ಪದ್ಮಿನಿ, ಚಿತ್ತಿನಿ, ಶಂಖಿನಿ, ಹಸ್ತಿನಿ ಎದು ವಾತ್ಸಾಯನ ಕಾಮಸೂತ್ರದಲ್ಲಿ ಮಹಿಳೆಯರನ್ನು ನಾಲ್ಕು ವಿಧಗಳಾಗಿ ವರ್ಗೀಕರಿಸಲಾಗಿದೆ. ಮಹಿಳೆಯರ ಗುಣ, ಸ್ವಭಾವ, ಹಾಸಿಗೆ ಮೇಲೆ ಅವರ ನಡೆ, ನುಡಿಗಳನ್ನಾಧರಿಸಿ ಹೆಣ್ಣನ್ನು ವರ್ಗೀಕರಿಸಲಾಗಿದ್ದು, ಒಬ್ಬೊಬ್ಬರ ಸ್ವಭಾವ ಒಂದೊಂದು ರೀತಿ ಇರುತ್ತೆ. ಅವರು ಬ್ಯೂಟಿಯೂ ಇಲ್ಲಿ ಮ್ಯಾಟರ್ ಆಗುತ್ತೆ ಅನ್ನೋದು ವಿಶೇಷ.
ಎಲ್ಲರಿಗೂ ಗೊತ್ತಿರುವಂತೆ ಲೈಂಗಿಕ ತೃಷೆ, ಕ್ರಿಯೆ, ಭಾವನೆಗಳಿಗೆ ಸಂಬಂಧಿದ ಭಾರತೀಯ ಪುರಾತನ ಗ್ರಂಥವೇ ವಾತ್ಸಾಯನ ಕಾಮಸೂತ್ರ. ಸಂಸ್ಕೃತದಲ್ಲಿರುವ ಈ ಪುಸ್ತಕದಲ್ಲಿ ಮಹಿಳೆಯರು, ಲೈಂಗಿಕ ಸಂಬಂಧ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಅಲ್ಲದೇ ಹೆಣ್ಣಿನ ಗುಣ ಸ್ವಭಾವ, ಸೌಂದರ್ಯ ಸೇರಿ ವಿವಿಧ ನಡೆ ನುಡಿಗಳನ್ನಾಧರಿಸಿ ವಿವಿಧ ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಹೆಣ್ಣಿನ ದೈಹಿಕ ಸ್ವರೂಪ, ಅವರ ದೇಹದ ಗುಣಲಕ್ಷಣಗಳು, ಅವರು ಖುಷಿಯಾಗಿರುವ ದಿನಗಳು, ಭಾವೋದ್ರೇಕದ ಆಸನಗಳು, ಲೈಂಗಿಕ ಸಂಭೋಗದಲ್ಲಿ ಅವರು ಭಾಗಿಯಾಗುವ ಎನ್ನವನ್ನೂ ಆಧರಿಸಿ ನಾಲ್ಕು ವಿಧಗಳಾಗಿ ವಾತ್ಸಾಯನ ಕಾಮಸೂತ್ರದಲ್ಲಿ ಹೆಣ್ಣನ್ನು ವರ್ಗೀಕರಿಸಲಾಗಿದೆ.
1. ಪದ್ಮಿನಿ (Lotus woman), 2. ಚಿತ್ತಿನಿ (Art woman), 3. ಶಂಖಿನಿ (Conch woman), 4. ಹಸ್ತಿನಿ (Elephant woman) ಎಂದೇ ಮಹಿಳೆಯರನ್ನು ವಾತ್ಸಾಯನ ಹೆಸರಿಸಿದ್ದಾನೆ. ಹೆಸರೇ ಹೇಳುವಂತೆ ಗುಣ ಸ್ವಭಾವಗಳಿಗೆ ಹಾಗೂ ಸೌಂದರ್ಯವನ್ನಾದರಿಸಿ ಈ ರೀತಿ ಹೆಣ್ಣನ್ನು ವಿಭಾಗಿಸಲಾಗಿದೆ ಎಂಬುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಆದರೆ, ಪ್ರತಿಯೊಂದೂ ವರ್ಗದ ಹೆಣ್ಣಿನ ಗುಣ ಲಕ್ಷಣಗಳು ಹೇಗಿರುತ್ತವೆ. ಇಲ್ಲಿದೆ ಮಾಹಿತಿ.
