ಸಿದ್ಧಾರ್ಥ ಸಾಮ್ರಾಜ್ಯವನ್ನು ಮುನ್ನಡೆಸುತ್ತಾಳಾ ಡಿಕೆಶಿ ಪುತ್ರಿ ಐಶ್ವರ್ಯಾ?

By Suvarna News  |  First Published Dec 5, 2020, 1:37 PM IST

ಡಿಕೆಶಿ ಶಿಕ್ಷಣ ಸಂಸ್ಥೆಗಳ ಗ್ಲೋಬಲ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರವನ್ನು ಮಗಳು ಐಶ್ವರ್ಯಾ ನೋಡಿಕೊಳ್ಳುತ್ತಿದ್ದಾರೆ. ಬ್ಯುಸಿನೆಸ್ನಲ್ಲಿ ಡಿಕೆಶಿ ಮಗಳು ಚತುರೆ, ಉದ್ಯಮಶೀಲೆ ಎಂಬ ಹೆಸರಿದೆ. ಸಿದ್ಧಾರ್ಥ ಅವರ ಕಾಫಿ ಡೇ ಬ್ಯುಸಿನೆಸ್‌ಗೆ ಮರುಜೀವ ಕೊಡುತ್ತಾಳಾ ಈಕೆ?


ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಕೆಲವೇ ದಿನಗಳಲ್ಲಿ ದಿವಂಗತ ಉದ್ಯಮಿ ಸಿದ್ಧಾರ್ಥ ಹೆಗ್ಡೆ ಪುತ್ರ ಅಮರ್ತ್ಯ ಹೆಗಡೆ ಕೈ ಹಿಡಿಯಲಿದ್ದಾರೆ. ಮುಂಬರುವ ಈ ವಿವಾಹ ಗಂಡು ಹೆಣ್ಣಿನ ಪ್ರೀತಿಗಿಂತ ಎರಡು ಪ್ರತಿಷ್ಠಿತ ಕುಟುಂಬಗಳ ಕೂಡುವಿಕೆಗೆ ನಾಂದಿ ಹಾಡಿದೆ. ಎಸ್ ಎಂ

ಕೃಷ್ಣ ಮಗಳು ಮಾಳವಿಕಾ ಹಾಗೂ ಅಳಿಯ ಸಿದ್ಧಾರ್ಥ ಅವರ ಏಕೖಕ ಪುತ್ರ ಅಮರ್ತ್ಯ ಹೆಗ್ಡೆ ಜೊತೆಗೆ ಐಶ್ವರ್ಯಾ ಅವರ ವಿವಾಹಕ್ಕೆ ಹಲವರು ಹಲವು ಅರ್ಥ ಹಚ್ಚಿದ್ದಾರೆ. ಆದರೆ ಸಿದ್ಧಾರ್ಥ ಅವರ ಆಪ್ತರಲ್ಲಿ ಈ ಸಂಬಂಧದ ಬಳಿಕ ಒಂದು ಕನಸು ಕುಡಿಯೊಡೆದಿದೆ. ಅದು ಸಿದ್ಧಾರ್ಥ ಮನೆ ಸೇರಲಿರುವ ಐಶ್ವರ್ಯಾ ಅವರ ಮನೆ ಬೆಳಗುವ ಜೊತೆಗೆ ಅವರ ಕನಸಿನ ಸಾಮ್ರಾಜ್ಯವನ್ನು ಯಶಸ್ಸಿನತ್ತ ಕೊಂಡೊಯ್ಯಬಹುದಾ ಅನ್ನುವ ದೂರದಾಸೆ, ಅವರು ಹೀಗೆ ಅಂದುಕೊಳ್ಳೋದಕ್ಕೆ ಕಾರಣಗಳೂ ಇವೆ.

Tap to resize

Latest Videos

ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಪುತ್ರಿ ಅದ್ದೂರಿ ನಿಶ್ಚಿತಾರ್ಥ - ಕಾಫಿ ಡೇ ಮಾಲಿಕನೊಂದಿಗೆ ಎಂಗೇಜ್ ...

