30 ನಿಮಿಷ ಬಿಸಿಲಿನಲ್ಲಿ ಮಲಗಿದ್ದ ಯುವತಿ, ಎದ್ದಾಗ ಮುಖ ನೋಡಿ ಗಾಬರಿಯೋ ಗಾಬರಿ !

Published : Aug 23, 2022, 02:44 PM ISTUpdated : Aug 23, 2022, 03:27 PM IST
30 ನಿಮಿಷ ಬಿಸಿಲಿನಲ್ಲಿ ಮಲಗಿದ್ದ ಯುವತಿ, ಎದ್ದಾಗ ಮುಖ ನೋಡಿ ಗಾಬರಿಯೋ ಗಾಬರಿ !

ಸಾರಾಂಶ

ಬಿಸಿಲಿಗೆ ಒಡ್ಡಿಕೊಂಡಾಗ ಚರ್ಮದಲ್ಲಿ ತುರಿಕೆ, ಗುಳ್ಳೆ, ಅಲರ್ಜಿ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಆದ್ರೆ ಬಲ್ಗೇರಿಯಾದಲ್ಲಿ ಮೂವತ್ತು ನಿಮಿಷಗಳ ಕಾಲ ಬಿಸಿಲಿನಲ್ಲಿ ಮಲಗಿದ್ದ 25 ವರ್ಷದ ಯುವತಿ ತನ್ನ ಹಣೆಯ ಚರ್ಮವು ಪ್ಲಾಸ್ಟಿಕ್‌ನಂತೆ ಬದಲಾಗಿ ಅಚ್ಚರಿ ಮೂಡಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.   

30 ನಿಮಿಷಗಳ ಕಾಲ ಬಿಸಿಲಿನಲ್ಲಿ ಮಲಗಿದ್ದ 25 ವರ್ಷದ ಮಹಿಳೆಯ ಹಣೆಯ ಚರ್ಮವು ಸಂಪೂರ್ಣವಾಗಿ ಪ್ಲಾಸ್ಟಿಕ್‌ನಂತೆ ಬದಲಾಗಿದೆ. ಚರ್ಮದಲ್ಲಾಗಿರುವ ದಿಢೀರ್‌ ಬದಲಾವಣೆಯಿಂದ ಯುವತಿ ಗಾಬರಿಗೊಂಡಿದ್ದಾರೆ. ಬ್ಯೂಟಿಷಿಯನ್ ಸಿರಿನ್ ಮುರಾದ್ ಅವರು ಬಲ್ಗೇರಿಯಾದಲ್ಲಿ ವಿಹಾರದಲ್ಲಿದ್ದಾಗ ಅವರು 21 ಡಿಗ್ರಿ ಸೆಲ್ಸಿಯಸ್ ಬಿಸಿಲಿನಲ್ಲಿ ಸನ್‌ಸ್ಕ್ರೀನ್ ಇಲ್ಲದೆ ಮಲಗಿದ್ದರು. ಸ್ವಲ್ಪ ನೋಯುತ್ತಿರುವ ಅನುಭವವಾದ ಕಾರಣ , ಅವರು ನಿದ್ರೆಯಿಂದ ಎಚ್ಚರಗೊಂಡರು. ಮುಖ ಕೆಂಪು ಕೆಂಪಾಗಿತ್ತು. ಆದರೆ ಆ ಬಗ್ಗೆಅವರು ಹೆಚ್ಚು ತಲೆಕೆಡಿಸಿಕೊಳ್ಳಲ್ಲಿಲ್ಲ. ಆದರೆ ಮರುದಿನ ಚರ್ಮ ಬಿಗಿಯಾಯಿತು. ಹುಬ್ಬುಗಳನ್ನು ತಿರುಗಿಸಿದಾಗ ಪ್ಲಾಸ್ಟಿಕ್‌ನಂತೆ ಕಾಣುತ್ತದೆ ಎಂದು ಮುರಾದ್ ಹೇಳಿದ್ದಾರೆ.