ಪದ್ಮಿನಿ
ಕಮಲದಂಥವಳು. ಸದಾ ಪ್ರಸನ್ನವಾಗಿರುತ್ತಾಳೆ. ಮೈ ಕೈ ತುಂಬಿಕೊಂಡು, ಸಾಸಿವೆ ಹೂವಿನಂತೆ ಮೃದುವಾಗಿರುತ್ತದೆ. ಸೂಕ್ಷ್ಮವಾದ ಚರ್ಮ, ಕೋಮಲ ಮತ್ತು ಹಳದಿ ಕಮಲದಂತಿರುತ್ತದೆ. ಗಾಢ ಬಣ್ಣವಿರುವುದಿಲ್ಲ. ಕಣ್ಣುಗಳು ಜಿಂಕೆಗಳದರಂತೆ ಪ್ರಕಾಶಮಾನವಾಗಿರುತ್ತದೆ. ನೀಟಾದ ಹುಬ್ಬು, ಗಟ್ಟಿ ಹಾಗೂ ಎತ್ತರವಾದ ಎದೆ ಇರುತ್ತದೆ. ನೀಳವಾದ ಕುತ್ತಿಗೆ, ನೇರ ಹಾಗೂ ಸುಂದರವಾದ ಮೂಗು ಈ ವರ್ಗಕ್ಕೆ ಸೇರುವ ಹೆಣ್ಣು ಮಕ್ಕಳದ್ದು. ಹೊಕ್ಕಳಿನ ಪ್ರದೇಶದಲ್ಲಿ ಮೂರು ಮಡಿಕೆ ಅಥವಾ ಸುಕ್ಕುಗಳಿರುತ್ತವೆ. ತೆರೆಯುವ ಕಮಲದ ಮೊಗ್ಗುಗಳನ್ನು ಹೋಲುವ ಯೋನಿ ಹೊಂದಿರುತ್ತಾಳೆ. ಕಾಮಸಲಿಲವು ಆಗಷ್ಟೇ ಅರಳಿದ ಲಿಲ್ಲಿಯಂತೆ ಸುಗಂಧಭರಿತ. ನಡಿಗೆ ಹಂಸದಂತೆ. ಕೋಕಿಲ ಪಕ್ಷಿಯ ಧ್ವನಿಯಂತೆ ಧ್ವನಿ. ಬಿಳಿ ವಸ್ತ್ರಗಳಲ್ಲಿ, ಉತ್ತಮವಾದ ಆಭರಣಗಳಲ್ಲಿ ಮತ್ತು ಶ್ರೀಮಂತ ಉಡುಪುಗಳೆಂದರೆ ಖುಷಿ. ತಿನ್ನೋದು ಸ್ವಲ್ಪ. ಲಘುವಾಗಿ ನಿದ್ರಿಸುತ್ತಾಳೆ. ಅವಳು ಬುದ್ಧಿವಂತ ಮತ್ತು ಸೌಜನ್ಯಪೂರಿತ, ಗೌರವಾನ್ವಿತ ಮತ್ತು ಧಾರ್ಮಿಕಳಾಗಿರುತ್ತಾಳೆ. ಸದಾ ಸಂಭೋಗವನ್ನು ಆನಂದಿಸುತ್ತಾಳೆ.
Knowledge: ವಿಮಾನದಲ್ಲಿ ಮಹಿಳಾ ಸಿಬ್ಬಂದಿ ಹೆಚ್ಚಿರೋದೇಕೆ?
