ಅರೆ..ಇದ್ಹೇಗೆ ಸಾಧ್ಯ..ತಿಂಗಳಿಗೆ ಮೂರು ಸಾರಿ ಸತ್ತು ಬದುಕುತ್ತಾಳಂತೆ ಈ ಮಹಿಳೆ!

By Vinutha Perla  |  First Published Apr 30, 2023, 3:37 PM IST

ಸತ್ತ ಮೇಲೆ ಏನಾಗುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಸತ್ತವರು ಯಾರೂ ಮತ್ತೆ ಬದುಕಿ ಬರುವುದಿಲ್ಲ. ಸಾಯುವ ಅನುಭವ ಹೇಗಿರುತ್ತದೆ ಎಂದು ಹೇಳುವುದಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ಸತ್ತು ಹೋಗಿ ಮತ್ತೆ ಬದುಕಿ ಬರುತ್ತಾಳೆ. ಅರೆ ಇದ್ಹೇಗೆ ಸಾಧ್ಯ ಅಂತೀರಾ? ಇಲ್ಲಿದೆ ಮಾಹಿತಿ.


ಒಬ್ಬ ಮಹಿಳೆ ತಾನು ತಿಂಗಳಿಗೆ ಮೂರು ಬಾರಿ ಸಾಯುತ್ತೇನೆ ಮತ್ತು ಮರಣಾನಂತರದ ಜೀವನದಲ್ಲಿ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ. 57 ವರ್ಷದ ಬೆವರ್ಲಿ ಗಿಲ್ಮೊರ್, , ತನ್ನ 20ರ ಹರೆಯದಲ್ಲಿ ಮಿದುಳಿನ ಆಘಾತದಿಂದ ಬಳಲುತ್ತಿದ್ದರು. ಆ ನಂತರ ಅವರು ದಿನವೂ ಮೂರು ಸಾರಿ ಸತ್ತು ಬದುಕುತ್ತಿದ್ದೇನೆ ಎಂದು ತಿಳಿಸಿದ್ದಾಳೆ. ಸತ್ತವರೊಂದಿಗೆ ಅಸಾಮಾನ್ಯ ಅನುಭವಗಳನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾಳೆ.ತಿಂಗಳಿಗೆ ಮೂರು ಬಾರಿ ವಿಲಕ್ಷಣ ಅನುಭವಗಳನ್ನು ಅನುಭವಿಸುವ ಗಿಲ್ಮೊರ್, ಜೀಸಸ್ ಮತ್ತು ವಾಲ್ಟ್ ಡಿಸ್ನಿಯನ್ನು ಭೇಟಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ.

ಸತ್ತವರೊಂದಿಗೆ ಸಂವಹನ ನಡೆಸುತ್ತಾಳಂತೆ ಮಹಿಳೆ!
1980ರ ದಶಕದಲ್ಲಿ ಈ ರೀತಿ ಸತ್ತಾಗ ನಾನು ಯೇಸುವಿನೊಂದಿಗೆ ಮಾತನಾಡಿದ್ದೆ ಎಂದು ಹೇಳಿಕೊಂಡಿದ್ದಾಳೆ. ವೈದ್ಯರು ಮಹಿಳೆ ಪ್ರಜ್ಞೆಯ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ. ಇದು ಸಾಮಾನ್ಯವಾಗಿ ಕೋಮಾದಲ್ಲಿರುವ ಜನರಿಗೆ ಸಂಭವಿಸುತ್ತದೆ. ಈ ಸಮಯದಲ್ಲಿ ವ್ಯಕ್ತಿಯ ಹಾರ್ಟ್‌ಬೀಟ್‌ ನಿಲ್ಲಬಹುದು ಮತ್ತು ಅವಳ ದೇಹವು (Body) ನಿಧಾನವಾಗಿ ಕೆಲಸ ಮಾಡುವುದನ್ನು ನಿಲ್ಲಿಸಲು ಆರಂಭಿಸುತ್ತದೆ ಎಂದು ವೈದ್ಯರು ತಿಳಿಸಿದರು. ಸತ್ತವರೊಂದಿಗೆ ಸಂವಹನ (Communication) ನಡೆಸುವ ಮೊದಲು ಅವಳು ದೈಹಿಕವಾಗಿ ತನ್ನ ದೇಹವನ್ನು ತೊರೆದಂತೆ ಭಾವಿಸುತ್ತಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Tap to resize

