ಜೋತು ಬೀಳುವ ಸ್ತನಗಳಲ್ಲಿ ದೃಢತೆ ತರೋದು ಹೇಗೆ? ಇಲ್ಲಿದೆ ಮನೆಮದ್ದು

By Suvarna NewsFirst Published Jan 25, 2023, 3:52 PM IST
Highlights

ಧೂಮಪಾನ, ವಯಸ್ಸಾಗುವಿಕೆ, ಅತಿಯಾದ ಎಕ್ಸರ್‌ಸೈಸ್‌, ಕರೆಕ್ಟ್‌ ಸೈಜ್‌ನ ಬ್ರಾ ಧರಿಸದೇ ಇರುವುದು ಹೀಗೆ ಸ್ತನಗಳು ಜೋತು ಬೀಳಲು ಅನೇಕ ಕಾರಣಗಳಿವೆ. ಹೀಗೆ ಜೋತುಬಿದ್ದ ಸ್ತನಗಳನ್ನು ಮತ್ತೆ ಬಿಗಿಗೊಳಿಸಲು ಸರಳ ಟೆಕ್ನಿಕ್‌ಗಳು ಇಲ್ಲಿವೆ.

ಹೆಣ್ಮಕ್ಕಳ ದೇಹ ಬದಲಾಗುತ್ತಲೇ ಇರುತ್ತದೆ. ವಯಸ್ಸು ಒಂದು ಕಾರಣ ಆದರೆ ಗರ್ಭಧಾರಣೆ, ಧರಿಸೋ ಬಟ್ಟೆ, ಎಕ್ಸರ್‌ಸೈಸ್ ಮೊದಲಾದವು ಇನ್ನಿತರ ಕಾರಣಗಳು. ಆದರೆ ಎಷ್ಟೋ ಮಂದಿ ಸ್ತನ ಜೋತು ಬಿದ್ದಾಗ ಅದರಿಂದ ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ. ಸ್ತನಗಳನ್ನು ಮಹಿಳೆಯ ದೇಹ ಸೌಂದರ್ಯದ ಪ್ರಮುಖ ಅಂಗವಾಗಿ ಹೆಚ್ಚಿನವರು ಭಾವಿಸಿರುವುದು ಇದಕ್ಕೆ ಕಾರಣ. ಈ ಬದಲಾವಣೆಯನ್ನ ಪಾಸಿಟಿವ್‌ ಆಗಿ ತೆಗೆದುಕೊಳ್ಳುವವರು ಕಡಿಮೆ. ಆದರೆ ಎದೆ ಜೋತು ಬಿದ್ದಿದೆ ಎಂದು ಕುಗ್ಗಿ ಹೋಗಬೇಕಿಲ್ಲ. ಈ ಸಮಸ್ಯೆಗೆ ಪರಿಹಾರವಿದೆ. ಕೆಲವೊಂದು ಮನೆಮದ್ದು ಜೋತುಬಿದ್ದ ಸ್ತನಗಳಿಗೆ ಬಿಗು ತರಬಹುದು. ಸಂಪೂರ್ಣ ಬದಲಾಗುತ್ತೋ ಇಲ್ಲವೋ ಬದಲಾವಣೆಯಂತೂ ಆಗಿಯೇ ಆಗುತ್ತದೆ.

ಹಾಗೆ ನೋಡಿದರೆ ಅಸ್ಥಿರಜ್ಜು ಹಾಗೂ ಅಂಗಾಂಶಗಳಿಂದ ಕೂಡಿರುವ ಸ್ತನದಲ್ಲಿ ಯಾವುದೇ ಎಲುಬುಗಳಿಲ್ಲ. ಇದೇ ಕಾರಣದಿಂದಾಗಿ ವಯಸ್ಸಾಗುತ್ತಾ ಹೋದಂತೆ ಸ್ತನಗಳು ತಮ್ಮ ಬಿಗುತನವನ್ನು ಕಳೆದುಕೊಳ್ಳುವುದು. ಇದರಿಂದಾಗಿ ಅವುಗಳು ಜೋತು ಬೀಳಲು ಆರಂಭಿಸುವುದು. ಸರಾಸರಿ ಒಂದು ಸ್ತನವು ಅರ್ಧ ಕೆಜಿ ತೂಕ ಹೊಂದಿರುತ್ತದೆ ಮತ್ತು ದೇಹದ 4-5% ಅಷ್ಟು ಕೊಬ್ಬನ್ನು ಇದು ಹೊಂದಿರುತ್ತದೆ. ಈ ಕಾರಣದಿಂದಲೇ ಸ್ತನಗಳು ಕೆಲವರಲ್ಲಿ ಜೋತುಬಿದ್ದು ಅ. ಸದಾ ನಿಮ್ಮ ಸ್ತನಗಳ ತೂಕವನ್ನು ಸರಿಯಾದವರಿಗೆ ಇರಿಟೇಶನ್‌ ಅನ್ನೋ ಫೀಲ್ ಕೊಡುತ್ತವೆ. ಕೆಲವೊಮ್ಮೆ ಸಿಗರೇಟ್‌ ಸೇವನೆಯೂ ಇದಕ್ಕೆ ಕಾರಣವಾಗಬಹುದು. ಧೂಮಪಾನ ಮಾಡುವ ಹೆಂಗಸರ ಸ್ತನಗಳು ಹೆಚ್ಚು ಜೋತು ಬಿದ್ದಿರುತ್ತವೆ. ಇದಕ್ಕೆ ಕಾರಣ ಎಂದರೆ ಅದು ಸಿಗರೇಟ್ ನಲ್ಲಿರುವ ರಾಸಾಯನಿಕಗಳು. ಇವುಗಳು ದೇಹದಲ್ಲಿನ ಎಲಾಸ್ಟಿನ್ ಅನ್ನು ಕಡಿಮೆ ಮಾಡಿ ಸ್ತನಗಳು ಜೋತು ಬೀಳುವಂತೆ ಮಾಡುತ್ತವೆ. ಸ್ತನ ಜೋತು ಬೀಳಬಾರದು ಅನ್ನುವವರು ಸಿಗರೇಟ್‌ ಸೇವನೆಯಿಂದ ಹೊರಬರಬಹುದು.

