ಪೆಟ್ರೋಲಿಯಂ ಜೆಲ್ಲಿ ಬ್ಯಾನ್‌ ಬಗ್ಗೆ ಚಿಂತೇನಾ ? ತ್ವಚೆಗೆ ಹಾಲಿನ ಕೆನೆ, ತುಪ್ಪ ಬಳಸ್ಬೋದು ಬಿಡಿ

By Suvarna News  |  First Published Sep 16, 2022, 3:47 PM IST

ಕೇಂದ್ರ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ತೆಗೆದುಕೊಂಡು, ಪರಿಷ್ಕೃತ ಅಗತ್ಯ ಔಷಧ ಪಟ್ಟಿಯಿಂದ ಹಲವು ಔಷಧಿಗಳನ್ನು ತೆಗೆದುಹಾಕಿದೆ. ಇದರಲ್ಲಿ ವೈಟ್‌ ಪೆಟ್ರೋಲಿಯಮ್‌ ಸಹ ಸೇರಿದೆ. ಮುಖದ ತ್ವಚೆ ಹಾಳಾಗದಂತೆ, ತುಟಿ ಒಡೆಯದಂತೆ ಕಾಳಜಿ ವಹಿಸಲು ಪೆಟ್ರೋಲಿಯಂ ಜೆಲ್ಲಿ ಬಳಸುತ್ತಿದ್ದ ಮಂದಿ ಮುಂದೇನೆಂದು ತಿಳಿಯದೆ ಕಂಗಾಲಾಗಿದ್ದಾರೆ. ಅದಕ್ಕೆ ನಮ್ಮಲ್ಲಿದೆ ಸುಲಭ ಉಪಾಯ.


ಕೇಂದ್ರ ಪರಿಷ್ಕೃತ ಅಗತ್ಯ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಅತಿ ಹೆಚ್ಚು ಬಳಕೆಯಲ್ಲಿರುವ Rantac ಮತ್ತು Zinetac ಮಾತ್ರೆ ಸೇರಿದಂತೆ ಒಟ್ಟೂ 26 ಔಷಧಗಳ ಬಳಕೆ ನಿಷೇಧಿಸಿದೆ. ಇನ್ಮುಂದೆ ಎದೆಯುರಿ, ಗ್ಯಾಸ್ಟಿಕ್‌ಗೆ ಬಳಸುತ್ತಿದ್ದ Rantac ಮತ್ತು Zinetac ಮೆಡಿಕಲ್‌ ಶಾಪ್‌ನಲ್ಲಿ ಲಭ್ಯವಾಗುವುದಿಲ್ಲ. ಇಂದಿನವರೆಗೆ ಎದೆಯುರಿ, ಗ್ಯಾಸ್‌ ಸಮಸ್ಯೆಗೆ Rantidine ಔಷಧಿಯನ್ನು Aciloc, Rantac ಮತ್ತು Zinetac ಎಂಬ ಬ್ರ್ಯಾಂಡ್‌ಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೊಟ್ಟೆ ಸಂಬಂಧಿತ ಸಮಸ್ಯೆಗೆ ಜನ ಹೆಚ್ಚು ಈ ಮಾತ್ರೆಗಳನ್ನು ಸೇವಿಸುತ್ತಿದ್ದರು. ಆದರೆ ಈ ಮಾತ್ರೆಗಳಿಂದ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಯ ಹಿನ್ನೆಲೆ ಕೇಂದ್ರ ಈ ಕ್ರಮ ಕೈಗೊಂಡಿದೆ. ಹಲವಾರು ದೇಶಗಳಲ್ಲಿ ಈಗಾಗಲೇ ಈ ಮಾತ್ರೆಗಳನ್ನು ನಿಷೇಧಿಸಲಾಗಿದೆ.

ಆದ್ರೆ ಇದೆಲ್ಲದರ ಮಧ್ಯೆ ಕೆಲವೊಂದು ಅಗತ್ಯ ಔಷಧಗಳನ್ನು ಬ್ಯಾನ್‌ ಮಾಡಿರೋದು ಹಲವರಿಗೆ ತಲೆನೋವು ಬಂದಿದೆ. ಅದರಲ್ಲೊಂದು ವೈಟ್‌ ಪೆಟ್ರೋಲಿಯಮ್‌. ನಿಷೇಧಿತ ಔಷಧ ಪಟ್ಟಿಯಲ್ಲಿ (Medicine list) ವೈಟ್‌ ಪೆಟ್ರೋಲಿಯಮ್‌ ಕೂಡ ಇದ್ದು, ಚಳಿಗಾಲದಲ್ಲಿ ಮುಖ, ತುಟಿ (Lips) ಒಡೆಯದಂತೆ ತಡೆಯಲು ಬಳಸುವ ವ್ಯಾಸಲಿನ್‌, ಬಯೋಲಿನ್‌ ಸೇರಿದಂತೆ ಇತರ ವೈಟ್‌ ಪೆಟ್ರೋಲಿಯಮ್‌ ಜೆಲ್ಲಿಗಳು ನಿಷೇಧವಾಗಲಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ. ಆದರೆ ಇದಕ್ಕೆ ಸ್ಪಷ್ಟ ಉತ್ತರ ಸದ್ಯಕ್ಕೆ ಸಿಕ್ಕಿಲ್ಲ. ನಿಷೇಧಿತ ಪಟ್ಟಿಯಲ್ಲಿ ವೈಟ್‌ ಪೆಟ್ರೋಲಿಯಮ್‌ ಹೆಸರಿದೆ, ಆದರೆ ವೈಟ್‌ ಪೆಟ್ರೋಲಿಯಮ್‌ ಜೆಲ್ಲಿ ಎಂದು ನಮೂದಿಸಿಲ್ಲ. 

