
ಅತ್ತೆ ಸೊಸೆ ಅಂದರೆ ಅವ್ರು ಜಗಳ ಆಡ್ತಿರ್ತಾರೆ. ಟಾಮ್ ಆಂಡ್ ಜೆರ್ರಿ ಥರ ಫೈಟ್ ಮಾಡ್ತಿರ್ತಾರೆ ಅಂದುಕೊಳ್ತಾರೆ. ಏಕೆಂದರೆ ಬಹುಪಾಲು ಮನೆಗಳಲ್ಲಿ ಅತ್ತೆ-ಸೊಸೆ ಸದಾ ಜಗಳ ಇದ್ದೇ ಇರುತ್ತೆ. ಒಬ್ಬರಿಗೆ ಒಬ್ಬರನ್ನು ಕಂಡ್ರೆ ಹಾಗಲ್ಲ. ಒಬ್ಬರ ಕೆಲಸ, ಕಾರ್ಯಗಳು ಇನ್ನೊಬ್ಬರಿಗೆ ಆಗಲ್ಲ. ಪರಸ್ಪರರಲ್ಲಿ ತಪ್ಪು ಹುಡುಕುವುದು, ಕೊಂಕು ಮಾತು… ಹೀಗೆ ಏನಾದರೊಂದು ಸಮಸ್ಯೆ ಇದ್ದೇ ಇರುತ್ತೆ. ಹೆಚ್ಚಾಗಿ ಮಗ ಮತ್ತು ಮಾವ ಈ ಗಲಾಟೆಗೆ ಬಲಿಪಶುಗಳಾಗೋ ಸನ್ನಿವೇಶಗಳೂ ಇರುತ್ತದೆ. ಹೆಚ್ಚಿನ ಸೀರಿಯಲ್ ಥರದ ಘಟನೆಗಳು ಮನೆಯಲ್ಲಿ ಆಗುತ್ತಿರುತ್ತದೆ. ಇದಕ್ಕೆ ಕಾರಣಗಳು ಸಾಕಷ್ಟಿರುತ್ತದೆ. ಮುಖ್ಯವಾಗಿ ಅಭದ್ರತೆ ಕಾರಣ ಎನ್ನಬಹುದು. ಆದರೆ ಇದಕ್ಕೆ ಸರಿ ಉಲ್ಟಾ ಆಗಿರೋ ಸಂಗತಿಗಳು ನಮ್ಮ ನಡೆಯುತ್ತಿರುತ್ತವೆ. ಅತ್ತೆ-ಸೊಸೆ ಅಂದ್ರೆ ಹೀಗಿರಬೇಕು ಎಂದುಕೊಳ್ಳುವಷ್ಟು ಅನ್ಯೋನ್ಯವಾಗಿರುತ್ತಾರೆ. ಈ ಅನ್ಯೋನ್ಯತೆಯ ಹಿಂದಿರುವ ಟ್ರಿಕ್ಸ್‌ಗಳೇನು?
ಸೊಸೆ ಅಂದರೆ ಫ್ರೆಂಡ್ ಅಂದ್ಕೊಳ್ಳೋ ಅತ್ತೆ: ಮಗ ಮತ್ತು ಗಂಡನ ಜೊತೆಗೆ ತನ್ನ ಮನದ ಮಾತುಗಳನ್ನೆಲ್ಲ ಹೇಳಿದರೆ ಅವರು ಹೆಚ್ಚಿನ ಸಲ ಕೇಳಿಸಿಕೊಳ್ಳಲ್ಲ ಅನ್ನೋ ದೂರು ಅತ್ತೆಯಂದಿರದ್ದು. ಆದರೆ ಸೊಸೆ ಹಾಗಲ್ಲ. ಅವಳ ಬಳಿ ತನ್ನ ಮನಸ್ಥಿತಿಯನ್ನು ಹಂಚಿಕೊಳ್ಳಬಹುದು ಅಂದುಕೊಳ್ಳುತ್ತಾರೆ. ಸೊಸೆಯೂ ಅತ್ತೆಯನ್ನು ಗೆಳತಿಯಂತೆ ನೋಡಲು ಇಷ್ಟ ಪಡುತ್ತಾಳೆ. ಹೀಗಾಗಿ ಅತ್ತೆ ಅಥವಾ ಸೊಸೆ ಇಂಥ ಗುಣ ಹೊಂದಿದ್ದರೆ ಸ್ನೇಹದಿಂದಿರಲು ಪ್ರಯತ್ನಿಸುತ್ತಿದ್ದಾರೆ ಅಂತಾ ಅರ್ಥ. ಎಷ್ಟೋ ಮಂದಿ ಅತ್ತೆಯಂದಿರು, ಸೊಸೆಯ ಯೋಚನೆ ಹೇಗಿರುತ್ತೆ, ಆಕೆ ಏನನ್ನು ಹೇಳಲು ಬಯಸುತ್ತಾಳೆ ಅನ್ನೋದನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಅವರು ಸೊಸೆಯ ಅಭಿಪ್ರಾಯಗಳಿಗೆ ಅಡ್ಡಿ ಪಡಿಸುವುದಿಲ್ಲ. ಆಕೆಯ ಭಿನ್ನಾಭಿಪ್ರಾಯಗಳನ್ನೂ ಅವರು ಗೌರವಿಸುತ್ತಾರೆ. ಈ ಗುಣವಿರುವ ಅತ್ತೆಯಂದಿರು ಸೊಸೆಯರೊಟ್ಟಿಗೆ ಸ್ನೇಹ ಬಾಂಧವ್ಯದಿಂದ ಇರುತ್ತಾರೆ. ಅತ್ತೆ ನಿಮ್ಮ ಜೀವನ, ಕೆಲಸ, ಆಸಕ್ತಿಗಳು, ಹವ್ಯಾಸಗಳು ಮತ್ತು ವೃತ್ತಿಜೀವನದ ಬಗ್ಗೆ ವಿಚಾರಿಸುತ್ತಿದ್ದರೆ, ಅವರು ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬುದರ ಸಂಕೇತ. ನಿಮ್ಮ ಬೇಕು ಬೇಡಗಳನ್ನೂ ಆಲಿಸುತ್ತಾರೆ. ಈ ಗುಣ ಇಬ್ಬರ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೆ.
