
ಕುಟುಂಬ ಅಂದ್ಮೇಲೆ ಜಗಳ ಅಂತೂ ಇದ್ದೇ ಇರುತ್ತೆ. ಆದರೆ ಕೆಲವೊಮ್ಮೆ ಇದು ಹಾದಿ-ಬೀದಿ ರಂಪವೂ ಆಗೋದಿದೆ. ಅತ್ತೆ ಅಥವಾ ಮಾವ ತಮ್ಮ ಅತ್ತೆಯನ್ನು ನಿಂದಿಸಿದ ಉದಾಹರಣೆಗಳಿವೆ. ಅತ್ತೆ-ಸೊಸೆ ಜಗಳ ಅಂದ್ರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇದ್ದಿದ್ದೇ. ಆದ್ರೆ ಇಲ್ಲಿ ಮಾತ್ರ ಮಾವ ಮತ್ತು ಸೊಸೆಯ ಜಗಳ ಹಾದಿಬೀದಿ ರಂಪವಾಗಿದೆ. ಸೊಸೆ ಮಾವನನ್ನು ರಸ್ತೆಯಲ್ಲೆಲ್ಲಾ ಅಟ್ಟಾಡಿಸಿ ಹೊಡೆದಿದ್ದಾಳೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ. ರಸ್ತೆಯಲ್ಲಿ ಮಹಿಳೆಯೊಬ್ಬಳು ತನ್ನ ಮಾವನ ಮೇಲೆ ಹಿಂಸಾತ್ಮಕವಾಗಿ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ವೀಡಿಯೋ ಇದಾಗಿದೆ.
ಹೆಣ್ಣಿಗೆ ಮದುವೆಯಾದ್ಮೇಲೆ ಅತ್ತೆ ಅಂದ್ರೆ ಅಮ್ಮನ ಸಮಾನ, ಮಾವ ಅಂದ್ರೆ ಅಪ್ಪನ ಸಮಾನ ಅಂತಾರೆ . ಆದ್ರೆ ಈ ಸೊಸೆ ಮಾತ್ರ ತನ್ನ ಮಾವನ ಮೇಲೆ ಉಗ್ರಾವತಾರ ತೋರಿದ್ದಾಳೆ. ರಸ್ತೆಯಲ್ಲಿ ಮಾವನನ್ನು ಅಟ್ಟಾಡಿಸಿದ ಸೊಸೆ ಕಬ್ಬಿಣದ ಪೈಪ್‌ನಿಂದ ಥಳಿಸಿದ್ದಾಳೆ. ರಕ್ಷಿಸಲು ಬಂದ ಇನ್ನೊಬ್ಬ ಮಹಿಳೆಯನ್ನೂ ಹೊಡೆದಿದ್ದಾಳೆ. ಈ ಘಟನೆ ಹರಿಯಾಣದಲ್ಲಿ ನಡೆದಿದೆ.
ಹೆಂಡ್ತಿ, ಅತ್ತೆ ಕಾಟ: ಅಮ್ಮನ ದೂರ ಮಾಡಲಾಗದೇ ಸಾವಿಗೆ ಶರಣಾದ ಗಂಡ
ಮಾವನನ್ನು ಕಬ್ಬಿಣದ ಪೈಪ್‌ನಿಂದ ಹೊಡೆದ ಸೊಸೆ
ಸದಸ್ಯರು ಪರಸ್ಪರ ಜಗಳವಾಡದ ಕುಟುಂಬವೇ ಇರಲಾರದು. ಕೆಲವು ವಾದಗಳು ಸ್ವಲ್ಪ ಸಮಯದ ನಂತರ ಕೊನೆಗೊಂಡರೆ, ಇನ್ನು ಕೆಲವು ದೊಡ್ಡ ಸಮಸ್ಯೆಯಾಗಿ ಬದಲಾಗುತ್ತವೆ. ಯಾವುದೇ ದೊಡ್ಡ ಸಮಸ್ಯೆ ಅಥವಾ ಯಾವುದೇ ಸಣ್ಣ ವಿಷಯದ ಮೇಲೆ ವಾದಗಳು ಪ್ರಾರಂಭವಾಗಬಹುದು. ಕೆಲವೊಮ್ಮೆ ಇದು ವಿಪರೀತಕ್ಕೆ ಹೋಗಬಹುದು. ಈ ಘಟನೆಯಲ್ಲೂ ಹಾಗೆಯೇ ಆಗಿದೆ. ಮನೆಯೊಳಗಿನ ಮಾವ-ಸೊಸೆಯ (Father in law) ಜಗಳ ಹಾದಿಬೀದಿ ರಾಮಾಯಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಹಸಿರು ಸಲ್ವಾರ್ ಹಾಕಿರುವ ಮಹಿಳೆ (Woman) ಕೈಯಲ್ಲಿ ಕಬ್ಬಿಣದ ಪೈಪ್ ಹಿಡಿದಿರುವುದನ್ನು ಕಾಣಬಹುದು. ಆಕೆ ಕಿರುಚಾಡುತ್ತಾ ತನ್ನ ಮಾವನನ್ನು ಬೆನ್ನಟ್ಟುತ್ತಾ ಹೋಗುತ್ತಾಳೆ.
