ಹೈವೇಯಲ್ಲಿ ವೇಗವಾಗಿ ಟ್ರಕ್ ಓಡಿಸುವ ನಾರಿ... ವಿಡಿಯೋ ವೈರಲ್‌

Published : Jul 18, 2022, 04:44 PM ISTUpdated : Jul 18, 2022, 04:50 PM IST
ಹೈವೇಯಲ್ಲಿ ವೇಗವಾಗಿ ಟ್ರಕ್ ಓಡಿಸುವ ನಾರಿ... ವಿಡಿಯೋ ವೈರಲ್‌

ಸಾರಾಂಶ

ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ದಾಪುಗಾಲಿಕ್ಕಿ ಯಶಸ್ವಿಯಾಗುತ್ತಿದ್ದಾರೆ. ಕುಟುಂಬ ಹಾಗೂ ವೃತ್ತಿ ಎರಡನ್ನು ಸಮವಾಗಿ ನಿಭಾಯಿಸುತ್ತಿದ್ದಾರೆ. ಇದಕ್ಕೀಗ ಮತ್ತೊಂದು ಉದಾಹರಣೆ ತಮಿಳುನಾಡಿನ ಈ ಮಹಿಳೆ.

ಚೆನ್ನೈ: ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆ ತನ್ನ ಚಾಪು ಮೂಡಿಸಿದ್ದಾಳೆ. ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಇಂದು ಕಾಲಿಡದ ಕ್ಷೇತ್ರವಿಲ್ಲ. ಪ್ರತಿಯೊಂದು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮ ದಾಪುಗಾಲಿಕ್ಕಿ ಯಶಸ್ವಿಯಾಗುತ್ತಿದ್ದಾರೆ. ಕುಟುಂಬ ಹಾಗೂ ವೃತ್ತಿ ಎರಡನ್ನು ಸಮವಾಗಿ ನಿಭಾಯಿಸುತ್ತಿದ್ದಾರೆ. ಇದಕ್ಕೀಗ ಮತ್ತೊಂದು ಉದಾಹರಣೆ ತಮಿಳುನಾಡಿನ ಈ ಮಹಿಳೆ.

ಸಾಮಾನ್ಯವಾಗಿ ಟ್ರಕ್‌ಗಳನ್ನು ಗಂಡಸರೇ ಹೆಚ್ಚಾಗಿ ಓಡಿಸುವುದು. ಸಾಮಾನ್ಯವಾಗಿ ಸರಕು ಸಾಗಾಣೆಗೆ ಟ್ರಕ್‌ಗಳನ್ನು ಬಳಸುತ್ತಾರೆ. ಬೇರೆ ಬೇರೆ ರಾಜ್ಯಗಳನ್ನು ಸಾಗಿ ಹೋಗಬೇಕಾಗಿರುವುದರಿಂದ ಹೆಣ್ಣು ಮಕ್ಕಳು ಈ ವಲಯದಲ್ಲಿ ಕೆಲಸ ಮಾಡುವುದು ಕಡಿಮೆ. ಆದಾಗ್ಯೂ ಮಹಿಳೆಯೊಬ್ಬರು ಭಾರಿ ಗಾತ್ರದ ಟ್ರಕ್‌ ಓಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಗಟ್ಟಿತನಕ್ಕೆ ಶಹಭಾಷ್ ಎನ್ನುತ್ತಿದ್ದಾರೆ. ಛತ್ತೀಸ್‌ಗಡ್‌ ಕೇಡಾರ್‌ನ ಐಎಎಸ್‌ ಅಧಿಕಾರಿ ಅವನೀಶ್ ಶರಣ್‌ ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಮಹಿಳೆಯ ಇರಲಿ ಪುರುಷನೇ ಇರಲಿ ಟ್ರಕ್ ಚಿಂತೆ ಮಾಡಲ್ಲ ಎಂದು ಈ ವಿಡಿಯೋಗೆ ಅವರು ಹಿಂದಿಯಲ್ಲಿ ಶೀರ್ಷಿಕೆ ನೀಡಿದ್ದಾರೆ. 

