Kitchen Hacks: ಯಾಕೋ ಸ್ಟೌ ಸಣ್ಣ ಉರೀತಾ ಇದ್ಯಾ? ಇಲ್ಲಿದೆ ನೋಡಿ ಪರಿಹಾರ

By Suvarna NewsFirst Published Sep 15, 2022, 3:56 PM IST
Highlights

ಅಡಿಗೆ ಬೇಗ ಬೇಗ ಆಗ್ಬೇಕು ಅಂತಾ ಗ್ಯಾಸ್ ಉರಿ ಹೆಚ್ಚು ಮಾಡಿರ್ತೇವೆ. ಆದ್ರೆ ಮೊದಲಿನಂತೆ ಉರಿ ಹೆಚ್ಚಾಗೋದೇ ಇಲ್ಲ. ಇದಕ್ಕೆ ಅನೇಕ ಕಾರಣವಿದೆ. ಬರ್ನರ್ ಕ್ಲೀನ್ ಮಾಡಿದ್ರೆ ಉರಿ ಹೆಚ್ಚಾಗುತ್ತೆ. ಬರ್ನರ್ ಹೇಗೆ ಕ್ಲೀನ್ ಮಾಡೋದು ಅಂತಾ ನಾವು ಹೇಳ್ತೇವೆ.
 

ಅಡುಗೆ ಮನೆ ಸಿಲಿಂಡರ್ ಖಾಲಿಯಾಗಿದೆ ಅಂದ್ರೆ ಕೈಕಾಲು ಆಡೋದಿಲ್ಲ. ಯಾಕೆಂದ್ರೆ ಪ್ರತಿಯೊಂದು ಕೆಲಸಕ್ಕೂ ಸಿಲಿಂಡರ್ ಬೇಕು. ಸಿಲಿಂಡರ್, ಸ್ಟೌ, ಲೈಟರ್ ಅಡಿಗೆ ಮನೆಯಲ್ಲಿ ಅಗತ್ಯವಿರುವ ವಸ್ತುಗಳಾಗಿವೆ. ಅನೇಕ ಬಾರಿ ಗ್ಯಾಸ್ ಒಲೆ ಮೇಲೆ ಎರಡರಿಂದ ಮೂರು ಅಡುಗೆ ಸಿದ್ಧವಾಗ್ತಿರುತ್ತದೆ. ಇತ್ತೀಚಿನ ದಿನಗಳಲ್ಲಿ ಮೂರು, ನಾಲ್ಕು ಒಲೆಯಿರುವ ಗ್ಯಾಸ್ ಒಲೆಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಮನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಈ ಗ್ಯಾಸ್ ಒಲೆಯನ್ನು ಮಹಿಳೆಯರು ಹೆಚ್ಚು ಕಾಳಜಿವಹಿಸಿ ಕ್ಲೀನ್ ಮಾಡ್ತಾರೆ. ಆದ್ರೆ ತುಂಬಾ ದಿನಗಳ ನಂತ್ರ ಗ್ಯಾಸ್ ಒಲೆ ಉರಿ ಕಡಿಮೆಯಾಗುತ್ತದೆ. ಎಷ್ಟೇ ದೊಡ್ಡದು ಮಾಡಿದ್ರೂ ಗ್ಯಾಸ್ ಒಲೆ ಸಣ್ಣದಾಗಿ ಉರಿಯುತ್ತದೆ. ಇದ್ರಿಂದ ಆಹಾರ ಬೇಗ ತಯಾರಾಗುವುದಿಲ್ಲ. ಗ್ಯಾಸ್ ಸ್ಟೌನ್ ಬರ್ನರ್ ಅನೇಕ ಬಾರಿ ಮುಚ್ಚುತ್ತದೆ. ಈ ಸಂದರ್ಭದಲ್ಲಿ ಅದನ್ನು ಮನೆಯಲ್ಲಿ ಸರಿಪಡಿಸಲು ಸಾಧ್ಯವಿಲ್ಲ. ಆದ್ರೆ ಗ್ಯಾಸ್ ಸ್ಟೌವ್ ಉರಿಯನ್ನು ನಾವು ಹೆಚ್ಚು ಮಾಡಬಹುದು. ಇಂದು ನಾವು ಗ್ಯಾಸ್ ಸ್ಟೌವ್ ಉರಿಯನ್ನು ಹೇಗೆ ಹೆಚ್ಚು ಮಾಡಬಹುದು ಎಂಬುದನ್ನು ನಿಮಗೆ ತಿಳಿಸ್ತೇವೆ.

