ಮನೆ ಸೌಂದರ್ಯದ ಜೊತೆ ಮನಸ್ಸಿಗೂ ಕಿರಿ ಕಿರಿ ಮಾಡೋ ಬಲೆಗೆ ಹೇಳಿ ಗುಡ್ ಬೈ!

By Suvarna News  |  First Published Aug 17, 2022, 12:51 PM IST

ಜೇಡರ ಬಲೆ ಭಯಂಕರ ಕಿರಿಕಿರಿ ನೀಡುತ್ತದೆ. ಕಂಡ ಕಂಡಲ್ಲಿ ಬಲೆ ಕಟ್ಟುವ ಜೇಡವನ್ನು ಓಡಿಸೋದು ಸಾಮಾನ್ಯ ಕೆಲಸವಲ್ಲ. ಅನೇಕ ಮಹಿಳೆಯರು ಜೇಡದ ಬಲೆಗೆ ಬೇಸತ್ತಿರುತ್ತಾರೆ. ಇದಕ್ಕೆ ಇಷ್ಟೊಂದು ಟೆನ್ಷನ್ ಮಾಡ್ಕೊಳ್ಬೇಕಾಗಿಲ್ಲ. ಆರಾಮವಾಗಿ ಜೇಡವನ್ನು ಮನೆಯಿಂದ ಓಡಿಸ್ಬಹುದು. 
 


ಮನೆ ಸ್ವಚ್ಚಗೊಳಿಸೋದು ಸುಲಭದ ಕೆಲಸವಲ್ಲ. ಒಂದ್ಕಡೆ ಸ್ವಚ್ಛಗೊಳಿಸಿದ್ರೆ ಇನ್ನೊಂದು ಕಡೆ ಧೂಳು ಕಾಣುತ್ತದೆ. ಹಾಗಾಗಿಯೇ ಅನೇಕ ಮಹಿಳೆಯರು ಪ್ರತಿ ದಿನ ನೆಲ ಸ್ವಚ್ಛಗೊಳಿಸ್ತಾರೆ. ಆದ್ರೆ ಕೆಲಸದ ಒತ್ತಡದಲ್ಲಿ ಪ್ರತಿ ದಿನ ಮೂಲೆ, ಮೂಲೆ ಸ್ವಚ್ಛಗೊಳಿಸಲು ಸಾಧ್ಯವಾಗುವುದಿಲ್ಲ. ಫ್ಯಾನ್, ಗೋಡೆ, ಮಹಡಿ, ಮೆಟ್ಟಿಲಿನ ಭಾಗಗಳನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸೋದು ಕಷ್ಟವಾಗುತ್ತದೆ. ಅದೆಷ್ಟು ಸ್ವಚ್ಛಗೊಳಿಸಿದ್ರೂ ಜೇಡ ಮನೆ ಮಾಡೋದು ಸಾಮಾನ್ಯ. ಅನೇಕ ಮನೆಯಲ್ಲಿ ಜೇಡರ ಬಲೆ ದೊಡ್ಡ ಸಮಸ್ಯೆಯಾಗಿರುತ್ತದೆ. ಒಂದ್ಕಡೆ ಬಲೆ ತೆಗೆದ್ರೆ ಮತ್ತೊಂದು ಕಡೆ ಕಟ್ಟಿಕೊಂಡಿರುತ್ತದೆ.  ಬಿಳಿ ಜೇಡರ ಬಲೆಯಿಂದಾಗಿ ಮನೆ ಕೊಳಕು ಕಾಣುತ್ತದೆ.  ಇದಲ್ಲದೆ ವಾಸ್ತು ಶಾಸ್ತ್ರದ ಪ್ರಕಾರ ಇದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಮನೆಯಲ್ಲಿ ಜೇಡ ಬಲೆ ಕಟ್ಟದಂತೆ ನೋಡಿಕೊಳ್ಳುವುದು ಮುಖ್ಯ. ನಿಮ್ಮ ಮನೆಯಲ್ಲೂ ಜೇಡರ ಬಲೆ ಕಟ್ಟುತ್ತಿದ್ದು, ಅದನ್ನು ತೆಗೆಯಲು ಕಷ್ಟವಾಗ್ತಿದ್ದರೆ ಈ ಸಲಹೆಯನ್ನು ಪಾಲಿಸಿ. ನಾವಿಂದು ಸುಲಭವಾಗಿ ಜೇಡರ ಬಲೆ ತೆಗೆಯೋದು ಹೇಗೆ ಅನ್ನೋದನ್ನು ನಿಮಗೆ ಹೇಳ್ತೇವೆ.  