ವೀಡಿಯೋದಲ್ಲಿ ತಮಿಳುನಾಡಿನ ನಂಬರ್ ಪ್ಲೇಟ್ ಹೊಂದಿರುವ ಟ್ರಕ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿರುವುದನ್ನು ತೋರಿಸುತ್ತದೆ. ವಿಡಿಯೋ ಪ್ರಾರಂಭವಾಗುತ್ತಿದ್ದಂತೆ, ಟ್ರಕ್ ಹತ್ತಿರ ಬರುತ್ತದೆ ಮತ್ತು ಮಹಿಳೆಯೊಬ್ಬರು ಟ್ರಕ್ ಅನ್ನು ಅತ್ಯಂತ ಸುಲಭವಾಗಿ ಓಡಿಸುತ್ತಿರುವುದು ಕಂಡು ಬರುತ್ತದೆ. ವೀಡಿಯೊವನ್ನು ಚಿತ್ರೀಕರಿಸುವ ವ್ಯಕ್ತಿಯತ್ತ ಮಹಿಳಾ ಚಾಲಕಿ ನಗುಬೀರಿ ಮುಂದೆ ಸಾಗುತ್ತಾರೆ. ಈ ವಿಡಿಯೋವನ್ನು ಎರಡು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ. ಅಲ್ಲದೇ ಮಹಿಳೆಯ ಧೈರ್ಯ ಹಾಗೂ ವಿಶ್ವಾಸ ತುಂಬಿದ ನಗುವನ್ನು ಕೊಂಡಾಡಿದ್ದಾರೆ. 
 

ಈಕೆ ತೋಳುಗಳೇ ಇಲ್ಲದ ವಿಮಾನ ಪೈಲಟ್

ಮನಸ್ಸು ಮಾಡಿದರೆ ಎಂಥವರೂ ಎಂಥ ಸಾಧನೆ ಕೂಡ ಮಾಡಬಹುದು ಎಂಬುದಕ್ಕೆ ನಿದರ್ಶನದಂತೆ ಇದ್ದಾಳೆ ಈ ಮಹಿಳೆ. ಈಕೆಗೆ ಹುಟ್ಟುವಾಗಲೇ ಎರಡೂ ಕೈ (Hands) ಗಳಿಲ್ಲ. ತೋಳುಗಳು (Arms) ಬುಡದಿಂದಲೇ ಇಲ್ಲ. ಏನು ಮಾಡಲು ಸಾಧ್ಯ? ಉಳಿದವರಾದರೆ ಉಂಡು ಮಲಗು ಎಂಬ ಸೂತ್ರಕ್ಕೆ ಬಿದ್ದು, ಪರಾವಲಂಬಿಗಳಾಗಿ ಇದ್ದುಬಿಡುತ್ತಿದ್ದರೇನೋ. ಆದರೆ ಈಕೆ ಛಲವಂತೆ. ತನ್ನ ಮಿತಿಯನ್ನು ಮೀರಿಬಿಟ್ಟಳು. 

National Girl Child Day: ಪ್ರತಿ ಹೆಣ್ಣಿಗೂ ಸ್ಫೂರ್ತಿಯ ಸೆಲೆ ಉದ್ಯಮ ರಂಗದ ಈ 7 ಮಹಿಳಾ ಸಾಧಕಿಯರು

ಜೆಸ್ಸಿಕಾ ಕಾಕ್ಸ್ (Jessica Cox) ಅರಿಜೋನಾದವಳು. 1983ರಲ್ಲಿ ಜನಿಸಿದಳು. ಹುಟ್ಟುತ್ತಲೇ ಎರಡೂ ತೋಳುಗಳಿರಲಿಲ್ಲ. ತುಂಬಾ ವಿರಳವಾದ ಕಾಯಿಲೆಗೆ ಅವು ಬಲಿಯಾಗಿದ್ದವು ಆಕೆ 10ನೇ ವರ್ಷದವರೆಗೂ ತನ್ನೆರಡು ತೋಳುಗಳನ್ನು ಮುಚ್ಚುವಂಥ ಬಟ್ಟೆ ತೊಡುತ್ತಿದ್ದಳು. ಆದರೆ, ಅದೊಂದು ದಿನ ಏನಾಯಿತೋ ಗೊತ್ತಿಲ್ಲ. ತೋಳುಗಳನ್ನು ಮುಚ್ಚುವ ಬಟ್ಟೆ ಎಸೆದು ನಾನು ಹೇಗಿದ್ದೇನೋ ಹಾಗೆಯೇ ಇರಲು ಬಯಸುತ್ತೇನೆ ಎಂದು ಬಿಟ್ಟಳು. 