ಗ್ಯಾಸ್ ಸ್ಟೌವ್ (Gas Stove) ಉರಿ ಕಡಿಮೆಯಾದ್ರೆ ಹೀಗೆ ಮಾಡಿ : 
ಗ್ಯಾಸ್ ಸ್ಟೌವ್ ಬರ್ನರ್ (Burner):
ಗ್ಯಾಸ್ ಒಲೆ ಮೇಲೆ ಅಡುಗೆ ಮಾಡುವಾಗ ಬರ್ನರ್ ಮೇಲೆ ಆಹಾರಗಳು ಬಿದ್ದಿರುತ್ತವೆ. ತುಂಬಾ ದಿನಗಳಲ್ಲಿ ಅದನ್ನು ಸ್ವಚ್ಛ (Clean) ಗೊಳಿಸದೆ ಹೋದಾಗ ಕಸ ಕಟ್ಟಿಕೊಂಡು ಅದರ ಉರಿ ಕಡಿಮೆಯಾಗುತ್ತದೆ. ಗ್ಯಾಸ್ ಜೊತೆಗೆ ಅದ್ರ ಬರ್ನರ್ ಕ್ಲೀನಿಂಗ್ ಗೆ ನೀವು ಮಹತ್ವ ನೀಡ್ಬೇಕು. ದೀರ್ಘಕಾಲದವರೆಗೆ ಅದನ್ನು ಸ್ವಚ್ಛಗೊಳಿಸದ ಕಾರಣ ತುಕ್ಕು ಹಿಡಿಯುವ ಸಾಧ್ಯತೆಯೂ ಇರುತ್ತದೆ. ತುಕ್ಕಿನಿಂದಲೂ ಸ್ಟೌವ್ ರಂಧ್ರಗಳು ಮುಚ್ಚಿಹೋಗಲು ಪ್ರಾರಂಭಿಸುತ್ತವೆ. ಇಂಥ ಸಮಯದಲ್ಲಿ ನೀವು ಸ್ಟೌವ್ ನಟ್ ಬೋಲ್ಟ್ ಅನ್ನು ತೆರೆದು ಬರ್ನರ್ ಹೊರಗೆ ತೆಗೆದು ಅದನ್ನು ಶುದ್ಧವಾದ ಬಟ್ಟೆಯಿಂದ ಶುಚಿಗೊಳಿಸುವುದು ಉತ್ತಮ. ನಂತರ ಬೋಲ್ಟ್ ಅನ್ನು ಬಿಗಿಗೊಳಿಸಿದ ನಂತ್ರವೇ ಬಳಸಬೇಕು. 

ಹುಡುಗೀರು ಒಂಟಿ ಒಂಟಿಯಾಗಿರೋದೆ ಇಷ್ಟ ಅನ್ತಿದ್ದಾರಲ್ಲ, ಯಾಕಪ್ಪಾ ಹೀಗೆ ?