30 ನಿಮಿಷ ಬಿಸಿಲಲ್ಲಿ ಮಲಗಿದ್ದಕ್ಕೆ ಪ್ಲಾಸ್ಟಿಕ್‌ನಂತಾಯ್ತು ಚರ್ಮ
ತನ್ನ ಕುಟುಂಬದೊಂದಿಗೆ ಸುಟ್ಟಗಾಯದ ಬಗ್ಗೆ ಚರ್ಚಿಸಿದ ನಂತರ, ಯುನೈಟೆಡ್ ಕಿಂಗ್‌ಡಮ್‌ನ ಯುವತಿ ವೈದ್ಯರ ಬಳಿಗೆ ಹೋಗದಿರಲು ನಿರ್ಧರಿಸಿದಳು. ಯಾಕೆಂದರೆ ಈ ಚರ್ಮದ ಸಮಸ್ಯೆ (Skin problem) ಕೆಲವೇ ದಿನಗಳಲ್ಲಿ ಕಡಿಮೆಯಾಗಬಹುದು ಎಂದು ಅವರು ಭಾವಿಸಿದ್ದರು.  ಆದರೆ ದಿನಗಳು ಕಳೆದಂತೆ, ಮುರಾದ್ ಅವರ ಮುಖದ ಚರ್ಮ ಹೋಗುತ್ತಾ ಬಂತು. ಮೊದಲಿಗೆ ಆ ಬಗ್ಗೆ ನನಗೆ ನಿಜವಾಗಿಯೂ ಏನೂ ಅನಿಸಲಿಲ್ಲ ಆದರೆ ಕ್ರಮೇಣ ಹೆಚ್ಚು ಚರ್ಮ ಹೋಗುತ್ತಿರುವತೆ ಭಾಸವಾಯಿತು. ಹೆಚ್ಚು ನೋವಾಗಲು ಆರಂಭವಾಯಿತು ಎಂದು ಮುರಾದ್ ಹೇಳಿದ್ದಾರೆ. ಆದರೆ ಈಗ ನಾನು ಹೆಚ್ಚು ಉತ್ತಮವಾಗಿದ್ದೇನೆ. ಚರ್ಮವು ಮೊದಲಿಗಿಂತ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

Beauty Tips: ಚರ್ಮದಲ್ಲಿ ಹೀಗಾದರೆ ಹುಷಾರು, ಎಚ್ಚೆತ್ತುಕೊಳ್ಳುವಂತರಾಗಿ!

ನೋವಿನ (Pain) ಅನುಭವದ ನಂತರ ಮುರಾದ್ ಈಗ ಸನ್‌ಸ್ಕ್ರೀನ್‌ನ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಉತ್ಸುಕರಾಗಿದ್ದಾರೆ. 'ನೀವು ಚೆನ್ನಾಗಿರುತ್ತೀರಿ ಅಥವಾ ನಿಮ್ಮ ಚರ್ಮವು ಸುಡುವುದಿಲ್ಲ ಎಂದು ನೀವು ಎಷ್ಟು ಯೋಚಿಸಿದರೂ, ಯಾವಾಗಲೂ ಸನ್‌ಸ್ಕ್ರೀನ್‌ನ್ನು ಮುಖಕ್ಕೆ ಅನ್ವಯಿಸಿ' ಎಂದು ಮುರಾದ್ ಸಲಹೆ ನೀಡಿದ್ದಾರೆ. ಈ ಘಟನೆಯು ಕಳೆದ ತಿಂಗಳು ನಡೆದಿದ್ದು, ಮುರಾದ್ ಅವರ ಚರ್ಮವು ಆಕೆಯ ಕೆನ್ನೆಗಳ ಮೇಲೆ ಹೋಗಿರುವುದನ್ನು ನೋಡಬಹುದು. ಹೀಗಿದ್ದೂ ಬಿಸಿಲಿನಿಂದಾದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಯಾಕೆಂದರೆ ತೀವ್ರವಾದ ಬಿಸಿಲುಗಳು ಮೆಲನೋಮಾದ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ, ಇದು ಚರ್ಮದ ಕ್ಯಾನ್ಸರ್‌ನ (Skin cancer) ಅತ್ಯಂತ ಅಪಾಯಕಾರಿ ವಿಧವಾಗಿದೆ.

