Latest Videos

ನಾಲ್ಕು ತಿಂಗಳಿಂದ ಮಹಿಳೆ ಬೆಡ್‌ ಕೆಳಗಿದ್ದ ಅಪರಿಚಿತ, ತಿಂದುಂಡ್ರೂ ಗೊತ್ತೆ ಆಗಿರ್ಲಿಲ್ಲ!

By Roopa HegdeFirst Published May 24, 2024, 2:50 PM IST
Highlights

ನಮ್ಮ ಮನೆಯಲ್ಲಿ ನಾವೇ ಸುರಕ್ಷಿತವಲ್ಲ. ಮನೆಯೊಳಗಿದ್ರೆ ಬೆದರಿಸಿ ದರೋಡೆ ಮಾಡುವ ಜನರು ಮನೆಯಲ್ಲಿ ಯಾರೂ ಇಲ್ಲ ಅಂದ್ರೆ ಬಿಡ್ತಾರಾ? ಆದ್ರೆ ಈ ಸುದ್ದಿ ಸ್ವಲ್ಪ ಭಿನ್ನ. ಈ ವ್ಯಕ್ತಿ ಮನೆಯಲ್ಲಿದ್ದ ಸಾಮಾನು ದೋಚುವ ಬದಲು ತಾನೇ ಅಲ್ಲಿ ವಾಸ ಶುರು ಮಾಡಿದ್ದ. 
 

ನಮ್ಮ ಮನೆ ಅಂದ್ರೆ ಅದು ಸುರಕ್ಷಿತ ಸ್ಥಳ. ಬೇರೆ ಊರಿಗೆ ಹೋದಾಗ ಇಲ್ಲ ಸಂಬಂಧಿಕರ ಮನೆ, ಹೊಟೇಲ್ ಗೆ ಹೋದಾಗ ಕೆಲವೊಮ್ಮೆ ಅಸುರಕ್ಷತೆ ಅನುಭವವಾಗುತ್ತದೆ. ರೂಮಿನ ಸುತ್ತಮುತ್ತ, ಒಳಗಿರುವ ಜಾಗವನ್ನೆಲ್ಲ ಒಮ್ಮೆ ಕಣ್ಣಾಡಿಸಿ ಯಾವುದೇ ಸಮಸ್ಯೆ ಇಲ್ಲ ಎಂದಾಗ ನಾವು ನೆಮ್ಮದಿ ನಿದ್ರೆ ಮಾಡ್ತೇವೆ. ಅದೇ ನಮ್ಮ ಮನೆಯಲ್ಲಿ ಹಾಗಲ್ಲ, ಸದಾ ಸುರಕ್ಷಿತವಾಗಿರ್ತೇವೆ. ಈ ಮಹಿಳೆ ಕೂಡ ಮನೆಯಲ್ಲಿ ಆರಾಮವಾಗಿದ್ದಳು. ಆಗಾಗ ತವರಿಗೆ ಹೋಗಿ ಬಂದು ಮಾಡ್ತಾ ಖುಷಿಯಾಗಿದ್ದಳು. ಆದ್ರೆ ಒಂದು ದಿನ ಆಕೆ ಹೃದಯಬಡಿತ ಹೆಚ್ಚಾಯ್ತು. ಬೆಡ್ ಕೆಳಗಿದ್ದ ಸಂಗತಿ ನೋಡಿ ಮಹಿಳೆ ದಂಗಾಗಿದ್ದಳು. ತನಗೆ ಅರಿವಿಲ್ಲದೆ ನಾಲ್ಕು ತಿಂಗಳಿಂದ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಅದೂ ಬೆಡ್ ರೂಮಿನ ಬೆಡ್ ಕೆಳಗೆ ವಾಸವಾಗಿದ್ದ ಎಂಬುದೇ ಆಕೆಗೆ ಗೊತ್ತಿರಲಿಲ್ಲ.