ಹಾಗೆ ಹೇಳಿದ್ದು ಮಾತ್ರವಲ್ಲ, ಅಲ್ಲಿಂದ ಆಕೆ, ಕಾಲು ಕೈ ಸರಿಯಿದ್ದವರೂ ಏನೇನ್ ಕೆಲಸ ಮಾಡುತ್ತಾರೋ ಆ ಎಲ್ಲ ಕೆಲಸಗಳನ್ನು ತನ್ನ ಕಾಲಿಂದಲೇ ಮಾಡಲಾರಂಭಿಸಿದಳು. ಜತೆಗೆ ವಿಶೇಷ ಸಂಗತಿಗಳನ್ನೂ ಕಲಿಯಲು ಆರಂಭಿಸಿದಳು. ಟೇಕ್ವಾಂಡೋ (Tekwando) ಕಲಿಯಲು ಆರಂಭಿಸಿದಳು. ಇದು ಕರಾಟೆಯಂತೆ. ಇದರಲ್ಲಿ ಕೈಗಳೇ ಮುಖ್ಯ. ಆದರೆ ಈಕೆ ಕೈಗಳಿಲ್ಲದೇ ಈ ಯುದ್ಧಕಲೆಯನ್ನು ಕರಗತ ಮಾಡಿಕೊಂಡಳು. ಟೇಕ್ವಾಂಡೋದಲ್ಲಿ ಎರಡು ಬೆಲ್ಟ್ ಪಡೆದಿದ್ದಾಳೆ. ನಂತರ ಡ್ಯಾನ್ಸ್ (Dance) ಕಲಿತಳು. ಸತತ 12 ವರ್ಷಗಳ ಕಾಲ ನೃತ್ಯ ಅಭ್ಯಾಸ ಮಾಡಿದ್ದಾಳೆ. ಜೊತೆಗೆ ಸ್ಟೇಜ್ ಮೇಲೆ ಮಾತನಾಡಿದಳು. ಅತ್ಯುತ್ತಮ ಭಾಷಣಗಾರ್ತಿ, ಮೋಟಿವಿಷನಲ್ ಸ್ಪೀಕರ್ (Motivational speaker), ಕಾರು ಓಡಿಸಲು (Car driving) ಕಲಿತಳು. ಸ್ಕೂಬಾ ಡೈವ್ (scuba diving) ಮಾಡಿದಳು. ತನ್ನ ಕಾಂಟಾಕ್ಟ್ ಲೆನ್ಸ್ ತಾನೇ ಹಾಕಿಕೊಳ್ಳುತ್ತಾಳೆ. ಕಂಪ್ಯೂಟರ್‌ನಲ್ಲಿ ಬರೆಯಬಲ್ಲಳು. ಪ್ರತಿ ನಿಮಿಷಕ್ಕೆ 25 ಶಬ್ದಗಳ ವೇಗದಲ್ಲಿ ಟೈಪ್ ಮಾಡ್ತಾಳೆ ಕೂಡ. ಹೀಗೆ ತನಗೆ ಏನು ಮಾಡಬೇಕು ಅನ್ನಿಸುತ್ತದೆಯೋ ಅದೆಲ್ಲವನ್ನೂ ಮಾಡುವ ಮೂಲಕ ಅನೇಕರಿಗೆ ಸ್ಪೂರ್ತಿ ತುಂಬಿದ್ದಾಳೆ.

ಕನಸಿನ ಕುದುರೆಯೇರಿ ಗುರಿ ಸೇರಿದ ಸಾಧಕಿಯರು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?