Tap to resize

Latest Videos

Rantac - Zinetac, White Petroleum ನಿಷೇಧ: ಅಗತ್ಯ ಔಷಧಿ ಪಟ್ಟಿಯಿಂದ ತೆಗೆದು ಹಾಕಿದ ಕೇಂದ್ರ

ಹೀಗಿದ್ದೂ ವೈಟ್ ಪೆಟ್ರೋಲಿಯಮ್‌ ಬ್ಯಾನ್‌ ಅನ್ನೋ ವಿಚಾರ ಹಲವರಲ್ಲಿ ಮುಂದೇನು ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಇಷ್ಟು ದಿನ ಮುಖದ ತ್ವಚೆ ಹಾಳಾಗದಂತೆ, ತುಟಿ ಒಡೆಯದಂತೆ ಕಾಳಜಿ ವಹಿಸುತ್ತಿದ್ದ ಮಂದಿ ಮುಂದೇನೆಂದು ತಿಳಿಯದೆ ಕಂಗಾಲಾಗಿದ್ದಾರೆ. ಅಂಥವರಿಗೆ ಇಲ್ಲಿದೆ ಸೂಪರ್ ಐಡಿಯಾ. ಪೆಟ್ರೋಲಿಯಂ ಜೆಲ್ಲಿ ಬ್ಯಾನ್‌ ಆದ್ರೆ ಏನಂತೆ ಪರ್ಯಾಯವಾಗಿ ಮನೆಯಲ್ಲೇ ಇರೋ ಈ ಮನೆಮದ್ದುಗಳನ್ನು ಬಳಸ್ಬೋದು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮುಖದ ಸೌಂದರ್ಯಕ್ಕೆ ಹಾಲಿನ ಕೆನೆ
ಹಾಲಿನಲ್ಲಿರುವ (Milk) ಪ್ರತಿಯೊಂದು ಅಂಶಗಳು ಮುಖದ ಕಾಂತಿಯನ್ನು ಹೆಚ್ಚಿಸುವ ಗುಣವಿದೆ, ಹಾಗಾಗಿ ಪ್ರತಿ ದಿನ ಹಾಲಿನ ಕೆನೆಯನ್ನು ಮುಖಕ್ಕೆ ಹಚ್ಚುವುದರಿಂದ ಖರ್ಚು ಇಲ್ಲದೆ ಮುಖದ ಸೌಂದರ್ಯ (Beauty) ಹೆಚ್ಚಿಸಿಕೊಳ್ಳಬಹುದು.ಹಾಲಿನ ಕೆನೆಯಲ್ಲಿ ಹಲವಾರು ಅದ್ಭುತ ಗುಣಗಳಿವೆ. ಪ್ರತಿದಿನ ಹಾಲಿನ ಕೆನೆ ಬಳಸುವ ಅಭ್ಯಾಸವನ್ನು ನೀವು ಬೆಳೆಸಿಕೊಂಡರೆ, ನಿಮ್ಮ ಮುಖದಲ್ಲಿ ಸಾಕಷ್ಟು ಬದಲಾವಣೆ ಕಂಡುಬರಬಹುದು. ಚರ್ಮ ಹೊಳೆಯು ವಂತೆ ಮಾಡಲು, ಮುಖದ ಮೇಲಿನ ಗುಳ್ಳೆಗಳನ್ನು ತೆಗೆದುಹಾಕಲು, ತ್ವಚೆ ಮೃದುವಾಗಿಡಲು ಹಾಲಿನ ಕೆನೆ ಸಹಕಾರಿಯಾಗಿದೆ. ಇದನ್ನು ಅರಿಶಿನ, ಗಂಧದ ಮೊದಲಾದವುಗಳ ಜೊತೆ ಸೇರಿಸಿ ಫೇಸ್‌ ಮಾಸ್ಕ್‌ ಸಹ ತಯಾರಿಸಬಹುದು. 