ಮುಂಬೈ ಲೋಕಲ್‌ ಟ್ರೈನ್ ಸೀಟಿನಲ್ಲಿತ್ತು ಬಳಸಿದ ಕಾಂಡೋಮ್‌, ಬೆಚ್ಚಿಬಿದ್ದ ಪ್ರಯಾಣಿಕರು

  • ಸರಿಯಾದ ಸೈಜ್‌ನ ಬ್ರಾ ಹಾಕಿಕೊಳ್ಳದಿದ್ದರೂ ಸ್ತನಗಳು ಜೋತು ಬೀಳುವುದಕ್ಕೆ ಕಾರಣವಿರಬಹುದು. ಸರಿಯಾದ ಸೈಜ್‌ ಬ್ರಾ(Bra) ಧರಿಸೋದು ಉತ್ತಮ.
  • 1/4 ಕಪ್ ಮೆಂತೆಗೆ ಸ್ವಲ್ಪ ನೀರು ಹಾಕಿ ಇದನ್ನು ಪೇಸ್ಟ್ ಮಾಡಿ. ಇದನ್ನು ಸ್ತನಗಳ ಮೇಲೆ ಹಚ್ಚಿಕೊಂಡು ಹಾಗೆ ಹತ್ತು ನಿಮಿಷ ಕಾಲ ಬಿಡಿ ಮತ್ತು ಬಳಿಕ ತೊಳೆಯಿರಿ. 15 ದಿನಕ್ಕೊಮ್ಮೆ ಹೀಗೆ ಮಾಡಿದರೆ ಸ್ತನಗಳು ಬಿಗು ಆಗಬಹುದು.
  • ಸೌತೆಕಾಯಿ ಪೇಸ್ಟ್ ಮಾಡಿ ಅದರಲ್ಲಿ ಮೊಟ್ಟೆಯ ಹಳದಿ ಹಾಕಿ ಮಿಶ್ರಣ(Mix) ಮಾಡಿ ಹಚ್ಚಿ. ಇದರಲ್ಲಿರುವ ಪ್ರೊಟೀನ್‌ ಹಾಗೂ ವಿಟಮಿನ್ಸ್ ಸ್ತನ(Breast)ಗಳು ಬಿಗಿಯಾಗುವಂತೆ ಮಾಡುವುದು. ಈ ರೀತಿ ವಾರಕ್ಕೊಮ್ಮೆ ಮಾಡಿ.
  • 1 ಮೊಟ್ಟೆಯ ಬಿಳಿಗೆ 1 ಚಮಚ ಜೇನು, 1 ಚಮಚ ಮೊಸರು ಹಾಕಿ ಮಿಕ್ಸ್ ಮಾಡಿ ಆ ಮಿಶ್ರಣ ಹಚ್ಚಬೇಕು. ಇದರಿಂದ ಕೂಡ ಸ್ತನಗಳು ಬಿಗಿಯಾಗುವುದು.
  • ನಿಯಮಿತವಾಗಿ ಪುಶ್ ಅಪ್ (Pushup)ಮಾಡಿದರೆ ಆಗ ಸ್ತನಗಳು ಬಿಗಿಗೊಳ್ಳುವುದು.
  • ಎರಡು ದಿನಕ್ಕೊಮ್ಮೆ ಆಲಿವ್ ತೈಲದಿಂದ ಸ್ತನಗಳಿಗೆ ಮಸಾಜ್ ಮಾಡಿ, ಬಳಿಕ ಸ್ನಾನ ಮಾಡಿ. ಮೇಲ್ಮುಖವಾಗಿ ಮಸಾಜ್ ಮಾಡಿದರೆ ಅದರಿಂದ ರಕ್ತ ಪರಿಚಲನೆ ಸರಾಗವಾಗುವುದು, ಐಸ್ ಮಸಾಜ್ ಇದರಲ್ಲಿ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ತಂಪಿನಿಂದಾಗಿ ಚರ್ಮವು ನೈಸರ್ಗಿಕವಾಗಿ ಬಿಗಿತ ಪಡೆಯುವುದು.
  • -ಪ್ರೋಟೀನ್ ಅಧಿಕವಾಗಿರುವಂತಹ ಆಹಾರಗಳನ್ನು ತಿನ್ನಿ. ಆದಷ್ಟು ಜಂಕ್ ಫುಡ್ ನಿಂದ ದೂರವಿರಿ. ಇಂಥ ಅನೇಕ ವಿಧಾನಗಳಿವೆ. ಇದನ್ನು ನಿತ್ಯಬಳಕೆಯಲ್ಲಿ ತಂದರೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸುತ್ತದೆ. ಆದರೆ ಎದೆಯಲ್ಲಿ ಬಿಗು ಕಳೆದುಕೊಂಡರೆ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ಈ ಪರಿಹಾರ ಬಳಸೋದು ಜಾಣತನ ಅಂತಾರೆ ಈ ಬಗ್ಗೆ ತಿಳಿದವರು.

ತೂಕ ಇಳಿಸೋಕೆ ಡಯಟಿಂಗ್ ಮಾಡಿದ್ರೆ ಕೂದಲು ಉದುರುತ್ತಾ?

click me!