ಟಿಕ್ ಟಾಕ್ (Tik Tok) ನಲ್ಲಿ ಕೆ ಎಂಬ ಹೆಸರಿನ ಖಾತೆಯಲ್ಲಿ ಮಹಿಳೆ ತನ್ನ ಕಥೆಯನ್ನು ಹೇಳಿದ್ದಾಳೆ. ಆಕೆ ವಿಡಿಯೋ (Video) ಈಗ ವೈರಲ್ (viral) ಆಗಿದೆ. ನಾನು ಹಾರರ್ ಚಿತ್ರ ನೋಡಿದ್ದಕ್ಕಿಂತ ಹೆಚ್ಚು ಭಯಗೊಂಡಿದ್ದೆ ಎಂದು ಮಹಿಳೆ ಪೋಸ್ಟ್ ನಲ್ಲಿ ತಿಳಿಸಿದ್ದಾಳೆ.

18ರ ಹರೆಯದ ಭಾರತೀಯ ಆಟೋ ಚಾಲಕಿಯ ಅರಸಿ ಬಂತು ಬ್ರಿಟನ್ ರಾಯಲ್ ಅವಾರ್ಡ್‌

ಮಹಿಳೆ 26ನೇ ವಯಸ್ಸಿನಲ್ಲಿಯೇ ಮನೆಯೊಂದನ್ನು ಖರೀದಿಸಿದ್ದಳು. ಎರಡು ಮಕ್ಕಳ ಜೊತೆ ಆ ಮನೆಯಲ್ಲಿ ವಾಸಿಸುತ್ತಿದ್ದಳು. ಮಹಿಳೆಗೆ ಎರಡು ಮಕ್ಕಳನ್ನು ನೋಡಿಕೊಳ್ಳೋದು ಕಷ್ಟವಾಗ್ತಿತ್ತು. ಹಾಗಾಗಿ ಪದೇ ಪದೇ ತವರಿಗೆ ಹೋಗ್ತಿದ್ದಳು. ತಾಯಿ ಮನೆಯಲ್ಲಿ ರಾತ್ರಿ ಕಳೆದು ಬರ್ತಿದ್ದಳು. ಮಕ್ಕಳನ್ನು ಪಾಲಕರು ನೋಡಿಕೊಳ್ತಿದ್ದರಿಂದ ಮಹಿಳೆಗೆ ಸ್ವಲ್ಪ ವಿಶ್ರಾಂತಿ ಸಿಗ್ತಿತ್ತು.

ಮಹಿಳೆ ಹಾಗೂ ಮಕ್ಕಳು ದಿನದಲ್ಲಿ 11 -12 ಗಂಟೆ ಮನೆಯಿಂದ ಹೊರಗೆ ಇರ್ತಿದ್ದರು. ಕೆಲವೊಮ್ಮೆ ಇದಕ್ಕಿಂತ ಹೆಚ್ಚು ಸಮಯ ಅವರು ಮನೆಯಿಂದ ಹೊರಗಿರುತ್ತಿದ್ದರು. ಒಂದು ರಾತ್ರಿಯನ್ನು ಅಪ್ಪ – ಅಮ್ಮನ ಮನೆಯಲ್ಲಿ ಕಳೆದ ಮಹಿಳೆ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ವಾಪಸ್ ಆಗಿದ್ದಾಳೆ. ನಂತ್ರ ಬಟ್ಟೆ ಬದಲಿಸಿ ಬೆಡ್ ಮೇಲೆ ಮಲಗಿದ್ದಳು. ಈ ಸಮಯದಲ್ಲಿ ಬೆಡ್ ಕೆಳಗಿನಿಂದ ಶಬ್ಧ ಕೇಳಿಸಿದೆ. ಮಂಚದ ಕೆಳಗೆ ಇಲಿ ಬಂದಿರಬೇಕೆಂದು ಭಾವಿಸಿದ ಮಹಿಳೆ ಬಗ್ಗಿ ನೋಡಿದ್ದಾಳೆ. ಈ ವೇಳೆ ನೀಲಿ ಜೀನ್ಸ್ ಮತ್ತು ಕಪ್ಪು ಸಾಕ್ಸ್ ಕಾಣಿಸಿದೆ. 