ಮನೆ (House) ಯಲ್ಲಿರುವ ಜೇಡರ (Spider) ಬಲೆ ತೆಗೆಯಲು ಸುಲಭ ಉಪಾಯ : 
ಬಿಳಿ ವಿನೆಗರ್ (White Vinegar) :
 ಬಿಳಿ ವಿನೆಗರ್ ಅಡುಗೆಗೆ ಮಾತ್ರ ಬಳಕೆಯಾಗೋದಿಲ್ಲ. ಇದ್ರಿಂದ ಇನ್ನಷ್ಟು ಪ್ರಯೋಜನವಿದೆ. ಬಿಳಿ ವಿನೆಗರ್‌ ಜೇಡರ ಬಲೆ  ತೆಗೆಯಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ವಿನೆಗರ್ ಅನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಬೇಕು. ನಂತ್ರ ಮನೆಯ ಯಾವ ಜಾಗದಲ್ಲಿ ಜೇಡರ ಬಲೆ ಪದೇ ಪದೇ ಕಟ್ಟುತ್ತದೆಯೋ ಆ ಜಾಗದಲ್ಲಿ ಈ ವಿನೆಗರ್ ಸ್ಪ್ರೇ ಮಾಡಬೇಕು. ವಿನೆಗರ್‌ನ ಬಲವಾದ ವಾಸನೆಯನ್ನು ಜೇಡ ಸಹಿಸಿಕೊಳ್ಳಲು ಸಾಧ್ಯವಿಲ್ಲ. ವಿನೆಗರ್ ವಾಸನೆ ಸಹಿಸಲಾಗದೆ ಜೇಡ ಓಡಿ ಹೋಗುತ್ತದೆ. ಮತ್ತೆ ಆ ಜಾಗದಲ್ಲಿ ಜೇಡ ಬಲೆ ಕಟ್ಟುವುದಿಲ್ಲ. ವಿನೆಗರ್ ವಾಸನೆ ಹೋಗಿದೆ ಎನ್ನಿಸಿದ ಸಂದರ್ಭದಲ್ಲಿ ಮತ್ತೆ ಆ ಜಾಗಕ್ಕೆ ವಿನೆಗರ್ ಸ್ಪ್ರೇ ಮಾಡ್ತಿರುವುದು ಒಳ್ಳೆಯದು.  

