದಲ್ಲಿ ಆತ್ಮೀಯರೆಲ್ಲರೂ ಜೊತೆಗಿರಬೇಕೆಂದು ಅನಿಸುವುದು ಸಹಜ. ಅದರಲ್ಲೂ ಕೆಲಸ ಮಾಡುವ ಕಚೇರಿಯ ಕೊಲೀಗ್ಸ್ ಮದುವೆಗೆ ಬರಬೇಕೆಂಬುದು ಪ್ರತಿಯೊಬ್ಬರೂ ಬಯಸ್ತಾರೆ. ಆದ್ರೆ ಮದ್ವೆಗೆ ಸಹೋದ್ಯೋಗಿಗಳು ಬಂದಿಲ್ಲ ಅನ್ನೋ ಕಾರಣಕ್ಕೆ ಇಲ್ಲೊಬ್ಬಾಕೆ ಕೆಲಸಕ್ಕೇ ರಾಜೀನಾಮೆ ನೀಡಿದ್ದಾಳೆ.
ಮದುವೆಯೆಂಬುದು ಎಲ್ಲರ ಜೀವನದಲ್ಲಿಯೂ ಪ್ರಮುಖ ಘಟ್ಟ. ಹೀಗಾಗಿ ಈ ಶುಭಸಂದರ್ಭದಲ್ಲಿ ಕುಟುಂಬಸ್ಥರು, ಸ್ನೇಹಿತರು, ಬಂಧು-ಬಳಗ ಎಲ್ಲರೂ ಜೊತೆಗಿರಬೇಕೆಂದು ಅಂದುಕೊಳ್ಳುವುದು ಸಾಮಾನ್ಯ. ಅದರಲ್ಲೂ ಕಚೇರಿಯಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ಸಹೋದ್ಯೋಗಿಗಳು ಮದುವೆಗೆ ಬಂದರೆ ತುಂಬಾ ಖುಷಿಪಡುತ್ತಾರೆ. ಯಾಕೆಂದರೆ ಕಚೇರಿಯೆಂಬುದು ನಾವು ಮನೆಗಿಂತ ಹೆಚ್ಚು ಸಮಯವನ್ನು ಕಳೆಯುವ ಜಾಗ. ಹೀಗಾಗಿ ಕಚೇರಿಯಲ್ಲಿ ಸಹೋದ್ಯೋಗಿಗಳು ಆತ್ಮೀಯವಾಗಿರುತ್ತಾರೆ. ಒಂದೇ ಕುಟುಂಬದಂತೆ ಅನ್ಯೋನ್ಯವಾಗಿರುತ್ತಾರೆ. ಹೀಗಾಗಿ ಸುಖ-ದುಃಖಗಳನ್ನು ಹಂಚಿಕೊಳ್ಳುತ್ತಾರೆ. ಮಾತ್ರವಲ್ಲ ಜೀವನದ ಖುಷಿಯ ಘಟ್ಟಗಳಲ್ಲಿ ಸಹೋದ್ಯೋಗಿಗಳು ಜೊತೆಗಿರಬೇಕೆಂದು ಎಲ್ಲರೂ ಅಂದುಕೊಳ್ಳುವುದು ಸಹಜ. ಮದುವೆಗೆ ಸಹೋದ್ಯೋಗಿಗಳು ಬಾರದಿದ್ದಾಗ ಬೇಸರವಾಗುವುದು ಸಹ ಸಹಜ.
70 ಸಹೋದ್ಯೋಗಿಗಳಲ್ಲಿ ಮದುವೆಗೆ ಬಂದಿದ್ದು ಒಬ್ಬರೇ !
ಮದುವೆಗೆ ಸಹೋದ್ಯೋಗಿಗಳು (colleague) ಬಂದಿಲ್ಲವೆಂದು ಕೆಲವೊಬ್ಬರು ಅವರ ಜೊತೆ ಮಾತನಾಡುವುದನ್ನೇ ಬಿಟ್ಟು ಬಿಡುತ್ತಾರೆ. ಆದ್ರೆ ಇಲ್ಲೊಬ್ಬಾಕೆ, ಮದುವೆಗೆ ಸಹೋದ್ಯೋಗಿಗಳು ಬಂದಿಲ್ಲವೆಂದು ಕೆಲಸಕ್ಕೇ (Work) ರಾಜೀನಾಮೆ ನೀಡಿದ್ದಾಳೆ. ತನ್ನ ಮದುವೆಗೆ ತನ್ನ 70 ಸಹೋದ್ಯೋಗಿಗಳನ್ನು ಆಹ್ವಾನಿಸಿದ ಚೀನಾದ ಮಹಿಳೆಯೊಬ್ಬರು ತುಂಬಾ ನಿರಾಶೆಗೊಂಡರು. ಯಾಕೆಂದರೆ ಮದುವೆಗೆ ಕೇವಲ ಒಬ್ಬರು ಮಾತ್ರ ಬಂದಿದ್ದರು. ಚೀನಾದ ಮಹಿಳೆ, ಕಚೇರಿಯಲ್ಲಿ ತನ್ನ ಮೂರನೇ ಒಂದು ಭಾಗದಷ್ಟು ಸಹೋದ್ಯೋಗಿಗಳಿಗೆ ಮದುವೆಯ ಆಮಂತ್ರಣ ಪತ್ರಿಕೆಯನ್ನು ನೀಡಿದ್ದರು.. ಕೆಲವರನ್ನಷ್ಟೇ ಕರೆದರೆ ಗಲಿಬಿಲಿಗೊಳ್ಳುವ ಆತಂಕ ಆಕೆಗಿತ್ತು. ಆದ್ದರಿಂದ, ಅವಳು ತನ್ನ ಎಲ್ಲಾ 70 ಸಹೋದ್ಯೋಗಿಗಳನ್ನು ಆಹ್ವಾನಿಸಿದ್ದರು.
