ಮೂಗು ಮತ್ತು ತುಟಿಗಳ ಬಗ್ಗೆ ಕೀಳರಿಮೆ ಇದ್ದ ಮಹಿಳೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಏಳು ವರ್ಷಗಳ ದಾಂಪತ್ಯ ಜೀವನಕ್ಕೆ ವಿಚ್ಛೇದನ ನೀಡಿದ್ದಾಳೆ. ಸರ್ಜರಿಯ ನಂತರ ಆತ್ಮವಿಶ್ವಾಸ ಹೆಚ್ಚಾಗಿದ್ದು, ಸಂತೋಷದಿಂದ ಜೀವನ ಸಾಗಿಸುತ್ತಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಸಾಮಾನ್ಯವಾಗಿ ಬಹುತೇಕ ಹೆಣ್ಣು ಮಕ್ಕಳಿಗೆ ತಾವು ನೋಡಲು ಚೆನ್ನಾಗಿಯೇ ಇದ್ದರೂ ತಮ್ಮ ಸೌಂದರ್ಯದ ಬಗ್ಗೆ ಬಹಳ ಕೀಳರಿಮೆ ಇರುತ್ತದೆ. ಎಷ್ಟೇ ಚೆನ್ನಾಗಿದ್ದರೂ ಆತ್ಮವಿಶ್ವಾಸದ ಕೊರತೆಯಿಂದ ಅನೇಕರು ಏನು ಮಾಡಲು ಹಿಂದೆ ಮುಂದೆ ನೋಡುತ್ತಿರುತ್ತಾರೆ. ಇನ್ನೂ ಅನೇಕರಿಗೆ ಬೇರೆಯವರ ಹೀಗೆಳೆಯುವ ಮಾತುಗಳೇ ಅವರನ್ನು ಮತ್ತಷ್ಟು ಕುಗ್ಗಿಸುವಂತೆ ಮಾಡುತ್ತದೆ. ಈ ಮಾತುಗಳೇ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ನೆನಪಾಗಿ ಗೊಂದಲ ಉಂಟಾಗುವಂತೆ ಮಾಡುತ್ತದೆ. ವಿಶೇಷವಾಗಿ ಬಾಡಿ ಶೇಮಿಂಗ್ ಮಾಡುವುದರಿಂದ ಅನೇಕರಿಗೆ ಆತ್ಮವಿಶ್ವಾಸವೇ ಕುಂದಿ ಹೋಗುತ್ತದೆ. ಅನೇಕ ಮಹಿಳೆಯರಿಗೆ ಅವರ ಸೌಂದರ್ಯವೇ ಅವರಿಗೆ ದೊಡ್ಡ ಆತ್ಮವಿಶ್ವಾಸವನ್ನು ತುಂಬುತ್ತದೆ. ಅದಕ್ಕಾಗಿ ಅನೇಕರು ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗುತ್ತಾರೆ. ಈ ಮೂಲಕ ತಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳುತ್ತಾರೆ.
ಅದೇ ರೀತಿ ಇಲ್ಲೊಬ್ಬಳು ಮಹಿಳೆಗೆ ತನ್ನ ಮೂಗು ಹಾಗೂ ತುಟಿಗಳ ಬಗ್ಗೆ ತೀವ್ರವಾದ ಕೀಳರಿಮೆ ಇತ್ತು. ಇದರಿಂದಲೇ ಆಕೆಯ ಆತ್ಮವಿಶ್ವಾಸ ಸಂಪೂರ್ಣ ಕುಂದಿತ್ತು. ಹೀಗಾಗಿ ಆಕೆ ಹೇಗಾದರೂ ಮಾಡಿ ತನ್ನ ಮೂಗು ಹಾಗೂ ತುಟಿಗಳಿಗೆ ಕತ್ತರಿ ಹಾಕಿ ಚೆನ್ನಾಗಿ ಮಾಡಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು, ಅದರಂತೆ ಸರ್ಜರಿಯನ್ನು ಮಾಡಿಸಿಕೊಂಡಿದ್ದಾಳೆ. ಆದರೆ ಬದಲಾದ ತನ್ನ ಈ ಸೌಂದರ್ಯದಿಂದ ಮಾನಸಿಕವಾಗಿ ಬಹಳಷ್ಟು ಬದಲಾದ ಆಕೆ ಈಗ ಗಂಡನಿಗೆ ವಿಚ್ಚೇದನ ನೀಡಿದ್ದಾಳೆ. ಈ ವಿಚಾರವನ್ನು ಆಕೆ ತನ್ನ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಆಕೆಯ ವೀಡಿಯೋವನ್ನು 20 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಪತ್ನಿಯ ಆಸ್ಪತ್ರೆಗೆ ದಾಖಲಿಸಿ 2 ವರ್ಷವಾದರೂ ಬಾರದ ಪತಿ: ಕೋಟಿ ಮೊತ್ತದ ಬಿಲ್‌ಗಾಗಿ ಕೋರ್ಟ್ ಮೆಟ್ಟಿಲೇರಿದ ಆಸ್ಪತ್ರೆ
ಅಂದಹಾಗೆ ಪ್ಲಾಸ್ಟಿಕ್ ಸರ್ಜರಿ ನಂತರ ಗಂಡನಿಗೆ ವಿಚ್ಚೇದನ ನೀಡಿದಾಕೆ ಫಿಲಡೆಲ್ಫಿಯಾದ ನಿವಾಸಿ 30 ವರ್ಷದ ಡೆವಿನ್ ಐಕನ್. ಸರ್ಜರಿಗೆ ಒಳಗಾದ ನಂತರ ಏಳು ವರ್ಷದಿಂದ ಇದ್ದ ಮದುವೆ ಜೀವನ ಬೇಡ ಅಂತಾ ನಿರ್ಧಾರ ತಗೊಂಡಿದೀನಿ ಅಂತ ಆಕೆ ಹೇಳಿದ್ದಾಳೆ. ಅಂದಹಾಗೆ ಡೆವಿನ್ ಕಳೆದ ನವೆಂಬರ್‌ನಲ್ಲಿ 11,000 ಡಾಲರ್ (9.1 ಲಕ್ಷ ರೂಪಾಯಿ) ಖರ್ಚು ಮಾಡಿ ಮೂಗಿಗೆ ಸರ್ಜರಿ ಮಾಡ್ಕೊಂಡಿದ್ಲು ಜೊತೆಗೆ ತುಟಿಗೂ ಫಿಲ್ಲಿಂಗ್ ಮಾಡಿಸಿಕೊಂಡಿದ್ದಾಳೆ.