ಇದಲ್ಲದೆ ಇನೋ (Eno) ದಿಂದ ಕೂಡ ನೀವು ಬರ್ನರ್ ಕ್ಲೀನ್ ಮಾಡಬಹುದು. ಒಂದು ಪಾತ್ರೆಗೆ ಬಿಸಿ ಬಿಸಿ ನೀರನ್ನು ಹಾಕಿ. ಅದಕ್ಕೆ ಇನೋ ಪ್ಯಾಕ್ ಕತ್ತರಿಸಿ ಅರ್ಧದಷ್ಟನ್ನು ಹಾಕಿ. ಅದಕ್ಕೆ ಬರ್ನರ್ ಹಾಕಿ ಐದು ನಿಮಿಷ ನೆನೆಸಿಡಿ. ನಂತ್ರ ಬರ್ನರ್ ತೆಗೆದು ಬ್ರೆಷ್ ನಿಂದ ಕ್ಲೀನ್ ಮಾಡಿ, ಶುದ್ಧ ನೀರಿನಿಂದ ತೊಳೆಯಿರಿ. 15 ದಿನಗಳಿಗೆ ಒಮ್ಮೆಯಾದ್ರೂ ಹೀಗೆ ಮಾಡಿದ್ರೆ ನಿಮ್ಮ ಗ್ಯಾಸ್ ಸ್ಟೌವ್ ಉರಿ ಕಡಿಮೆಯಾಗುವುದಿಲ್ಲ.

ಗ್ಯಾಸ್ ಪೈಪ್ ಕ್ಲೀನಿಂಗ್ ಕೂಡ ಮುಖ್ಯ : ಗ್ಯಾಸ್ ಸ್ಟೌವ್ ನಿಧಾನವಾಗಿ ಉರಿಯಲು ಬರ್ನರ್ ಮಾತ್ರವಲ್ಲ ಗ್ಯಾಸ್ ಪೈಪ್ ಕೂಡ ಕಾರಣವಾಗಿರುತ್ತದೆ. ಪೈಪ್ ಸ್ವಚ್ಛಗೊಳಿಸದೆ ಹೋದ್ರೆ ಅಥವಾ ಪೈಪ್ ಬಳಸಲು ಶುರು ಮಾಡಿ ವರ್ಷವಾಗಿದ್ರೆ ಸಮಸ್ಯೆ ತಲೆದೂರುತ್ತದೆ. ಗ್ಯಾಸ್ ಪೈಪನ್ನು ವಾರಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ಹಾಗೆಯೇ ಮೂರು ತಿಂಗಳಿಗೊಮ್ಮೆ ಪೈಪ್ ಬದಲಿಸಿದ್ರೆ ಒಳ್ಳೆಯದು. ಆಗ ನೀವು ಸುಲಭವಾಗಿ ಹೆಚ್ಚಿನ ಉರಿಯನ್ನು ಪಡೆಯಬಹುದು.  

ದೀರ್ಘಕಾಲ Mayonnaise ರುಚಿ ಹಾಳಾಗ್ಬಾರದೆಂದ್ರೆ ಹೀಗ್ ಮಾಡಿ

ಗ್ಯಾಸ್ ಸ್ಟೌವ್ ಪ್ಲೇಟ್ : ಗ್ಯಾಸ್ ಸ್ಟೌವ್ ಮೇಲೆ ಪ್ಲೇಟ್ ಇರುತ್ತದೆ. ಇದು ಕೂಡ ಆಹಾರ ಬಿದ್ದು ಕಲೆಯಾಗಿರುತ್ತದೆ. ಇದ್ರಿಂದಲೂ ಉರಿ ಕಟ್ಟಿಕೊಳ್ಳುತ್ತದೆ. ದೊಡ್ಡ ಪ್ರಮಾಣದಲ್ಲಿ ಉರಿ ಬರುವುದಿಲ್ಲ. ಹಾಗಾಗಿ ಗ್ಯಾಸ್ ಸ್ಟೌವ್ ಪ್ಲೇಟ್ ಕ್ಲೀನ್ ಮಾಡುವುದು ಕೂಡ ಮುಖ್ಯ. ಪ್ಲೇಟ್ ತೆಗೆದು ಅದನ್ನು ವಿನೆಗರ್ ನಲ್ಲಿ ಸ್ವಚ್ಛಗೊಳಿಸಬಹುದು. ಪ್ಲೇಟನ್ನು 10- 15  ನಿಮಿಷ ವಿನೆಗರ್ ನಲ್ಲಿ ನೆನೆಸಿಟ್ಟು, ತೊಳೆದ್ರೆ ಕೊಳೆ ಮಾಯವಾಗುತ್ತದೆ. 
 

click me!