ಸಿಟ್ಟಿಗೆದ್ದು ರಾಜೀನಾಮೆ ನೀಡಿದ ಮಹಿಳೆ
ಮದುವೆಗೆ ಎರಡು ತಿಂಗಳ ಮೊದಲು ಆಹ್ವಾನ ಕಳುಹಿಸಲಾಗಿತ್ತು. ಆದರೆ ಮದುವೆಯ ದಿನ ಬಂದಾಗ, ಅವಳು ಆಹ್ವಾನಿಸಿದ 70 ಸಹೋದ್ಯೋಗಿಗಳಲ್ಲಿ ಒಬ್ಬರೇ ಬಂದಿದ್ದಾರೆ ಎಂದು ಅವಳಿಗೆ ಅರಿವಾಯಿತು. ಮಹಿಳೆ ಆರು ಟೇಬಲ್‌ಗಳಿಗೆ ಸಾಕಾಗುವಷ್ಟು ಆಹಾರವನ್ನು ಎಸೆಯಬೇಕಾಯಿತು. ಮನೆಯವರು, ಕುಟುಂಬಸ್ಥರ ಮುಂದೆ ಅವಮಾನಕ್ಕೊಳಬೇಕಾಯಿತು. ತನ್ನ ಸಹೋದ್ಯೋಗಿಗಳು ತನ್ನ ಮದುವೆಗೆ ಬರದೆ ಮುಜುಗರಕ್ಕೊಳಗಾದ ಮಹಿಳೆ ಕೆಲಸಕ್ಕೆ ರಾಜೀನಾಮೆ (Resign) ನೀಡಿದಳು.
ಇಲ್ಲಿ ಮಹಿಳೆಗೆ ಮಹಿಳೆಯೊಂದಿಗೇ ಮದುವೆ, ಆದರೆ, ಸೆಕ್ಸ್ ಮಾತ್ರ ಬೇರೆಯವರೊಂದಿಗೆ!
ಖಾಲಿ ಕುಳಿತ ಯುವಕರಿಗೆ ಮದುವೆ ಮಾಡಲು ಮುಂದಾದ ಕೇರಳ ಗ್ರಾ.ಪಂ.!
ಮನೆಯಲ್ಲಿರುವ ಮಕ್ಕಳಿಗೆ ಮದುವೆ ಆಗಿಲ್ಲ ಅಂತ ಅಪ್ಪ ಅಮ್ಮ ಊರವರು ನೆಂಟರು ಬಂಧುಗಳು ಮದುವೆಗಾಗಿ ಹೆಣ್ಣನ್ನು/ಗಂಡನ್ನು ಹುಡುಕುವುದು, ಮದುವೆ ಪ್ರಪೋಸಲ್ ತೆಗೆದುಕೊಂಡು ಮನೆಗೆ ಬರುವುದು ಸಾಮಾನ್ಯ. ನಮ್ಮ ಹುಡುಗಿಗೊಂದು ಹೆಣ್ಣು ನೋಡಿ, ನಮ್ಮ ಹುಡುಗನಿಗೊಂದು ಗಂಡು ನೋಡಿ ಅಂತ ಅವರಿವರಿಗೆ ಬೇಡುವುದೂ ಸಾಮಾನ್ಯ. ಹೀಗೆ ಮಕ್ಕಳಿಗೆ ಮದುವೆಯಾಗಿಲ್ಲ ಎಂದು ಪೋಷಕರು ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಕೇರಳದಲ್ಲಿ ಗ್ರಾಮ ಪಂಚಾಯತ್ ಕೂಡ ಊರಿನ ಯುವಕರಿಗೆ ಮದುವೆಯಾಗಿಲ್ಲ ಹೆಣ್ಣು ಸಿಗುತ್ತಿಲ್ಲ ಎಂದು ತಲೆಕೆಡಿಸಿಕೊಂಡಿದೆ. ಅಲ್ಲದೇ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಗ್ರಾಮ ಪಂಚಾಯತ್ ತನ್ನ ಊರಿನಲ್ಲಿ ವಿವಾಹಕ್ಕಾಗಿ ವಧು ವರರ ವೇದಿಕೆಯನ್ನು (ವೆಬ್‌ಸೈಟ್)ನ್ನು ಸ್ಥಾಪಿಸಿದೆ. ಇದನ್ನು ಅಧಿಕೃತವಾಗಿ ಆಗಸ್ಟ್ 23 ರಂದು ಉದ್ಘಾಟನೆಯಾಗಲಿದೆ.