ಸನ್ ಬರ್ನ್ ಅನ್ನು ತೊಡೆದುಹಾಕಲು ಟಿಪ್ಸ್‌
ಬೇಸಿಗೆ ಕಾಲದಲ್ಲಿ ಪ್ರಕಾಶಮಾನವಾದ ಸೂರ್ಯನ ಬೆಳಕು ಚರ್ಮವನ್ನು ಸುಡುತ್ತದೆ. ಪ್ರತಿಯಾಗಿ ಸನ್ ಬರ್ನ್ (sun burn) ಮತ್ತು ಕಿರಿಕಿರಿಯ ಸಮಸ್ಯೆ ಉಂಟಾಗುತ್ತೆ. ಜನರು ಆಗಾಗ್ಗೆ ಅಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಸನ್ ಬರ್ನ್ ಉಂಟಾದರೆ, ಚರ್ಮದ ಮೇಲಿನ ಪದರವು ಸುಟ್ಟ ಮತ್ತು ಬಣ್ಣರಹಿತವಾಗಿ ಕಾಣಲು ಪ್ರಾರಂಭಿಸುತ್ತದೆ. ಮುಖದ ಸೂಕ್ಷ್ಮ ಭಾಗವು ಸನ್ ಬರ್ನ್ ಗೆ ಬೇಗನೆ ಬಲಿಯಾಗುತ್ತದೆ. ಕಣ್ಣುಗಳು ಮತ್ತು ತುಟಿಗಳ ಸುತ್ತಲಿನ ಚರ್ಮ ಒಣಗಿದಂತೆ (dry skin)ಹೆಚ್ಚು ಕಪ್ಪಾದಂತೆ ಭಾಸವಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಬಿಸಿಲಿನಲ್ಲಿ ಹೋಗುವಾಗ ಎಲ್ಲರೂ ಕೆಲವು ನಿಯಮಗಳನ್ನು ಅನುಸರಿಸಬೇಕು.

ಆಗಾಗ ಕೈ ತೊಳೆಯೋ ಅಭ್ಯಾಸದಿಂದ ಚರ್ಮರೋಗದ ಸಾಧ್ಯತೆ ಹೆಚ್ಚು !

ತಣ್ಣೀರಿನಲ್ಲಿ ಮುಖ ತೊಳೆಯಿರಿ: ಅದೇ ಸಮಯದಲ್ಲಿ, ಸನ್ ಬರ್ನ್ ಉಂಟಾದಾಗ ಫೇಸ್ ವಾಶ್ (face wash) ಮಾಡುವಾಗ, ಚರ್ಮದಲ್ಲಿ ಕಿರಿಕಿರಿ ಪ್ರಾರಂಭವಾಗುತ್ತದೆ. ಆದರೆ, ಬಿಸಿ ನೀರಿನ ಬದಲು ತಣ್ಣೀರಿನಿಂದ ಮುಖವನ್ನು ತೊಳೆಯುವಾಗ, ಸಾಕಷ್ಟು ಆರಾಮವಾಗುತ್ತದೆ. ಅಂತೆಯೇ, ಮನೆಮದ್ದುಗಳು ಸಹ ಈ ಸಮಸ್ಯೆಯಿಂದ ಪರಿಹಾರವನ್ನು ಒದಗಿಸಲು ಕೆಲಸ ಮಾಡುತ್ತವೆ. ಸನ್ ಬರ್ನ್ ನಿಂದ ತಕ್ಷಣದ ಪರಿಹಾರವನ್ನು ಪಡೆಯಲು ತಣ್ಣೀರಿನಿಂದ ಮುಖವನ್ನು ತೊಳೆಯಿರಿ. ಅದರ ನಂತರ, ಟಿಶ್ಯೂ ಪೇಪರ್ ನ ಸಹಾಯದಿಂದ ಮುಖವನ್ನು ಚೆನ್ನಾಗಿ ಒರೆಸಿ. 

ಅಲೋವೆರಾ ಜೆಲ್ ಬಳಸಿ: ಮುಖ, ಕೈ ಕಾಲುಗಳಿಗೆ ಅಲೋವೆರಾ ಜೆಲ್ (aloevera gel)ಅನ್ನು ಹಚ್ಚಿ. ಇದಕ್ಕಾಗಿ, ಅಲೋವೆರಾದ ತಾಜಾ ಎಲೆಗಳನ್ನು ಬಳಸಿ. ಇದರಿಂದ ಮುಖ ಪ್ರೆಶ್ ಆಗುತ್ತದೆ. ಎಲೆಗಳಿಂದ ಜೆಲ್ ಅನ್ನು ತೆಗೆದು, ಅದನ್ನು ರುಬ್ಬಿ ಫ್ರಿಡ್ಜ್ ನಲ್ಲಿಡಿ. ಸ್ವಲ್ಪ ಸಮಯದ ನಂತರ, ಇದನ್ನು ಪೇಸ್ಟ್ ನಂತೆ ಮುಖಕ್ಕೆ ಹಚ್ಚಿ. ಬೇಸಿಗೆಯಲ್ಲಿ, ನೀವು ಅಲೋವೆರಾವನ್ನು ಅರೆಯಬಹುದು ಮತ್ತು ಯಾವಾಗಲೂ ಅದನ್ನು ಫ್ರಿಜ್ ನಲ್ಲಿ ಇಡಬಹುದು. ಇದು ನಿಮಗೆ ಬಹಳ ಉಪಯುಕ್ತವಾಗುತ್ತದೆ.