ಈ ಸ್ಪೆಷಲ್ ಫೇಸ್ ಪ್ಯಾಕ್ ತಯಾರಿಸಲು ಶ್ರೀಗಂಧದ ಪುಡಿ, ಹಾಲಿನ ಕೆನೆ, ಕಡಲೆಹಿಟ್ಟು, ಅರಿಶಿ (Turmeric) ಮತ್ತು ರೋಸ್ ವಾಟರ್ ಇದ್ದರಷ್ಟೇ ಸಾಕು. ಒಂದು ಚಮಚ ಶ್ರೀಗಂಧದ ಪುಡಿಗೆ ಎರಡು ಚಮಚ ಹಾಲಿನ ಕೆನೆ, ಒಂದು ಚಮಚ ಕಡಲೆಹಿಟ್ಟು, ಒಂದು ಚಿಟಿಕೆ ಅರಿಶಿನ ಮತ್ತು ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ. ನಂತರ ಗಟ್ಟಿಯಾಗಿ ಪೇಸ್ಟ್ ಮಾಡಿಟ್ಟುಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಪೂರ್ತಿಯಾಗಿ ಹಚ್ಚಿ ಮೃದುವಾಗಿ ಉಜ್ಜಿ. ನಂತರ 10 ನಿಮಿಷಗಳ ಕಾಲ ಹಾಗೇ ಬಿಡಿ. ನಂತರ ನೀರಿನಲ್ಲಿ ಮುಖ ತೊಳೆಯಿರಿ. ಹೀಗೆ ಮಾಡುವುದರಿಂದ ಮುಖ ಮೊಡವೆಗಳಿಲ್ಲದೆ ಕಾಂತಿಯುತವಾಗಿ ಕಂಗೊಳಿಸುತ್ತದೆ. 

ಕೂದಲಿಗೆ ಎಣ್ಣೆ ಹಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡ್ಬೋದಾ ?

ತುಟಿ ಒಡೆಯದಿರಲು ತುಪ್ಪ ಹಚ್ಚಿ
ವಾತಾವರಣದ ಕಾರಣದಿಂದ ಚರ್ಮದ ಮೇಲೆ ಉಂಟಾಗುವ ಅನೇಕ ಸಮಸ್ಯೆಗಳಿಗೆ ತುಪ್ಪವು (Ghee) ಸುಲಭ ಪರಿಹಾರ ನೀಡುತ್ತದೆ. ತುಪ್ಪದಲ್ಲಿ ಆರೋಗ್ಯಕರ ಕೊಬ್ಬಿನಾಂಶ ಇರುತ್ತದೆ. ತುಪ್ಪದಲ್ಲಿ ಇರುವ ಔಷಧೀಯ ಗುಣವು ಚರ್ಮಕ್ಕೆ ಸಂಬಂಧಿಸಿದ ಅನೇಕ ತೊಂದರೆಯನ್ನು ನಿವಾರಿಸಬಲ್ಲದು. ಚಳಿಗಾಲದಲ್ಲಿ ಶುಷ್ಕ ವಾತಾವರಣ ಇರುವುದು ಸಾಮಾನ್ಯ. ಈ ಕಾರಣದಿಂದ ತುಟಿ ಮತ್ತು ಚರ್ಮದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಹೀಗಿದ್ದಾಗ ತುಪ್ಪ ಹಚ್ಚುವುದರಿಂದ ತುಟಿ ಒಡೆಯುವ ಸಮಸ್ಯೆ ಶೀಘ್ರ ಕಡಿಮೆಯಾಗುತ್ತದೆ. ಜೊತೆಗೆ ತುಟಿಯು ತೇವಾಂಶದಿಂದ ಆರೋಗ್ಯಕರವಾಗಿ ಇರುತ್ತದೆ. 

ತುಪ್ಪದಲ್ಲಿ ಉರಿಯೂತ ಹಾಗೂ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುವ ಶಕ್ತಿ ಇರುತ್ತದೆ. ರಾಸಾಯನಿಕ ಉತ್ಪನ್ನಗಳ (Chemical prouct) ಬಳಕೆಯಿಂದ ಅಥವಾ ವಾತಾವರಣದ ಕಾರಣದಿಂದ ಉಂಟಾಗುವ ತುಟಿಯ ಒಡಕನ್ನು ಸುಧಾರಿಸಲು ತುಪ್ಪ ಉತ್ತಮ ಚಿಕಿತ್ಸೆ ನೀಡುವುದು. ಹೀಗಾಗಿಯೇ ತುಪ್ಪವನ್ನು ನೈಸರ್ಗಿಕ ಮಾಯಿಶ್ಚರೈಸರ್ ಎಂದು ಕರೆಯುತ್ತಾರೆ. ತುಪ್ಪವನ್ನು ಮಿತವಾಗಿ ನಿತ್ಯವೂ ಸೇವಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು. ಇದು ಚರ್ಮ, ಕೂದಲು, ಮೂಳೆ ಸೇರಿದಂತೆ ಅನೇಕ ಅಂಗಾಂಗಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.

click me!