ಬಿಸಿಲ ಝಳಕ್ಕೆ ಬೇಸತ್ತ ಜನ ಕೂಲ್ ಆಗೋಕೆ ನಾನಾ ಪ್ರಯತ್ನ ಮಾಡ್ತಿದ್ದಾರೆ. ವಾಹನವೊಂದನ್ನು ಈಜು ಕೊಳವಾಗಿ ಕನ್ವರ್ಟ್ ಮಾಡಿದ್ದಾರೆ. ಮಾರುಕಟ್ಟೆ ತುಂಬಾ ಓಡಾಡಿದ ಈ ಸ್ವಿಮ್ಮಿಂಗ್ ಪೂಲ್ ನೋಡಿ ಜನ ಅಚ್ಚರಿಗೊಳಗಾಗಿದ್ದಾರೆ.
ಜಗತ್ತಿನ ಜನರು ಹೊಸ ಪ್ರಯೋಗ ಮಾಡೋದ್ರಲ್ಲಿ ಮುಂದಿದ್ದಾರೆ. ಚಿತ್ರವಿಚಿತ್ರ ಪ್ಲಾನ್ ಮಾಡಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಸಾಕಷ್ಟು ವಿಡಿಯೋಗಳು ವೈರಲ್ ಆಗ್ತಿರುತ್ತವೆ. ಕೆಲ ವಿಡಿಯೋಗಳು ಕುತೂಹಲಕಾರಿಯಾಗಿದ್ದು, ಜನರನ್ನು ಮತ್ತೆ ಮತ್ತೆ ನೋಡುವಂತೆ ಮಾಡುತ್ವೆ. ನೀವು ಇಂಥ ಅನೇಕ ವಿಡಿಯೋಗಳನ್ನು ಈಗಾಗಲೇ ನೋಡಿರ್ತೀರಿ. ಈಗ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದನ್ನೂ ತಪ್ಪದೆ ನೋಡಿ.
ಜೂನ್ ಹತ್ತಿರ ಬರ್ತಿದ್ದಂತೆ ಅಲ್ಲಿ ಇಲ್ಲಿ ಒಂದೊಂದು ಮಳೆ ಬರ್ತಿದ್ರೂ ಸೆಕೆ ಹಾಗೇ ಇದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳುವುದೇ ಜನರಿಗೆ ಕಷ್ಟವಾಗಿದೆ. ಇಡೀ ದಿನ ಫ್ಯಾನ್. ಕೂಲರ್ ಉರಿಯುತ್ತಲೆ ಇರುತ್ತೆ. ಅಷ್ಟಾದ್ರೂ ಸೆಕೆ ಮಾತ್ರ ಕಡಿಮೆ ಆಗ್ತಿಲ್ಲ. ಎಲ್ಲಿ ನೀರಿದೆ, ಈಜುಕೊಳ (Swimming pool) ಇದೆ, ಈಜಾಡೋಕೆ ಕೆರೆ ನದಿ ಇದೆ ಅಂತ ಜನರು ಹುಡುಕ್ತಿದ್ದಾರೆ. ತಂಪಾದ ಸ್ಥಳಕ್ಕೆ ಪ್ರವಾಸ ಹೋಗ್ತಿದ್ದಾರೆ. ನಿತ್ಯದ ಕೆಲಸವನ್ನು ನಾವು ಎಷ್ಟೆ ಸೆಕೆ ಇದ್ರೂ ಮಾಡ್ಲೇಬೇಕು. ಒಮ್ಮೆ ಮಾರುಕಟ್ಟೆಗೆ ಹೋಗಿ ಸಾಮಾನು ತರೋತನಕ ಸುಸ್ತಾಗಿರುತ್ತೆ. ನೀರಿನ ಕೊಳದಲ್ಲಿ ಬಿದ್ಬಿಡೋಣ ಎನ್ನಿಸುತ್ತಿದೆ ಅಂತ ನಾವು ಹೇಳ್ತಿರುತ್ತೇವೆ. ಈ ಯುವಕರು ಬರೀ ಬಾಯಲ್ಲಿ ಹೇಳಿಲ್ಲ ಮಾಡಿ ತೋರಿಸಿದ್ದಾರೆ. ಅವರು ಸೆಕೆಯಿಂದ ಕೂಲ್ ಆಗೋಕೆ ಸೂಪರ್ ಐಡಿಯಾ ಮಾಡಿದ್ದಾರೆ. ಸ್ವಿಮ್ಮಿಂಗ್ ಪೂಲನ್ನೇ ಮಾರುಕಟ್ಟೆಗೆ ತಂದಿದ್ದಾರೆ.
undefined
ಮದ್ಯಕ್ಕಿಂತ ಗಾಂಜಾ ನಶೆ ಮೇಲೆ ಹೆಚ್ಚಾದ ಅಮೆರಿಕನ್ನರ ಪ್ರೀತಿ, ಹೆಚ್ಚಾಗಿದೆ ಸಾವಿನ ಭೀತಿ!
