ಎಗ್ ಫ್ರೀಜಿಂಗ್: ಮಕ್ಕಳು ಮಾಡಿ ಕೊಳ್ಳೋ ಪ್ಲ್ಯಾನ್ ಈಗಿಲ್ಲವೆಂದರೆ, ಭವಿಷ್ಯದ ಬಗ್ಗೆ ಯೋಚಿಸ್ಬೇಡಿ!

By Suvarna News  |  First Published Dec 12, 2023, 2:30 PM IST

ಎಗ್ ಫ್ರಿಜಿಂಗ್ ಮಾಡಿಟ್ಟುಕೊಂಡು ನಂತ್ರ ಅವರು ಮಕ್ಕಳನ್ನು ಪಡೆದಿದ್ದಾರೆ ಎನ್ನುವ ಸುದ್ದಿಯನ್ನು ನಾವು ಕೇಳ್ತಿರುತ್ತೇವೆ. ಅದು ಹೇಗೆ ಸಾಧ್ಯ, ಅದಕ್ಕೆ ಏನೆಲ್ಲ ಮಾಡ್ಬೇಕು ಎನ್ನುವ ಪ್ರಶ್ನೆಗೆ ಅನೇಕರ ಬಳಿ ಉತ್ತರವಿರೋದಿಲ್ಲ. ನಾವಿಂದು ಅದ್ರ ಬಗ್ಗೆ ಮಾಹಿತಿ ನೀಡ್ತೇವೆ.
 


ಮದುವೆಯಾದ ಒಂದೆರಡು ತಿಂಗಳಲ್ಲೇ ಮಕ್ಕಳು ಯಾವಾಗ ಎನ್ನುವ ಪ್ರಶ್ನೆ ಶುರುವಾಗುತ್ತದೆ. ವಯಸ್ಸಾದ್ಮೇಲೆ ಮದುವೆಯಾದ್ರೆ ಮಕ್ಕಳಾಗೋದು ಕಷ್ಟ ಎನ್ನುವ ಕಾರಣಕ್ಕೆ ಅನೇಕರಿಗೆ ಕಡಿಮೆ ವಯಸ್ಸಿನಲ್ಲೇ ಮದುವೆ ಮಾಡಲಾಗುತ್ತದೆ. ಮದುವೆ, ಮಕ್ಕಳ ಗಲಾಟೆಯಲ್ಲಿ ಮಹಿಳೆಯರು ತಮ್ಮ ವೃತ್ತಿ ಜೀವನ ಬಿಡಬೇಕಾಗುತ್ತದೆ. ಕೆಲವರು ತಮ್ಮ ಗುರಿಕೈಬಿಟ್ಟು ಮನೆ ಕೆಲಸಕ್ಕೆ ಸೀಮಿತವಾಗ್ತಾರೆ. ಆದ್ರೆ ಈಗ ಕಾಲ ಬದಲಾಗಿದೆ. ಎಗ್ ಫ್ರೀಜಿಂಗ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. 

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) , ಏಕ್ತಾ ಕಪೂರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಎಗ್ ಫ್ರಿಜಿಂಗ್ ಮಾಡಿ ಮಕ್ಕಳನ್ನು ಪಡೆದಿದ್ದಾರೆ. ಕೆಲ ಸಾಮಾನ್ಯ ಮಹಿಳೆಯರು ಕೂಡ ತಮ್ಮ ಕಡಿಮೆ ವಯಸ್ಸಿನಲ್ಲಿ ಎಗ್ ಫ್ರಿಜಿಂಗ್ (Egg Freezing)  ಮಾಡಿ, ವಯಸ್ಸಾದ್ಮೇಲೆ ಮಕ್ಕಳನ್ನು ಪಡೆಯುತ್ತಿದ್ದಾರೆ. ಇಷ್ಟಾದ್ರೂ ಅನೇಕರಿಗೆ ಎಗ್ ಫ್ರಿಜಿಂಗ್ ಅಂದ್ರೇನು ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ನಾವಿಂದು ಅದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡ್ತೇವೆ.