ಹಾಗೆ ನೋಡಿದರೆ ಡಿ ಕೆ ಶಿವಕುಮಾರ್ ಹಾಗೂ ಸಿದ್ಧಾರ್ಥ ಅವರು ಬಹುಕಾಲದ ಸ್ನೇಹಿತರು. ಅದಕ್ಕಾಗಿ ಹೆಚ್ಚಾಗಿ ಉದ್ಯಮದಲ್ಲಿ ಜೊತೆಯಾಗಿ ತೊಡಗಿಸಿಕೊಂಡವರು. ಹಿಂದೊಮ್ಮೆ ಡಿಕೆಶಿ ಮಗಳು ಐಶ್ವರ್ಯಾ ಅಕೌಂಟ್ ನಿಂದಲೇ ಕಾಫಿ ಡೇಗೆ ಕೋಟಿಗಟ್ಟಲೆ ಹಣದ ಪೂರೈಕೆಯಾದದ್ದು ಸುದ್ದಿಯಾಗಿತ್ತು. ಜೊತೆಗೆ ಪುತ್ರಿ ಐಶ್ವರ್ಯಾಳನ್ನು ಕಾಫಿ ಡೇಗೆ ಪಾಲುದಾರಳನ್ನಾಗಿ ಮಾಡಬೇಕೆಂಬ ಕನಸು ಡಿಕೆಶಿ ಅವರಿಗಿತ್ತು ಅನ್ನೋದು ಅವರ ಆಪ್ತವಲಯದಲ್ಲಿ ಕೇಳಿ ಬರುತ್ತಿದ್ದ ಮಾತು. ಸಿದ್ಧಾರ್ಥ ಹಾಗೂ ಡಿಕೆ ಶಿವಕುಮಾರ್ ಇಬ್ಬರೂ ಗೌಡ ಸಮುದಾಯಕ್ಕೆ ಸೇರಿದವರಾದ ಕಾರಣ, ವ್ಯವಹಾರಕ್ಕೆ ಸಂಬಂಧಿಸಿ ಅನೇಕ ಕೊಡುಕೊಳ್ಳುವಿಕೆಗಳು ಇವರಿಬ್ಬರ ನಡುವೆ ನಡೆಯುತ್ತಿದ್ದ ಕಾರಣ ಸಿದ್ಧಾರ್ಥ ಬದುಕಿದ್ದಾಗಲೇ ಅವರ ಪುತ್ರ ಅಮರ್ಥ್ಯನಿಗೂ ಡಿಕೆಶಿ ಪುತ್ರಿ ಐಶ್ವರ್ಯಾಗೂ ಮದುವೆ ಮಾಡುವ ಮಾತುಕತೆ ನಡೆದಿರಬಹುದು. ಆದರೆ ಅವರು ಬದುಕಿದ್ದಾಗ ಅದು ಈಡೇರಲಿಲ್ಲ. ಅವರ ನಿಧನದ ಒಂದು ವರ್ಷದ ಬಳಿಕ ಈ ಇಬ್ಬರ ನಡುವೆ ನಿಶ್ಚಿತಾರ್ಥ ನಡೆದಿದೆ. ಮತ್ತೂ ಸೂಕ್ಷ್ಮವಾಗಿ ನೋಡಿದರೆ ಡಿಕೆಶಿ ಅವರ ರಾಜಕೀಯ ಗುರು ಎಸ್ ಎಂ ಕೃಷ್ಣ. ಡಿಕೆಶಿ ಅವರಿಂದು ರಾಜಕೀಯದಲ್ಲಿ ಮಹತ್ತರ ಸ್ಥಾನ ಪಡೆದಿದ್ದರೆ ಅದಕ್ಕೆ ಎಸ್ ಎಂ ಕೃಷ್ಣ ಅವರ ಕೊಡುಗೆಯೂ ಇದೆ. ಆಮೇಲೆ ಕೃಷ್ಣ ಕಾಂಗ್ರೆಸ್ ತೊರೆದರು. ಆದರೆ ಡಿಕೆಶಿ ಜೊತೆಗಿನ ಬಾಂಧವ್ಯ ಮುಂದುವರಿದೇ ಇತ್ತು.

ಸಿದ್ಧಾರ್ಥನ ಮಗನ ವರಿಸೋ ಡಿಕೆಶಿ ಮಗಳು ಸಾವಿರ ಕೋಟಿ ಒಡತಿ...! ...