ರೊಮ್ಯಾನ್ಸ್ ಆದ್ಮೇಲೆ? ರಿಯಲ್ ಲೈಫ್ ಸತ್ಯಗಳ ಬಗ್ಗೆ ಸುಧಾಮೂರ್ತಿ ಮಾತು!
ಕಂಪೇರ್ ಮಾಡಲ್ಲ, ಅರ್ಥ ಮಾಡ್ಕೊಳ್ತಾರೆ: ಎಷ್ಟೋ ಅತ್ತೆಯಂದಿರು ಸೊಸೆಯನ್ನು ತನಗೆ ಹೋಲಿಸಿಕೊಂಡು ಹೀಯಾಳಿಸುವುದೇ ಹೆಚ್ಚು. ನಮ್ಮ ಕಾಲದಲ್ಲಿ ಏನೂ ವ್ಯವಸ್ಥೆ ಇಲ್ಲದಿದ್ದರೂ ಹಾಗೆ ಜವಾಬ್ದಾರಿ ನಿಭಾಯಿಸಿದ್ದೆ. ಈಗಿನವರಿಗೆ ಇಷ್ಟೆಲ್ಲ ಇದ್ದರೂ ಏನೂ ಮಾಡಲಾಗದು ಅಂತೆಲ್ಲ ಹೇಳುತ್ತಿರುತ್ತಾರೆ. ಆದರೆ ಪ್ರಬುದ್ಧ ಮನಸ್ಸಿನ ಅತ್ತೆಯಂದಿರು ತನಗೆ ಎಂದಿಗೂ ಸೊಸೆಯನ್ನು ಹೋಲಿಕೆ ಮಾಡಿಕೊಳ್ಳಲ್ಲ. ನಿಮ್ಮ ಕೆಲಸ, ಕಾರ್ಯಗಳನ್ನು ಗೌರವಿಸುತ್ತಾರೆ. ಸೊಸೆಯ ಅಭಿಪ್ರಾಯವನ್ನೂ ಗೌರವಿಸುತ್ತಾರೆ. ಕೆಲವರು ಸೊಸೆ ಎದುರಿಗಿದ್ದಾಗ ಹೊಗಳುವುದು, ಅವರ ಇಲ್ಲದಿದ್ದಾಗ ತೆಗಳುವ ಕೆಲಸ ಮಾಡ್ತಾರೆ. ಸೊಸೆ ಜೊತೆ ಇದ್ದಾಗ ಪ್ರೀತಿಯಿಂದ ಮಾತನಾಡಿ, ಹಿಂದಿನಿಂದ ಇಲ್ಲಸಲ್ಲದ ಆರೋಪ ಮಾಡ್ತಾರೆ. ಆದರೆ ಫ್ರೆಂಡ್ಲಿ ಮನಸ್ಥಿತಿಯ ಅತ್ತೆಯರು, ಸೊಸೆ ಹೊರಗಿದ್ದಾಗಲೂ ಆಕೆ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿರುತ್ತಾರೆ. ಅವಳನ್ನು ಸದಾ ಗೌರವಿಸುತ್ತಾರೆ.
ಕೆಲಸದಲ್ಲಿ ಮೂಗು ತೂರಿಸಲ್ಲ: ಫ್ರೆಂಡ್ಲಿ ನೇಚರ್ ಇರೋ ಅತ್ತೆ ಯಾವುದೇ ರೀತಿಯಲ್ಲೂ ನಿಮ್ಮ ಕೆಲಸಗಳಿಗೆ ಹಸ್ತಕ್ಷೇಪ ಮಾಡುವುದಿಲ್ಲ. ಮನೆಯಲ್ಲಿ ನಿಮ್ಮ ಜವಾಬ್ದಾರಿ, ವ್ಯವಹರಿಸುವ ರೀತಿ ಎಲ್ಲವನ್ನೂ ಅರಿತುಕೊಳ್ಳುತ್ತಾರೆ. ನಿಮ್ಮ ಮಿತಿಗಳನ್ನು ಅರ್ಥ ಮಾಡಿಕೊಳ್ತಾರೆ. ನಿಮ್ಮ ಯಾವುದೇ ಕೆಲಸಗಳಿಗೆ ಅವರು ಮಧ್ಯೆ ಪ್ರವೇಶ ಮಾಡಲ್ಲ. ಸದಾ ಸೊಸೆಯ ಸ್ನೇಹ, ಪ್ರೀತಿ, ನಂಬಿಕೆ ಗಳಿಸಲು ಪ್ರಯತ್ನಿಸುವ ಅತ್ತೆಯರಿಗೆ ಈ ಮೇಲಿನ ಗುಣಗಳಿರುತ್ತೆ. ಅಂತಹ ಅತ್ತೆಯರ ಮೇಲೆ ಸೊಸೆಯಂದಿರು ಅನುಮಾನ ಪಡಬಾರದು
ಗರ್ಭಧಾರಣೆಯ ನಂತರ ಕರಿಯರ್ ಆರಂಭಿಸೋದು ಹೇಗೆ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.