ಚಿತ್ತಿನಿ
ಚಿತ್ತಿನಿ ಅಥವಾ ಚಿತ್ರಿಣಿ ಎಂದರೆ ಕಲಾವಿದೆ. ಮಧ್ಯಮ ಗಾತ್ರದ ದೇಹ ಉಳ್ಳವಳು. ಜೇನುನೊಣದಂತ ಕಪ್ಪು ಕೂದಲು. ತೆಳ್ಳಗಿನ, ದುಂಡಗಿನ, ಶೆಲ್ ರೀತಿಯ ಕುತ್ತಿಗೆ. ಕೋಮಲ ದೇಹ; ಸಿಂಹದಂತ ನಡು; ಗಟ್ಟಿ, ಪೂರ್ಣ ಸ್ತನಗಳು; ತುಂಬಿದ ತೊಡೆ ಮತ್ತು ಹೆಚ್ಚು ವಿಸ್ತರಿಸಿದ ಸೊಂಟ. ಯೋನಿ ಭಾಗ ತುಂಬಿಕೊಂಡು, ದುಂಡಾಗಿ, ಮೃದುವಾಗಿರುತ್ತದೆ. ಕಾಮಸಲಿಲ ಬಿಸಿಯಾಗಿರುತ್ತದೆ. ಜೇನುತುಪ್ಪದ (Honey) ಸುಗಂಧ ದ್ರವ್ಯವನ್ನು (Perfume) ಹೊಂದಿರುತ್ತದೆ. ಸಂಬೋಗದ ವಿಜೃಂಭಣೆಯ ಸಮಯದಲ್ಲಿ ಸಮೃದ್ಧ ಧ್ವನಿ ಉತ್ಪಾದಿಸುತ್ತಾಳೆ. ಈ ವರ್ಗದ ಹೆಣ್ಣುಮಕ್ಕಳ ಕಣ್ಣುಗಳು ಹೊರಳುತ್ತವೆ. ಅವಳ ನಡಿಗೆಯೂ ಸೊಗಸಾಗಿದೆ, ಧ್ವನಿ ಸುಮಧುರವಾಗಿರುತ್ತದೆ. ಸಂತೋಷ ಮತ್ತು ವೈವಿಧ್ಯತೆ ಇವಳಿಗೆ ಇಷ್ಟ. ಹಾಡುವುದರಿಂದ ಎಲ್ಲ ಕಲೆಯಲ್ಲಿಯೂ ಖುಷಿ ಪಡುತ್ತಾಳೆ. ಸ್ವಲ್ಪ ವಿಷಯಲೋಲುಪತೆಯೂ ಇರುತ್ತದೆ. ಸಾಕುಪ್ರಾಣಿ (Pets), ಗಿಳಿ, ಮೈನಾಗಳು ಮತ್ತು ಇತರೆ ಪಕ್ಷಿಗಳನ್ನೂ ಪ್ರೀತಿಸುತ್ತಾಳೆ.