ರಸ್ತೆಯಲ್ಲಿ ಮಾವ ಓಡುತ್ತಿದ್ದರೆ, ಸೊಸೆ (Daugher in law) ಅವರನ್ನು ಹಿಂಬಾಲಿಸುವುದನ್ನು ನೋಡಬಹುದು. ಇದೇ ವೇಳೆ ಸಿಟ್ಟಿಗೆದ್ದ ಮಹಿಳೆ ಪೈಪ್‌ನಿಂದ ವೃದ್ಧನಿಗೆ ಹೊಡೆಯಲು ಯತ್ನಿಸಿದ್ದಾಳೆ. ಇನ್ನೊಬ್ಬ ಮಹಿಳೆ ವಯಸ್ಸಾದ ಪುರುಷನನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಆದರೆ ಅದು ಸಾಧ್ಯವಾಗುವುದಿಲ್ಲ. ಇದ್ದಕ್ಕಿದ್ದಂತೆ, ವೃದ್ಧನು ಸ್ಥಳದಿಂದ ಓಡಲು ಪ್ರಾರಂಭಿಸುತ್ತಾನೆ ಮತ್ತು ಮಹಿಳೆ ಅವನನ್ನು ರಸ್ತೆಯಲ್ಲಿ (Road) ಹುಚ್ಚುಚ್ಚಾಗಿ ಬೆನ್ನಟ್ಟಲು ಪ್ರಾರಂಭಿಸುತ್ತಾಳೆ. ಈ ಘಟನೆಯ ಬಗ್ಗೆ ಪೋಸ್ಟ್ ಮಾಡಿರುವ ಇನ್ನೊಂದು ವಿಡಿಯೋದಲ್ಲಿ ಗಾಯಗೊಂಡ ವ್ಯಕ್ತಿ ಗಾಯಗೊಂಡು ಕುರ್ಚಿಯ ಮೇಲೆ ಕುಳಿತಿರುವುದನ್ನು ತೋರಿಸುವಾಗ ವೀಡಿಯೊ ಕೊನೆಗೊಳ್ಳುತ್ತದೆ.
ಯಪ್ಪಾ! ತುಂಡುಡುಗೆ ಧರಿಸಿದ್ದಕ್ಕೆ ಸೊಸೆಯ ಮುಖದ ಮೇಲೆ ಬಿಸಿ ಬಿಸಿ ಸೂಪ್ ಎರಚಿದ ಮಾವ
ಮಹಿಳೆ ತನ್ನ ಮಾವನನ್ನು ಹಿಂಬಾಲಿಸಿ ಕಬ್ಬಿಣದ ಪೈಪ್‌ನಿಂದ ಹೊಡೆದಿದ್ದಾಳೆ ಮತ್ತು ದಾಳಿಯಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ವೃದ್ಧನನ್ನು ರಕ್ಷಿಸಲು ಬಂದ ಎರಡನೇ ಮಹಿಳೆಗೂ ಮಹಿಳೆ ಥಳಿಸಿದ್ದಾರೆ ಎಂದು ವರದಿಯಾಗಿದೆ. ಮಹಿಳೆಯು ವೃದ್ಧೆಯ ಜೇಬಿನಿಂದ 40 ಸಾವಿರ ರೂ.ಗಳನ್ನು ಹೊರತೆಗೆದಿದ್ದಾಳೆ ಮತ್ತು ಈ ಬಗ್ಗೆ ಕೇಳಿದಾಗ ಆತನ ಮೇಲೆ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಲಾಗಿದೆ. ಕೆಲವು ದಿನಗಳ ಹಿಂದೆ ಸೊಸೆ ತನ್ನ ಅತ್ತೆಯನ್ನು ಹೊಡೆಯೋ ವಿಡಿಯೋ ವೈರಲ್ ಆಗಿತ್ತು.
ಇವಳೇನು ಮನುಷ್ಯಳಾ..ರಾಕ್ಷಸಿನಾ, ಆಸ್ತಿಗಾಗಿ ವಯಸ್ಸಾದ ಅತ್ತೆಗೆ ಪರಚಿ, ಹೊಡೆದು ಕಚ್ಚಿದ ಸೊಸೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.