ಕೇರಳದಲ್ಲಿ ಮದುವೆಗೆ ಹೆಣ್ಣು ಸಿಗಲು ಪರದಾಡುವಂತಹ ಸ್ಥಿತಿ ಇದೆ. ಹೆಣ್ಣೆ ಸಿಗದ ಕಾರಣಕ್ಕೆ ವಧು ದಕ್ಷಿಣೆ ನೀಡಿ ಬೇರೆ ಸಮೀಪದ ರಾಜ್ಯದ ಅಥವಾ ಗಡಿಭಾಗದ ಹೆಣ್ಣು ಮಕ್ಕಳನ್ನು ವಿವಾಹವಾಗುತ್ತಿದ್ದಾರೆ. ಜಾತಿ ಧರ್ಮ ಕುಲ ಗೋತ್ರ ಯಾವುದನ್ನು ನೋಡದೇ ಕೇವಲ ಮದುವೆಯಾಗಲು ಹೆಣ್ಣೊಂದು ಸಿಕ್ಕರೆ ಸಾಕು ಎಂಬಂತಹ ಸ್ಥಿತಿ ಕೇರಳದಲ್ಲಿದೆ. ವಿವಾಹವಾಗಲು ಹೆಣ್ಣು ಸಿಗದ ಕಾರಣಕ್ಕೆ ಬಹುತೇಕ ಯುವಕರು ಅವಿವಾಹಿತರಾಗಿ ಉಳಿಯುತ್ತಿದ್ದಾರೆ. ಇದೆಲ್ಲದರ ಬಗ್ಗೆ ಈಗ ಗಂಭೀರವಾಗಿ ತಲೆಕೆಡಿಸಿಕೊಂಡಿರುವ ಕೇರಳದ ಪಿಣರಾಯಿ ಗ್ರಾಮ ಪಂಚಾಯತ್ ಅವಿವಾಹಿತರಿಗೆ ವಿವಾಹ ವೇದಿಕೆಯನ್ನು ಸ್ಥಾಪಿಸಿದೆ.
Relationship Tips : ಈ ಹುಡುಗಿಗೆ ಮದುವೆ ಆಗೋಕೆ ಭಯವಂತೆ..! ಯಾಕೆ ಗೊತ್ತಾ?
30 ದಾಟಿದ ಅನೇಕರು ಅವಿವಾಹಿತರಾಗಿಯೇ ಉಳಿಯುತ್ತಿದ್ದು, ಅನೇಕ ಮಧ್ಯವಯಸ್ಕರಿಗೆ ಸೂಕ್ತವಾದ ಜೀವನ ಸಂಗಾತಿಯನ್ನು ಪಡೆಯಲು ಕಷ್ಟವಾಗುತ್ತಿದೆ ಎಂಬ ವಿಶ್ಲೇಷಣೆಯ ಆಧಾರದ ಮೇಲೆ ಕೇರಳದ ಕಣ್ಣೂರು ಜಿಲ್ಲೆಯ ಒಂದೆರಡು ಪಂಚಾಯತ್‌ಗಳು ಈ ವೈವಾಹಿಕ ವೆಬ್‌ಸೈಟ್ ಆರಂಭಕ್ಕೆ ಮುಂದಾಗಿವೆ. ಕೇರಳದ ಕಣ್ಣೂರು ಜಿಲ್ಲೆಯ ಪಿಣರಾಯಿ ಮತ್ತು ಪಟ್ಟುವಂ ಪಂಚಾಯತ್‌ಗಳು, ವೈವಾಹಿಕ ಸೇವೆಗಳನ್ನು ಪ್ರಾರಂಭಿಸುತ್ತಿದೆ.ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಪಟ್ಟಣವಾದ ಪಿಣರಾಯಿ ಪಂಚಾಯತ್‌ನ ಆನ್‌ಲೈನ್ ಪೋರ್ಟಲ್ ಅನ್ನು ಆಗಸ್ಟ್ 23 ರಂದು ಔಪಚಾರಿಕವಾಗಿ ಪ್ರಾರಂಭಿಸಲಾಗುತ್ತಿದೆ.