ವೆಡ್ಡಿಂಗ್ ಆನಿವರ್ಸರಿಯಲ್ಲ ವಿಚ್ಛೇದನ ಪಡೆದು 'ಡಿವೋರ್ಸ್‌ ವರ್ಸರಿ' ಆಚರಿಸಿದ ಮಹಿಳೆ!

By Vinutha PerlaFirst Published Jan 26, 2023, 4:15 PM IST
Highlights

ಜೀವನದ ಪ್ರತಿ ಹಂತವನ್ನೂ ಸೆಲಬ್ರೇಟ್ ಮಾಡುವುದು ಮನಸ್ಸಿಗೆ ಖುಷಿ ನೀಡುತ್ತದೆ. ಹೀಗಾಗಿಯೇ ಜನರು ಬರ್ತ್‌ಡೇ, ಆನಿವರ್ಸರಿ, ಪ್ರಮೋಶನ್ ಮೊದಲಾದ ಸಂದರ್ಭಗಳನ್ನು ಸೆಲಬ್ರೇಟ್‌ ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಡಿವೋರ್ಸ್ ವರ್ಸರಿಯನ್ನು ಆಚರಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಾಲ ಬದಲಾಗಿದೆ ಎಂದು ಅದೆಷ್ಟು ಬಾರಿ ಹೇಳಿದರೂ ಸಮಾಜದಲ್ಲಿ ಇನ್ನೂ ಬದಲಾಗದ ಹಲವು ವಿಚಾರಗಳಿವೆ. ಅದರಲ್ಲೊಂದು ಜನರ ಮನಸ್ಥಿತಿ. ಅದೆಷ್ಟೇ ವರ್ಷಗಳು ಕಳೆದರೂ ಕೆಲವೊಮ್ಮೆ ಅವುಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಮದುವೆ, ಡಿವೋರ್ಸ್ ಮೊದಲಾದ ವಿಚಾರಕ್ಕೆ ಬಂದಾಗ ಜನರು ಇವತ್ತಿಗೂ ಅದೇ ಸಂಕುಚಿತ ಮನೋಭಾವವನ್ನು ಹೊಂದಿದ್ದಾರೆ. ಇಷ್ಟಪಟ್ಟ ವ್ಯಕ್ತಿಯನ್ನು ಮದುವೆಯಾಗುವುದು, ಅಥವಾ ಇಷ್ಟವಿಲ್ಲದಿದ್ದಾಗ ವಿಚ್ಛೇದನ ಪಡೆಯುವುದು, ಅಥವಾ ಮರುಮದುವೆ (Remarriage)ಗುವುದು ಇಂಥಾ ಮನಸ್ಥಿತಿಯನ್ನು ಒಪ್ಪಿಲ್ಲದ ಜನರ ಮಧ್ಯೆ ನಾವು ವಾಸಿಸುತ್ತಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಸಮಾಜದ ಕಟ್ಟುಪಾಡುಗಳಿಗೆ ಹೆದರದೆ ಡಿವೋರ್ಸ್ ಪಡೆದ ಸಂಭ್ರಮವನ್ನು ಆಚರಿಸಿದ್ದಾರೆ. 

ಶಾಶ್ವತಿ ಶಿವಾ ಎಂಬ ಮಹಿಳೆ (Woman) ತಾನು ಡಿವೋರ್ಸ್ ಪಡೆದುಕೊಂಡು ನಾಲ್ಕು ವರ್ಷ ಆಗಿರೋದನ್ನು ಸಂಭ್ರಮಿಸಿದ್ದಾರೆ. ನಾಲ್ಕು ವರ್ಷಗಳ ಸ್ವಾತಂತ್ರ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಧೈರ್ಯದಿಂದ ಆಚರಿಸಿದರು. ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, '4 ವರ್ಷಗಳ ಸ್ವಾತಂತ್ರ್ಯವನ್ನು ಅಷ್ಟು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಇಂದು ವಿಚ್ಛೇದನ-ವರ್ಸರಿ (Divorce-versary) ಆಚರಿಸಲಾಗುತ್ತಿದೆ. ನನಗೆ ತುಂಬಾ ಸಂತೋಷ (Happy)ವಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.

ಗಂಡನನ್ನು ಬಿಟ್ಟು ನಾಯಿಯನ್ನೇ ಮುದ್ದು ಮಾಡ್ತಾಳಂತೆ ಹೆಂಡ್ತಿ! ಯಾಕಮ್ಮಾ ಹೀಗೆ ?

