Viral video: ಸೀರೆಯುಟ್ಟು ರೋಪ್ ಸೈಕ್ಲಿಂಗ್ ಮಾಡಿದ ವೃದ್ಧೆ, ನೋಡಿದ್ರೆ ಮೈ ಜುಂ ಅನ್ನುತ್ತೆ!

Published : Feb 14, 2023, 12:43 PM IST
Viral video: ಸೀರೆಯುಟ್ಟು ರೋಪ್ ಸೈಕ್ಲಿಂಗ್ ಮಾಡಿದ ವೃದ್ಧೆ, ನೋಡಿದ್ರೆ ಮೈ ಜುಂ ಅನ್ನುತ್ತೆ!

ಸಾರಾಂಶ

ಸಾಧನೆಗೆ ವಯಸ್ಸು ಅಡ್ಡಿಯಾಗೋದಿಲ್ಲ ಅನ್ನೋದನ್ನು ಈಗಾಗ್ಲೇ ಹಲವಾರು ಮಂದಿ ಸಾಬೀತುಪಡಿಸಿದ್ದಾರೆ. ಹಾಗೆಯೇ ಇಲ್ಲೊಬ್ಬ 67 ವರ್ಷದ ವೃದ್ಧೆ ಸಾಹಸಕಾರಿ ರೋಪ್ ಸೈಕ್ಲಿಂಗ್ ಮಾಡಿದ್ದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

ಸಾಹಸಕಾರಿ ಚಟುವಟಿಕೆಗಳಲ್ಲಿ ಭಾಗವಹಿಸೋದು ಎಂಥವರ ಮನಸ್ಸಿಗೂ ಖುಷಿ ನೀಡುತ್ತದೆ. ಆದರೆ ಎಲ್ಲರಿಗೂ ಇಂಥಾ ಅಡ್ವೆಂಚರ್ ಮಾಡೋಕೆ ಧೈರ್ಯ ಸಾಕಾಗೋದಿಲ್ಲ. ಧೈರ್ಯವಿಲ್ಲದಿದ್ದರೆ ಇಂಥಾ ಚಟುವಟಿಕೆಗಳನ್ನು ಮಾಡೋದು ಅಪಾಯಕಾರಿಯೂ ಹೌದು. ಹಿಲ್ ಕ್ಲೈಂಬಿಗ್‌, ಪಾರಾಗ್ಲೈಡಿಂಗ್, ರೋಪ್ ಸೈಕ್ಲಿಂಗ್ ಮೊದಲಾದ ಚಟುವಟಿಕೆಗಳಲ್ಲಿ ಸಾಮಾನ್ಯವಾಗಿ ಯುವಜನರಿಗೆ ಹೆಚ್ಚು ಪ್ರಿಯವಾಗುತ್ತದೆ. ಇಂಥಾ ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸಲು ಶಕ್ತಿಯೂ ಬೇಕಿರುವ ಕಾರಣ ಯುವಜನರು ಇದರಲ್ಲಿ ಭಾಗವಹಿಸೋದು ಕಡಿಮೆ. ಆದರೆ ಕೆಲವೊಮ್ಮೆ ಹಿರಿಯ ವಯಸ್ಸಿನವರು ಸಹ ಇಂಥಾ ಅಡ್ವೆಂಚರ್‌ನಲ್ಲಿ ಭಾಗವಹಿಸಿ ಎಲ್ಲರಲ್ಲಿ ಅಚ್ಚರಿ ಮೂಡಿಸುತ್ತಾರೆ. ಹಾಗೆಯೇ ಕೇರಳದಲ್ಲೊಬ್ಬ 67 ವರ್ಷದ ವೃದ್ಧೆ ರೋಪ್ ಸೈಕ್ಲಿಂಗ್ ಮಾಡಿ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.

67 ವರ್ಷದ ವೃದ್ಧೆಯ ರೋಪ್ ಸೈಕ್ಲಿಂಗ್ ವೀಡಿಯೋ ವೈರಲ್
ವಯೋವೃದ್ಧರು ಸಾಹಸ ಕಾರ್ಯಗಳಲ್ಲಿ ಭಾಗಿಯಾಗುವ ವೀಡಿಯೋಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ವಯಸ್ಸು (Age) ಕೇವಲ ಒಂದು ಸಂಖ್ಯೆಯಷ್ಟೇ. ಇದು ಸಾಧನೆಗೆ (Achievement) ಅಡ್ಡಿಯಾಗೋದಿಲ್ಲ ಅನ್ನೋದನ್ನು ಇಂಥಾ ವೀಡಿಯೋಗಳು ಸಾಬೀತುಪಡಿಸುತ್ತವೆ. ಅದೇ ರೀತಿ 67 ವರ್ಷದ ವೃದ್ಧೆಯೊಬ್ಬರು ತಮ್ಮ ಉತ್ಸಾಹಕಾರಿ ಸಾಹಾಸಕಾರ್ಯದಿಂದ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾರೆ. 67 ವರ್ಷದ ವೃದ್ಧೆ ಸೀರೆಯುಟ್ಟು ಫುಲ್ ಎನರ್ಜಿಟಿಕ್ ಆಗಿ ರೋಪ್ ಸೈಕ್ಲಿಂಗ್ ಮಾಡಿದ್ದಾರೆ. ವೃದ್ಧೆ ಸಾಹಸಮಯ ಕ್ರೀಡೆಯಲ್ಲಿ ಭಾಗವಹಿಸುವ ವೀಡಿಯೊ ವೈರಲ್ ಆಗಿದ್ದು, ಎಲ್ಲರೂ ಮೆಚ್ಚುಗೆ (Compliment) ಸೂಚಿಸುತ್ತಿದ್ದಾರೆ.