ಮಳೆಗಾಲದಲ್ಲಿ ಕಾಡೋ ಕಾಲ್ಬೆರಳಿನ ಫಂಗಸ್ ಸಮಸ್ಯೆ: ಮನೆಯಲ್ಲಿದೆ ಮದ್ದು!

ಐಸ್‌ಕ್ಯೂಬ್‌ನಿಂದ ಮುಖ ಉಜ್ಜಿ: ಸನ್ ಬರ್ನ್ ನಿಂದ ತಕ್ಷಣದ ಪರಿಹಾರವನ್ನು ಪಡೆಯಲು ಐಸ್ ಕ್ಯೂಬ್ (ice cube)ಇಡಿ. ಇದಕ್ಕಾಗಿ, ಬಟ್ಟೆಗಳ ನಡುವೆ ಐಸ್ ಕ್ಯೂಬ್ ಅನ್ನು ಇರಿಸಿ ಮತ್ತು ಅದರಿಂದ ಮುಖವನ್ನು ಉಜ್ಜಿ. ಮುಖ ಮಾತ್ರವಲ್ಲ, ಸನ್ ಬರ್ನ್ ನಿಂದ ಬಾಧಿತವಾದ ಇತರ ಸ್ಥಳಗಳಲ್ಲಿ ಈ ತಂತ್ರವನ್ನು ಪ್ರಯತ್ನಿಸಬಹುದು. ನೀವು ಐಸ್ ಕ್ಯೂಬ್ ನಿಂದ ಮುಖದ ಮೇಲೆ ಮಸಾಜ್ (massage)ಮಾಡಲು ಬಯಸದೆ ಇದ್ದರೆ, ಇನ್ನೊಂದು ಉಪಾಯ ಇಲ್ಲಿದೆ. ಒಂದು ಬೌಲ್ ನಲ್ಲಿ ನೀರು ಮತ್ತು ಐಸ್ ಕ್ಯೂಬ್ ಅನ್ನು ಮಿಶ್ರಣ ಮಾಡಿ. ಸ್ವಲ್ಪ ಮಂಜುಗಡ್ಡೆ ನೀರಿನಲ್ಲಿ ಕರಗಲಿ ಮತ್ತು ಈಗ ಆ ನೀರಿನಿಂದ ಮುಖವನ್ನು ತೊಳೆಯಿರಿ. ಇದು ನಿಮಿಷಗಳಲ್ಲಿ ನಿಮ್ಮ ಸಮಸ್ಯೆಯನ್ನು ತೆಗೆದುಹಾಕುತ್ತದೆ

ಸೌತೆಕಾಯಿ ರಸ ಹಚ್ಚಿ: ಸನ್ ಬರ್ನ್ ನಿಂದ ಪರಿಹಾರ ಪಡೆಯಲು ಸೌತೆಕಾಯಿ ರಸವನ್ನು ಸಹ ಹಚ್ಚಬಹುದು. ಮೊದಲನೆಯದಾಗಿ, ಸೌತೆಕಾಯಿಯನ್ನು ತೊಳೆಯಿರಿ ಮತ್ತು ಅದರ ಸಿಪ್ಪೆ ಸುಲಿಯಿರಿ. ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನಂತರ ಅದನ್ನು ರುಬ್ಬಿಕೊಳ್ಳಿ. ಈಗ ಪೇಸ್ಟ್ ಅನ್ನು 20 ನಿಮಿಷಗಳ ಕಾಲ ಫ್ರಿಜ್ ನಲ್ಲಿ ಬಿಡಿ ಮತ್ತು ನಂತರ ಅದನ್ನು ಸನ್ ಬರ್ನ್ ಆದ ಜಾಗಕ್ಕೆ ಹಚ್ಚಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಬಾಲಿವುಡ್‌ ಈ ಸ್ಟಾರ್ ನಟಿಯರು ರಿಜೆಕ್ಟ್ ಮಾಡಿದ್ರು ಆ ಸಿನಿಮಾ; ಆದ್ರೆ ಮುಂದೆ ಅವರೆಲ್ಲರ ಲೈಫ್‌ನಲ್ಲಿ ಏನಾಯ್ತು?