ಇದ್ರಿಂದ ಭಯಗೊಂಡ ಮಹಿಳೆ ಹೊರಗೆ ಓಡಿ ಬಂದಿದ್ದಾಳೆ. ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರು ಬರುವಷ್ಟರಲ್ಲಿಯೇ ಆಕೆ ತನ್ನ ಮನೆಯಿಂದ ವ್ಯಕ್ತಿಯೊಬ್ಬ ಹೊರಗೆ ಹೋಗಿದ್ದನ್ನು ನೋಡಿದ್ದಾಳೆ. ಆ ವ್ಯಕ್ತಿ ಬೇರೆ ಯಾರೂ ಆಗಿರಲಿಲ್ಲ. ಮಹಿಳೆಗೆ ಗೊತ್ತಿರುವ ಆಕೆ ಮನೆ ಗಾರ್ಡನ್ ಹುಲ್ಲು ಕತ್ತರಿಸುವ ವ್ಯಕ್ತಿ. 

ಮನೆಯಿಂದ ಹೊರಗೆ ಬಂದ ವ್ಯಕ್ತಿ ಯಾವುದೇ ಟೆನ್ಷನ್ ಇಲ್ಲದೆ ಬೂಟ್ ಧರಿಸಿ ರಸ್ತೆಯಲ್ಲಿ ನಡೆದು ಹೋಗಿದ್ದ. ಸ್ಥಳಕ್ಕೆ ಬಂದ ಪೊಲೀಸರು ಮನೆ ಪರಿಶೀಲನೆ ಮಾಡಿದಾಗ ವ್ಯಕ್ತಿ ಕೆಲ ಪಾತ್ರೆಗಳನ್ನು ಬಳಸಿರೋದು ಕಾಣಿಸಿತ್ತು. ಹಾಗೆ ಕೆಲ ವಸ್ತುಗಳು ನಾಪತ್ತೆಯಾಗಿದ್ದವು. 

ಮುತ್ತೈದೆಯರು ಕುಂಕುಮ ಇಡುವಂತಿಲ್ಲ, ಕಾಲ್ಗೆಜ್ಜೆಯೂ ತೊಡುವಂತಿಲ್ಲ; ಅಲಂಕಾರಕ್ಕೆ ಹೆದರ್ತಾರೆ ಇಲ್ಲಿಯ ಮಹಿಳೆಯರು

ಆರೋಪಿಯನ್ನು ಬಂಧಿಸಿ ವಿಚಾರಿಸಿದಾಗ ಆತ ಬಾಯ್ಬಿಟ್ಟಿದ್ದಾನೆ. ಕಳೆದ ನಾಲ್ಕು ತಿಂಗಳಿಂದ ತಾನು ಇದೇ ಮನೆಯಲ್ಲಿ ವಾಸವಾಗಿರೋದಾಗಿ ಹೇಳಿದ್ದಾನೆ. ಮಹಿಳೆ ಇಲ್ಲದ ಸಮಯದಲ್ಲಿ ಮನೆಗೆ ಬರ್ತಿದ್ದ ವ್ಯಕ್ತಿ ಅಡುಗೆ ಮನೆಗೆ ಹೋಗಿ ಆಹಾರ ತಿನ್ನುತ್ತಿದ್ದ, ಬೆಡ್ ಕೆಳಗೆ ಮಲಗುತ್ತಿದ್ದ. ಬಾತ್ ರೂಮ್ ಬಳಕೆ ಮಾಡುತ್ತಿದ್ದನಲ್ಲದೆ, ಗೇಮ್ ಆಡ್ತಿದ್ದ. ಪೊಲೀಸರು ಇನ್ನಷ್ಟು ಪರಿಶೀಲನೆ ನಡೆಸಿದಾಗ ಆತನ ಬಳಿ ಮಹಿಳೆಯರ ಒಳ ಉಡುಪು ಇರೋದು ಪತ್ತೆಯಾಗಿದೆ. 

click me!