'ಸರ್ಜರಿ ಆದ್ಮೇಲೆ 'ನಾನು ತುಂಬಾ ಚೆನ್ನಾಗಿ ಕಾಣ್ತಿದೀನಿ. ನನ್ನ ಹೊಸ ಮೂಗು ನನಗೆ ನನ್ನದೇ ಆದ ಆಯ್ಕೆ ಮಾಡಿಕೊಳ್ಳುವುದಕ್ಕೆ ಹಾಗೂ ನನ್ನ ಕಷ್ಟದ ಮದುವೆ ಜೀವನವನ್ನು ಮುಗಿಸುವುದಕ್ಕೆ ಸಹಾಯ ಮಾಡಿದೆ ಎಂದು ಡೆವಿನ್ ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ನವೆಂಬರ್‌ನಲ್ಲಿ ಸರ್ಜರಿ ಆದ ನಂತರ ಡಿಸೆಂಬರ್‌ನಲ್ಲಿ ಡೆವಿನ್ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಳು. ಅಲ್ಲದೇ ತನ್ನ ಈ ಬದಲಾವಣೆಯ ವಿಡಿಯೋವನ್ನು ಆಕೆ ಟಿಕ್‌ಟಾಕ್‌ನಲ್ಲಿ ಹಾಕಿದ್ದು, ಕೋಟ್ಯಾಂತರ ಜನ ಅದನ್ನು ವೀಕ್ಷಿಸಿದ್ದಾರೆ.
ಪತ್ನಿಗೆ ಅಕ್ರಮ ಸಂಬಂಧದಿಂದ ಮಗು ಜನಿಸಿದ್ರೆ ಅದ್ರ ಹೊಣೆ ಯಾರದ್ದು?
ವಿಚ್ಚೇದನದ ನಂತರ ನಾನು ಈಗ ಪ್ರತಿದಿನ ಖುಷಿಯಾಗಿ ಎದ್ದೇಳ್ತೀನಿ ಅಂತಾ ಡೆವಿನ್ ಹೇಳಿದ್ದಾಳೆ. ಕೇವಲ ಡೆವಿನ್‌ಗೆ ಮಾತ್ರ ಈ ತರ ಆಗಿಲ್ಲ, 83% ಜನ ವಿಚ್ಛೇದನ ಪಡೆದ ನಂತರ ಖುಷಿಯಾಗಿ ನೆಮ್ಮದಿಯಾಗಿ ಇರ್ತಾರೆ ಅಂತಾ ಕೆಲವರು ಹೇಳ್ತಾರೆ. ಡೆವಿನ್ ಚಿಕ್ಕವಳಿದ್ದಾಗ ಮೂಗ್ ಚೆನ್ನಾಗಿಲ್ಲ ಅಂತಾ ಅವಳನ್ನ ತುಂಬಾ ಜನ ಕಾಡಿಸಿದ್ರಂತೆ. ಅವಳ ಫ್ರೆಂಡ್ಸ್ ಅವಳನ್ನು ಮಾಟಗಾತಿ ಅಂತಾನೂ ಕಾರ್ಟೂನ್ ಪಾತ್ರಗಳ ಹೆಸರಿಟ್ಟು ಕರೀತಿದ್ರಂತೆ. ಹೀಗಾಗಿ ಆಕೆಗೆ ತನ್ನ ಮದುವೆ ವಿಚಾರದಲ್ಲೂ ಸರಿಯಾಗಿ ನಿರ್ಧಾರ ತಗೊಳ್ಳುವುದಕ್ಕೆ ಸಾಧ್ಯವಾಗಿಲ್ಲ ಎಂದು ಡೆವಿನ್ ಹೇಳಿದ್ದಾಳೆ. ಆದರೆ ಈಗ ಹೊಸ ಮೂಗ್ ಬಂದ್ಮೇಲೆ ತುಂಬಾ ಕಾನ್ಫಿಡೆಂಟ್ ಆಗಿದ್ದೀನಿ, ಈಗ ಡೇಟಿಂಗ್ ಮಾಡ್ತಿದೀನಿ ಅಂತಾ ಡೆವಿನ್ ಹೇಳಿಕೊಂಡಿದ್ದಾಳೆ.
ಈಕೆಯ ಈ ಹೇಳಿಕೆಗೆ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಬಹುಶಃ ಆಕೆಯ ಗಂಡ ಹೀಗಾಗಬಹುದು ಎಂದು ಊಹೆಯೂ ಮಾಡಿರಲಾರ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆಯ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.
"My $11,000 nose job gave me clarity to ask for a divorce" pic.twitter.com/CUe1SK92Ld
— Unlimited L's (@unlimited_ls)