ಮಕ್ಕಳಿಗೆ ಪೀರಿಯೆಡ್ಸ್ ಬಗ್ಗೆ ಹೇಳಿ ಕೊಡೋದು ಹೇಗೆ ?

Published : Jul 17, 2022, 11:00 PM IST
ಮಕ್ಕಳಿಗೆ ಪೀರಿಯೆಡ್ಸ್ ಬಗ್ಗೆ ಹೇಳಿ ಕೊಡೋದು ಹೇಗೆ ?

ಸಾರಾಂಶ

ಮುಟ್ಟು ಎಂದರೆ ಇವತ್ತಿಗೂ ಎಲ್ಲರೂ ಗುಟ್ಟಾಗಿ ಮಾತನಾಡುವ ವಿಷಯವಾಗಿಯೇ ಉಳಿದುಕೊಂಡಿದೆ. ಹೀಗಾಗಿಯೇ ಇವತ್ತಿಗೂ ಹೆಚ್ಚಿನ ಹೆಣ್ಣುಮಕ್ಕಳು ಪೀರಿಯಡ್ಸ್ ಆದಾಗ ಏನಾಗುತ್ತಿದೆ, ಏನು ಮಾಡಬೇಕೆಂದು ತಿಳಿಯದೆ ಗಾಬರಿಗೊಳ್ಳುತ್ತಾರೆ. ಹಾಗಿದ್ರೆ ಮಕ್ಕಳಿಗೆ ಪೀರಿಯಡ್ಸ್ ಬಗ್ಗೆ ಹೇಳಿ ಕೊಡೋದು ಹೇಗೆ ?

ಲಿಂಗ ಬೇಧವಿಲ್ಲದೆ ಎಲ್ಲರೂ ಋತುಚಕ್ರದ ಬಗ್ಗೆ ತಿಳಿದುಕೊಂಡಿರಬೇಕಾದುದು ತುಂಬಾ ಮುಖ್ಯ. ಹುಡುಗರು ಮತ್ತು ಹುಡುಗಿಯರಿಬ್ಬರೂ ಇದರ ಬಗ್ಗೆ ತಿಳಿದಿರುವುದು ಮುಖ್ಯವಾದರೂ, ಹುಡುಗಿಯರು ಪಿರಿಯಡ್ಸ್ ಬಗ್ಗೆ ಮಾಹಿತಿಯನ್ನು ಹೊಂದಿರುವುದು ಹೆಚ್ಚು ಅಗತ್ಯವಾಗಿದೆ. ಪೋಷಕರಾಗಿ, ನೀವು ನಿಮ್ಮ ಮಗುವಿಗೆ ಮುಟ್ಟಿನ ಬಗ್ಗೆ ಮಾತನಾಡುವುದು ಮತ್ತು ಋತುಚಕ್ರದ ಸಮಯದಲ್ಲಿ ಏನಾಗುತ್ತದೆ ಮತ್ತು ಅವರು ಏನನ್ನು ಎದುರಿಸಬಹುದು ಎಂಬುದರ ಕುರಿತು ಅವರಿಗೆ ತಿಳಿಸುವುದು ಮುಖ್ಯವಾಗಿದೆ. ಹೆಣ್ಣುಮಕ್ಕಳಿಗೆ ಮುಟ್ಟಿನ ಬಗ್ಗೆ ಮೊದಲೇ ತಿಳಿದಿರುವುದು ಮುಖ್ಯ. ಅದರ ಬಗ್ಗೆ ತಿಳಿದಿಲ್ಲದಿದ್ದರೆ ಸಡನ್ನಾಗಿ ಪೀರಿಯೆಡ್ಸ್ ಆದಾ ಇದು ಅವರಲ್ಲಿ ಭೀತಿಯನ್ನು  ಹುಟ್ಟು ಹಾಕಬಹುದು. ಹಾಗಿದ್ರೆ ಮಕ್ಕಳಿಗೆ ಪೀರಿಯೆಡ್ಸ್ ಬಗ್ಗೆ ಹೇಳಿಕೊಡೋದು ಹೇಗೆ ? ಇಲ್ಲಿದೆ ಕೆಲವೊಂದು ಟಿಪ್ಸ್.

ಮಕ್ಕಳಿಗೆ ಮುಟ್ಟಿನ ಕುರಿತಾಗಿ ಹೇಳಿ ಕೊಡುವುದು ಹೇಗೆ ?