Latest Videos

undefined

ಕೆಲವರು ಸುಮ್ ಸುಮ್ಮನೆ ಅಳೋದ್ಯಾಕೆ? ಅವರ ಮನಸ್ಸಲ್ಲಿ ಏನಾಗುತ್ತಿರುತ್ತೆ?

ಎಗ್ ಫ್ರಿಜಿಂಗ್ ಯಾರು ಮಾಡ್ಬಹುದು? : ಯಾವುದೇ ಮಹಿಳೆ ಮೊಟ್ಟೆಯ ಘನೀಕರಣವನ್ನು ಮಾಡಬಹುದು. ನೀವು ಭವಿಷ್ಯದಲ್ಲಿ ತಾಯಿಯಾಗಲು ಬಯಸಿದ್ದು, ಈಗ ಗರ್ಭಧಾರಣೆಗೆ ಸಿದ್ಧವಾಗಿಲ್ಲದೆ ಹೋದ್ರೆ ನೀವು ಎಗ್ ಫ್ರಿಜಿಂಗ್ ಮಾಡ್ಬಹುದು. ಎಗ್ ಫ್ರಿಜಿಂಗ್ ಮಾಡಲು ವಿವಾಹಿತ ಅಥವಾ ಅವಿವಾಹಿತ ಎನ್ನುವ ಯಾವುದೇ ಬೇಧಭಾವವಿಲ್ಲ.

ಬೆಳಗ್ಗೆದ್ದು ಬರೀ ಹೊಟ್ಟೆಗೆ ಈ ಆಹಾರ ತಿಂದ್ರೆ ಒಂದೇ ವಾರದಲ್ಲಿ ತೂಕ ಇಳಿಯುತ್ತೆ

ಯಾವ ಸಮಯದಲ್ಲಿ ನೀವು ಎಗ್ ಫ್ರಿಜಿಂಗ್ ಮಾಡ್ಬಹುದು? : ಎಗ್ ಫ್ರಿಜಿಂಗ್ ಮಾಡಲು ಬಯಸುವವರು ಯಾವ ವಯಸ್ಸಿನಲ್ಲಿ ಮಾಡ್ಬೇಕು ಎನ್ನುವ ಪ್ರಶ್ನೆ ಏಳುತ್ತದೆ. ನೀವು ಎಗ್ ಫ್ರಿಜಿಂಗ್ ಮಾಡಲು ಬಯಸಿದ್ದರೆ ಆದಷ್ಟು ಬೇಗ ಮಾಡುವುದು ಒಳ್ಳೆಯದು. 20 ರಿಂದ 30 ವರ್ಷ ವಯಸ್ಸಿನ ಮಹಿಳೆಯರಲ್ಲಿ ಅಂಡಾಣು ಮತ್ತು ಫಲವತ್ತತೆ ಎರಡೂ ಹೆಚ್ಚು. ವಯಸ್ಸು ಹೆಚ್ಚಾದಂತೆ ಮೊಟ್ಟೆಗಳ ಫಲವತ್ತತೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಕೆಲ ಮಹಿಳೆಯರು ತಮ್ಮ 35 ಮತ್ತು 40 ವರ್ಷದಲ್ಲಿ ಎಗ್ ಫ್ರಿಜಿಂಗ್ ಬಗ್ಗೆ ಆಲೋಚನೆ ಮಾಡ್ತಾರೆ. ನಲವತ್ತರ ನಂತ್ರ ಮುಟ್ಟು ನಿಲ್ಲುವ ಸಾಧ್ಯತೆ ಇರುವ ಕಾರಣ ಅವರು ಅದಕ್ಕಿಂತ ಮೊದಲೇ ಎಗ್ ಫ್ರಿಜಿಂಗ್ ಮಾಡಲು ಮುಂದಾಗ್ತಾರೆ. ತಜ್ಞರ ಪ್ರಕಾರ, ಇಷ್ಟು ವಯಸ್ಸಿನಲ್ಲಿ ಎಗ್ ಫ್ರಿಜಿಂಗ್ ಪ್ರಯೋಜನವಿಲ್ಲ. ನೀವು ನಿಮ್ಮ 32ನೇ ವರ್ಷದೊಳಗೆ ಎಗ್ ಫ್ರಿಜಿಂಗ್ ಮಾಡಬೇಕಾಗುತ್ತದೆ.