Kitchen Hacks: ಸೊಪ್ಪಿನ ಅಡುಗೆ ಮಾಡೋ ಮೊದಲು ಈ ಕೆಲಸ ಮಾಡಿ

Tap to resize

Latest Videos

ನಿಂಬೆ (Lemon ) ಮತ್ತು ಕಿತ್ತಳೆ (Orange) ಸಿಪ್ಪೆ: ನಿಂಬೆ ಅಥವಾ ಕಿತ್ತಳೆ ಸಿಪ್ಪೆಯ ಸಹಾಯದಿಂದ ಸ್ಪೈಡರ್ ಬಲೆಗಳನ್ನು ಸಹ ತೆಗೆದುಹಾಕಬಹುದು. ಕಿತ್ತಳೆ ಮತ್ತು ನಿಂಬೆ ಹಣ್ಣಿನಿಂದ ವಿಶೇಷ ರೀತಿಯ ವಾಸನೆ ಬರುತ್ತದೆ. ಇದರಿಂದಾಗಿ ಜೇಡ ಓಡಿಹೋಗುತ್ತದೆ. ನೀವು ಜೇಡ ಬರುವ ಸ್ಥಳದಲ್ಲಿ ನಿಂಬೆ ಅಥವಾ ಕಿತ್ತಳೆಯಂತಹ ಹಣ್ಣುಗಳ ಸಿಪ್ಪೆಯನ್ನು ಇಡಬಹುದು. ಅದರ ವಾಸನೆಯಿಂದ ಜೇಡವು ಆ ಸ್ಥಳಕ್ಕೆ ಬರುವುದಿಲ್ಲ.

ನೀಲಗಿರಿ ಎಣ್ಣೆ:  ಜೇಡರ ಬಲೆಗಳನ್ನು ತೆಗೆದುಹಾಕಲು ನೀವು ನೀಲಗಿರಿ ಎಣ್ಣೆಯನ್ನು ಸಹ ಬಳಸಬಹುದು. ಈ ಎಣ್ಣೆ ನಿಮಗೆ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತದೆ. ಸ್ಪ್ರೇ ಬಾಟಲಿಗೆ ಸ್ವಲ್ಪ ನೀಲಗಿರಿ ಎಣ್ಣೆಯನ್ನು ತುಂಬಿಸಿ ಮತ್ತು ಜೇಡರ ಬಲೆ ಇರುವ ಸ್ಥಳಗಳಲ್ಲಿ ಸಿಂಪಡಿಸಿ. ಹೀಗೆ ಮಾಡುವುದರಿಂದ ನೀವು ಜೇಡವನ್ನು ಬಹಳ ಸುಲಭವಾಗಿ ಮನೆಯಿಂದ ಓಡಿಸಬಹುದು. 

ಪುದೀನಾ ಎಲೆ : ಪುದೀನ ಎಲೆ ಬಲವಾದ ವಾಸನೆಯನ್ನು ಹೊಂದಿರುತ್ತದೆ. ಪುದೀನಾ ಎಲೆಗಳ ಸಹಾಯದಿಂದ ನೀವು ಜೇಡರ ಬಲೆಯನ್ನೂ ಹೋಗಲಾಡಿಸಬಹುದು. ಇದಕ್ಕಾಗಿ ಪುದೀನಾ ಸೊಪ್ಪಿನ ನೀರನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿ ಸ್ಪ್ರೇ ಮಾಡಬೇಕು. ನೀರನ್ನು ಹೊರತುಪಡಿಸಿ  ನೀವು ಪುದೀನಾ ಎಣ್ಣೆಯನ್ನು ಸ್ಪ್ರೇ ಆಗಿ ಬಳಸಬಹುದು.

Kitchen Tips: ಹೆಸರು ಬೇಳೆ ಖರೀದಿಸುವಾಗ ಈ ವಿಚಾರ ಗಮನದಲ್ಲಿರಲಿ

ಬೆಳ್ಳುಳ್ಳಿ : ಬೆಳ್ಳುಳ್ಳಿ ವಾಸನೆ ಕೂಡ ಕಠುವಾಗಿರುತ್ತದೆ. ಇದರ ವಾಸನೆಯನ್ನು ಜೇಡ ಸಹಿಸುವುದಿಲ್ಲ. ಜೇಡ ಬರುವ ಜಾಗದಲ್ಲಿ ನೀವು ಬೆಳ್ಳುಳ್ಳಿ ಚೂರುಗಳನ್ನು ಇಡಬಹುದು. ಇಲ್ಲದೆ ಬೆಳ್ಳುಳ್ಳಿ ರಸ ತೆಗೆದು ಅದನ್ನು ಸ್ಪ್ರೇ ರೂಪದಲ್ಲಿ ಸಿಂಪಡಿಸಬಹುದು.
 

click me!