ಋತುಚಕ್ರದ ಬಗ್ಗೆ ಸಂಪೂರ್ಣವಾಗಿ ಹೇಳಿ: ಮುಟ್ಟಿನ ಬಗ್ಗೆ ಭಾರತದಲ್ಲಿ ಮುಕ್ತವಾಗಿ ಮಾತನಾಡುವ ವಾತಾವರಣ ಇಲ್ಲ. ಎಪ್ಪತ್ತೊಂದು ಪ್ರತಿಶತ ಭಾರತೀಯ ಹುಡುಗಿಯರಿಗೆ (Girls) ಮೊದಲು ಪಿರಿಯಡ್ಸ್ ಆಗುವವರೆಗೆ ಮುಟ್ಟಿನ ಬಗ್ಗೆ ತಿಳಿದಿರುವುದಿಲ್ಲ. ಜ್ಞಾನದ ಕೊರತೆಯಿಂದಾಗಿ ಋತುಸ್ರಾವವು ವಿವಿಧ ಮಾನಸಿಕ ತೊಂದರೆಗೆ ಈಡುಮಾಡುತ್ತದೆ. ಋತುಚಕ್ರದ (Menstruation) ಸಮಯದಲ್ಲಿ ನಿಜವಾಗಿ ಏನಾಗುತ್ತದೆ ಎಂದು ಅನೇಕ ಹುಡುಗಿಯರಿಗೆ ತಿಳಿದಿಲ್ಲ. ಮುಖ್ಯವಾಗಿ ಇದನ್ನು ಸಂಪೂರ್ಣವಾಗಿ ಬಿಡಿಸಿ ಹೇಳುವುದು ಮುಖ್ಯವಾಗಿದೆ.

ತಿಂಗಳಿಗೊಮ್ಮೆ ಗಂಡಸರೂ ಮುಟ್ಟಾಗ್ತಾರೆ, ವಿಜ್ಞಾನದಿಂದ ಬಯಲಾಯ್ತು ಶಾಕಿಂಗ್‌ ಸತ್ಯ

ಮುಟ್ಟಿನ ಬಗ್ಗೆ ತಿಳುವಳಿಕೆ ನೀಡಿ: ಮಕ್ಕಳ ಜೊತೆ ಕುಳಿತುಕೊಂಡು ಸಾಮಾನ್ಯವಾಗಿ ಮಾತನಾಡುತ್ತಾ, ಸಾಕಷ್ಟು ಆರಾಮದಾಯಕವಾಗುವಂತೆ ಮಾಡಿ. ಇದರಿಂದ ನೀವು ಅವರಿಗೆ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಬಹುದು. ಸಂಭಾಷಣೆ ಅಥವಾ ವಿವರಣೆಯ ಪ್ರಕ್ರಿಯೆಯು ಒಂದೇ ದಿನದಲ್ಲಿ ನಡೆಯುವುದು ಸಂಪೂರ್ಣವಾಗಿ ಅನಿವಾರ್ಯವಲ್ಲ. ಇದು ಕೆಲವು ದಿನಗಳಲ್ಲಿ ಸಂಭವಿಸಬಹುದು ಆದ್ದರಿಂದ ನೀವು ಅದರ ಬಗ್ಗೆ ಸುಲಭವಾಗಿ ಮಾತನಾಡಬಹುದು. 

ನೈಮರ್ಲ್ಯದ ಬಗ್ಗೆ ತಿಳಿಸಿ: ಹೆಣ್ಣುಮಕ್ಕಳು ಋತುಮತಿ ಆಗುವ ಮೊದಲು ಅದರ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಿ ಮತ್ತು ಅದರ ಬಗ್ಗೆ ಕೇವಲ ಒಂದು ಬಾರಿ ಅಲ್ಲ, ಆಗಾಗ ಮಾತನಾಡಿ. ಮುಟ್ಟು ಎಂದರೇನು, ಅದು ಯಾವಾಗ ಪ್ರಾರಂಭವಾಗುತ್ತದೆ, ಅದು ನೋವುಂಟು ಮಾಡುತ್ತದೆಯಾ, ಅದು ಎಷ್ಟು ಕಾಲ ಇರುತ್ತದೆ, ಮುಟ್ಟಿನ ನೈರ್ಮಲ್ಯ ವಿಧಾನಗಳು ಕುರಿತು ಅವರಿಗೆ ಪ್ರಾಯೋಗಿಕ ಸಲಹೆ ನೀಡಿ. ಮುಟ್ಟಿನ ಉತ್ಪನ್ನಗಳನ್ನು ಸೂಕ್ತವಾಗಿ ಮತ್ತು ಆರೋಗ್ಯಕರವಾಗಿ ಬದಲಾಯಿಸುವ ಬಗ್ಗೆ ಅವರಿಗೆ ತಿಳಿಸಿ. ಹದಿಹರೆಯದ ಹುಡುಗಿಯರು ಸ್ವಚ್ಛ ಋತುಸ್ರಾವ ನಿರ್ವಹಣಾ ಸಾಮಗ್ರಿಯನ್ನು ಬಳಸಬೇಕು. ಇತ್ತೀಚೆಗೆ ಕಪ್‌ಗಳು ಬಂದಿದ್ದು, ಇದು ಪ್ಯಾಡ್‌ಗಳಿಗಿಂತ ಅನುಕೂಲಕರವಾಗಿದೆ. ಮುಟ್ಟಿನ ಅವಧಿ ಮುಗಿಯುವವರೆಗೆ ಸಾಕಷ್ಟು ಬಾರಿ ಸೋಪು ಮತ್ತು ನೀರನ್ನು ಬಳಸುವಂತೆ ಸೂಚಿಸಿ.