Latest Videos

ಮಹಿಳೆಯ ಕಿವಿಯೊಳಗಿತ್ತು ರಾಶಿ ಜೇಡದ ಮರಿಗಳು, ಪರೀಕ್ಷಿಸಿದ ವೈದ್ಯರಿಗೆ ಶಾಕ್..!

ವಾಲ್ಟ್ ಡಿಸ್ನಿಯನ್ನು ಭೇಟಿ ಮಾಡುವ ಬಗ್ಗೆ ಮಾತನಾಡುವಾಗ ಮಹಿಳೆ, 'ಅಲ್ಲಿ ಅದ್ಭುತವಾದ ಕಟ್ಟಡವಿದೆ ಮತ್ತು ಮರವು ಜೀವಂತವಾಗಿದೆ ಮತ್ತು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. ವಾಲ್ಟ್ ಡಿಸ್ನಿ ನನ್ನ ಬಳಿ ತುಂಬಾ ಚೆನ್ನಾಗಿ ಮಾತನಾಡಿದರು' ಎಂದು ಹೇಳಿದಳು. 'ನಾನು ಅವನ ಮಾತುಗಳನ್ನು ಕೇಳುತ್ತಾ ಕುಳಿತೆ ಮತ್ತು ಅವನು ಈ ಪಾತ್ರಗಳೊಂದಿಗೆ ಕಾಣಿಸಿಕೊಳ್ಳುತ್ತಾನೆ ಮತ್ತು ಅವನು ಈ ಪಾತ್ರಗಳ ಹೆಸರುಗಳು ಮತ್ತು ಅವರ ವ್ಯಕ್ತಿತ್ವಗಳು ಮತ್ತು ಅವರು ಜೀವನದಲ್ಲಿ ಏನು ಮಾಡಿದರು, ಅವರು ಎಲ್ಲಿಂದ ಬಂದರು ಮತ್ತು ಅವುಗಳ ಮೂಲವನ್ನು ನನಗೆ ಹೇಳುತ್ತಿದ್ದರು' ಎಂದು ಮಹಿಳೆ ತಿಳಿಸಿದ್ದಾಳೆ.

ತನ್ನ ತಂದೆಯನ್ನು ಭೇಟಿ ಮಾಡಿದ ಅನುಭವದ ಬಗ್ಗೆ ವಿವರಿಸುತ್ತಾ, 'ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ ಅವರು 52 ವರ್ಷ ವಯಸ್ಸಿನವರಾಗಿದ್ದರು. ಅವರು ತುಂಬಾ ಸಂತೋಷದಿಂದ ಮತ್ತು ಪ್ರಕಾಶಮಾನವಾಗಿ ಕಾಣುತ್ತಿದ್ದರು. ಅವರನ್ನು ಭೇಟಿಯಾಗಿದ್ದಕ್ಕಾಗಿ ನಾನು ತುಂಬಾ ಹೆಮ್ಮೆಪಡುತ್ತೇನೆ' ಎಂದರು. ಗಿಲ್ಮೊರ್ ತನ್ನ ಅನುಭವಗಳು ಯಾವಾಗಲೂ ಮೊದಲಿಗೆ ನನಗೆ ಅರ್ಥವಾಗುವುದಿಲ್ಲ. ಆದರೆ ನಂತರ ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ಬೆಲ್ಜಿಯಂನ ಲೀಜ್ ವಿಶ್ವವಿದ್ಯಾಲಯದ ಕೋಮಾ ಸೈನ್ಸ್ ಗ್ರೂಪ್‌ನ ಸಂಶೋಧಕರು ಗಿಲ್ಮೊರ್ ಅವರ ಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಂಶೋಧನೆ ನಡೆಸುತ್ತಿದ್ದಾರೆ. 