ನಂಗೇಲಿ ಎಂಬ ನಿಗಿನಿಗಿ ಕೆಂಡ, ತೆರಿಗೆ ವಿರೋಧಿಸಿ ಸ್ತನವನ್ನೇ ಕತ್ತರಿಸಿ ಕಲೆಕ್ಟರ್ ಕೈಗಿಟ್ಟ ಧೀರೆ..!

ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್, ವೃದ್ಧೆಯ ಧೈರ್ಯಕ್ಕೆ ನೆಟ್ಟಿಗರು ಫಿದಾ
ಶೈ ನು (@yathrikan_200) ಎಂಬ ಬಳಕೆದಾರರು ಈ ವೀಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋಗೆ 'ನನಗೆ ಭಯವಿಲ್ಲ ಮಗ, ನಾನು ಸೈಕಲ್ ಓಡಿಸುತ್ತೇನೆ ಎಂದು 67 ನೇ ವಯಸ್ಸಿನಲ್ಲಿ ಆ ತಾಯಿ ರೋಪ್ ಸೈಕ್ಲಿಂಗ್ ಮಾಡಬೇಕೆಂಬ ತಮ್ಮ ಆಸೆಯನ್ನು ಹೇಳಿಕೊಂಡರು. ನಾವು ತಕ್ಷಣ ಅವರಿಗೆ ರೋಪ್‌ ಸೈಕ್ಲಿಂಗ್ ಮಾಡಲು ವ್ಯವಸ್ಥೆ ಮಾಡಿದೆವು' ಎಂಬ ಶೀರ್ಷಿಕೆ ನೀಡಲಾಗಿದೆ. ವೃದ್ಧೆ ಹಳದಿ ಸೀರೆಯನ್ನು ಧರಿಸಿ ನಿರ್ಭಯವಾಗಿ ಡೇರ್‌ಡೆವಿಲ್ ಸ್ಟಂಟ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದಾಗಿದೆ. ಹೆಲ್ಮೆಟ್ ಮತ್ತು ಸುರಕ್ಷತಾ ಡ್ರೆಸ್ ಧರಿಸಿ, ವೃದ್ಧೆ ತೆಳುವಾದ ಹಗ್ಗದ ಮೇಲೆ ಸುಲಭವಾಗಿ ಸೈಕಲ್ ತುಳಿಯುತ್ತಾರೆ ಮತ್ತು ಸವಾಲನ್ನು ಪೂರ್ಣಗೊಳಿಸುತ್ತಾರೆ. 

ಕ್ಲಿಪ್ Instagram ನಲ್ಲಿ ಸಾವಿರಾರು ವೀವ್ಸ್‌ ಗಳಿಸಿದೆ. ವೀಡಿಯೊವನ್ನು ವೀಕ್ಷಿಸಿದ ಇಂಟರ್ನೆಟ್ ಬಳಕೆದಾರರು ವೃದ್ಧೆ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಒಬ್ಬ ಬಳಕೆದಾರರು 'ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ಈ 67 ವರ್ಷದ ವೃದ್ಧೆ ಅದನ್ನು ಸರಿ ಎಂದು ಸಾಬೀತುಪಡಿಸಿದ್ದಾರೆ' ಎಂದು ಶ್ಲಾಘಿಸಿದ್ದಾರೆ. 

Viral video: ಭಲೇ ಅಜ್ಜಿ..80ರ ವಯಸ್ಸಿನಲ್ಲಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್, ನೆಟ್ಟಿಗರು ಫಿದಾ

ಎಂಭತ್ತನೇ ವಯಸ್ಸಿನಲ್ಲಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್‌ ಮಾಡಿದ ಅಜ್ಜಿ
ಇತ್ತೀಚೆಗೆ, ಯುವತಿಯೊಬ್ಬಳು ತನ್ನ ದಿವಂಗತ ಅಜ್ಜಿ 80 ನೇ ವಯಸ್ಸಿನಲ್ಲಿ ಪ್ಯಾರಾಗ್ಲೈಡಿಂಗ್ ಮಾಡಿರೋ ವೀಡಿಯೋ ಹಂಚಿಕೊಂಡಿದ್ದಳು. ಇಂಟರ್‌ನೆಟ್‌ನಲ್ಲಿ ವೀಡಿಯೋ ವೈರಲ್ ಆಗಿತ್ತು. ವೀಡಿಯೊ ಇಂಟರ್ನೆಟ್ ಬಳಕೆದಾರರಿಗೆ ಸ್ಫೂರ್ತಿ ಮತ್ತು ಭಾವನಾತ್ಮಕತೆಯನ್ನುಂಟು ಮಾಡಿತ್ತು.  ಅಜ್ಜಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್‌ ಮಾಡುವುದನ್ನು ಈ ವೀಡಿಯೋದಲ್ಲಿ ತೋರಿಸಲಾಗಿತ್ತು. ಈ ವೀಡಿಯೋ ಒಂದು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ (Views)ಗಳನ್ನು ಪಡೆದುಕೊಂಡಿತ್ತು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಕಿಂಗ್.. ಆ ನಟ-ನಟಿ ಈ ವಯಸ್ಸಿನಲ್ಲಿ ಮದುವೆ ಆಗೋದಾ?.. ವಿಡಿಯೋ ನೋಡಿ ನೆಟ್ಟಿಗರ ತಲೆ ಗಿರಗಿರ..!
'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!