ಶಂಖಿನಿ
ಈ ವರ್ಗಕ್ಕೆ ಸೇರಿದ ಮಹಿಳೆಯರನ್ನು ಶಂಖಕ್ಕೆ ಹೋಲಿಸಬಹುದು. ಪಿತ್ತರಸದ ಸ್ವಭಾವ ಇವಳದ್ದು. ಬಿಸಿ ಚರ್ಮದ ಹೆಣ್ಣು. ಬಣ್ಣ ಕಂದು. ದೊಡ್ಡ ದೇಹ. ದಪ್ಪ ಸೊಂಟ. ಚಿಕ್ಕ ಸ್ತನ. ತೆಳ್ಳಗಿನ ತಲೆ, ಕೈಗಳು ಮತ್ತು ಪಾದ. ಉದ್ದವಾಗಿರುತ್ತವೆ. ತನ್ನ ಕಣ್ಣುಗಳ ಮೂಲೆಗಳಿಂದ ನೋಡುತ್ತಾಳೆ. ಕಾಮಸಲಿಲದಿಂದ ತೇವವಾಗಿರುವ ಯೋನಿಗಳು. ಉಪ್ಪಾಗಿರುತ್ತದೆ. ಸೀಳು ದಪ್ಪ ಕೂದಲಿನಿಂದ (Hairs) ಮುಚ್ಚಲ್ಪಟ್ಟಿರುತ್ತದೆ. ಇವಳದ್ದು ಒರಟು ಧ್ವನಿ (Hard Voice) ಮತ್ತು ಕಠೋರ. ನಡಿಗೆಯಲ್ಲಿಯೂ ವಯ್ಯಾರ ಕಡಿಮೆ. ಮಿತವಾಗಿ ತಿನ್ನುತ್ತಾಳೆ. ಬಟ್ಟೆ, ಹೂವುಗಳು ಮತ್ತು ಕೆಂಪು ಬಣ್ಣದ ಆಭರಣಗಳೆಂದರೆ (Jewellery) ಇಷ್ಟ. ಕಾಮೋತ್ಸಾಹವೂ ಕಂಟ್ರೋಲಿನಲ್ಲಿರೋಲ್ಲ. ಉದ್ರೇಕವಾದಾಗ ಸಂಗಾತಿಗೆ ಉಗುರಿನಿಂದ ಪರಚುತ್ತಾಳೆ. ಕಠಿಣ ಹೃದಯಿ. ದಬ್ಬಾಳಿಕೆ ನಡೆಸುತ್ತಾಳೆ. ಕೋಪೋದ್ರಿಕ್ತ ಮತ್ತು ಯಾವಾಗಲೂ ತಪ್ಪು ಹುಡುಕುತ್ತಾಳೆ.
Real Story: ಈ ಕಾರಣಕ್ಕೆ ಪತಿಗೆ ಮೋಸ ಮಾಡಿದ್ದಾರೆ ಮಹಿಳೆಯರು
ಹಸ್ತಿನಿ
ಈ ವರ್ಗಕ್ಕ ಸೇರಿದ ಮಹಿಳೆಯರು ಆನೆಯಂತಿರುತ್ತಾರೆ. ಸ್ವಲ್ಪ ಕುಳ್ಳಗಿರುತ್ತಾರೆ. ಗಟ್ಟಿ ಮತ್ತು ಒರಟು ದೇಹ ಇವರದ್ದು. ಚರ್ಮವೇನೋ (Skin) ಚೆನ್ನಾಗಿರುತ್ತದೆ. ಕೂದಲು ಕಂದು ಬಣ್ಣವಿರುತ್ತದೆ. ಕಠಿಣ ಧ್ವನಿ, ದೊಡ್ಡ ತುಟಿ. ಉಸಿರುಗಟ್ಟಿದಂತೆ ಮಾತಾಡುತ್ತಾಳೆ. ನಡಿಗೆ ನಿಧಾನ. ಓರೆಯಾಗಿ ನಡೆಯುತ್ತಾಳೆ. ಈ ಮಹಿಳೆಯರ ಒಂದು ಪಾದದ ಬೆರಳು ಸಾಮಾನ್ಯವಾಗಿ ವಕ್ರವಾಗಿರುತ್ತವೆ. ಆಕೆಯ ಕಾಮಸಲಿಲವು ಆನೆಯ ಗಂಡಸ್ಥಲಗಳಿಂದ ವಸಂತಕಾಲದಲ್ಲಿ ಹರಿಯುವ ಮದರಸದ ಪರಿಮಳ ಹೊಂದಿದೆ. ಅವಳು ಕಾಮಕಲೆಯಲ್ಲಿ ಸ್ವಲ್ಪ ಸ್ಲೋ. ಬೇಗ ತೃಪ್ತಳಾಗುವವಳಲ್ಲ. ಕಾಮ ತೃಪ್ತಿ ಇವಳಿಗೆ ಕಡಿಮೆ. ಹೊಟ್ಟೆಬಾಕತನದ, ನಯಾ ನಾಜೂಕಿಲ್ಲದ, ಸಿಡುಕಿನ ಸ್ವಭಾವದವರು.