ಲೈಫ್ ಹೀಗೂ ಬದಲಾಗುತ್ತೆ, ಒಂದು ಕಾಲದಲ್ಲಿ ಆಗರ್ಭ ಶ್ರೀಮಂತೆ..ಈಗ ಮನೆಕೆಲಸದಾಕೆ!

ಮಹಿಳೆ ಗುಪ್ತಾಂಗದಲ್ಲಿತ್ತು ಬುಲೆಟ್, ಒಳಸೇರಿದ್ದು ಹೇಗೆ ಎಂಬುದೇ ವೈದ್ಯರಿಗೆ ಅಚ್ಚರಿ!
ಮಹಿಳೆಯೊಬ್ಬರು ತಮ್ಮ ಮನೆಯ ಲಿವಿಂಗ್ ರೂಮಿನಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದಾಗ ಆಕಸ್ಮಿಕವಾಗಿ ಬಂದ ಗುಂಡು ಗುಪ್ತಾಂಗಕ್ಕೆ ತಗುಲಿರುವ ಘಟನೆ ಸೋಮಾಲಿಯಾದಲ್ಲಿ ನಡೆದಿದೆ. ಬಳಿಕ ಸ್ಥಳೀಯ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಬುಲೆಟ್‌ನ್ನು ಗುಪ್ತಾಂಗದಿಂದ ಹೊರ ತೆಗೆದರು. 24 ವರ್ಷದ ರೋಗಿಯು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ, ಎಲ್ಲಿಂದಲೋ ಹಾರಿ ಬಂದ ಗುಂಡು ಗುಪ್ತಾಂಗಕ್ಕೆ ತಗುಲಿದೆ. ಗಾಬರಿಗೊಂಡ ಮಹಿಳೆ ತಕ್ಷಣ ಮೊಗಾಡಿಶುವಿನ ಎರ್ಡೋಕನ್ ಆಸ್ಪತ್ರೆಗೆ ತೆರಳಿದ್ದಾನೆ. ಅಲ್ಲಿ ಸಿಟಿ ಸ್ಕ್ಯಾನ್ ನಲ್ಲಿ ಬುಲೆಟ್ ಗುಪ್ತಾಂಗದಲ್ಲಿ ಇರುವುದು ತಿಳಿದುಬಂದಿದೆ. ನಂತರ ವೈದ್ಯರು ಸರ್ಜರಿ ಮಾಡಿ ಗುಂಡನ್ನು ಹೊರತೆಗೆದರು. ಈ ರೀತಿಯ ಪ್ರಕರಣ ಕಂಡು ಬಂದಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ.

'ಬುಲೆಟ್ ಅದೃಷ್ಟವಶಾತ್ ಕಡಿಮೆ ವೇಗದಲ್ಲಿ ತಗುಲಿದ್ದರಿಂದ ಅವಳಿಗೆ ಏನು ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 'ರೋಗಿಯನ್ನು ಸ್ಥಳೀಯ ಅರಿವಳಿಕೆಯ ಅಡಿಯಲ್ಲಿ ಇರಿಸಿ ಅವಳ ಖಾಸಗಿ ಭಾಗದಿಂದ ಬುಲೆಟ್‌ ತೆಗೆದುಹಾಕಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಅವಳು ಯಾವುದೇ ತೊಂದರೆ ಅನುಭವಿಸಲಿಲ್ಲ, ಬಳಿಕ ಮರುದಿನ ಅವಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ. ಒಂದು ತಿಂಗಳ ನಂತರ ಫಾಲೋ-ಅಪ್ ಅಪಾಯಿಂಟ್‌ಮೆಂಟ್‌ನಲ್ಲಿ, ಮಹಿಳೆಯ ಆರೋಗ್ಯ ಉತ್ತಮವಾಗಿದೆ ಎಂಬುದನ್ನು ವೈದ್ಯರು ಗುರುತಿಸಿದರು.

click me!