ಸಾಮಾಜಿಕ ಜಾಲತಾಣ (Social Media ) ದಲ್ಲಿ ಈಗೊಂದು ವಿಡಿಯೋ ವೈರಲ್ ಆಗಿದೆ. ಅದ್ರಲ್ಲಿ ಯುವಕರು ತಮ್ಮ ಕಲೆ ತೋರಿಸಿದ್ದಾರೆ. ಇವರು ಈಜುಕೊಳವನ್ನೇ ತಮ್ಮ ಜೊತೆ ತೆಗೆದುಕೊಂಡು ಬಂದಿದ್ದಾರೆ. ಚಲಿಸುವ ಈ ಈಜುಕೊಳ ನೋಡಿ ಜನರು ಬೆರಳಿನ ಮೇಲೆ ಕೈ ಇಟ್ಟಿದ್ದಾರೆ.
prankzone01 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ದಾರಿಯಲ್ಲಿ ಚಲಿಸುವ ಸ್ವಿಮ್ಮಿಂಗ್ ಪೂಲನ್ನು ನೀವು ನೋಡ್ಬಹುದು. ಅದ್ರಲ್ಲಿ ಕುಳಿತ ಜನರು, ಸ್ವಿಮ್ಮಿಂಗ್ ಪೂಲ್ ಫೀಲ್ ನಲ್ಲಿ ಆರಾಮವಾಗಿ ಸುತ್ತಾಡುತ್ತಿದ್ದಾರೆ. ಅವರನ್ನು ನೋಡಿ ಜನರು ಹೀಗೂ ಮಾಡ್ಬಹುದು ಎನ್ನುತ್ತಿದ್ದಾರೆ.
ಈ ವಿಡಿಯೋದಲ್ಲಿ ಜನರು ಸರಕು ತುಂಬುವ ಮಿನಿ ಆಟೋವನ್ನು ಸ್ವಿಮ್ಮಿಂಗ್ ಪೂಲ್ ಆಗಿ ಪರಿವರ್ತಿಸಿದ್ದಾರೆ. ಸರಕು ತುಂಬುವ ವಾಹನದ ಹಿಂದಿನ ಭಾಗಕ್ಕೆ ಮೊದಲು ಪ್ಲಾಸ್ಟಿಕ್ ಕವರ್ ಹಾಕಿ ನೀರು ಕೆಳಗೆ ಹೋಗದಂತೆ ಮಾಡಲಾಗಿದೆ. ನಂತ್ರ ಅದರ ಒಳಗೆ ನೀರನ್ನು ತುಂಬಿದ್ದಾರೆ. ಆ ನಂತ್ರ ಈ ನೀರಿನೊಳಗೆ ಕುಳಿತು ಆರಾಮವಾಗಿ ಮಾರುಕಟ್ಟೆ ಸುತ್ತಿದ್ದಾರೆ. ವಾಹನದಲ್ಲಿ ಮೂವರನ್ನು ನೀವು ನೋಡ್ಬಹುದು. ಅವರು ನೀರಿನಲ್ಲಿಯೇ ಮಲಗ್ತಾರೆ. ಅಲ್ಲೇ ಕುಳಿತು ಹಣ್ಣು ತಿನ್ನುತ್ತಾರೆ. ದಾರಿ ಮಧ್ಯೆ ಈ ವಾಹನ ನಿಂತಾಗ ಜನರೆಲ್ಲ ಬಂದು ಇವರ ಸ್ವಿಮ್ಮಿಂಗ್ ಪೂಲ್ ನೋಡೋದನ್ನು ವಿಡಿಯೋದಲ್ಲಿ ನೀವು ನೋಡ್ಬಹುದು. ಅಲ್ಲಿಯೇ ಟೇಬಲ್ ಹಾಕಿ ಅದ್ರ ಮೇಲೆ ಡ್ರಿಂಕ್ಸ್ ಮತ್ತು ಕಲ್ಲಂಗಡಿ ಹಣ್ಣನ್ನು ಇಟ್ಟಿದ್ದಾರೆ.
ಕೀರ್ತಿಗಾಗಿ ಓಡೋಡಿ ಬಂದ ವೈಷ್ಣವ್, ಥೂ ಕಚ್ಡಾ ಕಥೆ ಅಂತ ಬಯ್ದುಕೊಳ್ತಿದ್ದಾರೆ ನೆಟ್ಟಿಗರು!
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಈವರೆಗೆ 17 ಲಕ್ಷ 37 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಲಕ್ಷಾಂತರ ಮಂದಿ ಲೈಕ್ ಮಾಡಿದ್ದು, ನೂರಾರು ಮಂದಿಯ ಕಮೆಂಟ್ ಮಾಡಿರೋದನ್ನು ನೀವು ನೋಡ್ಬಹುದು. ಇದು ಚಲಿಸುವ ಈಜುಕೊಳ ಎಂದು ಒಬ್ಬರು ಕಮೆಂಟ್ ಮಾಡಿದ್ರೆ, ಮತ್ತೊಬ್ಬರು ಬುದ್ದಿವಂತರು ಎಂದು ಬರೆದಿದ್ದಾರೆ. ಗೋವಾ ಫೀಲ್ ಬರ್ತಿದೆ ಎಂದು ಇನ್ನೊಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ಬಹುತೇಕರು ನಕ್ಕು ಐಡಿಯಾ ಲೈಕ್ ಮಾಡಿದ್ದಾರೆ.