ಈಗ ಮಕ್ಕಳ ವಿಚಾರಕ್ಕೆ ಬಂದರೆ ತಂದೆಯ ನಿಧನಾನಂತರ ಕಾಫಿ ಡೇ ವ್ಯವಹಾರಗಳನ್ನು ಸಿದ್ಧಾರ್ಥ ಪುತ್ರ ಅಮರ್ಥ್ಯನೇ ನೋಡಿಕೊಳ್ಳುತ್ತಿದ್ದಾರೆ. ಇತ್ತ ಡಿಕೆಶಿ ಶಿಕ್ಷಣ ಸಂಸ್ಥೆಗಳ ಅದರಲ್ಲೂ ಬಹು ಪ್ರತಿಷ್ಠಿತ ಎನಿಸಿರುವ ಗ್ಲೋಬಲ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರವನ್ನು ಮಗಳು ಐಶ್ವರ್ಯಾ ನೋಡಿಕೊಳ್ಳುತ್ತಿದ್ದಾರೆ. ಬ್ಯುಸಿನೆಸ್ ನಲ್ಲಿ ಡಿಕೆಶಿ ಮಗಳಿಗೆ ಚತುರೆ, ಉದ್ಯಮಶೀಲೆ ಎಂಬ ಹೆಸರಿದೆ. ಈಕೆಯನ್ನು ಹತ್ತಿರದಿಂದ ಬಲ್ಲವರು ಈಕೆಯ ಬುದ್ಧಿವಂತಿಕೆ, ವ್ಯವಹಾರದಲ್ಲಿ ತಂತ್ರಗಾರಿಕೆ ಬಗ್ಗೆ ಮೆಚ್ಚಿ ಮಾತನಾಡುತ್ತಾರೆ. ಇನ್ನೂ ೨೪ರ ಹರೆಯದ ಈ ಯುವತಿ. ತನ್ನ ಉಳಿದ ವಿವರಗಳನ್ನು ಹೊರ ಜಗತ್ತಿಗೆ ಗುಪ್ತವಾಗಿಯೇ ಇಟ್ಟಿರುವ ಈಕೆಯ ಹೆಸರು ಬೆಳಕಿಗೆ ಬಂದಿದ್ದು ಹಣ ಅವ್ಯವಹಾರ ಪ್ರಕರಣದಲ್ಲಿ. ಆಗ ತನ್ನನ್ನು ಅನಾವಶ್ಯಕವಾಗಿ ಫೋಕಸ್ ಮಾಡುತ್ತಿರುವ ಮಾಧ್ಯಮಗಳ ವಿರುದ್ಧ ಈಕೆ ಸಿಟ್ಟಿನ ದನಿ ಎತ್ತಿದ್ದರು. ವಿಚಾರಣೆಯನ್ನು ಧೈರ್ಯವಾಗಿ ಎದುರಿಸಿದ್ದರು. ಆಗ ಡಿಕೆಶಿ ಮಗಳು ಸುಮ್ನೆ ಅಲ್ಲ ಅಂತ ಮಾಧ್ಯಮಗಳು ಮಾತನಾಡಿಕೊಂಡವು.

ಮೋದಿ ಫ್ರೆಂಡ್ ಕಂಪನಿಯಲ್ಲಿ ಡಿಕೆಶಿ ಮಗಳು ಐಶ್ವರ್ಯಾ ಪಾಲು? ...

ಐಶ್ವರ್ಯಾ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯ ಒಡತಿ. ನೂರಾರು ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿಗಳೂ ಈಕೆಯ ಹೆಸರಿನಲ್ಲಿವೆ. ಮುಂಬಯಿಯಲ್ಲಿ ಅಪಾರ್ಟ್‌ಮೆಂಟ್‌ ಇದೆ. ಗುಜರಾತ್‌ನ ಒಬ್ಬ ಉದ್ಯಮಿ, ಮೋದಿಯ ಸ್ನೇಹಿತ ಈ ಉದ್ಯಮಿಯ ವ್ಯವಹಾರದಲ್ಲೂ ಡಿಕೆಶಿ ಮಗಳ ಷೇರುಗಳು ಇವೆ ಎನ್ನಲಾಗುತ್ತಿದೆ. ಇಷ್ಟು ದೊಡ್ಡ ವಹಿವಾಟನ್ನು ನಿಭಾಯಿಸಬಲ್ಲವಳು ಸಿದ್ದಾರ್ಥರ ಕಂಪನಿಯನ್ನು ಸುಲಭವಾಗಿಯೇ ಮುನ್ನಡೆಸಬಲ್ಲಳು ಎಂಬುದು ಅಭಿಪ್ರಾಯ.

ಇದೀಗ ವಿವಾಹದ ಹೊಸಿಲಲ್ಲಿ ನಿಂತಿರುವ ಡಿಕೆಶಿ ಪುತ್ರಿಯ ಮೇಲೆ ಸಾಕಷ್ಟು ಜವಾಬ್ದಾರಿ ಹಾಗೂ ನಿರೀಕ್ಷೆಗಳಿವೆ. ದಿನೇ ದಿನೇ ಅಧಃಪತನದತ್ತ ಮುಖ ಮಾಡಿರುವ ಕಾಫಿ ಡೇಯನ್ನು ಯಶಸ್ಸಿನತ್ತ ಕೊಂಡೊಯ್ಯುವ ತಾಕತ್ತು ಹಾಗೂ ಅವಕಾಶಗಳೆರಡೂ ಈಕೆಗಿವೆ. ಅಪ್ಪನ ಸಪೋರ್ಟೂ ಇದ್ದರೆ, ಮನಸ್ಸು ಮಾಡಿದರೆ ಐಶ್ವರ್ಯಾಗಿದು ಕಷ್ಟವಲ್ಲ ಎಂಬ ಮಾತು ಆಪ್ತವಲಯದಲ್ಲಿದೆ. ಸಿದ್ಧಾರ್ಥನ ಜೊತೆಗೇ ಕಾಫಿ ಡೇಯ ಅಧ್ಯಾಯ ಮುಗೀತು ಅಂತ ವಿಷಾದದಲ್ಲಿರುವವರಿಗೆ ಐಶ್ವರ್ಯಾ ಸದ್ಯಕ್ಕೆ ಭರವಸೆಯ ಆಶಾಕಿರಣವಾಗಿ ನಿಂತಿದ್ದಾಳೆ.

 

click me!