ಎಗ್ ಫ್ರಿಜಿಂಗ್ ಎಷ್ಟು ಸುರಕ್ಷಿತ? : ಪ್ರತಿ ತಿಂಗಳು ಮಹಿಳೆ ಅಂಡಾಶಯ ಮೊಟ್ಟೆಗಳನ್ನು ಉತ್ಪಾದಿಸುತ್ತವೆ. ಕೆಲವೊಂದು ಎಗ್ ಬಲವಾಗಿರುತ್ತವೆ. ಕೆಲವೊಂದು ದುರ್ಬಲವಾಗಿರುತ್ತವೆ. ಎಗ್ ಫ್ರಿಜಿಂಗ್ ವೇಳೆ ವೈದ್ಯರು  ಔಷಧಿಗಳನ್ನು ನೀಡುತ್ತಾರೆ. ಇದರಿಂದ ನಿಮ್ಮ ಎಲ್ಲಾ ಮೊಟ್ಟೆಗಳು ಬಲವಾಗಿರುತ್ತವೆ. ನಂತ್ರ ಐವಿಎಫ್ ಅಡಿಯಲ್ಲಿ ಎಲ್ಲಾ ಮೊಟ್ಟೆಗಳನ್ನು ಹೊರತೆಗೆಯಲಾಗುತ್ತದೆ. ಪ್ರಯೋಗಾಲಯದಲ್ಲಿ ಅದನ್ನು ಘನೀಕರಿಸುವ ತಾಪಮಾನದಲ್ಲಿ ಫ್ರೀಜ್ ಮಾಡಲಾಗುತ್ತದೆ. ಈ ಮೊಟ್ಟೆಗಳು ಫಲವತ್ತಾಗಿ ಉಳಿಯುತ್ತವೆ. ಗರ್ಭಧರಿಸಲು ಸಿದ್ಧರಾದಾಗ ಅವು ಫಲೀಕರಣ ಪ್ರಕ್ರಿಯೆಯಲ್ಲಿ ವೀರ್ಯದೊಂದಿಗೆ ಫಲವತ್ತಾಗುತ್ತವೆ. 

ಮೊಟ್ಟೆಗಳನ್ನು ಎಷ್ಟು ಸಮಯದವರೆಗೆ ಫ್ರೀಜ್ ಮಾಡಬಹುದು : ಎಗ್ ಫ್ರಿಜಿಂಗ್ ಗೆ ಸಂಬಂಧಿಸಿದಂತೆ ಅನೇಕ ಕಾನೂನುಗಳಿವೆ. ಭಾರತದಲ್ಲಿ ಮೊಟ್ಟೆಯ ಘನೀಕರಣದ ಪ್ರಕ್ರಿಯೆಯ ನಂತರ ನೀವು ಮೊಟ್ಟೆಗಳನ್ನು 10 ವರ್ಷಗಳವರೆಗೆ ಫ್ರೀಜ್ ಮಾಡಬಹುದು.

ಎಗ್ ಫ್ರಿಜಿಂಗ್ ಗೆ ಎಷ್ಟು ಖರ್ಚಾಗುತ್ತೆ? : ಮೊಟ್ಟೆ ಫ್ರಿಜಿಂಗ್ ಮಾಡುವ ಮೊದಲು ನಿಮ್ಮ ಬಜೆಟ್ ಮುಖ್ಯ. ಇದು ತುಂಬಾ ದುಬಾರಿ ವಿಧಾನವಾಗಿದೆ. ಮೊಟ್ಟೆಯ ಘನೀಕರಣ ಪ್ರಕ್ರಿಯೆ ಮತ್ತು ಹಂತದ ವೆಚ್ಚ  1 ಲಕ್ಷದಿಂದ 3 ಲಕ್ಷದವರೆಗೆ ಇರುತ್ತದೆ. ಇದಲ್ಲದೆ ನೀವು ಫ್ರಿಜಿಂಗ್ ಗೆ  ವಾರ್ಷಿಕ ಶೇಖರಣಾ ವೆಚ್ಚ ನೀಡಬೇಕು. 
 

click me!