Monsoon: ಯೋನಿ ನೈರ್ಮಲ್ಯಕ್ಕೆ ಇರಲಿ ಹೆಚ್ಚಿನ ಗಮನ, ಹೇಗಿರಬೇಕು ಬಟ್ಟೆ?

ಮನಸ್ಥಿತಿಯ ಬದಲಾವಣೆ: ಮುಟ್ಟಿನ ದಿನಗಳೆಂದರೆ ಬಹಳಷ್ಟು ಮಹಿಳೆಯರಿಗೆ ಅದೇನೋ ಅಲರ್ಜಿ. ದೈಹಿಕ ನೋವಿನ ಜತೆಗೆ, ಮಾನಸಿಕ ಸ್ಥಿತಿಗತಿಯಲ್ಲಾಗುವ ಏರಿಳಿತಕ್ಕೆ ಬಹಳಷ್ಟು ಮಂದಿ ಆ ದಿನಗಳನ್ನು ಬಹಳ ಬೇಸರದಿಂದ ಬರಮಾಡಿಕೊಳ್ಳುತ್ತಾರೆ. ಕಿರಿಕಿರಿ ಆಗುವುದು ನಿಜವಾದರೂ ಮುಟ್ಟೆನ್ನುವುದು ಪ್ರತಿತಿಂಗಳು ಮಹಿಳೆಗೆ ಹೊಸತನ ನೀಡುವಂಥದ್ದು. ಶಾಂತವಾಗಿ ಅದನ್ನು ನಿಭಾಯಿಸಲು ಮನಸ್ಸನ್ನು ಸಿದ್ಧಪಡಿಸಿಕೊಳ್ಳುವ ಬಗ್ಗೆ ಮಕ್ಕಳಿಗೆ ಮೊದಲೇ ಹೇಳಿ ಕೊಡಬೇಕು. 

ಮಕ್ಕಳ ಅನುಮಾನವನ್ನು ಬಗೆಹರಿಸಿ: ಮಕ್ಕಳು ಹೊಂದಿರಬಹುದಾದ ಪ್ರಶ್ನೆಗಳಿಗೆ ನೀವು ಉತ್ತರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಅವರು ಕೆಲವು ಚಿಂತೆಗಳನ್ನು ಹೊಂದಿರಬಹುದು, ಅವರ ಎಲ್ಲಾ ಚಿಂತೆಗಳನ್ನು ಪರಿಹರಿಸಲು ಖಚಿತಪಡಿಸಿಕೊಳ್ಳಿ. ಅವರು ಎದುರಿಸಬಹುದಾದ ಪೀರಿಯೆಡ್ಸ್‌ ಲಕ್ಷಣಗಳ ಬಗ್ಗೆ ಅವರೊಂದಿಗೆ ಮಾತನಾಡಿ. ಮೊದಲ ಕೆಲವು ತಿಂಗಳುಗಳಲ್ಲಿ ಪೀರಿಯೆಡ್ಸ್ ಆದಾಗ ಹೇಗಿರುತ್ತದೆ. ನಂತರದ ದಿನಗಳಲ್ಲಿ ಯಾವ ರೀತಿ ಬದಲಾಗುತ್ತದೆ ಎಂಬುದನ್ನು ವಿವರಿಸಿದರೆ ಋತುಚಕ್ರದ ಸಮಯದಲ್ಲಿ ಅವರಿಗೆ ಹೆಚ್ಚು ತೊಂದರೆ ಆಗುವುದಿಲ್ಲ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೋನಿಯಾ ಗಾಂಧಿ ಮೊದಲ ಬಾರಿಗೆ ಇಂದಿರಾ ಗಾಂಧಿಯನ್ನು ಭೇಟಿಯಾದಾಗ ಏನಾಗಿತ್ತು?
ಮಹಿಳಾ ನೌಕರರಿಗೆ ಬ್ಯಾಡ್ ನ್ಯೂಸ್: ಮುಟ್ಟಿನ ರಜೆಗೆ ಹೈಕೋರ್ಟ್ ತಡೆ: ಸರ್ಕಾರದ ಆದೇಶಕ್ಕೆ ಹಿನ್ನಡೆ?