ಡಿವೋರ್ಸ್ ಆದ ದಿನವನ್ನು ಸ್ವಾತಂತ್ರ್ಯದ ದಿನವೆಂದು ಆಚರಿಸುತ್ತಿರುವ ಮಹಿಳೆ
ಮಹಿಳೆ ಲಿಂಕ್ಡ್‌ಇನ್‌ನಲ್ಲಿ ತನ್ನ ವಿಚ್ಛೇದನದ ಬಗ್ಗೆ ವಿವರವಾದ ಪೋಸ್ಟ್‌ನ್ನು ಸಹ ಬರೆದಿದ್ದಾರೆ. 'ಇಂದು, ಇದೇ ದಿನ  4 ವರ್ಷಗಳ ಹಿಂದೆ, ನಾನು ವಿಚ್ಛೇದನ ಪಡೆದಿದ್ದೆ. ನಾನು ಪ್ರತಿ ವರ್ಷ ಈ ದಿನವನ್ನು ನನ್ನ ಸ್ವಾತಂತ್ರ್ಯದ ದಿನವೆಂದು ಆಚರಿಸುತ್ತೇನೆ ಮತ್ತು ಪ್ರತಿ ವರ್ಷ ಅದನ್ನು ಒಪ್ಪಿಕೊಳ್ಳುವುದು ನನಗೆ ನಿಜವಾಗಿಯೂ ಮುಖ್ಯವಾಗಿದೆ. ಕಳೆದ 1460 ದಿನಗಳಲ್ಲಿ ಪ್ರತಿದಿನವೂ ಜೀವನದ (Life) ಬಗ್ಗೆ ಅಪಾರ ಕೃತಜ್ಞತೆಯನ್ನು ಅನುಭವಿಸದೆ ಒಂದು ದಿನವೂ ಕಳೆದಿಲ್ಲ' ಎಂದು ಶಾಶ್ವತಿ ಶಿವಾ ತಿಳಿಸಿದ್ದಾರೆ

'ವಿಚ್ಛೇದನದ ಬಗ್ಗೆ ಜನರಿಗಿರುವ ಅಭಿಪ್ರಾಯವನ್ನು ಹೋಗಲಾಡಿಸಲು ಈ ರೀತಿ ಮಾಡುತ್ತಿದ್ದೇನೆ. ವಿಚ್ಚೇದನ (Divorce) ಎಂಬುದು ಯಾವತ್ತೂ ಕೆಟ್ಟದ್ದಲ್ಲ.  ಡಿವೋರ್ಸ್ ಪಡೆದವರ ಬಗ್ಗೆ ಸಮಾಜದಲ್ಲಿರುವ ಕೆಟ್ಟ ಅಭಿಪ್ರಾಯವನ್ನು ಹೋಗಲಾಡಿಸುವುದು ಮುಖ್ಯವಾಗಿದೆ. ನಾನು ಅದರ ಬಗ್ಗೆ ಆನ್‌ಲೈನ್‌ನಲ್ಲಿ ಮಾತನಾಡಿದ್ದೇನೆ, ಸಂಭಾಷಣೆಯನ್ನು ರೋಲಿಂಗ್ ಮಾಡಿದ್ದೇನೆ ಮತ್ತು ಇಲ್ಲಿಯವರೆಗೆ, ನಾನು 75 ಕ್ಕೂ ಹೆಚ್ಚು ಬೆಂಬಲ ಗುಂಪು ವೀಡಿಯೊ ಮತ್ತು ವೈಯಕ್ತಿಕ ಸೆಷನ್‌ಗಳನ್ನು ನಡೆಸಿದ್ದೇನೆ ಮತ್ತು ಪ್ರಸ್ತುತ 500+ ಭಾಗವಹಿಸುವವರ ಟೆಲಿಗ್ರಾಮ್ ಬೆಂಬಲ ಗುಂಪನ್ನು ನಡೆಸುತ್ತಿದ್ದೇನೆ. ಜನರು ಇಲ್ಲಿ ಸಕ್ರಿಯವಾಗಿ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ' ಎಂದು ಶಾಶ್ವತಿ ಶಿವಾ ಮಾಹಿತಿ ನೀಡಿದ್ದಾರೆ.

ಮದ್ವೆಯಾದ ಒಂದೇ ಗಂಟೆಯಲ್ಲಿ ಡಿವೋರ್ಸ್‌, ವಧುವಿಗೆ ತನ್ನ ತಮ್ಮನ ಜೊತೆಯೇ ಮದ್ವೆ ಮಾಡಿಸಿದ ವರ!

4 years of freedom, and not taking it for granted for a single day. Celebrating a divorce-versary today. 🥳

Happy happies to me!!! pic.twitter.com/fxcp5MFScb

— Shasvathi Siva (@shasvathi)

ವಿಚ್ಛೇದನ ಪಡೆದುಕೊಂಡು ಸಂಕಷ್ಟ ಎದುರಿಸುವ, ಒಂಟಿ ಮಹಿಳೆಯಾಗಿ ಜೀವನ ನಡೆಸಲು ಹೆಣಗಾಡುತ್ತಿರುವ ಮಹಿಳೆಯರಿಗಾಗಿ #DivorceIsNormal ಎಂಬ Instagram ಬೆಂಬಲ ಗುಂಪನ್ನು ಶಿವಾ ನಡೆಸುತ್ತಿದ್ದಾರೆ. ಈ ಮೂಲಕ ಜನರು ಮಾಹಿತಿ ಪಡೆದು ತಮ್ಮ ಜೀವನದಲ್ಲಿ ಖುಷಿಯಾಗಿದ್ದಾರೆ. ಅದೇನೆ ಇರ್ಲಿ ವಿಚ್ಛೇದನೆ ದೊರಕಿದೊಡನೆ ಜೀವನವೇ ಮುಗಿಯಿತೆಂದು ಅಂದುಕೊಳ್ಳುವವರ ಮಧ್ಯೆ ಹಣ್ಮಕ್ಕಳು ಹೀಗೆ ಜೀವನೋತ್ಸಾಹ ಬೆಳೆಸಿಕೊಳ್ಳುತ್ತಿರುವುದು ನಿಜಕ್ಕೂ ಮೆಚ್ಚುವಂತಹಾ ವಿಚಾರ.

click me!